ಕಳೆದ ನೆನ್ನೆಗಳ ಬಯಕೆ ನಾಳೆಗಳಲಿ ಕುಳಿತ ಬಸ್ಸಿ ನೊಳಗೆ ಹೊರಗಿನ ಬಿಸಿಗಾಳಿಯ ಜೊತೆ ಮನ ದೊಳಗಿನ ಬಿಸಿ ನಿಟ್ಟುಸಿರು ಸೇರಿ ಹೇಳಲಾಗದ ಚಡಪಡಿಕೆ.ಅವನ ನೆನಪಲ್ಲಿ ನಾನು ಇಷ್ಟು ವರ್ಷ ಇರಲಿಲ್ಲವಾ ಅನ್ನೋದೇ ದೊಡ್ಡ ನೋವು.

ಒಮ್ಮೆ ಕರಿಬಾರದಿತ್ತ ಬಂದು ಬಿಡುತಿದ್ದೆ, ನಾನಲ್ಲಿ ಆಚೆ ಈಚೆ ನೋಡದೆ ನಿನ್ನ ಕೈಗೆ ಕೈ ಬೆಸೆಯುತ್ತಾ ನಿಂತು ಬಿಡುತಿದ್ದೆ, ನಿನ್ನ ಕಣ್ಣ ಸಮುದ್ರದಲ್ಲಿ ಮೀನಾಗಿ ಈಜುತಿದ್ದೆ. ನಿನ್ನ ತೆರೆದ ಬಾಹುಗಳಲಿ ಕರಗಿ ನೀರಾಗುತಿದ್ದೆ. ನಿನ್ನ ಮಾತು ಮೌನಕೆ ಬಿಸಿ ಮುತ್ತನಿಟ್ಟು ನಲಿತಿದ್ದೆ. ನಿನ್ನ ಒಂದೇ ಒಂದು ಮಾತು, ಒಂದು ಭೇಟಿ ಸಾಕಿತ್ತು ನಮ್ಮ ಬದುಕ ಬಣ್ಣ ಬದಲಾಗಲು. ಎದೆಯೊಳಗೆ ನೂರಾರು ಮಾತು ಉಳಿದು ಕೊನೆ ಮುಳ್ಳು ಚುಚ್ಚಿದಂತೆ ಬಾಧೆ ಕೊಡುತ್ತಿದೆ.

ನಮ್ಮಿಬ್ಬರ ಮನದ ಅಭಿಪ್ರಾಯಗಳು ಭಿನ್ನವಾ ಗಿದ್ದು ಯಾವಾಗ..?ಪ್ರಶ್ನೆಗಳೆಲ್ಲವೂ ಪ್ರಶ್ನೆಗಳಾಗಿ ಉಳಿವ ಮುನ್ನ ನಿನ್ನಲ್ಲಿಗೆ ನಾನು ಓಡಿ ಬಂದು ಗಟ್ಟಿಯಾಗಿ ನಿನ್ನ ತಬ್ಬಿ, ನಿನ್ನ ಚಾಚಿದ ತೋಳು ಗಳೊಳಗೆ ಮಗುವಾಗಬೇಕು. ನಮ್ಮ ನಡುವೆ ಗೋಡೆಯಾಗಿದ್ದು ನಮ್ಮ ನೋವು ನಲಿವುಗಳನ್ನ ನಾವಿಬ್ಬರು ಹಂಚಿಕೊಳ್ಳಲಾರದ. ಅಸಮರ್ಥತೆ ಯ ಸೋಗಿನಲ್ಲಿ.

ಮನಸ್ಸು ಏಕೋ ಭಾರವಾಗಿತ್ತು… ಏಳೂವರೆ ತಾಸಿನ ಈ ಹುಬ್ಬಳ್ಳಿ/ ಬೆಂಗಳೂರಿನ ಈ ಪಯಣ ದಲ್ಲಿ ಸಿರ್ಫ್ ನೀ ಮಾತ್ರ ನನ್ನ‌ ಮನದೊಳಗಿದೀ ಯಾ, ಮರ ತಬ್ಬಿದ ಕರಡಿ ತರ.ಮನದ ಪಟಲದ ಮೇಲೆ ಪಟಪಟಾಂತ ನೆನಪಿನ ರೀಲು ಬಿಚ್ಚಕೊತಿ ದೆ ಮಿಂಚು ಹೊಳೆವ ಬೆಳಕಂತೆ ಇರುಳ ಮೆಲ್ವಾಸಿ ನ ಸೆರಗಿಗೆ ಬೆಳಕಾದಂತೆ. ಎಷ್ಟು ವರ್ಷ ಆಯ್ತು ಮತ್ತೆ ನಿನ್ನ ನೋಡುವ ಸುವರ್ಣ ಗಳಿಗೆ ಈಗ ಒದಗಿ ಬಂದಿದೆ. ನಾವಿಬ್ಬರು ಹೇಗೆ ಸಂಧಿಸಿದ್ವಿ ಹೇಗೆ ಹತ್ತಿರ ಆದಿವಿ? ಇಲ್ಲ ನೆನಪಾಗ್ತಿಲ್ಲ. ಆದರೆ ನೀ ಬಿಟ್ಟು ಹೋದ ಜಾಗದಲ್ಲೇ ನಾ ಇನ್ನೂ ಅಲ್ಲೇ ಇದೀನಿ, ಅದೇ ಅಸಹಾಯಕತೆಯ ಲಜ್ಜೆ ಮರೆತ ಹೆಜ್ಜೆ ನಾದದಲಿ ಲೀನವಾದಂತೆ.

ಇಬ್ಬರ ಹೆಜ್ಜೆ ಗುರುತು ಮರವಂತೆಯ ಕಡಲ ಕಿನಾರೆಯ ಮಳಲ ಮೇಲೆ ಊರಿದೆ. ಮಳಲ ಮೇಲೆ ಬರೆದ ಪದಗಳಲು, ಈ ಬೆರಳಿಗಂಟಿದ ಮರಳ ಕಣಗಳ ಲೆಕ್ಕಗಳಷ್ಟು ಕನಸುಗಳು ಲೆಕ್ಕ ಕ್ಕೀಗ. ಸಿಕ್ತಿಲ್ಲ ಖರೆ ಆದರೆ ಆದರೆ ಅದಾವ ಗಳಿಗೆಲಿ ಕಡಲ ಅಲೆ, ಹೆಜ್ಜೆ ಗುರುತು,ಬರೆದ ಪದ ಗಳನ್ನೆಲ್ಲ ಅಷ್ಟೇ ತಾಳ್ಮೆಯಿಂದ ಕೊಂಡೊಯ್ದಿತ್ತು ಹಿಂತಿರುಗಿ ತನ್ನೊಡಲಾಳಕೆ. ನನ್ನ ನಿನ್ನ ಅರಿವಿನ ಕುರುಹು ಕೂಡ ಅಲ್ಲಿರಲಿಲ್ಲ. ಹೊತ್ತು ಯಾರಪ್ಪ ನ ಸೊತ್ತು ಅಲ್ಲಿಯೇ ಇರೋಕೆ. ನೀನು ಹೋಗಿ ಹತ್ತು ವರ್ಷ ಆಯಿತು. ‘ನಿನ್ನ ಹುಡುಕದೆ ನಾನು ನನ್ನ ಹುಡುಕದ ನೀನು’ ಸಂಧಿಸಿ. ಆದರೆ ಎಲ್ಲ ನೆನ್ನೆ ಮೊನ್ನೆ ನಡೆದ ಘಟನೆಗಳೇ, ಕಾಲ ಮಾತ್ರ ಸುಧೀರ್ಘ ಹತ್ತು ವರುಷ ತೋರ್ಸ್ತಿದೆ.

ನಾ ನೋಡದ ನಾಳೆಗಳಲಿ ಬರೆದ ಬರಿ ಕಥೆಕವನ ಗಳು, ಗಜಲ್ಗಳ ಸಾಲಿನಲಿ ಬರಿ ನೀನೆ ತುಂಬಿದೀ ಯಾ. ನಾಡಿನ ಪತ್ರಿಕೆಲಿ ಬಹುಮಾನದ ನನ್ನ ಕಥೆ ಓದಿ, ವಿಳಾಸ ಪಡೆದ ನಿನಗೆ ಮತ್ತೆ ನೆನಪಾದದ್ದು ಸುಯೋಗಾನೆ. ಎಂಥ ದನಿ ನಿನ್ನ ಕರೆಗೆ ನಾ ಕರಗಿ ಹೋದೆ. ನಿಂತ ನೆಲವೆ ಕುಸಿತಿದೀಯಾ? ಏನು ಮಾತಾಡಬೇಕು ಅರಿಯಾಲಾರದೇ, ಹೇಗಿದೀ ಯಾ? I need to u? ಕೇಳಿದ ದನಿಗೆ ಜೇನಾಗಿ ದ್ದೆ. ಮರೆತ ಹತ್ತು ವರ್ಷದ ಧಾವಂತದ ಬದುಕಲಿ ಅಲ್ಲಿಯೇ ನಿಲ್ಲಿಸಿ ಹೋದವನಿಗೆ ಮತ್ತೆ ನೆನಪಾದ ಗಳಿಗೆ. ಏನು ಹೇಳಲಿ, ಹೇಗಿದೀಯಾ? ಅನ್ನೋ ಪ್ರಶ್ನಗೆ ಬರೊಬರಿ ಹತ್ತು ವರುಷ, ನೂರ ಮೂರು ದಿನಗಳ ಲೆಕ್ಕ ಎಣಿಸಿ ಹೇಳಲೆ? ನೀನೇ ಹೇಳಿದೆ ಮರುಕ್ಷಣ ಹತ್ತು ವರುಷ, ನೂರ ಮೂರು ದಿನದ ಲೆಕ್ಕ. ವಿಸ್ಮಯಗೊಳ್ಳುವ ಸರದಿ, ಸ್ಥಿತಿ ಎರಡೂ ನನ್ನದಿತ್ತು. ಅಯ್ಯೋ ಕರಡಿ ‘ನನ್ನೆಲ್ಲ ನೋವುಗಳ ಬದಿಗಿಟ್ಟು ನಲಿವಿನತೃಷೆಗೆ ನೀರೆಯೋದು ನನ್ನೊ ಳಗಿನ ಈ ನಿನ್ನ ಸ್ನೇಹ-ಪ್ರೀತಿನೇ ಕಣೋ.ಆ ತೀವ್ರ ತೆಯ ಭಾವವನ್ನ ನಾ ಅವಲತ್ತುಕೊಳ್ಳೋದು ಅದು ಮೋಹಾನಾ? ಪ್ರೀತಿನಾ?ಸ್ನೇಹದ ಪರಮಾ ವಧಿನ? ಇದ್ಯಾವ ಟ್ಯಾಗ್ನೂ ಬಳಸದೆ ನಿಷ್ಕಲ್ಮಷ ಭಾವದೊಡನೆ ನನ್ನಾತ್ಮ ಸಖನೊಡನೆ ಸ್ಪಂದಿಸ್ತಾ ಇರ್ತಿನಿ ನಾನು ಈಗಲೂ. ಇದು ಮೊದಲ ಭೇಟಿ ಯಿಂದನೂ ಕಣೋ. ಹೇಳಲಾಗದ ಭಾವಾನು ಸಂಧಾನ ನಮ್ಮಿಬ್ಬರಲ್ಲೂ. ಆ ಸಖ್ಯದ ದಿನಗಳ ಆಪ್ತತೆ ಈಗಲೂ ನನ್ನಲ್ಲಿ ಬೆಚ್ಚಗೆ ಉಳಿದಿದೆ. ಆದರೆ ಪ್ರತಿ ಬಾರಿ ಅದರ ಪರೀಕ್ಷೆ ಮಾಡಿದವ ನೀನು. ನನ್ನಲಿಲ್ಲದ ಪ್ರಶ್ನೆಗಳನ್ನ ಅನುಮಾನಗಳ ನ್ನ ಹುಟ್ಟು ಹಾಕಿದವ ನೀನು. ಇದು ಪ್ರೀತಿಯ ಇನ್ನೊಂದು ಮುಖಾನ ಅಥವಾ ಪೋಸೆಸಿವ್ನೆಸ್, ಅಥವಾ ಮತ್ತೇನೋ…? ಆದರೆ ಇದ್ಯಾವುದಕ್ಕೂ ನಾ ಹೊಣೆ ಅಲ್ಲ ಅನ್ನುವುದನ್ನು ಸಾರಿಸಾರಿ ಸಾಬೀತು ಮಾಡೋದರಲ್ಲಿ ಸೋತಿದೀನಿ ಖರೆ. ಪ್ರತಿ ಬಾರಿ ಅಸಹಾಯಕಳನ್ನಾಗಿ ಮಾಡ್ತಾ ಇದ್ದ ದ್ದು ಈ ನಿನ್ನ ನಡೆ.ಅದು ನಿನ್ನ ಅವಳ ಮಾತುಗಳ ಸಂಭಾಷಣೆ ಈಗಲೂ ಕಿವಿ ಕಚ್ಚುತ್ತೆ. ತುಂಬಾ ನೋವು ಕೊಟ್ಟ ಕ್ಷಣಗಳು ಅವು ನನಗೆ. ಅದರ ಸಮರ್ಥನೆ ನಿನ್ನಲ್ಲಿದ್ದ ಗಳಿಗೆಗಳು ಗೊತ್ತು, ಈಗ ಲೂ ಇದೆ ಅಂತ. ಮತ್ತದೆ ದಾಟಿ ಬೇಡ, ಈಗ ನನಗೆ ನಿನೊಬ್ಬನೆ ಸಾಕು ನನಗೆ.

ಸದಾ ನನ್ನ ಜೀವನೋತ್ಸಾಹ ನನಗೆ ನೀನು, ನಿನ್ನ ನೆನಪ ಹೂರಣವೇ ಸಾಕು ಜಗದಲುಳಿದ ಗಳಿಗೆಯಲಿ ಮೆರೆಯಲು.ನಾನಲ್ಲಿ ಮಗುವಾಗಿದಿ ನಿ, ಗೆಳತಿಯಾಗಿದಿನಿ, ಅಭಿಸಾರಿಕೆಯಾಗಿ ಬೇರು ಬಿಟ್ಟ ಭಾವನೆಗಳಿಗೆ ನೀತಿ- ರೀತಿ ಮೀರಿ,ಗೋಡೆ ಗುಂಟ ಕುಡಿಯೊಡೆದು ಪ್ರೀತಿಯಲರಳಿದ ಹೂ ನೀನು, ಸೂಕ್ಷ್ಮವಾಗಿ ಕಾಪಿಟ್ಟಿದ್ದೀನಿ. ಈ ತುಟಿ ಯಂಚಿನಲಿ ಸದಾಎಚ್ಚರದಿ ಕಾಯ್ತ ಈ ತಿಳಿ ನಗು ವನ್ನ. ಅದು ನೀ ನಾನಾದ ನಗು. ಆದರೆ ಅದನ್ನ ನಾ ವಿವರಿಸಲಾರದೆ ಕೊರಗಿದೆ.ನೀ ಅರ್ಥೈಸಲಾ ರದೆ ಕಮರಿದೆ. ನೀ ಏನೇ ನನ್ನ ದೋಷಿಸಿದರೂ ನೀ ನನ್ನ ಸಮಾಧಾನ, ನಿನ್ನ ಸಮಾಧಾನವೆ ನನ್ನ ಸಮಾಧಾನ, ನಿನ್ನ ಖುಷಿನೆ ನನ್ನ ಖುಷಿ, ಖುಷಿ ಯಾಗಿರು ನಿನ್ನಜೊತೆ ನಾನಿದೀನಿ ಅಂತ ಧೈರ್ಯ ವಾಗಿ ನಾ ಹೇಳಬಲ್ಲೆ. ಆದರೆ ಅದೇ ಕ್ಲಾರಿಟಿ ನಿನ್ನ ಲ್ಲಿ ಇಲ್ಲದ ಆ ನೋವಿದೆ. ಅದು ಯಾವಾಗಲೂ ಕಾಡುತ್ತೆ.ನಾ ನಿನಗೇನು ಅನ್ನುವ ಸ್ಪಷ್ಟತೆ ಗೊಂದ ಲಗಳಿದೆ, ಇನ್ನೂ ನಿನಗೆ ಬೇರೆ ಕಾರಣ ಇರಬಹು ದೇನೊ..? ಇರಲಿ ಮರಳಿ ಮಣ್ಣಿಗೋಗುವ ಮುನ್ನ ಮತ್ತೆಮತ್ತೆ ನೋವಿನ ಕ್ಷಣಗಳನ್ನು ನನ್ನ ಗೋರಿಯ ಮೇಲಣ ಹೂವಿನ ನಗುವಲಿ ಅರಳಿ ಮರೆಯಲಿ.

ನನ್ನೊಳಗಿರುವ ನಿನಗೆ ಯಾವಾಗಲೂ ಆಧರಣೀ ಯ ಸಿಂಹಾಸನವನ್ನು ಮನದ ಅಂತಃಪುರದಲಿ ಕಾಯ್ದಿರಿಸಿದೀನಿ. ಇದೆಲ್ಲ ನಿನ್ನ ಹತ್ತಿರ ಇಷ್ಟೇ ಧೈರ್ಯವಾಗಿ ಹೇಳಲಾರೆ. ನಿನ್ನೊಂದು ಕರೆಗೆ ಬರ್ತಿದೀನಿ…ಮತ್ತೆ ಕಳೆಯದಂತೆ ನನ್ನ ಕಾಪಿ ಡುವ ಸವಿನೆನಪಿನ ಹುನ್ನಾರದಲಿ ನೀ ಕಾಯ್ದಿರು ದೊರೆ ….
ನಿನ್ನೊಳಗಿನವಳು‌.

✍🏻ಶಾಲಿನಿ ರುದ್ರಮುನಿ,ಹುಬ್ಬಳ್ಳಿ