ಅಂಗುಲದ ಹತ್ತಿಬತ್ತಿಗೆ
ನಾಲ್ಕು ಹನಿ ತೈಲವಿಟ್ಟು
ಜ್ಯೋತಿಯಾ ಕಿಡಿಗಳ
ಸೋಕಿಸಿ ಬಿಡಿ..
ಬೆಳಗೀತು ಹಣತೆ.!

ಮೊಗದಗಲ ನಗುವಿಗೆ
ಜೋಡಿಕಂಗಳ ಕಾಂತಿಯಿಟ್ಟು
ಪ್ರೀತಿಯಾ ನುಡಿಗಳ
ಸ್ಫುರಿಸಿ ಬಿಡಿ..
ಬೆಳಗೀತು ಜಗತ್ತೆ.!

✍️ಎ.ಎನ್.ರಮೇಶ್.ಗುಬ್ಬಿ.