ಹೊಯ್ಸಳರಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡಿದ್ದು ಹಲವೆಡೆ ಶೈವ ಹಾಗು ವೈಷ್ಣವ ದೇವಾಲಯಗಳನ್ನು ನೋಡಬಹುದು. ಹೆಚ್ಚಿನ ಕಡೆ ಶಿವ ದೇವಾಲಯಗಳು ಊರಿನಂಚಿ ನಲ್ಲಿ ಹಾಗು ವೈಷ್ಣವ ದೇವಾಲಯಗಳು ಊರ ಮಧ್ಯದಲ್ಲಿದ್ದರೆ ಕೆಲವೆಡೆ ಒಟ್ಟಿಗೆ ನಿರ್ಮಾಣವಾಗಿ ರವುದನ್ನ ನೋಡಬಹುದು.ಅಂತಹ ದೇವಾಲಯ ಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮರ್ಲೆಯಲ್ಲಿನ ದೇವಾಲಯಗಳು ಪ್ರಮುಖವಾದವು.

ಈಗ ಚಿಕ್ಕದಾದ ಗ್ರಾಮವಾಗಿರುವ ಮರ್ಲೆಯು ಹೊಯ್ಸಳರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ ತ್ತು. ಬೇಲೂರಿನ ಸನಿಹದಲ್ಲಿ ಇರುವ ಕಾರಣ ಹೊಯ್ಸಳರ ಕಾಲದಲ್ಲಿ ಇಲ್ಲಿನ ಅಗ್ರಹಾರದಲ್ಲಿ ದೇವಾಲಯಗಳು ನಿರ್ಮಾಣಗೊಂಡಿದ್ದವು.ಇನ್ನು 1147 ರ ಶಾಸನದಲ್ಲಿ ಕೇಶವಪುರ ಎಂದು ಕರೆ ಯಲಾಗಿದೆ.  ಇನ್ನು 1159 ಮತ್ತು 1192 ರಲ್ಲಿ ಇಲ್ಲಿನ ದೇವಾಲಯಗಳಿಗೆ ದತ್ತಿನೀಡಿದ ಉಲ್ಲೇಖ ನೋಡಬಹುದು. ಇಲ್ಲಿನ ಎರಡೂ ದೇವಾಲಯ ಗಳು ಒಂದೇ ರೀತಿಯಲ್ಲಿ ನಿರ್ಮಾಣಗೊಂಡಿದೆ.

ಚನ್ನಕೇಶವ ದೇವಾಲಯ

ಈ ದೇವಾಲಯವನ್ನು ಸುಮಾರು 1130 ರಲ್ಲಿ ಹೊಯ್ಸಳ ದೊರೆ ವಿಷ್ಣುವಧ೯ನನ ಸೇನಾಧಿಕಾರಿ ರಾಯಣ್ಣದಂಡನಾಥ ನಿರ್ಮಿಸಿದ ಉಲ್ಲೇಖವಿದೆ. ವಿಸ್ತಾರವಾದ ದೇವಾಲಯ ಗರ್ಭಗುಡಿ, ಸುಖ ನಾಸಿ, ನವರಂಗ ಹಾಗು ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಸುಮಾರು 6ಅಡಿ ಎತ್ತರದ ಸುಂದರವಾದ ಕೇಶವನ ಮೂರ್ತಿ ಇದೆ. ಅಕ್ಕಪಕ್ಕದಲ್ಲಿ ಶ್ರೀ ದೇವಿ ಹಾಗು ಭೂದೇವಿಯರ ಕೆತ್ತೆನೆ ಇದೆ. ಪ್ರಭಾವಳಿ ಯಲ್ಲಿ ದಶಾವತಾರಗಳ ಕೆತ್ತೆನೆ ನೋಡಬಹುದು. ದಶಾವತಾರಗಳಲ್ಲಿ ಬುದ್ದ ಯೋಗಾಸನ ಭಂಗಿ ಯಲ್ಲಿನ ಕೆತ್ತೆನೆ ಇರುವುದು ವಿಶೇಷ. ಗರ್ಭಗುಡಿ ಯ ದ್ವಾರದಲ್ಲಿ ನಾರಾಯಣ, ಕೇಶವನ ಮಧ್ಯ ಇರುವ ಉಗ್ರನರಸಿಂಹನ ಕೆತ್ತೆನೆ ತುಂಬ ಸುಂದರ ವಾಗಿದೆ.

ಇನ್ನು ಸುಖನಾಸಿಯ ದ್ವಾರದಲ್ಲಿನ ಲಕ್ಷ್ಮೀ ನಾರಾ ಯಣನೆ ಕೆತ್ತೆನೆ ಇದ್ದು ದ್ವಾರಪಾಲಕರಿದ್ದಾರೆ. ಇನ್ನು ನವರಂಗದಲ್ಲಿ ನಾಲ್ಕುಕಂಭಗಳಿದ್ದು ಇಲ್ಲಿನ ಮದನಿಕೆಯರ ಕೆತ್ತೆನೆ ಹತ್ತಿರದ ಬೇಲೂರನ್ನು ನೆನ ಪಿಸುತ್ತದೆ. ಇಲ್ಲಿನ 8 ಮದನಿಕೆಯರ ಪೈಕಿ ಹಲವು ಮದನಿಕೆಯರು ಕಳವಾಗಿರುವುದು ದುರಂತ. ಇನ್ನು ದ್ವಾರದಲ್ಲಿನ ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದ್ದು ವಿತಾನದಲ್ಲಿನ ಕೆತ್ತೆನೆ ಕಲಾತ್ಮಕವಾಗಿದೆ. ಇಲ್ಲಿನ ಮುಖಮಂಟಪದಲ್ಲಿನ ವಿತಾನದಲ್ಲಿ ಅಷ್ಟ ದಿಕ್ಪಾಲಕರು, ಚತುರ್ವಿಂಶತಿ ವಿಷ್ಣುವಿನ ಕೆತ್ತೆನೆ ಗಳು, ನರ್ತಕಿಯರ ಹಾಗು ಲಕ್ಷ್ಮೀನಾರಯಣನ ಕೆತ್ತೆನೆ ಇದೆ.  ದ್ವಾರದಲ್ಲಿ ಸುಮಾರು ಮೂರು ಆಡಿ ಎತ್ತರದ ಅನೆಯ ಕೆತ್ತೆನೆ ಇದೆ.ಇನ್ನು ದೇವಾಲಯ ಕ್ಕೆ ಶಿಖರವಿದೆ.

ಸಿದ್ದೇಶ್ವರ ದೇವಾಲಯ

ಪಕ್ಕದಲ್ಲಿರುವ ಸಿದ್ದೇಶ್ವರ ದೇವಾಲಯವು ಇದೇ ಸಮಯದಲ್ಲಿ ನಿರ್ಮಾಣವಾಗಿದ್ದು 1147 ರಲ್ಲಿ ಹೊಯ್ಸಳ ರಾಜ ನರಸಿಂಹ ದೇವ ಇಲ್ಲಿನ ದೇವಾ ಲಯಗಳಿಗೆ ದತ್ತಿ ನೀಡಿದ  ಉಲ್ಲೇಖವಿದೆ. ಚನ್ನ ಕೇಶವ ದೇವಾಲಕ್ಕಿಂತ ಚಿಕ್ಕದಾದ ಈದೇವಾಲಯ ಸಹ ಗರ್ಭಗುಡಿ, ಸುಖನಾಸಿ ನವರಂಗ ಹಾಗು ಮುಖಮಂಟಪ ಹೊಂದಿದ್ದು, ಗರ್ಭಗುಡಿಯಲ್ಲಿ ಸಿದ್ದೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀ ಕೆತ್ತೆನೆ ಇದ್ದು ಸುಖನಾಸಿಯಲ್ಲಿ ನಟರಾಜನ ಕೆತ್ತೆನೆ ಇದೆ.  ಇನ್ನು ನವರಂಗದಲ್ಲಿ ಆರು ಕಂಭಗಳಿವೆ.

ಇನ್ನು ಹೊರಭಿತ್ತಿಯಲ್ಲಿ ಸಾಕಷ್ಟು ಕೆತ್ತೆನೆ ನೋಡ ಬಹುದು. ಇಲ್ಲಿ ಬೈರವ, ಬೈರವಿ,ವಾಮನ, ಗಜಾ ಸುರ ಮರ್ಧನ ಶಿವ, ಸೂರ್ಯ, ಮಹಿಶಮರ್ಧಿನಿ, ಸರಸ್ವತಿ,ವೀರಭದ್ರ, ಗಜೇಂದ್ರಮೋಕ್ಷ ಮುಂತಾದ ಕೆತ್ತೆನೆ ಇದ್ದು ಮಂಟಪದ ಪ್ರವೇಶದಲ್ಲಿ ಗಣಪತಿ ಹಾಗು ಸರಸ್ವತಿಯ ಶಿಲ್ಪಗಳಿವೆ.ಇನ್ನು ಮುಖಮಂ ಟಪದ ವಿತಾನದಲ್ಲಿ ಅಷ್ಟದಿಕ್ಪಾಲಕರು ಹಾಗು ತಾಂಡವೇಶ್ವರ ಕೆತ್ತೆನೆ ಇದ್ದರೆ ಉಳಿದ ಭಾಗದಲ್ಲಿ ಮಲ್ಲಯುದ್ದ, ಹೊಯ್ಸಳ ಪರಿವಾರದ ಕೆತ್ತೆನೆ ಸಹ ನೋಡಬಹುದು. ಶಿಖರದ ಭಾಗವನ್ನು ನವೀಕರಿ ಸಲಾಗಿದೆ.  

ದೇವಾಲಯದ ಆವರಣದಲ್ಲಿ ಶಾಸನಗಳು ಇದ್ದು 1110 ರ ವೀರಗಲ್ಲು ಇದೆ. ಇನ್ನು ಇಲ್ಲಿ ಕಾಮಟೇ ಶ್ವರ ಹಾಗು ಬೈರವ ದೇವಾಲಯಗಳಿದ್ದು, ಇಲ್ಲಿ ನಾಲ್ಕು ವೀರಗಲ್ಲುಗಳು ಹಾಗು  ಎರಡು ಮಾಸ್ತಿ ಕಲ್ಲುಗಳನ್ನು ನೋಡಬಹುದು.

ತಲುಪುವ ಬಗ್ಗೆ : ಬೇಲೂರು – ಚಿಕ್ಕಮಗಳೂರು ರಸ್ತೆಯಲ್ಲಿ ಮರಲೆ ಕ್ರಾಸ್ ಬಳಿ ತಿರುಗಿ 3 ಕಿ ಮೀ ದೂರದಲ್ಲಿ ಹೋದರೆ ತಲುಪಬಹುದು. ಬೇಲೂರಿ ನಿಂದ ಸುಮಾರು18ಕಿ.ಮೀ ಹಾಗು ಚಿಕ್ಕಮಗಳೂ ರಿನಿಂದ ಸುಮಾರು 12 ಕಿ ಮೀ ದೂರದಲ್ಲಿದೆ.  

ಶ್ರೀನಿವಾಸ ಮೂರ್ತಿ ಎನ್.ಎಸ್. ಬೆಂಗಳೂರು