ಮತ್ತೊಮ್ಮೆ ಹುಟ್ಟಿ ಬಾ ಶಾಹುಮಹಾರಾಜಾ
ನಿಮ್ಮಿಂದ ಬೆಳಗಿಹುದು ಪ್ರಬುದ್ಧ ಭಾರತ
ಸಮತೆಯ ಸಂವಿಧಾನ ಮುನ್ನುಡಿ ಬರೆಯಲು
ಹಿನ್ನೋಟದಲಿ ಮುನ್ನಡೆಸಿದಾ ದೊರೆಯೇ

ಬಡತನದ ಬವಣೆಯಲಿ ಕಲಿತದ್ದು ಬಹಳ
ಕಲಿಯಬೇಕಿತ್ತಿನ್ನು ಹೆಚ್ಚಿನ ವಿಷಯ
ಹೊರದೇಶಕ್ಕೆ ಕಳುಹಿಸಲು ಮುಂದಾಗಿ
ಭೀಮರಾಯರಿಗೆ ಪ್ರೋತ್ಸಾಹ ನೀಡಿದಾ ದೊರೆಯೇ

ನಿಮ್ಮಂತೆ ಪೋಷಿಸುವ ದೊರೆಗಳು ಮೊದಲಿಲ್ಲ
ಜಾತಿ ಜಾತಿಗೆ ಗುಂಪು ಕದಡಿಹವು ಇಲ್ಲಿ
ಮೀಸಲಾತಿಯ ಕನಸು ನೀ ಹೊಸೆದಾ ಬೆಸುಗೆಯಲಿ
ಏರುತಿಹುದು ಗಾಳಿಪಟದಂತೆ ಇಲ್ಲಿsss

ವಿದ್ಯೆಗೆ ಮೊದಲ ಅಡಿ ಇಟ್ಟ ಮಹಾಗುರುವೆ
ಬಿತ್ತಿದಿರಿ ಅಕ್ಷರವ ದೀನ ದಲಿತರಿಗೆ
ಅರಿವು ಜಾಗೃತಿಗಾಗಿ ‘ ಮೂಕನಾಯಕ ‘ನನ್ನು
ಲೋಕಕೆ ಪರಿಚಯ ಮಾಡಿದಿರಿ ನೀವು

ವಿಧವೆಯರ ಮರುಜನ್ಮ ನೀಡಿದ ದೊರೆಯೇ ದೇವದಾಸಿಗೆ ಕೊಟ್ಟೆ ದಾಸ್ಯದಾ ಮುಕ್ತಿ
ಶಗಣಿಗೊಬ್ಬರ ಬಳಿವ ವಂಶಾವಳಿ ಜೀತಕ್ಕೆ
ನಿಷೇಧ ಹಾಕಿದಾ ದೊರೆಯೇsssss

ಜಾತಿಹೀನನ ಮನೆಯು ಜ್ಯೋತಿ ತಾ ಹೀನವೇ
ಜಾತಿ ಕುಲವು ಅಲ್ಲ ನಿನ್ನ ವೃದ್ಧೀಸಲು
ಜಾತಿ ಜಾತಿಯ ಮಧ್ಯೆ ಕಂದಕವ ಮುಚ್ಚಿಸಿ
ಅಂತರ್ಜಾತಿಗೆ ಬಂಧ ಬೆಸೆದಂಥ ದೊರೆಯೇ

ಸತ್ಯ ಶೋಧಕ ಮಂತ್ರ ಪಠಿಸಿದಿರಿ ನೀವು
ಜನಕಲ್ಯಾಣಕೆ ಸೂತ್ರವ ಹೆಣೆದಿರಿ
ಕಾಡುಗಳ್ಳರ ಮೆಟ್ಟಿ ದಿಟ್ಟತನ ತೋರ್ಪಡಿಸಿ
ಭರತಮಾತೆಯ ಕೀರ್ತಿ ಆದೀರಿ ನೀವು

✍️ಶ್ರೀಧರ ಗಸ್ತಿ, 
ಶಿಕ್ಷಕರು ಧಾರವಾಡ