ಬಂದಿತಮ್ಮ ದೀಪಾವಳಿ
ಎಲ್ಲೆಲ್ಲೂ ತಂದಿತಮ್ಮ ಪ್ರಭಾವಳಿ
ಮನೆ ಮನಗಳ ಬೆಳಗುತ
ಅಜ್ಞಾನ ಅಂಧಕಾರ ಕಳೆಯುತ.

ವಿವಿಧತೆಯಲೂ ಏಕತೆ ಸಾರಿ
ಜಗದ ಜಂಜಡಕೆ ಮುಕ್ತಿಯ ತೋರಿ
ಕೃಷ್ಣನು ನರಕನ ಸಂಹರಿಸಿದ ರೀತಿ
ಬಲಿಯ ತ್ಯಾಗದ ಸಂಕೇತದ ನೀತಿ.

ಬೆಳಗಲಿ ದಿಗಂತದಾಚೆ ಮೀರಿ
ಮೊಳಗಲಿ ಮಾನವೀಯತೆಯ ಸೇರಿ
ಪ್ರಕೃತಿಯ ಸೊಬಗಿಗೆ ತೋರಣ ಕಟ್ಟುತ
ಅಂತರಾತ್ಮಕೆ ಸುಖದಿ ಸಂತೈಸುತ.

ರಾಗ ದ್ವೇಷಾದಿ ಕಳೆದು
ಮೋಹ ಮದಗಳ ತೊರೆದು
ಲೋಕದ ಸಂಕಟಕೆ ವಿದಾಯ ಹೇಳುತ
ಸಂತೃಪ್ತ ಜೀವನಕೆ ಸಾಗುತ.

ಬಂದಿತೆಮ್ಮ ದೀಪಾವಳಿ
ಸಡಗರದ ನಲಿವ ಓಕುಳಿ
ಸೇರುವ ಎಲ್ಲರೂ ಒಂದಾಗಿ
ಬೆರೆಯುತ ಹಂಚುವ ಸವಿಯ ಚಂದವಾಗಿ.

✍️ರೇಷ್ಮಾ ಕಂದಕೂರ
ಶಿಕ್ಷಕಿ,ಸಿಂಧನೂರ