ಎಂತಹ ಚೆಂದವೋ ನಮ್ಮ ಕನ್ನಡ ನಾಡು
ಸುಂದರ ಸೂಬಗಿನ ಚೆಲುವಿನ ಬೀಡು

ಸರ್ವಧರ್ಮಗಳ ಸೆಲೆಯು
ಸಾಧು ಸಂತರ ನೆಲೆಯು
ಶಿಲ್ಪ ಕಲೆಗಳ ಬಲೆಯು
ಕುಂಚ ಕಾವ್ಯಗಳ ಕಲೆಯು

ಜನಪದ ಸೂಗಡಿನ ಮಾಲೆ
ಸಪ್ತ ಸ್ವರಗಳ ಶಾಲೆ
ಶಾಂತಿ ಕ್ರಾಂತಿಗಳ ಕಹಳೆ
ರಮ್ಯ ತಾಣಗಳ ಸೆಳೆ

ಬಾಂಧವ್ಯ ಬೆಸೆಯುವ ಮಮಕಾರ
ಗತ ಇತಿಹಾಸದ ಚಮತ್ಕಾರ
ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರ
ಜೋಗ ಜಲಪಾತದ ಝೈಂಕಾರ

ಏಲಕ್ಕಿಯ ಕಸ್ತೂರಿಯ ಕಂಪನ
ವನ್ಯ ಮೃಗಗಳ ತಾಣ
ತೀರಿಸಲಾಗದು ನಾಡಿನ ಋಣ
ಪಾವನವಾಯಿತು ನನ್ನ ಜೀವನ

✍️ಶ್ರೀಮತಿ.ಭಾಗ್ಯಶ್ರೀ ಗ ಹಳ್ಳಿಕೇರಿಮಠ
ಹೆಮ್ಮೆಯ ಕನ್ನಡತಿ ಪ್ರಶಸ್ತಿ ಪುರಸ್ಕೃತರು
ಸಾ-ಜಂತಲಿ ಶಿರೂರು ತಾ-ಮುಂಡರಗಿ
ಜಿ-ಗದಗ