ನನ್ನವರು ಕತ್ತಲಲಿ ನಾ ಹೇಗೆ ಆಚರಿಸಲಿ ದೀಪಾವಳಿ
ಬಾಳು ಬಂಧನದಲಿ ನಾ ಹೇಗೆ ಆಚರಿಸಲಿ ದೀಪಾವಳಿ

ಕೇಳುವವರಿಲ್ಲ ದುಃಖದ ಮಾತೂ ಈ ಕಣ್ಣೀರಿನ ಧಾರೆ
ಸೋಗಿನ ವೇಷದಲಿ ನಾ ಹೇಗೆ ಆಚರಿಸಲಿ ದೀಪಾವಳಿ

ಕುದಿವ ರಕುತದಲಿ ನಲಿವಿಗೆಲ್ಲಿ ನೆಲೆ ಬೆಲೆ ಜೋಕಾಲಿ
ಕನಸ ಜೋಲಿಯಲಿ ನಾ ಹೇಗೆ ಆಚರಿಸಲಿ ದೀಪಾವಳಿ

ದೀಪವೆಂದರೆ ಬೆಳಕು ಬೆಳಕೆಂದರೂ ದೀಪ ಬುಡವಲ್ಲ
ಎಣ್ಣೆಯಿಲ್ಲದ ದೀಪದಲಿ ನಾ ಹೇಗೆ ಆಚರಿಸಲಿ ದೀಪಾವಳಿ

ಕೂಡಿಯಾಡಿ ನಲಿದ ಕುಟುಂಬ ಒಡೆದು ಹೋಳಾಗಿದೆ
ಜಾಲಿ ಹಕ್ಕಿಗಳಿಲ್ಲದ ಗೂಡಲಿ ನಾ ಹೇಗೆ ಆಚರಿಸಲಿ ದೀಪಾವಳಿ

✍️ವೇಣು ಜಾಲಿಬೆಂಚಿ,ರಾಯಚೂರು.