ಜಗತ್ತು ಅಸ್ತಿತ್ವಕ್ಕೆ ಬಂದು ಸಾವಿರಾರು ವರ್ಷ ಗಳು ಕಳೆದಿವೆ.ಪಂಚಭೂತಗಳಲ್ಲಿ‌ ಲೀನವಾಗುವ ಮನುಷ್ಯನ ದೇಹವು ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಕೃತಿಯನ್ನು ಮೀರಿ ಮೆರೆದಂತೆಲ್ಲ ಪ್ರಳಯಕ್ಕೆ, ಭೂಕಂಪನಕ್ಕೆ ಆಹುತಿಯಾಗಿ ಅಳಿದುಳಿದ ಜೀವ ಗಳಿಗೆ ಹೊಸದನ್ನು ಹೇಳಿ ಕೊಡುವ ಯಾವ ಪ್ರಮೇಯವು ನಮ್ಮಲ್ಲಿ ಉಳಿದಿಲ್ಲ. ಮುಂದಿನ ಪೀಳಿಗೆಗೆ ನಾವುಗಳು ಬಿಟ್ಟುಹೋಗುವ ಉತ್ತಮ ಅಂಶಗಳು ಎಲ್ಲಡಗಿವೆಯೆಂದು ಪುಟ ತಿರುವಬೇ ಕಿದೆ. ವರ್ಷ ಉರುಳಿದರೂ ವರುಣನ ಆರ್ಭಟಕ್ಕೆ ತೆರೆ ಬಿದ್ದಂತೆ ಕಾಣುತ್ತಿಲ್ಲ‌. ಬದುಕು ದುಸ್ತರವಾಗಿ ಬೀದಿಗೆ ಬಿದ್ದರೂ, ತೇಲಿಹೋದರೂ, ಮುಳುಗಿದ ರೂ ಒಂದಿಷ್ಟು ಪರಿಹಾರ ಸಿಗಬಹುದಷ್ಟೇ ಹೊರ ತು, ಅಷ್ಟು ವರ್ಷ ಬಾಳಿ ಬದುಕಿದ ಜೀವನ ಮತ್ತೆ ಸಿಕ್ಕಿತೇ?

ತರಗತಿಗಳಲ್ಲಿ ಮಕ್ಕಳಿಗೆ ಪ್ರಕೃತಿ ವಿಕೋಪದ ಬಗ್ಗೆ ಹಾಗೂ ಅದರ ಮರುಭರಣದ ಕುರಿತಾಗಿ ಮಾರ್ಮಿಕವಾಗಿ ತಿಳಿಸುತ್ತ, ಪ್ರಾಯೋಗಿಕವಾಗಿ ಮಕ್ಕಳಿಗೆ ತಾವೇ ಸ್ವತಃ ಕೈತೋಟದಲ್ಲಿ ನೆಟ್ಟ ಮರ ಗಿಡಗಳ‌ ಪಾಲನೆ,ಪೋಷಣೆಯ, ಸಂರ ಕ್ಷಣೆಯ ಜವಾಬ್ದಾರಿ ಕೊಟ್ಟಾಗ,ಆಸಕ್ತಿಯಿಂದ ನಿರ್ವಹಣೆ ಮಾಡುವ ಮಕ್ಕಳು ಯಾರೆಂದು ಕಾಣಸಿಗುತ್ತಾ ರೆ. ಅವರಲ್ಲಿ ಬಿತ್ತಿರುವ “ಪ್ರಕೃತಿಯ ಉಳಿವು ನಮ್ಮ ನಲಿವು” ಎಂಬ ಬೀಜ ಮಣ್ಣಿನ ಕಣಕಣ ದಲ್ಲಿ ಬೆರೆತು ಚಿಗುರೊಡೆದರೆ ಆಗ ಅದಕ್ಕೊಂದು ಸಾರ್ಥಕತೆ.

ಪರಿಸರ ಪ್ರೇಮ ಜಾಗೃತವಾಗುತ್ತಿದ್ದಂತೆ, ಪರಿಸರ ನಳನಳಿಸುತ್ತಿರುತ್ತದೆ.ಸಕಾಲದಲ್ಲಿ ಸೂಕ್ತ ಮಾರ್ಗ ದರ್ಶನ, ನೇತೃತ್ವ ಬಹು ಮುಖ್ಯ ಪಾತ್ರವಹಿಸುತ್ತ ದೆ.ಅದು ಶಾಲೆಯಿರಲಿ, ಮನೆಯಿರಲಿ, ಸಮಾಜ ವಿರಲಿ. ಕುಡಿಯುವ ನೀರು ಕಣ್ಮುಂದೆ ಕಡಲಷ್ಟು ತುಂಬಿ ತುಳುಕಿದ್ದರೆ ಪ್ರಪಂಚದ ಯಾವುದೇ ಪ್ರಜೆಯು ದುಃಖಿಸುತ್ತಿರಲಿಲ್ಲ. ಸಾಗರದ ಜಲವ ಕರಗಿಸಲು ಪರಿಶ್ರಮ ಪಡುತ್ತಿದ್ದ. ಆದರೆ ದಾಹ ತೀರಿಸಲು ಸಿಹಿ ನೀರೆ ಬೇಕು. ಅದರ ಉಳಿವಿಗೆ ಹೋರಾಟದ ಅನಿವಾರ್ಯತೆ ಇದೆ. ನೀರು ಪೋಲಾಗದಂತೆ ಕ್ರಮವಹಿಸಲು ನೈಸರ್ಗಿಕ ಶಕ್ತಿ ಯನ್ನು ಹೆಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯ.

ವಿಶ್ವದ ಆಮ್ಲಜಕದ ಕಾರ್ಖಾನೆ ಅಮೇಜಾನ್ ಕಾಡು ಕಾಡ್ಗಿಚ್ಚಿಗೆ ಆಹುತಿಯಾದಾಗ ಆದ ನಷ್ಟ ಭರಿಸಲು ಎಷ್ಟು ಶತಮಾನ ಬೇಕೋ ಗೊತ್ತಿಲ್ಲ. ನಮ್ಮ ಸುತ್ತಮುತ್ತಲಿನ ಕಾಡು, ಅಮೇಜಾನ್ ಕಾಡು ಒಮ್ಮೆಲೆ ಕಾಡ್ಗಿಚ್ಚಿಗೆ ಬಲಿಯಾದರೆ, ನಮ್ಮ ದು ಹಂತಹಂತವಾಗಿ ಮೇಣದಂತೆ ಕರುಗುವುದು ಅರಿವಿಗೆ ಬಾರದು. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕಲ್ಪನೆಗಳನ್ನು ಮಾಡುವ ನಾವುಗಳು ಕಾಂಕ್ರೀಟ್ ಕಾಡಿನಲ್ಲಿ ಮಕ್ಕಳನ್ನು ಸಿಮೆಂಟು, ಮರಳಿನ ಹಾಗೆ ಯಾವ ಸೆಂಟಿಮೆಂಟ್ ಇಲ್ಲದ ರೀತಿಯಲ್ಲಿ, ನಮ್ಮ ಪಂಜರದಲ್ಲಿ ಹೈಬ್ರಿಡ್ ಬೆಳೆ ಯಂತೆ ಬೆಳೆಸುತ್ತಿದ್ದುದುರ ಬಗೆಗೆ ಅರಿವಿದೆ.

ಪ್ರತಿಮನೆಯಲ್ಲಿಯೂ ಇದೇ ರೂಢಿಯಾದರೆ, ಮುಂದಿನ ಭವಿಷ್ಯದ ಕತೆಯೇನು? ಅವರಿಗೆ ಒಂದಿಷ್ಟು ಕಾಗದದ ನೋಟುಗಳು,ಕಾಂಕ್ರೀಟ್ ಕಾಡು, ಪ್ಲಾಸ್ಟಿಕ್, ಯಂತ್ರೋಪಕರಣಗಳು, ಆಕ್ಸಿ ಜನ್ ಇಲ್ಲದೆ ಪರದಾಡುವ ಸ್ಥಿತಿ. ಅಲ್ಲಲ್ಲಿ ಆಕ್ಸಿ ಜನ್ ಕೇಂದ್ರಗಳು ತಲೆಯೆತ್ತಿ, ಸಹಜವಾಗಿ ಉಚಿ ತವಾಗಿ ಸಿಗುವ ಗಾಳಿಗೆ ಬೆಲೆ ಕಟ್ಟಿ ಪಡೆಯಬೇಕಾ ದ ಸ್ಥಿತಿ ದೂರಿಲ್ಲವೆಂದರೂ ಆಶ್ಚರ್ಯವಿಲ್ಲ. ಇದೆಲ್ಲ ನಿಯಂತ್ರಣಕ್ಕೆ ತರಬೇಕಾಗಿದ್ದದ್ದು ಸಮಾ ಜದ ಎಲ್ಲ ವರ್ಗದವರು. ಮುಂದಿನವರಿಗಾಗಿ ಅಲ್ಪಸ್ವಲ್ಪ ಉಳಿಸುವ ಪ್ರಮಾಣ ಮಾಡಿಸುವುದು ಬಹುಮುಖ್ಯ.

ಉಳುಮೆ ಮಾಡಲು ರೈತನಿಗೆ ಭೂಮಿಯೇ ಇಲ್ಲದಂತೆ ಮಾಡುವುದನ್ನು ತಪ್ಪಿಸಬೇಕಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸು ಮೂಲ ಶಿಕ್ಷಣದತ್ತ ಗಮನ ಹರಿಸಬೇಕಿದೆ. ಶಿಕ್ಷಣ ಬದುಕಿನ ಸಂಕಷ್ಟಗಳ ನಿವಾರಿಸುವಂತಿರಬೇಕು: ಸಮಸ್ಯೆಗಳನ್ನು ಹುಟ್ಟು ಹಾಕುವಂತಿರಬಾರದು. ನಾವೆಲ್ಲ ನಮ್ಮನಾಡು,ನೆಲ,ಜಲ ಸಂರಕ್ಷಣೆಯನ್ನ ಮಾಡುವ ಸಂಕಲ್ಪದಿಂದ ಉಳಿಯಲು ಸಾಧ್ಯ. ‍‌ರೈತ ಬೆಳೆಯದಿದ್ದರೆ ಎಷ್ಟು ಕಲಿತರೇನು? ನೇಗಿಲ ಯೋಗಿಗೆ ಶರಣಾಗದಿದ್ದರೆ‌ ಎಲ್ಲವೂ ವ್ಯರ್ಥ. ಆಹಾರ ಪೋಲಾಗದಂತೆ ತಿಳಿವಳಿಕೆಯ ತಂತ್ರ ಅಗತ್ಯ.

ಹಾಗೆ ಸುಮ್ಮನೆ ಗೋಡೆಗೆ ಒರಗಿ ಕಣ್ಮಚ್ಚಿದರೂ, ಮಣ್ಣು ಕೊಚ್ಚಿಹೋದ ಸ್ವಪ್ನ. ಬೇರುಗಳಿಂದ ಮಣ್ಣಿನ ಹಿಡಿತ ಕೈ ತಪ್ಪಿದೆ.ಹೀಗಾಗಿ ಗಾಳಿ ಮಳೆಗೆ ಮರಗಿಡಗಳು ಅನಾಯಾಸವಾಗಿ ಧರೆಗುರುಳು ತ್ತಿವೆ. ಬೆಟ್ಟಗುಡ್ಡಗಳು ಅದುರುತ್ತ ನೆಲಕ್ಕುರುಳು ತ್ತಿವೆ. ನಾವುಗಳು ಮನೆಯ ಮಕ್ಕಳಿಗೆ ಪರಿಸರ ಪ್ರೇಮವನ್ನು ಬಿತ್ತಬೇಕಿದೆ. ವನ್ಯ ಪ್ರಾಣಿಗಳನ್ನು ಅವುಗಳ ಪಾಡಿಗೆ ಅವು ಕಾಡಲ್ಲಿ ಸ್ವಚ್ಛಂದವಾಗಿ, ಸ್ವತಂತ್ರವಾಗಿ ಬದುಕಲು ಬಿಟ್ಟರೆ ಮಾತ್ರ ಅವು ನಮ್ಮೊಂದಿಗೆ ಇರಲು ಸಾಧ್ಯ. ಪ್ರಕೃತಿ ಸಮತೋ ಲನ ಕಾಯ್ದುಕೊಳ್ಳುವಲ್ಲಿ ಯಾರ ಮುಲಾಜಿಗೂ ಒಗ್ಗುವುದಿಲ್ಲ‌.

ಎಲ್ಲವು ಜಲಾವೃತವಾಗಿ, ನಾವೆಲ್ಲ ಸಮಾನತೆಯ ಅಡಿಪಾಯಕ್ಕೆ ಜಲಸಮಾಧಿಯಾಗಿ ನಾವು ಮಾಡಿದ ತಪ್ಪಿಗೆ ನಮ್ಮ ಮಕ್ಕಳು ಅವರ ಭವಿಷ್ಯ ಮಣ್ಣಾಗದಂತೆ ಉಜ್ವಲ ಭವಿಷ್ಯವನ್ನು ರೂಪಿಸ ಲು ಹಸಿರನುಳಿಸುವ ಪಣ ತೊಡುವ ಹಾಗೂ ಅನುಷ್ಠಾನಕ್ಕೆ ಬರುವ ರೀತಿಯಲ್ಲಿ ಮನೆಯ ಹಿರಿ ತಲೆಮಾರಿಂದ ಬಳುವಳಿಯಾಗಿ ಬರುವಂತಾದರೆ ಮಾತ್ರ ಸಾಧ್ಯ. ಅಪ್ಪಿಕೋ ಚಳುವಳಿ ಪುನರಾವ ರ್ತನೆಯಾಗಬೇಕಿದೆ. ನಾನು ನನ್ನದಷ್ಟೇ ಎಂಬ ಸ್ವಾರ್ಥ ತ್ಯಜಿಸಿದಾಗಲೇ ನಿಸ್ವಾರ್ಥ ಆರಾಧಿಸಲು ಸಾಧ್ಯ. ಸಮಾಜದ ಪ್ರತಿನಾಗರೀಕನ ಆದ್ಯ ಕರ್ತ ವ್ಯ, “ಮನೆಗೊಂದುಮರ, ಊರಿಗೊಂದು ವನ”ವೆಂಬ ಧ್ಯೇಯ ಮಂತ್ರವಾಗಬೇಕು.

ಪ್ರತಿ ಮನೆಮನೆಯಲ್ಲಿ ಸಾಲು ಮರದ ತಿಮ್ಮಕ್ಕ ಉದ ಯಿಸಲಿ. ಮಕ್ಕಳು ನಮ್ಮನ್ನು ಅನುಕರಿಸು ತ್ತಾರೆ.ಅನುಕರಣೆ ಭಾವಿ ಜೀವನಕ್ಕೆ ಪ್ರೇರಣೆಯಾ ಗಲಿ. “ವೃಕ್ಷೋ ರಕ್ಷತಿ ರಕ್ಷಿತ:” ಗಿಡಮರಗಳನ್ನು ನಾವು ರಕ್ಷಿಸಿದರೆ, ಗಿಡಮರಗಳು ನಮಗೆ ಪ್ರಾಣ ವಾಯು ನೀಡಿ ನಮ್ಮನ್ನು ರಕ್ಷಿಸುತ್ತವೆ’ ಎಂಬ ಮಾತು ಅಕ್ಷರಶಃ ಸತ್ಯ. ಶಾಲೆಯಲ್ಲಿ, ಮನೆಯಲ್ಲಿ ತಾವು ನೆಟ್ಟ ಗಿಡಮರಗಳನ್ನು ಆರೈಕೆ ಮಾಡುತ್ತ ಹಸಿರು ಹೆಚ್ಚಿಸೋಣ,ಪ್ರಕೃತಿಮಾತೆಯನ್ನು ಪೂಜಿ ಸೋಣ….

 ಶ್ರೀಮತಿ. ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ