ಹಿಂಸೆಗೆ ಹಿಂಸೆ ದಾರಿಯಾದರೆ ಅಹಿಂಸೆಗೆ ಬೆಲೆಯೇನು|
ಸತ್ಯಕೆ ಸುಳ್ಳು ಜೊತೆಯಾದರೆ ಸಚ್ಚರಿತ್ರೆಗೆ ಬೆಲೆಯೇನು||

ಮಹಾತ್ಮರು ಬಂದರು ಹೋದರು ಬದಲಾವಣೆಯೆಲ್ಲಿ|
ಬರಿದೇ ತತ್ವ ಮರೆಯಾದರೆ ಕೊಡುಗೆಗೆ ಬೆಲೆಯೇನು||

ಇತಿಹಾಸದ ತುಂಬೆಲ್ಲ ಅಂತೆಕಂತೆಗಳ ಬಹುಪರಾಕು|
ನಿಜ ಮನುಜ ಕಾಣೆಯಾದರೆ ದಾಖಲೆಗೆ ಬೆಲೆಯೇನು||

ಎದೆಯೆತ್ತರ ಬೆಳೆಸಿಕೊಂಡ ಮೇಲೆ ಹುಲ್ಲೂ ಉರುಳೇ|
ಕಣ್ಣೇ ಕಣ್ಣಿಗೆ ಹೊರೆಯಾದರೆ ಕಣ್ರೆಪ್ಪೆಗೆ ಬೆಲೆಯೇನು||

ಕಲಿಯುಗದಲಿ ಮನುಷ್ಯ ಅಪ್ಪಟ ರಾಕ್ಷಸನಾದ ಜಾಲಿ|
ಹಗಲೇ ರಕ್ತದ ಮಳೆಯಾದರೆ ಕರುಣೆಗೆ ಬೆಲೆಯೇನು||

✍️ವೇಣು ಜಾಲಿಬೆಂಚಿ
ರಾಯಚೂರು.