ಒಂದು ಸ್ಕೇಚ್ ಪೆನ್ನು ಕೇಳಿದ ವಿದ್ಯಾರ್ಥಿಗೆ ಕೊಡಲೊಪ್ಪ ದವಳಿಗೆ ಸಹಕಾರ, ಸಹಕರಿಸುವ ಗುಣ ಇರಬೇಕೆಂದು ಹೇಳುವಾಗ ಆ ಬಾಲಕಿಯ ಮೊಗದಲ್ಲಿ ಸಂತಸವಿರದೇ ನಾನ್ಯಾಕೆ ಕೊಡಬೇಕು? ಯಾವಾಗಲೂ ನಾವೇ ಕೊಡ ಬೇಕಾ? ಎನ್ನುವಾಗ ಚಿಕ್ಕ ಹುಡುಗ ಕಣೇ ಪಾಪ! ಬಣ್ಣ ಮರೆತು ಬಂದಿದ್ದಾನೆ ಕೊಡು ಅವನು ತಂದಾಗ ನೀನು ಪಡೆದುಕೊಳ್ಳುವಿಯಂತೆ. ನೀನು ದೊಡ್ಡವಳಲ್ಲವಾ? ಅಂದಿದ್ದೆ ತಡ ಎಲ್ಲಿತ್ತೋ ಆ ಕೋಪ ಅಸಹನೆ ಒಮ್ಮೆಲೆ ಗುಡುಗು ಸಿಡಿಲು ಬಂದಹಾಗೆ “ಒಂದು ಪ್ರಶ್ನೆ ಟೀಚರ್, ದೊಡ್ಡವರಾಗುವುದು ಶಾಪವಾ?.. ಹುಡುಗಾ ಹುಡುಗಿ ಸಮಾನ ಅಂತಾರೆ.ಆದ್ರೆ ಮನೆಯಲ್ಲಿ ಹಾಗೆ ಇರೋಲ್ಲ. ನನ್ನ ಇಷ್ಟಗಳಿಗೆ ಬೆಲೆಯೆ ಇಲ್ಲ. ನಾ ಹೇಳಿದ್ದನ್ನು ಮಾಡಿ ಕೊಡೊದಿಲ್ಲ.ಎಲ್ಲವೂ ನನ್ನ ತಮ್ಮ ಹೇಳಿದ ಹಾಗೆಯೇ ಆಗಬೇಕು.ನನ್ನ ಇಚ್ಚೆಗೆ ಯಾವ ಮಹತ್ವ ಇಲ್ಲ. ಬರೀ ಬಯ್ಯಿಸಿಕೊಳ್ಳೊದೆ ಎಲ್ಲದಕ್ಕೂ. ಅವ ಗಂಡು ಮಗ- ಮನೆ ಮಗ ಅನ್ನುವಾಗೆಲ್ಲ,ನಾನು ಮಗಳಲ್ಲವಾ?ಒಬ್ಬರಿ ಗೊಂದು ನ್ಯಾಯ ಮಾಡುವುದು ಸರಿಯಾ? ಬಾಯಿ ಮಾತಲ್ಲಿ ಮಾತ್ರ ಇಬ್ಬರಿಗೂ ಸಮನಾಗಿ ನೋಡುತ್ತೀವಿ ಅನ್ನೋದು” ಎನ್ನುವ ಮಗುವಿನ ಕಂಗಳ ತುಂಬ ಕಣ್ಣೀರ ತುಂಬಿ ಜಿನುಗುತ್ತಿತ್ತು. ಅಬ್ಬಾ!ಎಂಥ ಮಾತು, ಒಮ್ಮೆ ಮಿಂಚು ಬಂದ ಹಾಗೆ.

ಟೀಚರ್.. ನೀವು ಹೇಳಿ ಹೆಣ್ಣುಗಂಡು ಇಬ್ವರು ಮಕ್ಕಳೇ ಅಲ್ವಾ? ಹಾಗಿದ್ದ ಮೇಲೆ ನಮಗ್ಯಾಕೆ ಬೇಧ ಭಾವ? ನಾವು ಅವರ ಮಕ್ಕಳೇ ಅಲ್ವಾ? ನಮಗೆ ಯಾವುದೇ ಆಯ್ಕೆ ಸ್ವಾತಂತ್ರ್ಯ ಇಲ್ಲ. ಎಲ್ಲ ಅಪ್ಪ-ಅಮ್ಮ ಹೇಳಿದ ಹಾಗೆ ಆಗಬೇಕಾ? ಒಂದು ಬಟ್ಟೆ, ಆಟದ ಸಾಮಗ್ರಿ, ಅಭ್ಯಾಸ, ಹೀಗೆ ನನಗಿಷ್ಟವಾದ ತಿಂಡಿ ಮಾಡಿಕೊಡುವು ದಂತೂ ದೂರ ಉಳಿತು. ಅಯ್ಯೋ ನೀವಾದ್ರೂ ಹೇಳಿ…ಎಂದು ಅರಳು ಹುರಿದಂತೆ ಮಾತಾಡುವ ಮಾತಿನ ಮಲ್ಲಿಯ ಕಂಡು ಒಮ್ಮೆ ಅವಳ ಪುಟ್ಟ ಕಂಗಳ ನೋಡು ತ್ತ ಮೌನವಾದೆ.

ನಿಜ.. ಪ್ರತಿ ತಂದೆ -ತಾಯಿ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಅಭಿಮಾನದ ಜೊತೆಗೆ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಮಗ ಹೇಗಾದರೂ ಇರಲಿ, ಎಲ್ಲಿದ್ದರೂ, ಎಷ್ಟೊತ್ತಾದ ರೂ ಮನೆಗೆ ಬಂದರು ಸುಮ್ಮನಾಗುವ ಪಾಲಕರು ಅದೇ ಮಗಳು ಈ ರೀತಿ ಮಾಡಿದರೆ ಸುಮ್ಮ ನಾಗುವುದಿಲ್ಲ.ದೈಹಿಕ‌, ಮಾನಸಿಕ ಸ್ದಿತಿಗಳು ಭಿನ್ನವಾದ ರೂ ಲಾಲಿಸುವ, ಪಾಲಿಸುವ, ಪ್ರೀತಿಸುವ ಅಧಿಕಾರದಿಂ ದ ಎಂದಿಗು ವಂಚಿತರನ್ನಾಗಿ ಮಾಡುವುದು ಸರಿಯಾದ ಬೆಳವಣಿಗೆಯಲ್ಲ. ಎಷ್ಟೋ ಪಾಲಕರಲ್ಲಿ ಅಸುರಕ್ಷಿತ ಭಾವ. ಹೆಣ್ಣು ಎಂಬ ಸೂಕ್ಷ್ಮ ಸಂವೇದನೆ ಅರಗಿಸಿಕೊ ಳ್ಳಲು, ಅದನ್ನು ಹತೋಟಿಯಲ್ಲಿಟ್ಟುಕೊಂಡು ತಾನು ಹೇಳಿದಂತೆ ಆದಾಗ ಮಾತ್ರ ಬೆಳಕಿಗೆ ತರುವುದು. ಇಲ್ಲ ವಾದರೆ ಅದೆಷ್ಟೋ ಮೊಗ್ಗಿನ ಮನಸುಗಳು ಕಮರಿದ್ದನ್ನು ಕಂಡ ಸಾಕ್ಷಿಗಳಿಗೇನು ಬರವಿಲ್ಲ.

ಬೆಳೆಯ ಸಿರಿ ಮೊಳಕೆಯಲ್ಲಿ ಕಾಣುವಂತೆ,ತಂದೆ ತಾಯಿ ತಮಗೆ ಗೊತ್ತಿಲ್ಲದಂತೆ ಅಥವಾ ಅರಿವಿಗೆ ಬಂದೋ ತಾರತಮ್ಯ. ಮಾಡುವುದು ಎಷ್ಟು ಸರಿ? ಮನೆಯಲ್ಲಿ ಹಿರಿಯರಾದವರೆಲ್ಲ ತ್ಯಾಗಕ್ಕೆ ಹೆಸರಾಗಬೇಕೆ? ಚಿಕ್ಕವರ ಸಲುವಾಗಿ ತನಗನಿಸಿದ್ದನ್ನೆಲ್ಲ ಬಿಟ್ಟುಕೊಡುವುದೇ ಕೊನೆ ಯಾ? ಯಾವುದು ಉತ್ತರ? ಮುಗ್ಧ ಬಾಲಕಿಯ ಮೊಗ ದಲ್ಲಿ ಅದೆಂಥ ಅಸಮಾಧಾನ.ಮೌಲ್ಯದ ಬಗ್ಗೆ ಚಿಂತಿಸು ವಾಗ ಸಮಾನತೆಯೆಂಬುದು ಆಚರಣೆಯಲ್ಲಿ ಹಾಗೂ ಇಬ್ಬರಿಗೂ ಒಂದೇ ನ್ಯಾಯ ನೀಡುವ ತೂಕದ ಬಟ್ಟಲು ಬಳಕೆಯಲ್ಲಿ ಬರಬೇಕು.

ಕಿತ್ತೂರು ಚೆನ್ನಮ್ಮ,ಝಾನ್ಸಿರಾಣಿ,ಸಾವಿತ್ರಿಬಾಯಿ ಪುಲೆ, ಕಿರಣ ಬೇಡಿ, ಹೀಮಾದಾಸ, ಪಿ.ಟಿ ಉಷಾ ಹೀಗೆ ಹತ್ತು ಹಲವಾರು ಉದಾ.ನಮ್ಮ ಮುಂದೆ….ಇದ್ದರೂ ಹೀಗಾ ಗಲು ಪ್ರೇರಣೆ ಪ್ರತಿ ಮನೆಯಿಂದ ದೊರೆತರೆ ಎಷ್ಟು ಚೆನ್ನ? ಬಾಲ್ಯದಲ್ಲಿ ಮಕ್ಕಳ ‌ಮನದಲ್ಲಿ ಒಮ್ಮೆ ಅಸಮಾ ಧಾನದ ಬೀಜ ಬಿತ್ತಿದರೆ ಮುಗಿಯಿತು. ಅದು ಬೆಳೆದು ಹೆಮ್ಮರವಾದರೆ ಇದೇ ಬೀಜ ಅವರ ಮುಂದಿನ ಜೀವನ ದಲ್ಲಿ ವಿಷವರ್ತುಲವಾಗಿ ಪರಿಣಮಿಸುವುದು. ಹಾಗಾಗಿ “ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ” ಲೇಪನ ವಾಗದಂತೆ ನೋಡಿಕೊಳ್ಳುವುದು ಪ್ರತಿಮನೆಯ ಸದಸ್ಯ ರ ಕರ್ತವ್ಯ. ಪ್ರೀತಿಯೆಂಬುದು ನಿಷ್ಕಲ್ಮಶ. ಅದನ್ನು ಹಂಚುವಾಗ ತಾರತಮ್ಯ ಬೇಡ. ಹೆಣ್ಣಿರಲಿ ಗಂಡಿರಲಿ ಸಮಾನತೆಯ ನೈಜ ಪ್ರೇಮವಿರಲಿ.

ಅಮ್ಮಾ..ನಾನು ಹುಡುಗ ಆಗಿದ್ದರೆ ಇಷ್ಟೇ ಕೆಲಸ ಮಾಡಿ ಸುತ್ತಿದ್ದಿಯಾ? ನನಗೆ ಆಶ್ಚರ್ಯ, ಯಾಕೆ ಹೀಗೆ ಕೇಳುತ್ತೀ ಯಾ?ಹೌದಮ್ಮ ಹುಡುಗ ಆಗಿ ಹುಟ್ಟಿದ್ದರೆ ಬರಿ ಸೈಕಲ್ ಹೊಡಕೊಂಡು, ಮರಗಿಡ ಹತ್ಕೊಂಡು ಮಸ್ತಾಗಿ ಇರುತ್ತಿ ದ್ದೆ. ಈ ಕಸಾ,ಮುಸರಿ, ಮನೆಗೆಲಸವನ್ನ ಯಾರ ಮಾಡ ತಿದ್ದರು? ನನಗೆ ನಗು ಬಂದಿತ್ತು.. ಅಲ್ಲೆ ನಿನಗ್ಯಾರು ಹೇಳಿದ್ರು? ಹೀಗೆಲ್ಲ ಹುಡಗರು ಮಾಡತಾರ ಅಂತ. ಮೊದಲು ಮನಿಕೆಲಸ ನಂತರ ಮುಂದಿನದು.ನಿನಗ ಬರಿ ಇಷ್ಟೇ ಕಾಯಕ ಹಚ್ಚಿನಿ. ಹುಡುಗ ಆಗಿದ್ರ ಇನ್ನು ಕೆಲಸ ಜಾಸ್ತಿ ಇರತಿದ್ದವು ಅಂದಾಗ ಮಗಳು ತಲಿ ಮ್ಯಾಲೆ ಕೈ ಹೊತ್ತಕೊಂಡು ಅಂದ್ರ? ಚೊಲೋ ಆತು ನಾ ಹುಡುಗ ಆಗಿಲ್ಲ.ಯಾವ ಮಕ್ಕಳಾದರೇನು ಎಲ್ಲರಿಗೂ ಎಲ್ಲ ಬರ ಬೇಕು. ಇಲ್ಲಿ ಯಾರು ಹೆಚ್ಚು ಅಲ್ಲ, ಕಮ್ಮಿನೂ ಅಲ್ಲ. ನನ್ನ ದೃಷ್ಟಿಯಲ್ಲಿ ಇಬ್ಬರೂ ಸಮಾನರು.

ವೈಮನಸ್ಸು ಚಿಗುರೊಡೆಯದೇ ಸಾಮರಸ್ಯ ಮೈಗೂಡಿ ರಲಿ. ಮಕ್ಕಳು ದೇವರ ಸಮಾನ. ಅವರ ಬಾಲ್ಯ ಸಹಜ ವಾಗಿರುವಂತೆ, ಒತ್ತಾಯದ ಹೇರಿಕೆಯ ಮನೋ‍ಭಾವ ಗಳು ಘಾಸಿತರದಿರಲಿ. ಮಕ್ಕಳ ಮನಸ್ಸು ಸದಾ ಅರಳು ತ್ತಿರುವ ಕಮಲದಂತೆ ನಸುನಗುತ್ತಿರಲಿ. ಎರಡು ಕಣ್ಣು ನಮ್ಮದೆ.ಯಾವ ಕಣ್ಣಿಗೆ ನೋವಾದರು ಅದು ನೋವೆ. ಪಾಲಕರ ಮನಸ್ಸು ಒಮ್ಮೆ ತಮ್ಮ ಕಂದಮ್ಮಗಳ ಅಹ ವಾಲು ಮುಕ್ತವಾಗಿ ಸ್ವೀಕರಿಸಿ ಚಿಂತಿಸಲೆಂಬ ಆಶಯ. ಬದಲಾದಷ್ಟು ಭವ್ಯ ಭವಿಷ್ಯ ಸೃಷ್ಟಿಸಲು ಮುನ್ನುಡಿ ಬರೆ ದಂತೆಂಬ ಮನಸು…

✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,‌ಯಲ್ಲಾಪೂರ