ವನ್ಯರಾಶಿಯ ಸಂಪದ ಸಿರಿ ಸೊಬಗಲಿ
ಮೂಡಿದೆ ಕರುನಾಡು 
ಅನ್ಯಭಾಷಿಗರಿಗೂ ತನ್ನೊಡಲಲಿ ಜಾಗವ
ನೀಡಿದೆ ಕರುನಾಡು 

ಸ್ವಾಭಿಮಾನದ ಹಣತೆ ಪೂರ್ವದಿಂದಲೂ  ಬೆಳಗಿದೆ ನೋಡು
ನಿರಭಿಮಾನ ಈಗೀಗ ಹಣಕಿರಲು ಚಿಂತನೆ
ಮಾಡಿದೆ ಕರುನಾಡು 

ಚಿನ್ನದ ಗಣಿಗಳಲಿ ಐಶ್ವರ್ಯ ಹೊನ್ನ ಕಲಶ ತುಂಬುತಿದೆಯಲ್ಲ 
ರನ್ನ ಪಂಪ ಜನ್ನ ರಾಘವಾಂಕರ ಕಾವ್ಯಗಳ 
ಹಾಡಿದೆ ಕರುನಾಡು 

ಜ್ಞಾನಪೀಠಗಳ ಮಣಿಗಳನು ಧರಿಸಿದೆ ಕನ್ನಡಾಂಬೆಯ ಮುಕುಟ  
ಧ್ಯಾನವೆತ್ತಣದೋ ಮಕ್ಕಳದು ಎನ್ನುತಲಿ 
ಬಾಡಿದೆ ಕರುನಾಡು 

ಭವ್ಯ ಇತಿಹಾಸದ ಚರಿತೆ  ಕಲ್ಲುಗಳಲಿ ಶಿಲ್ಪವಾಗಿದೆ ಬಲ್ಲಳು ಸುಜಿ 
ದಿವ್ಯ ಪರಂಪರೆಯ ಮರೆತ ವಿಪರ್ಯಾಸ ನೋಡಿದೆ ಕರುನಾಡು 

✍️ಸುಜಾತಾ ರವೀಶ್, ಮೈಸೂರು