ದೋಹಾ-11

ಕ್ಷಮಾ ಬಡನ್ ಕೊ ಚಾಹಿಏ, ಛೋಟನ್ ಕೊ ಉತ್ಪಾತ.
ಕಹಾ ವಿಷ್ಣು ಕಾ ಘಟ ಗಯೋ , ಭೃಗು ನೆ ಮಾರಿ ಲಾತಾ.

ಅನುವಾದ

ಚಿಕ್ಕವರು ಎಷ್ಟೆ ತಪ್ಪುಮಾಡಲಿ ದೊಡ್ಡವರು ಅವರನ್ನು ಕ್ಷಮಿಸಬೇಕು. ಭೃಗು ಮುನಿ ವಿಷ್ಣುವನ್ನು ಕಾಲಿನಿಂದ ಓದ್ದರು ಕೂಡ ವಿಷ್ಣುವಿನ ಘನತೆ ಎಳ್ಳಷ್ಟು ಕಡಿಮೆ ಆಗಲಿಲ್ಲ.

ದೋಹಾ12

ಶೀಲವಂತ ಸಬಸೆ ಬಡಾ, ಸಬ ರತನನ ಕೀ ಖಾನ.
ತೀನ ಲೋಕ ಕೀ ಸಂಪದಾ, ರಹಿ ಶೀಲ ಮೆ ಆನ.

ಅನುವಾದ

ಯಾರು ಸ್ವಭಾವದಿಂದ ಒಳ್ಳೆಯವರೊ (ಗುಣವಂತರು) ಅವರು ರತ್ನಗಳ ಆಗರ. ಯಾಕೆಂದರೆ ಮೂರು ಲೋಕಗಳ ರಹಸ್ಯ (ಮಾಯೆ ) ಸದಾಚಾರಿ ವ್ಯಕ್ತಿಯಲ್ಲಿರುತ್ತದೆ.

ದೋಹಾ-13

ರಾತ ಗಂವಾಯಿ ಸೋಯ ಕೆ, ದಿವಸ ಗಂವಾಯ ಖಾಯ.
ಹೀನಾ ಜನ್ಮ ಅನಮೋಲ ಥಾ, ಕೌಡಿ ಬದಲೆ ಜಾಯ.

ಅನುವಾದ

ಹೇ ಮನುಷ್ಯ ರಾತ್ರಿಯನ್ನು ನಿದ್ದೆ ಮಾಡಿ ಕಳೆದೆ, ದಿನವನ್ನು ತಿಂದುಂಡು ಕಳೆದೆ. ಮನುಷ್ಯ ಜನ್ಮವಜ್ರದ ಹಾಗೆ ಶ್ರೇಷ್ಠವಾದದ್ದು. ಆದರೆ ಶರೀರ ಕೌಡಿ ಕಿಮ್ಮತ್ತಿನದು.

ದೋಹಾ14

ಜೋ ತೋಕು ಕಾಂಟಾ ಬುವೆ,ತಾಹಿ ಬೋಯ ತೂ ಫೂಲ.
ತೋಕು ಫೂಲ ಕೆ ಫೂಲ ಹೈ, ವಾಕೂ ಹೈ ತ್ರೀಶೂಲ.

ಅನುವಾದ

ನಿನ್ನ ಜೀವನದಲ್ಲಿಯಾರು ಮುಳ್ಳು ಬಿತ್ತುವರೊ ಅವರ ಜೀವನದಲ್ಲಿ ನೀನು ಮಾತ್ರ ಹೂವೆ ಬಿತ್ತು.ನಿನಗೆ ಹೂವಿಗೆ ಹೂವೆ ಸೀಗುವುದು. ಯಾರು ಮುಳ್ಳ ಬಿತ್ತಿರುವರೊ ಅವರಿಗೆ ಮುಳ್ಳು ಬೇಗನೆ ಚುಚ್ಚುವುದು

ದೋಹಾ15

ಮಾಂಗನ ಮರಣ ಸಮಾನ ಹೈ, ಮತಿ ಮಾಂಗೊ ಕೊಈ ಭೀಖ.
ಮಾಂಗನ ತೆ ಮರಣ ಭಲಾ,ಯಹ ಸತಗುರು ಕೀ ಸೀಖ

ಅನುವಾದ

ಬೇಡುವುದು ಮರಣಕ್ಕೆ ಸಮಾನ ಆದ್ದರಿಂದ ಯಾರಿಂದಲು ಭೀಕ್ಷೆ ಕೇಳ ಬೇಡ. ಬೇಡುವುದಕ್ಕಿಂತ ಮರಣವೆ ಲೇಸೆಂದು ಹೇಳುವರು ಸದಗುರು.

ದೋಹಾ16

ಐಸಿ ಬಾಣಿ ಬೊಲಿಎ , ಮನ ಕಾ ಆಪಾ ಖೋಯ.
ಔರನ ಕೊ ಶೀತಲ ಕರೆ, ಆಪುನ ಶೀತಲ ಹೋಯ.

ಅನುವಾದ

ಅನುವಾದ- ನೀವು ಮಾತನಾಡುವ ಮಾತು ಕೇಳುವರ ಅಹಂಕಾರವನ್ನು ಅಡಗಿಸುವಂತಿರಬೇಕು. ನಿಮ್ಮ ಮಾತುಗಳು ನಿಮಗೂ ಹಿತವಾಗಿ ಕೇಳುವವರಿಗೂ ಹಿತ ಕೊಡುವಂತಿರಬೇಕು.

ದೋಹಾ17

ದಾನ ದಿಯೆ ಧನ ನಾ ಘಟೆ, ನದಿ ನಾ ಘಟೆ ನೀರ.
ಅಪನಿ ಆಂಖೋ ದೇಖ ಲೊ , ಯ್ಯೊ ಕ್ಯಾ ಕಹೆ ಕಬೀರ.

ಅನುವಾದ

ನದಿಯ ನೀರನ್ನು ಕುಡಿದರೆ ನದಿಯ ನೀರು ಕಡಿಮೆ ಯಾಗುವುದಿಲ್ಲವೆ ಹಾಗೆ ಧನವಂತ ಸ್ವಲ್ಪ ಹಣ ದಾನ ಮಾಡಿದರೆ ಕಡಿಮೆಯೇನು ಆಗುವುದಿಲ್ಲ. ನೀನೆ ನಿನ್ನ ಕಣ್ಣಾರೆ ನೋಡು ಆಗ ತಿಳಿಯುವುದು ಕಬೀರ ಏನು ಹೇಳಿದನೆಂದು.

ದೋಹಾ18

ಪತಿವೃತಾ ಮೈಲಿ ಭಲಿ, ಕಾಲಿ ಕುಚಲ ಕುರೂಪ.
ಪತಿವೃತಾ ಕೆ ರೂಪ ಪರ,ವಾರೊ ಕೋಟಿ ಸರೂಪ.

ಅನುವಾದ

ಅನುವಾದ- ಪತಿವೃತಿ ಸ್ರೀ ಕೆಟ್ಟ ಕೊಳಕು ಕುರೂಪಿಯಾಗಿರಲಿ ,ಆದರೆ ಅವಳ ಪತಿವೃತೆಯ ಗುಣದ ಮುಂದೆ ಸೌಂದರ್ಯ ಸೋಲುವುದು.

ದೋಹಾ19

ಜಾಕೆ ಜಿವ್ಹಾ ಬಂಧನ ನಹಿ , ಹೃದಯ ಮೆ ನಹಿ ಸಾಂಚ.
ವಾಕೆ ಸಂಗ ನ ಲಾಗಿಯೆ, ಖಾಲೆ ವಾಟಿಯಾ ಕಾಂಚ.

ಅನುವಾದ

ಅನುವಾದ- ಯಾರಿಗೆ ನಾಲಿಗೆ ಮೇಲೆ ಹಿಡಿತವಿಲ್ಲವೊ ಮತ್ತು ಮನಸ್ಸಿನಲ್ಲಿ ಸತ್ಯವಿಲ್ಲವೊ ಅಂಥ ಮನುಷ್ಯನ ಜೋತೆಗಿದ್ದರೆ ನೀನಗೆ ಏನೂ ದೊರೆಯದು.

ದೋಹಾ20

ಕಾಲಿ ಖೋಟಾ ಜಗ ಆಂಧರಾ, ಶಬ್ದನ ಮಾನೆ ಕೋಯ.
ಚಾಹೆ ಕಹೂ ಸತ ಆಇನಾ, ಸೊ ಜಗ ಬೈರಿ ಹೋಯ.

ಅನುವಾದ

ಇದು ಕಲಿಯುಗ, ಸುಳ್ಳಿನಿಂದ ತುಂಬಿದೆ .ಈ ಜಗತ್ತು ಕತ್ತಲೆಯಲ್ಲಿದೆ. ನನ್ನ ಮಾತುಗಳನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ. ಯಾರಿಗೆ ಒಳ್ಳೆಯ ಮಾತುಗಳನ್ನು ಹೇಳುತ್ತೇನೆಯೊ ಅವರು ನನ್ನ ವೈರಿ ಆಗುವರು.

ಶ್ರೀದುರ್ಗಾ(ಡಾ.ಸರೋಜಾ ಮೇಟಿ) 
ಹುಬ್ಬಳ್ಳಿ