ಎದೆಗೊತ್ತಿದ್ದೇನೆ ಹಾಳೆಗಳನ್ನು
ಹೃದಯ ಮುಂಗಾರು ಮೋಡದಂತೆ ಭಾರ ರಪ್ಪನೆ‌‌ ಎರಚುವ ಆತಂಕ
ಅಕ್ಷರಗಳು ಅಳಿಸಿಹೋಗುವ ಭಯ

ಮಿಂಚಿನ ಮಾಲೆಗಳಲಿ
ಪ್ರೇಮ ವಿರಹಗಳ ತೊಡಕು                 
ಕೋರೈಸಿ ಮಾಯ ನೆನಪಿನ ಸವಿಕ್ಷಣಗಳಂತೆ ಅಕ್ಷರಗಳು ಅಳಿಸಿ ಹೋಗುವ ಭಯ

ಹಾಳೆಗಳು ಒದ್ದೆಯಾದವೆ!
ಆತಂಕ
ಆಡಿದೆ ಮಂತ್ರದಂಡ
ಇದ್ದಕ್ಕಿದ್ದಂತೆ ಮೂಡಿದೆ ಕ್ಷಣದ ಹೊಂಬಿಸಿಲು

 ✍️ಶ್ರೀಮತಿ.ಅರುಂಧತಿ ಎಸ್.
ಹುಬ್ಬಳ್ಳಿ