ಕಳೆದ ಕೆಲವು ವಾರಗಳಿಂದ. ರಂಗಭೂಮಿ ಸಂಘಟನೆ ಮತ್ತು ಸೃಜನಶೀಲತೆ ಬಗ್ಗೆ ವಿಚಾರ ಮಾಡುತ್ತಲೇ ಬರುತ್ತಿ ದ್ದೇವೆ. ಸಂಸ್ಥೆ, ತಂಡ, ರಂಗಮಂದಿರ ಪ್ರಾಧಿಕಾರದ ಅಗತ್ಯತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆಮಾಡುತ್ತಲೇ ಬಂದಿದ್ದೇ ವೆ. ಒಂದಿಷ್ಟು ವಿಚಾರ,ಒಂದಿಷ್ಟು ಆಸಕ್ತ ಮನಸುಗಳ ತಲಾ ಷೆಯನ್ನು ಮಾಡುತ್ತ, ಒಂದಿಷ್ಟು ಕಲಾವಿದರು ನಟನೆಯ ಅಭಿಲಾಷೆ ಮುಕ್ತವಾಗಿ ಅಭಿವ್ಯಕ್ತಿಗೊಳಿಸದೆ ಹಾಗೆಯೇ ಹೊಟ್ಟೆಯೊಳಗೆ ಇಟ್ಟುಕೊಂಡು ಆಂತರಿಕ ಹೇಳಲಾರದ ತಲ್ಲಣಗಳನ್ನು ಅನುಭವಿಸುತ್ತ ಇನ್ನೂ ಕೆಲವರು ಹತಾಶೆ, ಭ್ರಮನಿರಸನ ಹೊಂದುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ನಲ್ಲಿ ತಮ್ಮದೆ ಆದ ರೀತಿಯಲ್ಲಿ ಸಾಂಸ್ಕೃತಿಕ ವೆಂಟಿಲೇಟರ್ ಆಗಿ ಈ ಕನಸು ನನಸಾಗಲು ಕ್ರಿಯಾಶಾಲಿ ಯಾಗಿ ಹೊಸ ಬಗೆಯಲ್ಲಿ ಜನರನ್ನು ಮುಟ್ಟಿ, ಅವರ ಸಾಂಸ್ಕೃತಿಕ ಹೃದಯದ ಬಡಿತಗಳನ್ನು ಜೀವಂತವಾಗಿ ಇಡುತ್ತಿರುವಾಗ “ಓಹ್ ಇದು ಜೀವಂತ ರಂಗಭೂಮಿಯೆ ಅಲ್ಲವೆಂದು ಹೀಯಾಳಿಸಿ ಜರಿದು, ವ್ಯಗ್ರ, ವ್ಯಂಗ್ಯ,ವ್ಯವಹಾರಿ ಕ ವೃತ್ತಿನಿರತರಿಂದ ಅನ್ನಿಸಿಕೊಳ್ಳುತ್ತಾ, ರಂಗಭೂಮಿ ಚಟು- ವಟಿಕೆಗಳನ್ನು ಮಾಡುತ್ತಾ ಹೊಸ ಹೊಸ ಸಂಘಟನಾತ್ಮಕ ಸೃಜನಶೀಲತೆಯನ್ನು ಇಟ್ಟುಕೊಳ್ಳುವುದು ಹೆಚ್ಚಿನ ಸಹನ ಶೀಲ ಗುಣವನ್ನು ಅಪೇಕ್ಷಿಸುವುದಾಗಿರುತ್ತದೆ. ಅಷ್ಟೇ ಅಲ್ಲದೆ ನಟ-ನಟಿ ಯಾರಿಗೂ ಸುಮ್ಮನೇ ಕೂಡಲು ಆಗುವದಿಲ್ಲ. ಬಣ್ಣದ ಯಶಸ್ಸಿನ ಚಟವೆ ತಿಂಡಿ ಹುಟ್ಟಿಸುವದಲ್ಲದೆ ಅದು ಸುಮ್ಮನೆ ಕೂಡಿಸಿ ಕೊಡುವದಿಲ್ಲ. ಹೀರೋ ಹೀರೋಯಿನ್ ಆಗಿ ವಿಜೃಂಭಿಸಬೇಕು ಅನ್ನೋ ಕಲಾವಿದರಿಗೆ ತಮ್ಮ ಕಾಲ ಕೆಳಮೇಲೆಗೆ ಹೋದಾಗ ಸಮಯದ ಋತು ಚಕ್ರ ಅವರಿಗೆ ಗೊತ್ತಿಲ್ಲದೆಯೇ ಚಲಿಸುತ್ತ, ಚರ್ಮದ ನೀರಿಗೆಗಳು ಹೆಚ್ಚುತ್ತಾ ಹೋದಾಗ ನಾಟಕ ಮಾಡಬೇಕು ಅನ್ನೋ ಹಂಬಲ ಹೆಚ್ಚಾ ಗುತ್ತದೆ.ಹೀಗಾಗಿ ಅಭಿನಯ ಭಾರತಿಗೆ ಒಂದು ಸೃಜನಾತ್ಮಕ  ವಿಚಾರ ಹೊಳೆಯಿತು.

ಕರೊನಾ ಹಿನ್ನೆಲೆಯಲ್ಲಿ ನಾಟಕದಲ್ಲಿ ಹೆಚ್ಚು ಪಾತ್ರಧಾರಿಗಳು ಇರಬಾರದು,ರಂಗಸಜ್ಜಿಕೆ ಪರಿಕರ ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಅನ್ನುವ ಅಳುಕಿನಲ್ಲಿ, ರಿಹರ್ಸಲ್ ಸಮಯ, ಕಡಿಮೆ,ವೆಚ್ಚ ಕಡಿಮೆ,ಸಾರಿಗೆ ವೆಚ್ಚ ಕಡಿಮೆ,ಎಲ್ಲ ತಂಡಗಳು ಕೂಡಿ ಸಂಚಾರ ಮತ್ತು ಸಹಕಾರ ಮಾಡುತ್ತ ಅವರವರ ಸಂಪರ್ಕಜಾಲಗಳನ್ನು ಉಪಯೋಗಿಸುತ್ತ ತಮ್ಮ ಆಪೇಕ್ಷಿತ ಗೌರವಧನ ಸ್ವೀಕರಿಸುವ ಹಾಗೆ ಸಹಾಯ ಮಾಡಿಕೊಂಡು ಪರಸ್ಪರ ಕೂಡಿ ಮಾಡುವ ಯೋಜನೆ ಪುಡಿಪುಡಿ ವಿಚಾರಗ ಳೊಂದಿಗೆ ಒಂದು ರೂಪು ಪಡೆಯಹತ್ತಿತು.ಅದಕ್ಕಾಗಿ ರಂಗ ಸಾಮ್ರಾಟ್ ಶಾಲೆಯ ಸಿಕಂದರ್, ಆಟ- ಮಾಟದ ಮಹಾ ದೇವ ಹಡಪದ ಜತೆ ಚರ್ಚೆ ಮಾಡುತ್ತ ಒಂದು ನಾಟಕೋತ್ಸ ವವನ್ನು ಕೂಡಿ ಮಾಡುವದು ಎಂದು ನಿರ್ಧರಿಸಿ ಕೆಲವು ಅಂಶಗಳಿಗೆ ಒಪ್ಪಲಾಯಿತು.

1.ಅಭಿನಯಭಾರತಿ ಬೀಜ ಧನಾಂತ ರಂಗ ಸಾಮ್ರಾಟ್ ಮತ್ತು ಆಟ ಮಾಟ ತಂಡಕ್ಕೆ ಬೇರೆ ಬೇರೆ ರೀತಿಯಲ್ಲಿ ನೀಡುವದು.

2.ಮೂರು ತಂಡಗಳು ಕೂಡಿ ಸಂಚಾರ ಸಾಧ್ಯವಿದ್ದಲ್ಲಿ ಮಾಡುವದು ಅದಕ್ಕೆ ತಕ್ಕಂತೆ ಪ್ರಚಾರ ಸಾಮಗ್ರಿಗಳಲ್ಲಿ “ಅಭಿನಯ ಭಾರತಿ ಸಹಯೋಗದಲ್ಲಿ” ಅಂತ ಪ್ರಿಂಟ್ ಮಾಡಿ ತಮ್ಮತಮ್ಮ ತಂಡದ ಹೆಸರುಗಳನ್ನು ಹಾಕುವದು.

3.ತಮ್ಮ ತಂಡದ ಗೌರವ ಧನ ಅವರೇ ನಿಗದಿ ಮಾಡಿ ಬಂದುದರಲ್ಲಿ ಅಭಿನಯ ಭಾರತಿಗೆ ತಿಳಿದಷ್ಟು ಅಥವಾ ಬೀಜಧನ ಮುಗಿಯುವತನಕ ತಿರುಗಿಸುವದು.

4.ನಿರ್ದೇಶಕರು ಜಂಟಿಯಾಗಿ, ಅಥವಾ ಪ್ರತ್ಯೇಕವಾಗಿ ಪ್ರದರ್ಶನ ಮಾಡಿಕೊಳ್ಳುವದು.

ಇದೊಂದು ತರಹ ಎಲ್ಲ ಕಲಾವಿದರು ಕೂಡಿ ಮಾಡುವ ಕೆಲಸ. ಅಭಿನಯಭಾರತಿ ಈ ಹಿಂದೆ ಸಪ್ತಮಂಡಲ ನಾಟ ಕೋತ್ಸವನ್ನು ಎರಡು ಬಾರಿ ಹೀಗೆ ಮಾಡಿತ್ತು. ಎರಡೂ ಬಾರಿ ನಾಟಕಗಳು ಜಯತೀರ್ಥ ಜೋಶಿ ನಿರ್ದೇಶನದಲ್ಲಿ ಆಗಿದ್ದ ನಾಟಕಗಳಾಗಿದ್ದವು. ಆದರೆ ಅದು ಪ್ರಥಮ ಬಾರಿ ಬಹಳ ಯಶಸ್ವಿ ಆಯ್ತು. ಎರಡನೇಯ ಬಾರಿ ಅಭಿನಯ ಭಾರತಿ ಮೊದಲು ಉತ್ಸವ ಮಾಡಿದ್ದು ಹೊರತುಪಡಿಸಿ ಉಳಿದ ಯಾವ ತಂಡಗಳೂ ತಮ್ಮ ಮಾತು ಉಳಿಸಿಕೊಳ್ಳ ಲಿಲ್ಲ.ಹೀಗೆ ಮಾತು ತಪ್ಪಿದ ಸರದಾರ ತಂಡಗಳು ಈಗ ಪಳೆ ಯುಳಿಕೆಗಳಾಗಿವೆ ಅನ್ನುವುದು ದುರಂತ ಸತ್ಯ. ಅಷ್ಟೇ ಅಲ್ಲದೆ ಅಭಿನಯ ಭಾರತಿ ಇನ್ನೊಂದು ಬಾರಿ ತನಗೆ ಬಂದ ಸಂಪೂರ್ಣ ಅವಕಾಶವನ್ನ ಒಂದೇ ತಂಡ ಮಾಡ ಬಾರದು ಮತ್ತು ಧಾರವಾಡದಂತಹ ಊರಿನಲ್ಲಿ ತಂಡಗಳ ನಡುವೆ ಭಿನ್ನಾಭಿಪ್ರಾಯ ಇರಬಾರದು, ರಂಗಭೂಮಿಯ ಚಟುವಟಿಕೆ ಸಮಷ್ಟಿಯಾಗಿ ನಿರಂತರವಾಗಿ ನಡೆಯಬೇಕು ಅನ್ನೋ ದೃಷ್ಟಿಯಿಂದ ಮತ್ತಿಷ್ಟು ವ್ಯಕ್ತಿಗಳಜತೆ ಕೈಚಾಚಿದಾಗ ಕೈ ಮತ್ತು ಮನಸ್ಸುಗಳು ದೊಡ್ಡವರ ಸಣ್ಣತನಗಳಿಂದ ಯಾವದೇ ಅರ್ಥಿಕ ಲಾಭಗಳಿಂದ ದೂರ ಸರಿಸಲ್ಪಟ್ಟಿದ್ದು, ಅಭಿನಯ ಭಾರತಿಯ ಮುಗ್ಧ ಪ್ರಾಮಾಣಿಕತೆ ಮತ್ತು ನಂಬಿ ಕೆ, ವಿಶ್ವಾಸಗಳ ಮೌಲ್ಯ ಕಾರಣಗಳಿಂದಲೇ ಇರಬಹುದು. ಆದರೆ ಆಸಕ್ತಿದಾಯಕ ವಿಷಯವೆಂದರೆ ಮುಂದಿನ ದಿನ ಗಳಲ್ಲಿ ಏನೆಲ್ಲಾ ಫಲವತ್ತಾದ ಭೂಮಿ ಪಡೆದರೂ ಕೃಷಿ ಮಾಡಿಕೊಳ್ಳುತ್ತ ನಿಲ್ಲಲೂ ಆಗದೆ ನಿರ್ಗಮಿಸಿದರು). ಗಾಂಧೀಜಿ ಹೇಳಿದ ಮಾತು ನಿಜ: ಗುರಿ ಸಾಧಿಸಲು ಉತ್ತಮವಾದ ದಾರಿಯೂ ಬೇಕು.

ರಂಗವರ್ಷದ. ಹಿನ್ನೆಲೆ ಇಷ್ಟಾದರೆ, ರಂಗವರ್ಷದ ವ್ಯಾಪ್ತಿ ಇನ್ನೂ ಬಹಳ ವಿಸ್ತಾರವಾಗುವ ಸಾಮರ್ಥ್ಯ ಹೊಂದಿದೆ. ಒಂದು ಪ್ರದೇಶ, ನಗರ ಯಾವಾಗ ಸಾಂಸ್ಕೃತಿಕ ಕೇಂದ್ರವಾ ಗಬೇಕೆಂದರೆ 365 ದಿನಗಳಕಾಲ ಸಾಂಸ್ಕೃತಿಕ ಚಟುವಟಿಕೆ ನಡೆಯುವಂತೆ ಇರಬೇಕು .ಅದಕ್ಕು ರಂಗವರ್ಷಕ್ಕೂ ಏನು ಸಂಬಂಧ? ಅಂತ ಕೇಳಬಹುದು. ನಮ್ಮ ರಾಜ್ಯ ಸರ್ಕಾರವು “ಕನ್ನಡ ಕಾಯಕ ವರ್ಷ” ಅಂತ ಸಾರಬಹುದಾದರೆ, ನಾವೆಲ್ಲಾ ತಂಡದವರು ಸೇರಿ 365 ದಿನ ರಂಗ ಚಟುವಟಿಕೆ ಗಳನ್ನು ನಡೆಸುವ ಬಗ್ಗೆ ವಿಚಾರ ಮಾಡಿದರೆ, ಕ್ರಿಯಾಶಾಲಿ ಯಾದರೆ ರಂಗವರ್ಷ ಸಾಕಾರವಾಗುವದು ಸಾಧ್ಯವಲ್ಲವೇ? ಕರೊನಾದಿಂದ ತತ್ತರಿಸಿಹೋದ ಸಮಾಜದಲ್ಲಿ ಎಲ್ಲದಿಗ್ಭಂಧ ನಗಳಿಂದ ಹೊರಬಂದಾಗ ವರ್ಚುವಲ್ಲೋ ರಿಯಲ್ಲೊ ರಂಗವರ್ಷ ಸಾಧ್ಯ ಅಂತ ಅನಿಸುವದಿಲ್ಲವೋ?

(ಸಶೇಷ)

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ