ಭಾರತ ದೇಶ ಹಬ್ಬಗಳ ತವರು. ಅದರಲ್ಲೂ ದೀಪಾವಳಿ ಎಂದರೆ ಹಬ್ಬಗಳ ರಾಜನೇ ಸರಿ. ನಮ್ಮ ಹಿರಿಯರು ಪ್ರತಿಯೊಂದು ಹಬ್ಬವನ್ನೂ ಸಂಪ್ರದಾಯವನ್ನೂ ಆಚರಿಸುತ್ತ ಬಂದಿರುವುದು ಒಂದು ವೈಜ್ಞಾನಿಕವಾದ ತಳಹದಿಯ ಮೇಲೆ ಎಂಬುದು ಎಷ್ಟೋ ಸಂದರ್ಭಗಳಲ್ಲಿ ನಮಗೆ ಗೊತ್ತಿರುವುದಿಲ್ಲ. ದೀಪಾವಳಿಯಲ್ಲಿ ಅನುಸರಿ ಸುವ ವಿಧಿವಿಧಾನಗಳಲ್ಲಿಯೂ ವೈಜ್ಞಾನಿಕಹಿನ್ನೆಲೆ ಅಡಗಿದೆ.

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳು ಅಥವಾ ನವೆಂಬರ್ ನಲ್ಲಿ ತಿಂಗಳಿನಲ್ಲಿ ಆಚರಿಸಲ್ಪಡುವ ಈ ಹಬ್ಬದ ಸಮಯದಲ್ಲಿ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಮಳೆಗಾಲ ಮುಗಿ ದು ಚಳಿಗಾಲ ಕಾಲಿಡುತ್ತಿದ್ದಂತೆಯೇ ವಾತಾವಣ ದಲ್ಲಿ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚುವ ಸಂದರ್ಭ ದಲ್ಲಿ ಅನೇಕಾನೇಕ ದೀಪಗಳನ್ನು ಬೆಳಗಿಸುವದ ರಿಂದ ವಾತಾವರಣ ಶುದ್ಧವಾಗುತ್ತದೆ ಎಂಬುದು ನಮ್ಮಹಿರಿಯರ ಉದ್ದೇಶವಾಗಿತ್ತು. ಸಾಲುಸಾಲಾಗಿ ದೀಪಗಳನ್ನು ಬೆಳಗುವದರಿಂದ ನಮ್ಮ ದೇಹದ ಅಯಸ್ಕಾಂತೀಯ ವಲಯದ ಮೇಲೆ ಪರಿಣಾಮ ವಾಗಿ ರೋಗನಿರೋಧಕ ಶಕ್ತಿ ಹೆಚ್ಚುವುದು ಎಂಬುದೂ ಒಂದು ನಂಬಿಕೆ.

ದೀಪಾವಳಿ ಬೆಳಕಿನ ಸಂಕೇತ. ಮನಸ್ಸಿನ ಅಂಧಃ ಕಾರ ಅಳಿದು, ಕ್ಲೇಶಗಳು ಕಳೆದು, ಉಲ್ಲಾಸ, ಉತ್ಸಾಹ ಮೂಡುವಂತೆ ಮಾಡುತ್ತವೆ ಹಣತೆಯ ಸಾಲುಗಳು. ಖಿನ್ನತೆ, ದುಗುಡ, ಆತಂಕ, ಒತ್ತಡ ಇತ್ಯಾದಿ ಮಾನಸಿಕ ಅನಾರೋಗ್ಯದಿಂದ ಬಳಲು ತ್ತಿರುವವರಿಗೆ ಜ್ಯೋತಿ ಬೆಳಗುವದು ಆಶಾಕಿರಣ ಇದ್ದಂತೆ.ಮಾನಸಿಕ ಆರೋಗ್ಯವನ್ನು ಸದೃಢವಾ ಗಿಸಲು,ಜೀವನೋತ್ಸಾಹ ವೃದ್ಧಿಸಲು ಹೊಸಬಟ್ಟೆ, ವಿಶೇಷ ಭಕ್ಷ್ಯಗಳು, ಬಣ್ಣ ಬಣ್ಣದ ರಂಗೋಲಿ, ಸಾಲು ಸಾಲು ಹಣತೆಗಳು ಸಹಕಾರಿ.

ದೀಪಾವಳಿಯ ಎಣ್ಣೆ ಸ್ನಾನ ಕೂಡ ಆರೋಗ್ಯಕ್ಕೆ ಪೂರಕವಾಗಿ ರೂಪುಗೊಂಡಿದೆ. ಮುಂಬರುವ ಚಳಿಗಾಲದಲ್ಲಿ ಚರ್ಮ ಬಿರುಕಾಗುವದು, ಮುಖ- ತುಟಿ ಒಡೆಯುವದು ಸಾಮಾನ್ಯ. ಎಣ್ಣೆ ಸ್ನಾನ ದಿಂದ ಚರ್ಮದಾರೋಗ್ಯ ಸುಧಾರಿಸುತ್ತದೆ. ತ್ವಚೆ ಕೋಮಲಗೊಳ್ಳುತ್ತದೆ.ದೀಪಾವಳಿಯ ನೆಪ ದಲ್ಲಿ ಕೆಲ ದಿನಗಳ ಪೂರ್ವದಿಂದಲೇ ಮನೆಯ ಸ್ವಚ್ಛತೆ ಗೆ ಆದ್ಯತೆ ನೀಡಲಾಗುತ್ತದೆ. ದೊಡ್ಡ ಹಬ್ಬದ ಕಾರಣಕ್ಕೆ ಮನೆ ಧೂಳು ಮುಕ್ತವಾಗುತ್ತದೆ. ನೈರ್ಮಲ್ಯಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧ.

ಈ ಸಂದರ್ಭದಲ್ಲಿ ತಯಾರಿಸುವ ಕೋಸಂಬರಿ ಮತ್ತಿತರ ಖಾದ್ಯಗಳು ಪೌಷ್ಟಿಕಾಂಶ ಭರಿತವಾಗಿ ದ್ದು, ದೇಹದ ಆರೋಗ್ಯಕ್ಕೆ ಉತ್ತಮವಾದವು. ಸಾಮಾನ್ಯವಾಗಿ ದೀಪಾವಳಿಯಲ್ಲಿ ಹೋಳಿಗೆಯ ಸಿಹಿಯೂಟವಿರುತ್ತದೆ.ಪಿಷ್ಟ ಹಾಗೂ ಪ್ರೋಟೀನ್ ಸಂಪದ್ಭರಿತವಾದ ತಿನಿಸಿದು.ಜೊತೆಗೆ ತುಪ್ಪವನ್ನು ಹಚ್ಚಿ ತಿನ್ನುವುದರಿಂದ ಕೊಬ್ಬಿನಂಶ ಪೂರೈಕೆ ದೇಹಕ್ಕೆ ದೊರೆಯುತ್ತದೆ. ಹಿತಮಿತವಾದ ಪ್ರಮಾಣದಲ್ಲಿ ಕೊಬ್ಬಿನಂಶ ದೇಹಕ್ಕೆ ಅಗತ್ಯ. ಚಳಿಗಾಲದ ಪೂರ್ವ ತಯಾರಿಯೇ ದೀಪಾವಳಿ ಹಬ್ಬ ಎಂದರೆ ತಪ್ಪಾಗದು.ಋತುಮಾನ ಹಾಗೂ ದೇಹಾರೋಗ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಹಿರಿಯರು ಹಬ್ಬಗಳನ್ನು ರೂಪಿಸಿದ್ದಾರೆ ಎಂಬುದು ಸರ್ವವಿದಿತ.

ಇನ್ನೊಂದು ತರ್ಕದ ಪ್ರಕಾರ ಮಳೆಗಾಲದಲ್ಲಿ ಯಥೇಚ್ಛವಾಗಿ ಬೆಳೆದಿರುವ ಹುಲ್ಲು, ಕಳೆ ಒಣಗ ತೊಡಗಿದಾಗ ಚೇಳು, ಹಾವು, ಹುಳಹುಪ್ಪಡಿಗಳು ಬಾರದಂತೆ ಮನೆಯ ಸುತ್ತಮುತ್ತ ದೀಪಗಳನ್ನು ಹಚ್ಚಿಡಲಾಗುತ್ತಿತ್ತು. ವಿದ್ಯುದ್ದೀಪಗಳಿಲ್ಲದಂತಹ ಆ ಕಾಲದಲ್ಲಿ ಹಣತೆಗಳೇ ಬೆಳಕಿಗೆ ಆಧಾರವಾಗಿದ್ದವು. ವಾತಾವರಣದಲ್ಲಿ ಧನಾತ್ಮಕ ಅಂಶವನ್ನ ಪಸರಿಸುವಲ್ಲಿ, ಸಕಾರಾತ್ಮಕವಾದ ಭಾವವನ್ನು ರೂಪಿಸುವಲ್ಲಿ ದೀಪಾವಳಿ ಹಬ್ಬದ ಪಾತ್ರ ಹಿರಿದು.

ಯುವಕನೊಬ್ಬ ಅಜ್ಜಯ್ಯನನ್ನು ಕೇಳಿದನಂತೆ. ನಮಗೆ ಎಷ್ಟೋ ಸಂಪ್ರದಾಯಗಳನ್ನು ಏಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ. ಹಾಗಿದ್ದರೂ ಯಾಕೆ ಪಾಲಿಸಬೇಕು ಎಂದು.ಅಜ್ಜಯ್ಯ ಮಲಿನ ವಾದ ಒಂದು ಜರಡಿ ಕೊಟ್ಟು ಇದರಿಂದ ಹೊಳೆ ನೀರು ತುಂಬಿಕೊಂಡು ಬಾ ಎಂದನಂತೆ. ಈ ಅಜ್ಜಯ್ಯನಿಗೇನು ಮರುಳೇ ಎಂದುಕೊಂಡರೂ ಯುವಕ ನೀರು ತುಂಬಲು ಮತ್ತೆ ಮತ್ತೆ ಪ್ರಯತ್ನಿ ಸಿ ವಿಫಲನಾದ. ಜರಡಿಯ ಕಿಂಡಿಗಳಿಂದ ನೀರು ಸೋರಿ ಹೋಗುತ್ತಿತ್ತು. ಅಜ್ಜಯ್ಯನನ್ನೇ ಕೇಳಿದ. ಈಗ ಜರಡಿ ಹೇಗಿದೆ ನೋಡು ಎಂದ ಅಜ್ಜಯ್ಯ. ಆಶ್ಚರ್ಯವೆಂದರೆ ಮಲಿನವಾಗಿದ್ದ ಜರಡಿ ಶುಭ್ರವಾಗಿತ್ತು. ಅಜ್ಜಯ್ಯ ಹೇಳಿದ.. ಸಂಪ್ರದಾಯಗಳೂ ಹಾಗೇ. ಆಚರಿಸುತ್ತ ಹೋದರೆ ಮನಸ್ಸು ಶುಭ್ರವಾಗುತ್ತದೆ, ಮನದ ಮಲಿನತೆ, ಕೊಳೆ ಅಳಿಯುತ್ತದೆ. ದೀಪಾವಳಿ ಸಂತಸಕ್ಕೆ, ಸಂಭ್ರಮಕ್ಕೆ ಅಷ್ಟೇ ಅಲ್ಲ ಸ್ವಾಸ್ಥ್ಯಕ್ಕೂ ಹೆಬ್ಬಾಗಿಲು!

✍️ಡಾ.ಸೌಮ್ಯ ಕೆ.ವಿ.
ಯಲ್ಲಾಪೂರ