ಯಶಸ್ಸು ಅನ್ನುವದು ಸೋಲಿನ ಪ್ರಥಮ ಮೆಟ್ಟಿಲು ಸಹ ಆಗಿರುತ್ತದೆ. ಈ ಅಭಿಪ್ರಾಯ ಅನುಭವಿಕರು ಹೇಳುವ ಮಾತು. ಇದನ್ನೇ ಕೆಟ್ಟದಾಗಿ ಹೇಳಬೇಕೆಂದರೆ Every dog has a day ಅಂತಾರೆ.ಅರ್ಥ ಇಷ್ಟೇ; ಪ್ರತಿ ನಾಯಿಗೂ ಹಡಪು ಹತ್ತೇ ಹತ್ತುವದು. ಯಶಸ್ಸು ಅನ್ನುವದು ನಾಯಿಯಿದ್ದ ಹಾಗೆ; ಬೊಗಳುತ್ತದೆ, ಕಚ್ಚುತ್ತದೆ ಗುರ್ ಎನ್ನುತ್ತದೆ, ನಾನು ಏನನ್ನಾದರೂ ಎಲ್ಲಿ ಯಾದರು ಮಾಡಬಹುದು ಅನ್ನುವ ಎಲ್ಲಾ ಕ್ರಿಯೆ ಗಳನ್ನು ಯಶಸ್ಸು ಪಡೆದವರು ಒಂದಿಲ್ಲದೊಂದು ರೀತಿಯಿಂದ ಮಾಡುತ್ತಾರೆ. ಇಂತಹ ಕಾರಣಗಳಿಂ ದಾಗಿಯೇ ಯಶಸ್ಸು ಅನ್ನುವದು ಅಧ:ಪತನದ ಜಾರು ಬಂಡೆಯಾಗುತ್ತದೆ. ಅದರಲ್ಲೂ ರಂಗಭೂ ಮಿಯಲ್ಲಿ ಇಂಥಹದು ಸಂಭವಿಸುವದು ಹೆಚ್ಚು. ಒಂದು ನಾಟಕದ ಪ್ರದರ್ಶನದ ಯಶಸ್ಸು ಯಾವ ಜಾನಿ ವಾಕರ್,ಶಿವಾಸ್ ರಿಗಲ್,ಹಳೆಯಸನ್ಯಾಸಿ, ಟೀಚರ್ ಗೂ ಕಡಿಮೆಯಾಗಿಲ್ಲ. ಹೋಗಳಿದಷ್ಟು ಹೊಗಳಿಸಿಕೊಂಡಷ್ಟು ಪೆಗ್ ಮೇಲೆ ಪೆಗ್ ಏರಿಸಿ ಕೊಂಡ ಹಾಗೆ. ಕಣ್ಣು ತೆರೆಯುವದರಲ್ಲಿ ನಾಟಕ ಪ್ರದರ್ಶನದ ಯಶಸ್ಸಿನ ಮೇಲೆ ಸ್ಟಾರ್ ನಟ,ನಟಿ ನಿರ್ದೇಶಕ ಆಗಿಬಿಡುತ್ತಾರೆ! ಆಗ ನೋಡಿ ಮಜಾ ಶುರು, ಮರು ಪ್ರದರ್ಶನಕ್ಕೆ ಎಷ್ಟು ಕೊಡುತ್ತೀರಿ ನನಗೆ? ನನಗೆ ಆ ಡೇಟ್ ಆಗೋದಿಲ್ಲ ಈ ಡೇಟ್ ಆಗೋದಿಲ್ಲ. ತಾವು ನಾಟಕ ಆರಂಭವಾಗೋ ಮುನ್ನ ಹೇಳಿದ ಮಾತು ಮರೆತು ಬಿಡುತ್ತಾರೆ. ಇದು ಹವ್ಯಾಸಿ ಅರೆ ವೃತ್ತಿ ಕಲಾವಿದರ ಪಾಡು.

ಇನ್ನು ಸಂಘಟನೆಯ ಸಮಸ್ಯೆಗಳು ಬೇರೆ. ಯಶಸ್ವಿ ನಾಟಕ ಪ್ರದರ್ಶನ ಎಲ್ಲರಿಗೂ ಹಿಡಿಸಲೆ ಬೇಕೆಂತ ನಿಯಮವಿಲ್ಲ. ಪ್ರದರ್ಶನದ ಒಳ್ಳೆಯ ಅಂಶಗಳು ಪ್ರಚಾರ ಪಡೆಯುವದಿಲ್ಲ. ಯಾಕೆ ಎಂದರೆ ಪತ್ರಿಕೆಗಳಿಗೆ ಬರೆಯುವವರು ಯಾರು? ಒಂದು ಪತ್ರಿಕೆಯಲ್ಲಿ ದುಡಿಯುತ್ತಿರುವ ವ್ಯಕ್ತಿಗಳ ಆಸಕ್ತಿ, ಅವರ ಕೆಲಸದಲ್ಲಿ ಏನಾದರೂ ಸಾಧಿಸ ಬೇಕೆಂಬ ಛಲ,ಅವರ ಬರೆಯುವ ಶೈಲಿ, ಆದ್ಯತೆ, ಪತ್ರಿಕೆಯ ಮಾಲೀಕರು ಇಲ್ಲಾ ಅವರ ಮೇಲೆ ಇರುವ ಸಂಪಾದಕವರ್ಗ,ಜಾಹಿರಾತು ಸಂಬಂಧ, ರಾಜಕೀಯ ಸ್ಥಾನಮಾನ ಇತ್ಯಾದಿ ಎಲ್ಲವನ್ನೂ ಅವಲಂಬಿಸಿರುತ್ತದೆ. ಯಾರಾದರೂ ಧಾರವಾಡ ದ ಟ್ಯಾಕ್ಷಿ, ಆಟೋರಿಕ್ಷಾಗಳ ಅನುಭವ ಇದ್ದವರ ನ್ನು ಕೇಳಿ ಗೊತ್ತಾಗುತ್ತದೆ, ಕೆಲಸವಿಲ್ಲದೆ ಹರಟೆ ಹೊಡೆಯುತ್ತ ಸುಮ್ಮನೆ ಸ್ಟ್ಯಾಂಡ್ ದಲ್ಲಿ ಕೂಡು ತ್ತಾರೆ ಹೊರತು ಜಿಕೆರಿ ಮಾಡಿದ ಗ್ರಾಹಕರ ಜತೆ ಜಿಕೆರಿನೂ ಮಾಡದೇ ನಿರ್ಲಕ್ಷ ಮಾಡಿ ಸೊಕ್ಕು ಮಾಡಿ ಮತ್ತೆ ಹರಟೆಯಲ್ಲಿ ಮಗ್ನರು! ಇಂತಹ ವರನ್ನು ಕಟ್ಟಿಕೊಂಡು ಏನು ಮಾಡುವದು? ಇಲ್ಲಿ ಯಾವದು ಮುಖ್ಯ? ಕಲೆಯೋ? ಸಂಸ್ಕೃತಿಯೊ? ಜೀವನ ನಿರ್ವಹಣೆಯೋ? ಅಥವಾ ಸಮಯದ ಬೆಲೆ, ಪ್ರತಿಭೆಯ ಬೆಲೆಯೋ? ಇದೇ ಸರಿಯಾದ ಬೆಲೆ ಅಂತ ಅಂದಾಜು ಕಟ್ಟುವದು ಹೇಗೆ?ಯಾರು ಹೇಗೆ ಕಟ್ಟುತ್ತಾರೆ? ಬಂಗಾರ, ಬೆಳ್ಳಿ, ಹೊಲ,ನಿವೇಶನ ಇತ್ಯಾದಿ ಎಲ್ಲವನ್ನು ಬೆಲೆ ಕಟ್ಟು ವ ಪದ್ಧತಿ ಒಪ್ಪುತ್ತಾರೆ,ಆದರೆ ನಟ,ನಟಿ, ನಿರ್ದೇ ಶಕ,ತಂತ್ರಜ್ಞ ಟೀಕಿಟ್ ಬೆಲೆ ಹೇಗೆ ನಿಷ್ಕರ್ಷಿಸುವು ದು? ಸಿನಿಮಾಗಳಿಗೆ ಅದು ತಾರಾ ಮತ್ತು ಇತರ ಮೌಲ್ಯ ಬರಬೇಕು ಅಂತ ಅಂದಾಜಿಸಿದ ದುಡ್ಡು ಮಾಡುವಿಕೆಯ ಸಂಭಾವ್ಯತೆ ಮಾತ್ರ ನಿಂತಿರು ತ್ತದೆ.

ಎಲ್ಲವೂ ಒಂದು ರೀತಿಯಿಂದ ಲಾಟರಿ ಅಥವಾ ಜೂಜು ಇದ್ದಂತೆಯೇ. ಎಲ್ಲರಿಗೂ ಸಮನಾದ ಹಂಚುವಿಕೆ ಸಾಧ್ಯವೊ?ಇಲ್ಲಿ ಸಂಬಂಧಪಟ್ಟ ಪ್ರತಿ ವ್ಯಕ್ತಿಯೂ ಸಹ ಆತ್ಮಾವಲೋಕನ ಮಾಡಿಕೊಂ ಡು ಮಾರುಕಟ್ಟೆ ಅಂದರೆ ಹೊರಗಿನ ಸಂದರ್ಭ, ಸನ್ನಿವೇಶದ ಮಟ್ಟ, ಆ ಪ್ರದರ್ಶನದ ಯಶಸ್ಸಿನ ಸಂಭಾವ್ಯತೆ ಮತ್ತು ಆ ಯಶಸ್ಸಿನಲ್ಲಿ ಆ ವ್ಯಕ್ತಿಯ ಪಾತ್ರ, ಗಾತ್ರ, ಅನಿವಾರ್ಯತೆ ಮತ್ತು ಆ ವ್ಯಕ್ತಿ ಯಿಂದ ಆಗಬಹುದಾದ ಲಾಭ, ಆ ವ್ಯಕ್ತಿಯ ಕೇವಲ ಹೆಸರಿನಿಂದ ಆಗಬಹುದಾದ ಲಾಭ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಟಿ.ವ್ಹಿ. ಧಾರಾವಾಹಿಗಳಲ್ಲಿ ಇದು ಟಿ.ಆರ್.ಪಿ ಮೇಲೆ ಅಂದರೆ ಎಷ್ಟು ಜನ ನೋಡುತ್ತಾರೆ,ಎಷ್ಟುಹೊತ್ತು ಟೆಲಿವಿಷನ್ ಮುಂದೆ ಕೂತಿರುತ್ತಾರೆ?, ಯಾವ ಸಮಯ ಹೆಚ್ಚು ಜನಪ್ರಿಯವಾಗುವ ಸಂಭಾವ್ಯತೆ ಹೊಂದಿರುತ್ತದೆ? ಅಷ್ಟೆ ಅಲ್ಲದೆ ಅದರ ಹೂರಣ ಅಂದರೆ ಕಂಟೆಂಟ್, ನಿರೂಪಿಸುತ್ತಿರುವ ರೀತಿ, ಅಭಿನಯ, ಮನಮುಟ್ಟಿ ಮೋಡಿ ಮಾಡುವ ಮಾತುಗಳು ಇಡೀ ಧಾರಾವಾಹಿಯ ಕಂತಿನ ಸಮಯ ಎಲ್ಲವುಗಳನ್ನು ಅವಲಂಬಿಸಿರುತ್ತದೆ. ಏನಕೇನ ಕಾರಣದಿಂದ ಹೌಸ್ ಫುಲ್ ಮಾಡುವ ಸಾಮರ್ಥ್ಯವೇ ಮುಖ್ಯವಾಗಿ ಎದ್ದು ಕಾಣುತ್ತದೆ.

ಇನ್ನೂ ನಾಟಕದ ಬಗ್ಗೆ ಇವೇ ಮಾತು ಅನ್ವಯಿಸ ಬಹುದು. ಆದರೆ ಸ್ವಲ್ಪ ಅಲ್ಲಲ್ಲಿ ಬದಲಾವಣೆ ಆಗುತ್ತದೆ.ಒಬ್ಬ ನಟ, ನಟಿ,ನಿರ್ದೇಶಕ, ಲೇಖಕ, ತಂತ್ರಜ್ಞನು ಸಹ ಈ ಅಂಶಗಳನ್ನು ಗಮನಿಸ ಬೇಕಾದುದು ಅನಿವಾರ್ಯ.ಮುಂದೆ ವಿವರವಾಗಿ ಚರ್ಚಿಸೋಣ.

( ಸಶೇಷ)
✍️ಅರವಿಂದ ಕುಲಕರ್ಣಿ,
ರಂಗಭೂಮಿ ಚಿಂತಕರು,ಧಾರವಾಡ