‘ಅಜ್ಜಿ ಅಂದ್ರ ಹೆಂಗ ಇರತಾಳೆ’ ಮಕ್ಕಳ ಮುಗ್ಧ ಮನಸ್ಸು ಅರಳಿಸುವ ತಾಜಾತನದ ಕವನಗಳು…
ಮೆದು ಮಾತಿನ,ಮಿತ ಭಾಷಿ ಸ್ನೇಹಿತ ವಿನಾಯಕ ಕಮತದ ಆಡುವ ಮಾತುಗಳು ತುಂಬಾ ಕಡಿಮೆ. ಆದರೆ ಅವರು ರಚಿಸುವ ಕವನಗಳು ಮಾತ್ರ ತುಂಬಾ ಮಾತಾಡುತ್ತವೆ, ಏನೇನೋ ಹೇಳುತ್ತವೆ. ಮಕ್ಕಳಿಗೂ, ದೊಡ್ಡವರಿಗೂ ಹತ್ತಿರವಾಗುತ್ತವೆ. ಡಾ.ವಿನಾಯಕ ಕಮತದ ಸರ್ ಧಾರವಾಡದ ಬಾಲಬಳಗದಲ್ಲಿ ಸಂಘಟಿಸಿದ ಮಕ್ಕಳ ಸಾಹಿತ್ಯ ಸಂವಾದ ಕಮ್ಮಟದಲ್ಲಿ ನನಗೆ ಪರಿಚಯವಾದ ವರು.ಅಂದು ಸಂಜೆ ಕರ್ನಾಟಕ ವಿಶ್ವವಿದ್ಯಾಲಯ ದವರೆಗೂ ಮಾತನಾಡುತ್ತಲೇ ನಡೆದೆವು. ಪುಸ್ತಕ ವಿನ್ಯಾಸ,ಮುಖಪುಟ ರಚನೆ,ಮುದ್ರಣದ ಕುರಿತಾ ದ ವಿನಾಯಕ ಅವರ ಬಹು ವಿಚಾರ ಕಂಡು ಬೆರಗುಗೊಂಡೆ. ಅಲ್ಲಿಂದ ಸ್ನೇಹ ವಿಸ್ತರಿಸುತ್ತಲೇ ಸಾಗಿದೆ.ಆಗಾಗಮೊಬೈಲ್ ಮೂಲಕ ಕತೆ, ಕವನ ಗಳ ಕುರಿತು ಮಾತುಕತೆ ಇದ್ದೇ ಇರುತ್ತದೆ. ದೊಡ್ಡ ವರಿಗಾಗಿ ಕವನಗಳನ್ನು, ಗಜಲ್‍ಗಳನ್ನು ನೀಡಿ ದ್ದಾರೆ. ಮಕ್ಕಳಿಗಾಗಿ ಕವನ ಸಂಕಲನಗಳನ್ನು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚಿಗೆ ಕಥೆ ಗಳನ್ನು ಬರೆಯುವ ಅಭಿರುಚಿ ಕೂಡಾ ಪ್ರಾರಂಭ ವಾಗಿದೆ. ಇವೆಲ್ಲಾ ಸಂತೋಷದ ಸಂಗತಿಗಳೆ.

‘ಮಂಗಗಳೇನು ಕಮ್ಮಿ’ ಎಂಬ ಕವನವನ್ನು ಓದಿದ ಮಕ್ಕಳು ಖಂಡಿತಾ ನಕ್ಕು ನಲಿಯುತ್ತಾರೆ. ಯಾವುದೇ ಬರಹ ಮೊದಲು ಓದುಗನಿಗೆ ಖುಷಿಕೊಡಬೇಕು. ಅಂದಾಗ ಮುಂದಿನ ಓದಿಗೆ ಹಾದಿ.ರಾಮಾಯಣ ಪುಸ್ತಕವನ್ನು ಹಿಡಿದ ಮಂಗ ಗಳು ಪುರಾಣದ ಕೆಲ ತಪ್ಪುಗಳನ್ನು ಪ್ರಶ್ನಿಸುವ ಬಗೆ ಇಂದಿನ ಮಕ್ಕಳ ಮನೋವಿಚಾರವನ್ನು ಪ್ರತಿನಿಧಿಸುತ್ತದೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಮಕ್ಕಳಿಗಾಗಿ ಪ್ರಾಸಕ್ಕೆ ಕಟ್ಟು ಬೀಳದೆ, ತುಂಬಾ ರಸವತ್ತಾಗಿ, ಮಕ್ಕಳ ಮನಸ್ಸಿಗೆ ನಾಟುವಂತೆ,ಮತ್ತೆ ಪದೆ ಪದೇ ಓದಬೇಕೆಂಬ ಬಯಕೆ ಮೂಡುವ ದಿಸೆಯಲ್ಲಿ ಕಾವ್ಯ ರಚಿಸುತ್ತಿರುವುದು ಸೊಗಸಿನ ಮಾತು. ತುಂಬಾ ವಿಶಿಷ್ಠವಾದ, ತುಸು ಅಚ್ಚರಿಯನ್ನು ಮೂಡಿಸುವ ಕೃತಿಯ ಶೀರ್ಷಿಕೆಯ ಪದಗಳು ಓದುಗನನ್ನು ಆಕರ್ಷಿಸುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ“ಅಪ್ಪಅಮ್ಮ ಬೈಯ್ಯ ತಾರೆ”ಕೃತಿ.ಈಹೊತ್ತಿಗೆಯ ಎಲ್ಲಾ ಹಾಡುಗಳನ್ನು ನನ್ನ ಶಾಲೆಯ ಮಕ್ಕಳು ಓದಿದ್ದಾರೆ,ಹಾಡಿ ನಲಿದಿ ದ್ದಾರೆ.ಈಗ ಮತ್ತೊಂದು ಕವನ ಸಂಕಲನ “ಅಜ್ಜಿ ಅಂದ್ರ ಹೆಂಗ ಇರತಾಳ” ನನ್ನೆದುರು ಇದೆ. ಇದರ ಕುರಿತು ಅಭಿಪ್ರಾಯ ಬರೆಯಲು ಹೇಳಿ ದ್ದಾರೆ, ತುಂಬಾ ಖುಶಿ. ಈ ಸಂಕಲನ ದಲ್ಲಿನ 42 ಪದ್ಯಗಳನ್ನು ಓದಿ ಆನಂದಿಸಿದೆ.ವಿಭಿನ್ನ ವಿಷಯ ವಸ್ತುಗಳನ್ನು ತೆಗೆದುಕೊಂಡು ಕವನಗಳನ್ನು ರಚಿ ಸಿದ ಕಾರಣಕ್ಕೆ ಇವರ ಕವನಗಳಲ್ಲಿ ತಾಜಾತನ ಕಾಣುತ್ತದೆ.ಎಲ್ಲೋ ಒಂದೆಡೆ ಓದಿದ, ಪುನರಾವ ರ್ತಿತ ವಿಷಯ ಇದೆ ಎಂದೆನಿಸದ ಶೈಲಿ.ಹಾಗೆಯೆ ಇರಬೇಕು ಕೂಡಾ.
ಸಾಗರದಲ್ಲಿ ಬಿದ್ದಿದ್ರೆ ಹನುಮ?
ಎಪ್ಪೋ! ಎಂಥಾ ಅನಾಹುತ
ಬಿರ್ರನೆ ಬೆವರಿ ಎಲ್ಲಾ ಮಂಗ
ಬಿಟ್ಟೋಡಿದ್ವು ರಾಮಾಯಣನ!
ಕವನಗಳಲ್ಲಿ ಆಶ್ಚರ್ಯದ ಭಾವನೆಗಳು, ಪ್ರಶ್ನೆ ಗಳು ಮೂಡುವ ವಿಚಾರವಂತಿಕೆ ಇವೆಲ್ಲ ಕವನ ಕಟ್ಟುವ ಕಲೆ ಇವರಿಗೆ ಸಿದ್ಧಿಸಿದ್ದು ಸೋಜಿಗವೇ. ‘ಅಜ್ಜಿ ಅಂದ್ರ ಹೆಂಗಿರತಾಳ?’ ತುಂಬಾ ಅಪ್ಯಾ ಯಮಾನವಾಗಿ ಕಾಡುವ ಕವನವಿದು. ಆಧುನಿಕ ಜೀವನದ ಈ ಕಾಲಘಟ್ಟದಲ್ಲಿ ಎಲ್ಲೆಲ್ಲೂ ಅವಿ ಭಕ್ತ ಕುಟುಂಬಗಳನ್ನೇ ಕಾಣುತ್ತೇವೆ. ಸಂಬಂಧ ಗಳ ಪದಗಳನ್ನೇ ಮರೆತು ಬಿಡುವಷ್ಟು ಕುಟುಂಬ ಜೀವನಕ್ಕೆ ಜೋತು ಬಿದ್ದಿದ್ದೇವೆ. ಅನೇಕ ಕೌಟುಂ ಬಿಕ ಕಾರಣಗಳಿಂದ ಇಲ್ಲವೇ ಉದ್ಯೋಗ ಅರಸಿ ಪರ ಊರಿಗೆ ಹೋದ ಅದೆಷ್ಟೋ ಕುಟುಂಬಗ ಳಲ್ಲಿ ಅಜ್ಜ, ಅಜ್ಜಿ ಇಬ್ಬರೂ ಕಾಣಸಿಗುವುದಿಲ್ಲ. ಅವರ ಅಗತ್ಯತೆಯ ಬಗ್ಗೆ ಚಿಕ್ಕ ಚಿಕ್ಕ ಮಕ್ಕಳು ಕೊರಗಿನಿಂದ ಕೇಳುವ ಅನೇಕ ಪ್ರಶ್ನೆಗಳು ಈ ಕವನದಲ್ಲಿವೆ.ಹಿರಿಯರ ಆಸರೆ,ಮಕ್ಕಳಿಗೆ ಅಗತ್ಯ ಎನ್ನುವುದನ್ನು ಕವಿ ಮಕ್ಕಳ ಮುಖೇನ ಇಲ್ಲಿ ಹೇಳಿಸಿದ್ದಾರೆ. ಅಜ್ಜಿ ಹೇಳುವ ಕತೆಗಳು, ಅವಳ ಸಾಂತ್ವಾನ ಮಕ್ಕಳಿಗೆ ಬೇಕೆ ಬೇಕು.
ಅಪ್ಪ ಅಮ್ಮಾ ಬರೋವರೆಗೂ ಬರಕಂತ ಇರ್ತೀನಿ ಬಂದಕೂಡ್ಲೆ ಅಜ್ಜಿ ಕರಕೊಂಡು ಬರೋಣ ಅಂತೀನಿ
ಹೀಗೆ ಕವನದ ಕೊನೆಯಲ್ಲಿ ಮಗುವಿನ ಆಶಾ ಭಾವನೆ ಎದ್ದುಕಾಣುವಂತಿದೆ.‘ಗಾಳಿ’ ಕವನದಲ್ಲಿ ಅದರ ಅರ್ಭಟದ ಚಿತ್ರಣವಿದೆ. ‘ಹದ್ದಿನ ಹನು ಮಂತ’ ಇತನ ಚೇಷ್ಟೆ, ತುಂಟಾಟಗಳ ವರ್ಣನೆ ನಗು ಉಕ್ಕಿಸುತ್ತದೆ.ಪ್ರತಿಯೊಬ್ಬ ಕವಿಯೂ ಕೂಡ ಹೊಳೆಯುವ ಚಂದ್ರನ ಮೋಡಿಗೆ ಒಳಗಾಗುವು ದು ಸಹಜವೇ. ಅಂತೆಯೇ ವಿನಾಯಕ ಕಮತದ ಅವರು ಕೂಡಾ ಹೊರತಾಗಿಲ್ಲ. “ಚಂದಪ್ಪ” ಕವನದಲ್ಲಿ ಮಗುವು ಆತನನ್ನು ಬಯಸುವುದು, ಜೊತೆಯಲಿ ಬಂದರೆ ಹಪ್ಪಳ. ಹೋಳಿಗೆ, ತುಪ್ಪ ಕೊಡುವೆ ಎನ್ನುವ ಮುಗ್ಧಮಗು ಆತ ಬಾರದಿ ದ್ದಾಗ:
ಬರದೇ ಹೋದ್ರೆ ನನಗೇನ ಪಿಸ್ಸಾ
ಉಪವಾಸ ವನವಾಸ ಮಾಡಪ್ಪ
ಕರಗಿ ಕಣ್ಮರೆಯಾಗಪ್ಪ.
ತನ್ನನ್ನೇ ಸಮಾಧಾನಪಡಿಸಿಕೊಳ್ಳುವಿಕೆ ತುಂಬಾ ಮನೋಹರವಾಗಿದೆ. ಪರಿಸರದಲ್ಲಿರುವ ಪ್ರಾಣಿ, ಪಕ್ಷಿ,ಕೀಟಗಳು, ಹೂದೋಟ, ಸೂರ್ಯ, ಚಂದ್ರ, ಮಳೆ ಇವುಗಳ ಜೊತೆಯಲ್ಲಿ ಮೂಢನಂಬಿಕೆಗಳ ಅಭಾಸ, ಐತಿಹಾಸಿಕ ಸ್ಥಳ, ಹಬ್ಬಗಳು, ಅಮ್ಮ ಹೀಗೆ ಹತ್ತಾರು ವಿಷಯಗಳು ಈ ಕವನಗಳಿಗೆ ಜೀವಾಳವಾಗಿವೆ. “ಬಾಲವಿಲ್ಲದ ಇಲಿ’ ಎರಡು ಸಾಲುಗಳನ್ನು ಹೊಂದಿರುವ, ದೀರ್ಘವಾಗಿರುವ ಕಥನ ಕವನವಾಗಿದೆ. ಹಾಸ್ಯದ ಜೊತೆಯಲ್ಲಿ ಅಂತರಂಗದ ಸೌಂದರ್ಯವೇ ಶ್ರೇಷ್ಠವೆನ್ನುವ ಸಂದೇಶವಿದೆ. ‘ದಾರದ ಉಂಡೆ’, ‘ಗಡಿಯಾರ‘ ‘ಸೆಂಪಿಗೆ’,‘ಚುಕ್ಕಿ ಇಟ್ಟೊರು ಯಾರು?’ ಗಮನ ಸೆಳೆಯುವ ಗೀತೆಗಳಾಗಿವೆ. ಮಕ್ಕಳ ಮುಗ್ಧ ಮನ ಸ್ಸು,ಅವರ ಕುತೂಹಲ ಭಾವನೆಗಳನ್ನು ಈಎಲ್ಲಾ ಕವನಗಳಲ್ಲಿ ಕಾಣಬಹುದು.
ತುಂಬಾ ನವೀನ ರೀತಿಯಲ್ಲಿ ಕವನಗಳನ್ನು ಕಟ್ಟು ವ ವಿನಾಯಕ ಕಮತದ ಅವರು ಇತ್ತೀಚಿನ ಕವಿತೆ ಬರೆಯುವವರ ಸಾಲಿನಲ್ಲಿ ಪ್ರತ್ಯೇಕವಾಗಿಯೂ, ವಿಶೇಷವಾಗಿಯೂ ನಿಲ್ಲುತ್ತಾರೆ.ಪ್ರತಿ ಕವನಗಳು ತರಗತಿಯ ಮಕ್ಕಳಿಗೆ ದಕ್ಕುವಂತಾಗಬೇಕು. ಇದ ರಿಂದ ಮಕ್ಕಳ ಮನಸ್ಸು ಅರಳುವಂತಾಗುತ್ತದೆ. ಅಂದಾಗ ಕಮತದ ಅವರ ಶ್ರಮವೂ ಸಾರ್ಥಕತೆ ಪಡೆಯುತ್ತದೆ.ಇನ್ನೂ ವಿಶಿಷ್ಠ ರೀತಿಯ ಕವನಗಳ ನ್ನು ಕಟ್ಟುವ ಕಸುವು ಹೆಚ್ಚಾಗಲಿ ಎಂದು ಆಶಿಸು ತ್ತಾ ಉತ್ತಮ ಕವನ ಸಂಕಲನ ನೀಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
‘ಅಜ್ಜಿ ಅಂದ್ರ ಹೆಂಗ ಇರತಾಳೆ’ ಲೇ: ವಿನಾಯಕ ಕಮತದ ಪ್ರಕಟಣೆ : 2021 ಪುಟಗಳು: 96 ಬೆಲೆ: 100 ರೂ ಸುಭಾಷಿಣಿ ಪ್ರಕಾಶನ ಡಾ.ರಾಧಾಕೃಷ್ಣ ನಗರ, ಗದಗ 582103 ಮೊ:9902109834

✍️ ವೈ.ಜಿ.ಭಗವತಿ ಮಕ್ಕಳ ಸಾಹಿತಿಗಳು,ಕಲಘಟಗಿ
ಉತ್ತಮವಾಗಿ ಪ್ರಕಟಿಸಿದ್ದೀರಿ ರವಿಶಂಕರ ಸರ್.. ಧನ್ಯವಾದಗಳು ತಮಗೆ.
LikeLiked by 1 person