ಹಿರಣ್ಯಕ್ಷನ ಗರ್ವವ
ಮುರಿದ ಆ ದಿನ
ವರಹಾ ಅವತಾರದಿ
ಬುವಿಯ ರಕ್ಷಿಸಿದ ದಿನ
ಈ ಮಹಾಸುದಿನ

ಹಿರಣ್ಯಕಷ್ಯಪುವಿನ ಗರ್ವವ
ಮುಟ್ಟ ಹಾಕಿದ ದಿನ
ನರಸಿಂಹ ಅವತಾರದಿ
ಕಂಬದಿ ಬಂದದಿನ
ಅಪ್ಪನ ಕೊಂದ ಮಗ ಪ್ರಹ್ಲಾದನ
ಮಾತು ನಿಜವಾಗಿಸಿದ ದಿನ
ಇದೇ ಮಹಾಸುದಿನ

ಕಾರ್ತವೀರಾರ್ಜುನನ ಪರಶುವಿನಿಂದ ಕೇಂದ್ರ ದಿನ
ತಂದೆಯ ವಾಕ್ಯಪರಿಪಾಲಿಸಿ
ತಂದೆಯ ಮೃತ್ಯುಗೆ ಕಾರಣರಾದರ
ಅಂತ್ಯವಾಗಿಸಿದ ದಿನ
ಅಹಂ ಎಂಬ ಗುಣವ ನಾಶಮಾಡಿದ ದಿನ

ದಾನದಲಿ ನಾನೇ ಶ್ರೇಷ್ಠ ಎಂಬ
ಬಲಿಚಕ್ರವರ್ತಿಯ ವಾಮನ
ತುಳಿದ ದಿನ
ಬಲಿಗೆ ಮೋಕ್ಷ ನೀಡಿದ
ಮಹಾಸುದಿನ ಈ ದಿನ

ದಶ ಕಂಠ ನಾ ಎಂಬ
ಅಜ್ಞಾನಕ್ಕೆ
ರಾಮ ಬಾಣ ಉತ್ತರ ಕೊಟ್ಟದಿನ
ಸೀತೆಯ ಸೆರೆಯಿಂದ ಬಿಡಿಸಿದ ದಿನ
ವಿಭೀಷಣನಿಗೆ ಪಟ್ಟ ಕಟ್ಟಲು
ಕಾರಣದ ದಿನ
ಅಧರ್ಮವ ಅಳಿಸಿ
ಧರ್ಮ ಸ್ಥಾಪನೆಯಾದ ದಿನ
ಈ ಸುದಿನ ಮಹಾಸುದಿನ

ಕೌರವನ ಹಟವ ಅಡಗಿಸಿದ ದಿನ
ಬಲಭೀಮನ ಹೊಡೆತಕ್ಕೆ ತೊಡೆ
ತುಂಡರಿಸಿದ ದಿನ
ಮಾಧವನ ನಂಬಿದ ಪಾಂಡವರಿಗೆ
ಜಯ ಸಿಕ್ಕ ದಿನ
ಅಸತ್ಯ ಅನೀತಿಯ ನೂರು ಕೌರವ ರೂಪದ ಗುಣಗಳ ನಾಶವಾದ ದಿನ
ಈ ಸುದಿನ ಮಹಾಸುದಿನ

ಕೆಟ್ಟ ಗುಣವೇ ಶುಂಭನಿಶುಂಭರು
ಮಹಿಷನ ಮರ್ಧನ ಮಾಡಿದ ದಿನ
ಗೌರಿ ಕಾಳಿಯಾಗಿ,ಮಹಿಷಾಸುರ
ಮರ್ಧಿನಿಯಾದ ದಿನ
ತಾಯಿ ಚಾಮುಂಡಿಯ ವಿಜಯೋತ್ಸವದ ದಿನ
ಈ ವಿಜಯದಶಮಿಯ ದಿನ

✍️ಹಾತ್ಯಾವಿ(ವಿಜಯಕುಮಾರ ಹೆಚ್.ಟಿ)
ಸಿಹಿಮೊಗ್ಗ