ನೀನು ಯಾರಂತಾಗಬೇಕು? ಯಾಕಾಗಬೇಕು? ಅವರಂತೆ ಆದ್ರೆ ನನಗೂ ಅವರಿಗೂ ಏನು ವ್ಯತ್ಯಾಸ? ಒತ್ತಾಯ, ಹಿಂಸೆ ನೀಡುವಂತಾದರೆ ಏನಿದರರ್ಥ? ನಮ್ಮ ಪಾಡಿಗೆ ನಮ್ಮನ್ನು ಬಿಡಬಾ ರದೇ? ಎಲ್ಲೋ ಒಂದು ಮೂಲೆಯಲ್ಲಿ ನೆಮ್ಮದಿ ಯಾಗಿ ಒರಗೋದಕ್ಕೂ ಆಗದ ಮೇಲೆ ಈ ಬದುಕಿ ಗೆ ಬೆಲೆಯೆಲ್ಲಿ?ಬೆಳೆದು ನಿಂತವರ ಎದುರು, ಕಣ್ಣು ಪಿಳುಕಿಸಿ ನೋಡುವ ಮುದ್ದು ಕಂದಮ್ಮಗಳಿಗೆ ಹೇರಿಕೆಯ ಮೌಲ್ಯಗಳು ಎಷ್ಟರ ಮಟ್ಟಿಗೆ ಫಲ ನೀಡಲು ಸಾಧ್ಯ!

ಆದರ್ಶಗಳು ಮನವರಿಕೆಯ ಮಾನದಂಡಗಳಾಗ ದಿದ್ದಲ್ಲಿ; ನಿಂತ ನೀರು ಮಲಿನವಾಗಲೂ ಸಮಯ ಬೇಕಿಲ್ಲ. ಸೊಳ್ಳೆಗಳ ಆಶ್ರಯತಾಣ, ರೋಗಗಳ ಕೇಂದ್ರ ಹೇಳಹೆಸರಿಲ್ಲದೇ ನಿರ್ಮಾಣವಾಗುವದು. ಮಕ್ಕಳ ಮುಗ್ದ ಮನಸ್ಸು ಅರಳಲು ಸಿದ್ದವಾದ ಮೊಗ್ಗಿನಂತೆ. ಕೃತಕತೆಯನ್ನು ಮೆರೆಸುವ ಭರದಲ್ಲಿ ನೈಜತೆಯ ಗಾಳಿಗೆ ತೂರಿದರೆ ಬೆಲೆಯೆಲ್ಲಿ ದೊಡ್ಡ ವರಾದವರು ದೊಡ್ಡ ಗುಣಗಳನ್ನು ಅಳವಡಿಸಿಕೊ ಳ್ಳದಿದ್ದರೆ ಹೇಗೆ?..

ನಮಗೆಲ್ಲ ಗೊತ್ತಿದೆ ಭಾರತದ ಪ್ರಥಮ ರಾಷ್ಟ್ರ ಪತಿ ಡಾ.ರಾಜೇಂದ್ರ ಪ್ರಸಾದರು ಸರಳ ವ್ಯಕ್ತಿತ್ವದ ಮಹಾನುಭಾವರು. ಶಿಸ್ತಿಗೆ, ಓದಿಗೆ, ಸಯಂಮಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆದವರು. ಪುಸ್ತಕಗಳನ್ನು ತುಂಬಾ ಪ್ರೀತಿಸುವ ಸೃಜನಶೀಲರು.ಒಮ್ಮೆ ಅವರ ಮೇಜಿನ ಮೇಲಿನ ಪುಸ್ತಕವೊಂದರ ಪುಟಗಳು ಹರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನ ಕಂಡು ಸ್ವಲ್ಪ ವಿಚಲಿತರಾಗುತ್ತಾರೆ. ಈ ಕಾರ್ಯವನ್ನು ಮಕ್ಕಳು ಮಾಡಿರುವುದು ಖಚಿತವಾದಾಗ ಅವರ ನ್ನು ಕರೆದು ದಂಡಿಸುವುದರ ಬದಲು, ಅವರನ್ನು ಕರೆದು ಪುಸ್ತಕದ ಪುಟಗಳನ್ನು ಹರಿದವರು ತಾವು ಹರಿದಿರುವ ಪುಟಗಳ ಸಂಖ್ಯೆಗೆ ಅನುಗುಣವಾಗಿ ಜೋಡಿಸಿದಲ್ಲಿ,ಅವರ ಪುಟ ಸಂಖ್ಯೆ ಎಷ್ಟಿದೆಯೋ ಅಷ್ಟು ಕಾಸು ನೀಡಲಾಗುವುದೆಂದು ತಿಳಿಸಿದರು.

ಕಾಸು ನೀಡುವರೆಂಬ ಭರದಲ್ಲಿ ಮಕ್ಕಳು ತಾವು ಹರಿದ ಪುಟಗಳನ್ನು ಪುಸ್ತಕದ ಸಂಖ್ಯೆಗೆ ಅನುಗು ಣವಾಗಿ ಜೋಡಿಸಿದರು. ಡಾ.ರಾಜೇಂದ್ರ ಪ್ರಸಾದ ರವರು ಮಾತಿನಂತೆ ಕಾಸು ಕೊಟ್ಟು ಪುಸ್ತಕ ಹರಿ ಯುವುದು ಒಳ್ಳೆಯ ಅಭ್ಯಾಸವಲ್ಲವೆಂಬುದನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ. ದೇಶದ ಪ್ರಥಮ ಪ್ರಜೆ.ಒತ್ತಡ ಹಾಗೂ ಕಾರ್ಯದ ನಡುವೆಯು ಮಕ್ಕಳ ಬಗ್ಗೆ ಇರುವ ಕಾಳಜಿ,ಅರ್ಥೈ ಸುವ ಮಾರ್ಗವು ದೊಡ್ಡವರೆಂದರೆ ಹೀಗಿರಬೇಕು ಅನ್ನಿಸದಿರದು.ಆದರೆ ಇಷ್ಟು ತಾಳ್ಮೆಯಿಂದ ನಾವು ಗಳು ಪ್ರತಿಕ್ರಿಯೆ ನೀಡುತ್ತಿವಾ?ದಂಡಂ ದಶಗುಣಂ ಎಂಬಂತೆ ಬಾಸುಂಡೆ ಬರುವ ಹಾಗೆ ಬಡಿದ ಮೇಲೆ ಮುಂದಿನದು ಯೋಚಿಸುತ್ತೇವೆ.

ತಪ್ಪು ಮಾಡುವುದು ಆಕಸ್ಮಿಕವಾದರೂ, ಅದರ ಪರಿಣಾಮ ಸುಧಾರಣೆಗೆ ಒಂದು ಅವಕಾಶ ಕಲ್ಪಿ ಸದೇ ಶಿಕ್ಷಿಸುವುದು ಯಾವ ನ್ಯಾಯ? ಹಸಿದೊಬ್ಬ ಭಿಕ್ಷುಕ ಬೇಕರಿ ಮುಂದೆ ನಿಂತು ಕೈಯೊಡ್ಡಿ ಬೇಡು ತ್ತಾನೆ. ಆ ಬೇಕರಿಯ ಮಾಲಿಕ ಏನು ಕೊಡದೆ ಅಟ್ಟುತ್ತಾನೆ.ಹಸಿವೆ ಬೇನೆಯಿಂದ ಬಳಲುವ ಆತ ಎದುರಿನ ಮಹಿಳೆಯ ಕೈಯಲ್ಲಿದ್ದ ತಿಂಡಿಪೊಟ್ಟಣ ಕಸಿದು ಓಡುತ್ತಾನೆ.ಆ ಮಹಿಳೆ ಚೀರಿದ ಶಬ್ದಕ್ಕೆ ಕಳ್ಳತನವಾಯಿತೆಂದು, ಭಿಕ್ಷುಕ ಕದ್ದಿರಬಹುದೆಂದು ಅವನನ್ನ ಅಟ್ಟಿಸಿಕೊಂಡು ಓಡಿ ಹೋಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಬಳಲಿ ಬೆಂಡಾದ ಭಿಕ್ಷುಕನ ಕೈಯಿಂದ ಪೊಟ್ಟಣ ಕಸಿದು ನೋಡಲು ಅದರಲ್ಲಿ ಎರಡು ಬ್ರೇಡ್ ತುಣುಕುಗಳು ಮಾತ್ರ ಇದ್ದುದ ಕಂಡು ಮರಗುತ್ತಾರೆ. ಆ ಮಹಿಳೆ ತನ್ನ ಅವಿವೇಕಕ್ಕೆ ಮರುಗಿ ಕಣ್ಣೀರು ಹಾಕುತ್ತಾಳೆ. ಆದರೆ ನಿರಪರಾಧಿ ನರಳುವಂತಾಗಿದ್ದು ವಾಸ್ತವ.

ತಿದ್ದುವ ಹಂತದಲ್ಲಿ ಮಕ್ಕಳಿಗೆ ಸರಿಯಾದ ಕ್ರಮ ದಲ್ಲಿ ಮಾರ್ಗದರ್ಶನ ಮಾಡದೆ, ಮುಂದೊಂದು ದಿನ ಅದು ಹೆಮ್ಮರವಾಗಿ ಬೆಳೆದು ತಂಪೆರೆಯುವ ಬೇವಿನ ಮರವಾಗದೇ ಜಾಲಿಯ ಗಿಡವಾಗಿ ಮುಳ್ಳು ಹರವಿದರೆ ನೆಮ್ಮದಿ ಸಿಗುವುದೆಂದು? ಹೀಗೆ ಹುಟ್ಟಿನಿಂದ ಸಾಯುವವರೆಗೂ ಕಲಿಕೆಗೇನು ಬರವಿಲ್ಲ. ಆದರೆ ಆ ಕಲಿಕೆಯು ನೈಜ ಜೀವನಕ್ಕೆ ಬದಲಾಗದಿದ್ದರೆ ಕಲಿತಿದ್ದೆಲ್ಲ ವ್ಯರ್ಥ. ಒಂದು ಸಸಿ ಬೆಳೆದು ಮರಗಿಡವಾಗಿ ಬೆಳೆಯುವ ಸದಾವಕಾಶ ವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಅನುಭವಗಳು ಕೇವಲ ದಾರಿದೀಪದಂತೆ ಕೆಲಸ ಮಾಡಬೇಕೆ ಹೊರತು, ಅವೇ ಕೊನೆಯ ಮಾನದಂಡವಾಗಿ ಪರಿವರ್ತನೆಯಾಗಬಾರದು.

ಅನ್ವೇಷಣೆಯ ಹಾದಿಗೆ ಮನಸ್ಸನ್ನು ಅನುವಾಗಿ ಸುವಂತಹ ಅನುಕೂಲಕರ ವಾತಾವರಣವನ್ನು ಸಮಾಜದಲ್ಲಿ ಕಲ್ಪಿಸಬೇಕಾಗಿದೆ. ಅದರ ಅಡಿ ಪಾಯ ಪ್ರತಿ ಮನೆಯಿಂದ ಅಭಿಯಾನದಂತೆ ಪ್ರಾರಂಭವಾದರೆ ಮಾತ್ರ ಸಾಧ್ಯ. ಉದಾತ್ತವಾದ ವಿಚಾರಗಳು ಸ್ವಯಂ ಅವಲೋಕನಕ್ಕೆ ಮುನ್ನುಡಿ ಯಾದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಹಿರಿಯರ ಅನುಭವ, ಮಕ್ಕಳ ಮುಗ್ಧ ಮನಸ್ಸು, ಸಮಾಜದ ಮೌಲ್ಯಗಳು ಸದೃಢ ಸಮಾಜದ ನಿಮಾರ್ಣದತ್ತ ತೆರೆದುಕೊಳ್ಳಲು ಸಹಾಯಕವಾಗಿವೆ.
✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ
ದೊಡ್ಡವರು ಹೇಳಿದ ಹಾಗೆ ನಡೆಯುವ ಮನಸ್ಸು ಈ ಲೇಖನದಿಂದ ತಿಳಿದುಕೊಳ್ಳಲಿ ಯುವಪೀಳಿಗೆ.
LikeLike
Nice
LikeLike
Tumba Sundar drishtant mahatva
Tiliyalu anukulavagide. Chennagide. 👌👌👌👌👌👌👌👌👌👌
LikeLike
ದೊಡ್ಡವರು ದೊಡ್ಡದಾಗಿ ಚಿಂತಿಸುವದರ ಮೂಲ ಅರ್ಥ ಮಾಡಿಕೊಂಡರೆ ಅದು ಎಲ್ಲಕ್ಕೂ ತಳಪಾಯವಾದಿತು…ನೈಸ್.ಬರಹ
LikeLike
ಮೇಡಂ ರೀ ಈ ಲೇಖನ ಓದೋದೇ ಭಾಗ್ಯ.sooooooooper… ಈ ಸತ್ಯ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.ಆ ಹಾ ತುಂಬಾ ಅಧ್ಭುತವಾಗೀ ಬಿಂಬಿಸಿದ್ದೀರೀ.ಮತ್ತಷ್ಟು ಇಂತಹ ವಿಚಾರಗಳ ಲೇಖನಗಳು ಮೂಡಿ ಬರಲಿ ರೀ😍😍😍😍🙏🏻🙏🏻🙏🏻🙏🏻🙏🏻🙏🏻
LikeLike