ಭೂಮಿ ಮ್ಯಾಲೆ ಹುಟ್ಟಿ
ಪುನೀತರಾಗುವುದೆಂದರೆ
ಪುನೀತ ರಾಜಕುಮಾರನಂಗೆ
ಜನರ ಹೃದಯದಲ್ಲಿ ಪ್ರೀತಿಯ
ಅಲೆ ಎಬ್ಬಿಸುವುದೆ ಇರಬೇಕು.॥೧॥

ಅಲ್ಲೊಂದು ಪಾಪು ಪಾಪ
ಅದಕ್ಕೂ ಪುನೀತನಾಗಿ ಹೋದ
ಅಪ್ಪುವಿನ ಸಾವು ತಡೆಯದೆ
ಅಳುತಿತ್ತು ನಂಗೆ ಅಪ್ಪು ಬೇಕು..
ಇನ್ನೇನು ಬೇಕು ಜೀವಕೆ॥೨॥

ರಾಜಕುಮಾರನ ಮಗ ಹಮ್ಮಿಲ್ಲ
ಬಿಮ್ಮಿಲ್ಲ ಮನದ ತುಂಬ
ಇದ್ದಿದ್ದು ಒಂದೆ ಯಾರೆ ಕಂಡರು
ನಕ್ಕು ಮಾತನಾಡಿ ಪ್ರೀತಿ
ಧಾರೆ ಹರೆಸುವುದು ಅದಕ್ಕೀಗ
ಕಣ್ಣೀರ ಧಾರೆ ಎಲ್ಲ ಮನಗಳಲಿ॥೩॥

ಅಪ್ಪ ಸಿರಿವಂತನಾದರೆ
ಮುಗೀತು ಆ ಮರದ
ಕೆಳಗೆ ಜೀವನ ಮುಗಿಸಿ
ನಾಮವಶೇಷವಾಗುವರೆ ಎಲ್ಲ
ಇಲ್ಲಿ ಅಪ್ಪು ಯಪ್ಪ ಹೆಸರೇನೂ
ಉಸಿರಲ್ಲೇ ಉಸಿರಾದ
ಎಷ್ಟೋ ಜನಕೆ ಬೆಳಕಾದ॥೪॥

ಸಾವಿನಲ್ಲಿ ಶ್ರೀಮಂತನಾದವಂಗೆ
ಸಮನಾರು ಇಲ್ಲ ಇಲ್ಲಿ
ಸಾಧನೆಯ ಜೊತೆ ಜೊತೆಗೆ
ಹೃದಯ ಕಟ್ಟಿದ ಹೃದಯವಂತ
ಅಪ್ಪು ಇನ್ನಿಲ್ಲ ಎನ್ನಲಾಗದಂತೆ
ಬಾಳಿ ಬೆಳಗಿದ ಯುವರತ್ನ॥೫॥

(ಪುನೀತ್ ರಾಜಕುಮಾರಗೆ ನುಡಿ ನಮನಗಳು 🙏🙏)

✍🏻ಪರಸಪ್ಪ ತಳವಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ಲೋಕಾಪೂರ