ಕಪ್ಪತ್ತಗುಡ್ಡದ ರಮಣೀಯ ಪರಿಸರದ ರಸದೌತ ನ ಸವಿಯಲು ಬರುವ ಪ್ರವಾಸಿಗರಿಗೆ ಮುಂಡರ ಗಿ ತಾಲೂಕಿನ ರಾಜ್ಯ ಮಟ್ಟದ ಜನಪದ ಕಲಾವಿ ದರಾದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಹಾಗೂ ಸಂಗಡಿಗರು ಕಪ್ಪತ್ತಗುಡ್ಡದಲ್ಲಿ ಸ್ವಚ್ಚತೆ ಕಾಪಾಡಲು ಹಾಗೂ ಗುಡ್ಡದ ಮಹತ್ವ ಸಾರುವ ನಿಟ್ಟಿನಲ್ಲಿ ಅನೇಕ ಜನಪದ ಜಾಗೃತಿ ಗೀತೆಗಳನ್ನು ಹೇಳುವುದರ ಮೂಲಕ ಬಂದ ಪ್ರವಾಸಿಗರಿಗೆ ಅರಿವು ಮೂಡಿಸಿದರು.

ಅನೇಕ ಸಸ್ಯ ಔಷಧಿಗಳ ಕಾಶಿ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರು ನಸುಕಿನ ಜಾವ ಇಬ್ಬನಿ ಯಿಂದ ಕೂಡಿದ ಉತ್ತರ ಕರ್ನಾಟಕದ ಸಿಂಹಾದ್ರಿ ನೋಡಲು ‌ ಕಿಕ್ಕಿರಿದು ಜನ ಬರುತ್ತಿದ್ದಾರೆ. ಕಳೆದ 3ತಿಂಗಳಿನಿಂದ ಕಪ್ಪತ್ತಗುಡ್ಡ ನೋಡಲು ಬರುವ ಪ್ರವಾಸಿಗರು ಸುತ್ತಲೂ ಮೋಜು ಮಸ್ತಿ ಮಾಡು ತ್ತಾ ಅನೈತಿಕ ಚಟುವಟಿಕೆಗಳನ್ನು ಮಾಡುವುದಲ್ಲ ದೇ ಬೇಕಾಬಿಟ್ಟಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಿ ಯೇ ಬಿಟ್ಟು ಹೋಗುತ್ತಿದ್ದಾರೆ,ಇದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದನ್ನರಿತ ಜನಪದ ಕಲಾ ವಿದ ಗವಿಶಿದ್ಧಯ್ಯ ತಮ್ಮ ಕಲಾ ತಂಡದೊಂದಿಗೆ ಕಪ್ಪತ್ತಗುಡ್ಡದಲ್ಲಿ ಬಂದ ಪ್ರವಾಸಿಗರಿಗೆ ತಮ್ಮ ಸುಮಧುರ ಜನಪದ ಜಾಗೃತಿ ಹಾಡುಗಳ ಮೂಲ ಕ ಅರಿವು ಮೂಡಿಸುತ್ತಿದ್ಧಾರೆ, ಕಪ್ಪತ್ತಗುಡ್ಡದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ಆದ ಜನಪದ ಗತ್ತಿನ ಮೂಲಕ ಎಚ್ಚರಿಸುವದರೊಂದಿಗೆ ಕಪ್ಪತ್ತ ಗಿರಿಯ ಮಹತ್ವವನ್ನು ಸಾರುತ್ತಿದ್ಧಾರೆ.

ಉಳಿಸಿ ಬೆಳಿಸಿ ಕಪ್ಪತ್ತ. ಗುಡ್ಡ, ಪರಿಸರ ಜಾಗೃತಿ ಗಾಗಿ ಆಗೋನ ಬದ್ಧ, ಕೇಳಿರಿ ಕೇಳಿರಿ ನಾಡಿನ ಜನಗಳೆ ಕಪ್ಪತ್ತಗುಡ್ಡದ ವೈಭವ, ಅನ್ನುವಂತಹ ಮುಂತಾದ. ಕಪ್ಪತ್ತಗುಡ್ಡದ ಜಾಗೃತಿ ಗೀತೆಗಳು ಜನರಲ್ಲಿ ಪರಿಸರ ಪ್ರೇಮವನ್ನು ತುಂಬಿದವು. ಗವಿಸಿದ್ಧಯ್ಯನವರ ಜನಪದ ಕಲೆಯ ಮೂಲಕ ಮಾಡುತ್ತಿರುವ ಕಪ್ಪತ್ತಗಿರಿಯ ಪರಿಸರ ಜಾಗೃತಿಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಜನ ಪದ ಕಲೆ ಹಾಗೂ ಪರಿಸರಪ್ರೀತಿ ಸದಾ ವೃದ್ಧಿಯಾ ಗುತ್ತಿರಲಿ.