ಕನಸು ಕಾಣುತ ಯೋಜನೆಗಳ
ಬೆನ್ನರಿ
ಬೇರೆ ಆಸೆಗಳಿಗೆ ಬಿದ್ದು
ಜಾರದಿರಿ
ಅಪಮಾನಗಳಿಗೆ ನೀವೆಕೆ
ಅಂಜುವಿರಿ
ಗೆದ್ದರೆ ಜೀವನದಲ್ಲಿ ನಕ್ಷತ್ರ
ಆಗುವಿರಿ
ಸೋತರೆ ಇನ್ನೂಬ್ಬರಿಗೆ
ಪಾಠವಾಗುವಿರಿ
ಕೇವಲ ಕನಸು ಕಾಣುತ
ಮಲಗಬೇಡಿರಿ
ಜೀವನದಲ್ಲಿ ಎಂದೆಂದು
ಸಾಧಕರಾಗಿರಿ
ಕಳೆದ ಸಮಯ ಬಾರದು
ಮರೆಯದಿರಿ
ನಮ್ಮ ಹಣೆಬರಹವನ್ನು
ದೂಷಿಸಿಸದಿರಿ
ಹೋರಾಡಿ ಆತ್ಮವಿಶ್ವಾಸದ
ರಥವನ್ನೇರಿ
ಕುಳಿತು ಆಗಬೇಡಿ
ಸೋಮಾರಿ
ಸಾಧನೆಯ ಮೆಟ್ಟಿಲನ್ನು
ಸಾವಧಾನವಾಗಿ ಏರಿ
ಒಂದೂಂದೆ ಹೆಜ್ಜೆ ಇಡುತ
ಮುಟ್ಟು ನೀ ಗುರಿ

✍️ಕಿರಣ.ಯಲಿಗಾರ
ಮುನವಳ್ಳಿ 591117
ತಾ:ಸವದತ್ತಿ ಜಿ:ಬೆಳಗಾವಿ