ಬೆಳಗಿ ನೋಡಿ ಒಮ್ಮೆ
ಹತ್ತು ಹಣತೆಯೊಂದಿಗೆ
ಒಂದು ನಗೆಯ ಪ್ರಣತೆ..
ಅಂಗಳದ ತುಂಬೆಲ್ಲಾ
ತಿಂಗಳ ಬೆಳಕಾದೀತು..!

ಹಚ್ಚಿ ನೋಡಿ ಒಮ್ಮೆ..
ನೂರು ಪಟಾಕಿಯೊಂದಿಗೆ
ಒಂದು ನಗೆಯ ಚಟಾಕಿ
ಡಂ ಡಂ ಶಬ್ಧವೆಲ್ಲಾ
ಕಿಲ ಕಿಲ ಸದ್ದಾದೀತು..!

ಬಡಿಸಿ ನೋಡಿ ಒಮ್ಮೆ
ನಾಲ್ಕು ಹೋಳಿಗೆಯೊಂದಿಗೆ
ಪ್ರೀತಿಯ ನುಡಿಹೂರಿಗೆ..
ನಾಲಿಗೆಯೊಂದಿಗೆ ಹೃನ್ಮನವೆಲ್ಲಾ
ಸಿಹಿ ಸಿಹಿ ಸವಿಯಾದೀತು.!

✍️ಎ.ಎನ್.ರಮೇಶ್.ಗುಬ್ಬಿ.