ಮಹಿಷಾಸುರನ ರಾಕ್ಷಸಿ ಪ್ರವೃತ್ತಿ ವಿಜೃಂಭಿಸಿ, ತಾಮಸಿ, ಪಾಶವೀ ಗುಣಗಳು ಮೆರೆಯತೊಡಗಿ ದಾಗ ಆ ಅಸುರಿ ಪಾಶದಿಂದ ಮುಕ್ತವಾಗಲು ದೇವಿಯು ಒಂಬತ್ತು ಅವತಾರ ಅಥವಾ ರೂಪಗ ಳನ್ನು ತಾಳಿ ಅವನ ಸಂಹಾರ ಮಾಡಿ, ಸಾತ್ವಿಕತೆ ಪುನರುಜ್ಜೀವನ ಮಾಡಿದ ವಿಜಯೋತ್ಸವವೇ ನವರಾತ್ರಿ ಅಥವಾ ದಸರಾ.

ದಸರಾ ಪದದ ವ್ಯುತ್ಪತ್ತಿ ದಶಹರಾ ಎಂದು. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ ಎಂದು. ದಸರೆಯ ಮೊದಲ ಒಂಬತ್ತು ರಾತ್ರಿಗಳಲ್ಲಿ ಹತ್ತು ದಿಕ್ಕುಗಳಲ್ಲಿ ದೈವೀಶಕ್ತಿ ಸಂಪನ್ನ ಹಾಗೂ ಅವಳ ನಿಯಂತ್ರಣದಲ್ಲಿ. ಹಾಗಾಗಿ ಹತ್ತೂ ದಿಕ್ಕುಗಳ ಮೇಲೆ ಸಾತ್ವಿಕತೆಯ ವಿಜಯವಾಗುತ್ತದೆ ಎಂದು ಶಾಸ್ತ್ರೋಕ್ತ. ನವರಾತ್ರಿಯ ಮುಖ್ಯಶಾಸ್ತ್ರ ವಿಧಾನ ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆ ವಿಧಿಯಲ್ಲಿ ಈ ಹಬ್ಬ ಕೃಷಿ ಪ್ರಧಾನವೆಂಬಂತೆ ತೋರಿದರೂ ಮುಂದೆ ಇದಕ್ಕೆ ಧಾರ್ಮಿಕ ಸ್ವರೂಪ, ಅನಂತರ ರಾಜರ ಆಳ್ವಿಕೆಯ ಸಂದರ್ಭದಲ್ಲಿ ರಾಜಕೀಯ ಸ್ವರೂಪವೂ ಬಂದಿದೆ.

ನವರಾತ್ರಿ ಎಂದರೆ ಒಂಬತ್ತುರಾತ್ರಿಗಳ ಸಮೂಹ. ರಾತ್ರಿ ಎಂದರೆ ಆಗುತ್ತಿರುವ ಬದಲಾವಣೆ. ಸೂರ್ಯನ ಸುತ್ತ ಭೂಮಿಯ ಪರಿಕ್ರಮವೇ ಮುಖ್ಯ ಬದಲಾವಣೆ. ಐದು ರೀತಿಯ ನವರಾತ್ರಿ ಗಳಿವೆ.ಅದರಲ್ಲಿ ಮುಖ್ಯವಾದವು ಶರನ್ನವರಾತ್ರಿ ಮತ್ತು ಚೈತ್ರ ನವರಾತ್ರಿ.ಶರನ್ನವರಾತ್ರಿ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ವಿವಿಧ ರೀತಿಗಳ ಲ್ಲಿ ಆಚರಿಸಲ್ಪಡುತ್ತದೆ. ದುರ್ಗೋತ್ಸವ ಎಂಬ ಹೆಸರೂ ಇದೆ. ಜಗನ್ಮಾತೆಯಾದ ಆದಿಶಕ್ತಿಯನ್ನು ಒಂಬತ್ತು ದಿನವೂ ನವ ವಿಧದಲ್ಲಿ ಪೂಜಿಸಲಾಗು ತ್ತದೆ. ಶ್ರೀರಾಮಚಂದ್ರನು ರಾವಣನ ಸಂಹಾರ ಮಾಡಿದ್ದುಕೂಡ ವಿಜಯ ದಶಮಿಯ ದಿನವೇ.

ಪಾಂಡವರು ಅಜ್ಞಾತವಾಸ ಮುಗಿಸಿ ಬನ್ನಿಮರ ದಲ್ಲಿ ಬಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದದ್ದು ಇದೇ ದಿನವೇ ಎಂದು ಪ್ರತೀತಿ. ನವ ರಾತ್ರಿಯಲ್ಲಿ ದೇವಿ ತತ್ತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಹಾಗಾ ಗಿ ಈತತ್ತ್ವದ ಲಾಭ ಹೆಚ್ಚು ಪಡೆದುಕೊಳ್ಳಲು ದೇವಿನಾಮಜಪ ಶ್ರೀದುರ್ಗಾದೇವ್ಯೈ ನಮಃ ಹೆಚ್ಚು ಮಾಡಬೇಕು.

ಒಂದು ಅಭಿಮತದ ಪ್ರಕಾರ ನವರಾತ್ರಿಯ ಮೊದಲ ಮೂರು ದಿನ ತಮೋ ಗುಣ ಕಡಿಮೆ ಮಾಡಲು ತಮೋ ಗುಣ ಮಹಾಕಾಳಿಯ ಸಾಧನೆಯನ್ನು ನಂತರದ ಮೂರು ದಿನಗಳಲ್ಲಿ ರಜೋಗುಣ ವೃದ್ಧಿಸಲು ಮಹಾಲಕ್ಷ್ಮೀಯ ಹಾಗೂ ಕೊನೆಯ ಮೂರು ದಿನಗಳಂದು ಮಹಾ ಸರಸ್ವತಿಯ ಪೂಜೆಯನ್ನು ಮಾಡುತ್ತಾರೆ. ಶರನ್ನವರಾತ್ರಿಯಲ್ಲಿ ದೇವರಾತ್ರಿಗಳಿರುತ್ತವೆ ಎಂಬುದು ಶಾಸ್ತ್ರ ವಿಧಿತ.

ನವರಾತ್ರಿಯ ವ್ರತಾಚರಣೆ ಎಂದರೆ ಅಖಂಡ ದೀಪ ಪ್ರಜ್ವಲನೆ ಅಂದರೆ ನವರಾತ್ರಿಯ ಒಂಬ ತ್ತು ದಿನವೂ ಸತತ ದೀಪವನ್ನು ಉರಿಸುವುದು. ಶ್ರೀದೇವಿಮಹಾತ್ಮೆ ಪಠಣ,ಸಪ್ತಶತಿ ಪಠಣ,ದೇವಿ ಭಾಗವತ ಮತ್ತು ಲಲಿತೋಪಾಖ್ಯಾನ ಶ್ರವಣ, ಸೌಂದರ್ಯ ಲಹರಿ ವಾಚನ- ಗಾಯನ, ಲಲಿತಾ ಪೂಜೆ, ಸರಸ್ವತಿಯ ಪೂಜೆ, ಉಪವಾಸ ಮತ್ತು ಜಾಗರಣೆ. ಹಬ್ಬದ ಹತ್ತನೇಯ ದಿನವಾದ ವಿಜಯದಶಮಿಯಂದು ಶಮೀ (ಬನ್ನಿ) ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಬನ್ನಿ ವಿನಿಮಯ ಮಾಡಿಕೊಳ್ಳುವರು.

ವಿಜಯನಗರದ ಅರಸರ ಕಾಲದಲ್ಲಿ ವಿಜಯೋ ತ್ಸವವಾಗಿ ಪ್ರಾರಂಭವಾಗಿ ಮುಂದೆ ಮೈಸೂರು ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಮೈಸೂರಿನ ಜಂಬೂಸವಾರಿ ಜಗತ್ಪ್ರ ಸಿದ್ಧ.ಮೊದಲು ಮೈಸೂರು ಅರಸರನ್ನು, ಈಗ ಚಾಮುಂಡೇಶ್ವರಿ ವಿಗ್ರಹವನ್ನು ಬೆಳ್ಳಿ ಅಂಬಾರಿ ಯಲ್ಲಿ ಹೊತ್ತು ಸಾಗುವ ಪಟ್ಟದಾನೆಯ ಮೆರವ ಣಿಗೆ ನೋಡಲು ಕಣ್ಣೆರಡು ಸಾಲದು.ಗೊಂಬೆಗಳ ನ್ನು ಮನೆಮನೆಗಳಲ್ಲಿ ಅಲಂಕಾರಿಕವಾಗಿ ಜೋಡಿ ಸಿ ಪೂಜಿಸಿ ಆರತಿ ಮಾಡಿ, ಮಕ್ಕಳನ್ನು ಕರೆದು ಬೊಂಬೆ ಬಾಗಿನ ಕೊಡುವ ಪದ್ಧತಿ ಇದೆ. ಅಷ್ಟಮಿ ಯಂದು ಕನ್ಯಾ ಮುತ್ತೈದೆಯರ (ಎಂಟು ವರ್ಷದ ಒಳಗಿನ ಹೆಣ್ಣು ಮಕ್ಕಳು) ಪೂಜೆ ಮಾಡುವ ಪರಿ ಪಾಠವಿದೆ.

ಬದಲಾಗುತ್ತಿರುವ ಈಕಾಲಮಾನದಲ್ಲಿ ಮನುಷ್ಯ ನ ಅಸುರೀ ಸ್ವಭಾವ ಮೆರೆಯುತ್ತಿರುವ ಸಂದರ್ಭ ದಲ್ಲಿ, ವಾತಾವರಣದಲ್ಲಿ ಸಾತ್ವಿಕತೆಯ ಪ್ರಭಾವ ವುಂಟು ಮಾಡಲು ಇಂತಹ ವ್ರತ ಹಬ್ಬ ಆಚರಣೆ ಗಳು ಪ್ರಸ್ತುತವೆನಿಸುತ್ತದೆ. ನೋಂಪಿ ಉಪವಾಸ ಜಾಗರಣೆಗಳಿಂದ ಪುನೀತ ಭಾವ ಮೂಡಿ, ಜೀವ ಜೀವನ ಕೃತ ಕೃತ್ಯವೆನಿಸುತ್ತದೆ. ದೈನಂದಿನ ಬಿಡು ವಿಲ್ಲದ ಈಕಾಲದಲ್ಲಿಯೂ ಸ್ವಲ್ಪವಾದರೂ ಪೂಜೆ ದೈವಾರಾಧನೆಗೆ ಸಮಯ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ. ಏಕತಾನತೆ ಯನ್ನು ಹೊಡೆದೋಡಿಸಿ, ನಮ್ಮ ಸಂಸ್ಕೃತಿಯ ಪರಿಚಯ ಮುಂದಿನ ಪೀಳಿಗೆಗೆ ಮಾಡಿಕೊಡಲು ನವರಾತ್ರಿಯ ಆಚರಣೆ ಮಹತ್ವವೆನಿಸುತ್ತದೆ.

✍️ಸುಜಾತಾ ರವೀಶ್, ಮೈಸೂರು