ಆದಿ ಪುರಾಣದಲ್ಲಿ ಲಲಿತಾಂಗನ ಮರಣದ ಕಹಿ ನೆನಪುಗಳಲ್ಲಿಯೇ ಸ್ವಯಂಪ್ರಭೆಯು ದಿನಗಳನ್ನು ಕಳೆಯುತ್ತಾ,ಕೆಲದಿನಗಳಲ್ಲಿ ಸ್ವಯಂಪ್ರಭೆ ಮರಣ ಹೊಂದಿ, ಮತ್ತೆ ಶ್ರೀಮತಿಯಾಗಿ ಹುಟ್ಟುತ್ತಾಳೆ. “ಕಾಮನ ಮಂತ್ರದೇವತೆಯಾಗಿ, ಕಾಮ ವಿದ್ಯೆಯೆ ಸಾಕಾರಗೊಂಡಂತೆ  ರಾರಾಜಿಸಿದಳು. ವಿರಕ್ತರನ್ನು ಮಣಿಸಲು  ಕಾಮನು  ಎಡೆಬಿಡೆದೆ   ಪೂಜಿಸುವ ಕೈದುವಿನಂತೆ ಇವಳು ವಿರಾಜಿಸಿದಳು.” ಶ್ರೀಮತಿಯ ಜನ್ಮದಲ್ಲೂ ಅಷ್ಟೇ ಸೌಂದರ್ಯವತಿ ಮತ್ತು ಕಾಮನ ಮಗಳೇ ಎನ್ನುವ ಹಾಗೇ ವಿರಾಜಿ ಸುತ್ತಿದ್ದಳೆಂದು ಪಂಪ ವರ್ಣಿಸುತ್ತಾನೆ.

ವ |“ಅಂತು ನವಜಳದನಿನದಮಂ ಕೇಳ್ದ ಹಂಸವನಿತೆಯಂತಾ ವನಿತೆ ಶಂಕೆವೆರಸು ಭೋಂಕೆನೆಚ್ಚೆತ್ತು ಸೌಧೋಪರಿಮತಳದೊಳ್ ನಿಂದ ದೇವಾಗಮನಮಂ ನೋಡಲೊಡಂ ಪೂರ್ವಭವಸ್ಮರಣಮಾಗಿ ದೇವಲೋಕದ ಲಲಿತಾಂಗದೇವನಂ ನೆನೆದು.”

ಮತ್ತೆ ತನ್ನ ಪೂರ್ವ ಜನ್ಮದ ಒಂದು ನೋಟವನ್ನು ಕಣ್ಮುಂದೆ ಹಾಯುಸುತ್ತಾಳೆ. ಲಲಿತಾಂಗನನ್ನು (ಕಾಮ ಸ್ವರೂಪನಾದ) ನೆನೆದಳು,

“ನಿನ್ನ ಮಾತುಗಳ್ ಕೀಲಿಸಿದಂತೆವೊಲ್ ಮನದೊಳಿರ್ದುವು ನಿನ್ನನೆ ಕಾಣಲಾಗದೆಂದಾ………”

ಕಣ್ಣ್  ಕಾಣದ್ದು,  ಕಿವಿ  ಕೇಳದ್ದನ್ನು  ಕರಳು   ಅರಿ ಯುತ್ತೆ  ಎಂಬ  ಮಾತಿಗೆ  ಮನಸು ಅರಿಯುತ್ತದೆ, ಇದಕ್ಕೆ   ಸಾಕ್ಷಿ  ಸ್ವಯಂಪ್ರಭೆ  ಮತ್ತು ಲಲಿತಾಂಗ ದೇವರಾಗಿದ್ದಾರೆ. ಲಲಿತಾಂಗ  ನಿನ್ನ ಲೀಲಾಟಗಳೆ ಲ್ಲವೂ  ನನ್ನ  ಮನದಲ್ಲಿಯೇ ಹಚ್ಚೆಯಂತೆ  ಉಳಿ ದಿವೆ. ನೀನು  ಆಡಿದ  ಮಾತುಗಳು ನನ್ನ  ಎದೆಯ ನ್ನು  ನೆಟ್ಟು  ನಿಂತಿವೆಯೆಂದು  ಸ್ಮರಿಸಿಕೊಳ್ಳುತ್ತಾ ಕುಳಿತಾಗ  ವಜ್ರದಂತನು  ಮಗಳು   ಶ್ರೀಮತಿಗೆ   ಹೀಗೆ ಹೇಳಿದನು: ಮಗಳೆ   ನಿನ್ನ ಜೀವನ ಮತ್ತು ಜೀವವಾದ   ಅರಸನೊಡನೆ   ನಾಳೆ   ಇಲ್ಲವೇ  ನಾಡಿದ್ದು ಸೇರಿಯುವಿಯೆಂದು” ಉತ್ತರಿಸಿದನು,  ತಕ್ಷಣವೇ
“………………ಪಿಂಗುಗೆ ಕುಂಕುಮದ್ರವಂ
ನಗೆ ಮೊಗದೊಳ್ ಕನತ್ಕನಕಮೇಖಳೆ ಪೀನನಿತಂಬದೊಳ್ ಲಯಂ
ನೆಗೆೞ್ದೆರೆ ನೂಪುರಂ ಪದಪಯೋರುಹದೊಳ್ ನೆಲೆಗೊಳ್ಗೆ ಕೂಡುವೈ
ಬಗೆಗೊಳೆ ನಾಳೆ ನಾಡಿದು ಮಹೋತ್ಸವದಿಂ ನಿಜಜೀವತೇಶನೊಳ್”

ನಿರ್ಜೀವಕ್ಕೂ   ಜೀವವಿದೆಂದು   ತೋರಿಸುವ ಸ್ವಯಂಪ್ರಭೆಯೂ ತಾನು ಧರಿಸಿದ ಕುಂಕುಮವು ಹಣೆಯ ಮೇಲೆ  ನಗಲು  ಪ್ರಾರಂಭಿಸಿತು. ಚಿನ್ನದ ಒಡ್ಯಾಣವು ಕಾಂತಿಯಿಂದ ಹೊಳೆಯಲು  ಪ್ರಾರಂ ಭಿಸಿತು. ಪ್ರೀತಿಯೆಂದರೆ ಹೀಗೇನಾ? ಅದು ಬಲು ವಿಚಿತ್ರವೂ? ಅದು ಒಮ್ಮೆ ನಗಿಸಿ ಗಗನದೆತ್ತರದತ್ತ  ಕರೆದು ನಿಲ್ಲಸಿದರೇ, ಮತ್ತೊಮ್ಮೆ ಭೂ  ಗರ್ಭದೊ ಳಗೆ  ಉಸಿರಿಲ್ಲದಂತೆ   ನಿಲ್ಲಿಸಿ  ಬಿಡುತ್ತದೆ.   ಪ್ರೀತಿ  ಹೀಗೆ  ಅಲ್ವಾ! ಜೀವಗಳೆರಡು ಮತ್ತೆ ಸುಖಭೋಗ ದಲ್ಲಿ ಒಂದಾಗುತ್ತವೆ ಎಂದರೆ ಎಷ್ಟೊಂದು ಸೋಜಿ ಗ.ಕಂಡ ಕನಸು ದಿನ ಕಳೆದ ಹಾಗೆ ಮತ್ತೆ ಕೈ ಸೇರು ತ್ತಿದೆ  ಎನ್ನವುದೆ  ಶ್ರೀಮತಿಯ  ಬಯಕೆ.  ಹಾಗೇ ವಜ್ರಜಂಘನಾಗಿ  ಜನಿಸಿದ  ವಿಷಯ  ಶ್ರೀಮತಿಗೆ ತಿಳಿಯಿತು. ಇತ್ತ ವಜ್ರಜಂಘನಿಗೆ ಪೂರ್ವ ಜನ್ಮದ ಸ್ವಯಂಪ್ರಭೆಯ  ವ್ಯಾಮೋಹದ  ವ್ಯಾಕುಲತೆ  ಈ ಜನ್ಮದಲ್ಲಿಯೂ ಬೆನ್ನು ಹತ್ತಿ ಬಂದು ಕಾಡುತ್ತಿತ್ತು.

ಕುಡುಮಿಂಚಂ ಮಸೆದನ್ನರಪ್ಪ ಪಲರ್    ಒಳ್ವೆಂಡಿರ್ ಮನಂಗೊಂಡು ಬಂದೊಡಂ”

ಹೀಗಿರುವಾಗ  ಒಂದು  ಸಲ  ವಜ್ರಜಂಘ  ಮತ್ತು ಶ್ರೀಮತಿಯರು  ಇಬ್ಬರು  ಸಂಧಿಸುತ್ತಾರೆ.  ಮತ್ತೆ ಮರಳಿ ಪೂರ್ವಜನ್ಮದ ಸೌಭಾಗ್ಯವನ್ನು ಪಡೆದು ಸತಿ-ಪತಿಗಳಾಗುತ್ತಾರೆ. ಪ್ರೀತಿ ಪಡಿಯಲು ಕೇವಲ ಒಂದೇ  ಹೆಜ್ಜೆ.  ಮತ್ತೆ  ಪ್ರೀತಿಯಲ್ಲಿ   ಜೀವಗಳು ಒಂದಾಗಿವೆ. ಮರುಜನ್ಮ  ಪಡೆದ   ಲಲಿತಾಂಗನು, ವಜ್ರಜಂಘನಾಗಿ ಹೀಗೆ ಹೇಳುತ್ತಾನೆ:

“ಈ ಭವದಿಂದಮಾದ ವಾಸನೆ ಅರಱುಮೆಯ್ಗಂ ಅಕ್ಕುಂ ಅದಱಿಂದ ಎನಗಂ ನಿನಗಂ ಮುನ್ನಿನ ಭವಂ ಈ ಭವಂ ಮಱುಭವಂ ಸಫಲಂ ಸಫಲಂ”

ಎಂದು ಪ್ರೇಮ ಭಾವದಿಂದ ಸಫಲವಾಗಿವೆ ನಿಜ. ಆದರೆ   ಆತ್ಮ  ಕಲ್ಯಾಣದೃಷ್ಠಿ   ಅವುಗಳಿಂದಲೇ ವಿಫಲವೆ ಸರಿ ಎಂದು ನುಡಿಯುವನು. ಅವರಿಬ್ಬ ರ ಸುಖ-ಭೋಗಕ್ಕೆ ಎಡಿಯಿಲ್ಲದಂತಾಗಿತ್ತು. ವಜ್ರ ಜಂಘನಿಗೆ ಮುಂದೆ ಕಾದಿರುವ ದುರಂತದ ಅರಿವೆ ಇರಲಿಲ್ಲ.

“ಮೊದಲೊಳ್ ನೀಳ್ದು ಪೊದೞ್ದು ಪರ್ಬಿಪರಪಂ ಕೈಕೊಂಡು ಮಂದೈಸಿ ಮಾ
ಣದೆ ತನ್ನಂದದೊಂದೇೞ್ಗುಗುಂದದೆ ನಿರುದ್ಬೋಚ್ಛ್ವಾಸಮಪ್ಪನ್ನೆಗಂ
ಪುದಿದಾ ದಂಪತಿಯಂ ಪುಂದುಗೊಳಿಸಿ ಲೋಕಾಶ್ಚರ್ಯಮಂ ಮಾಡಿಕೊಂ
ದುದು  ಕೃಷ್ಣಾಗರು ಧೂಪಧೂಮನಿವಹಂ ಕೃಷ್ಣೋರಗಂ ಕೊಲ್ವವೊಲ್

ಶ್ರೀಮತಿ  ವಜ್ರಜಂಘರು   ಕೆಲವರ್ಷಗಳ    ಕಾಲ ಸುಖಭೊಗಗಳನ್ನು   ಅನುಭವಿಸುತ್ತಾರೆ.  ಒಂದು ದಿವಸ  ಶ್ರೀಮತಿಯ ಕೇಶ ಸಂಸ್ಕಾರಕ್ಕಾಗಿ   ಧೂಪ ಸಾಮಗ್ರಿಯನ್ನು ಅತಿಯಾಗಿ ಹಾಕಿರುವ ಸೆಜ್ಜೆವಳ (ದಾಸಿ) ಆ ಕಕ್ಷೆಯ ಸುತ್ತಲು ಇರುವ ಕಿಟಕಿಗಳನ್ನು ತೆರೆದಿಡಲು ಮರೆತು ಹೋಗುತ್ತಾಳೆ. ಆ  ಧೂಪದ ಧೂಮವು ಈಡೀ ಕಕ್ಷೆಯನ್ನೆ ಆವರಿಸಿ, ದುರಂತಕ್ಕೆ ಕಾರಣವಾಯಿತು.   ಆ  ಧೂಪದ   ಸುಗಂಧವೇ ಉಸಿರಾಟ ಕ್ರಿಯಯನ್ನೇ ನಿಲ್ಲಿಸಿ ಬಿಟ್ಟಿತಲ್ಲ?ಸುಖ ಭೋಗದಲ್ಲಿ ತಲ್ಲೀನಗೊಂಡ ಆ ಸುಮಧುರವಾದ ರಾತ್ರಿಯು    ಕರಾಳ  ರಾತ್ರಿಯಂತೆ  ಮೌನವಾಯಿ  ತಲ್ಲ?  ಬದುಕಿನ   ಮೌನದ   ತಾಣ   ಅಂದರೆ  ಇದೆ ಅಲ್ವಾ..  ಯಾವುದೇ   ವ್ಯಸನಗಳಲ್ಲಿದೆ ಪರ ಮಾರ್ಥದತ್ತ  ಸಾಗಿದ  ದಾಂಪತ್ಯ ಇಬ್ಬರದಾಗಿತ್ತು. ದೇವರ ಮುಂದೆ ದೀಪದ ಎರಡುಬತ್ತಿಗಳು ಸದಾ ಬೆಳಕಿನ    ಹಾಗೆ   ಪ್ರಜ್ವಲಿಸುತ್ತಾ,  ಪ್ರದೀಪನಗೊ ಳ್ಳುವಂತೆ ನಂದಾದೀಪವಾದರು.ತುಂಬು  ಜೀವನ ದ ಸಾರ್ಥಕತೆಯನ್ನು ಇವತ್ತಿನವರೆಗೂ ಬಿಟ್ಟಿರುವ  ಪ್ರೀತಿಯ ಜ್ಯೋತಿ ಇವರಾಗಿದ್ದಾರೆ.ಸಹಮರಣವು ಎಲ್ಲರಿಗೂ ಕೈಗೆ ಸಿಗಲಾರದು.

“ಭೋಗಾಂಗಮಾಗಿಯುಂ ಕೃ
ಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ
ಭೋಗಿಗಳನಿಂತು ಸಂಸ್ಕಂತಿ
ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್”

ಹಾವಿನ ಹೆಡೆಯಂತೆ  ಆ ಧೂಮಗಳು   ಆವರಿಸಿ, ವಿಷದ ಮುಸುಕಾಗಿ ದೇಹವನ್ನು  ಪ್ರವೇಶಗೊಂಡಿ ತು. ಭೋಗದಲ್ಲಿ  ಸವಿಯನ್ನು  ಸವಿಯುತ್ತಿದ್ದ  ಆ ದಂಪತಿಗಳಿಬ್ಬರ   ದೇಹ-ದೇಹಗಳು  ಜೊತೆಗೂಡಿ ಅಂಟಿಕೊಂಡಂತೆ   ಕಾಣುತ್ತಿದ್ದವು,   ‘ಸಯಾಮಿ’ ಯಂತೆ  ಕಾಣುತ್ತಿದ್ದರು.  (ದೇಹ  ಎರಡು,   ಜೀವ ಒಂದೇ  ಎನ್ನುವ  ರೀತಿಯಲ್ಲಿ)   ಪ್ರೇಮಾನುರಾಗ ದಲ್ಲಿ   ದಂಪತಿಗಳು   ಸಹಮರಣ   ಪಡೆದಿದ್ದರು,  ಅಮರಲೋಕದದತ್ತ ಮತ್ತೆ ತಿರುಗಿದರು.

“ಬಿಡದೆ ಪೊಗೆ ಸುತ್ತೆ ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ
ದೊಡಗಳೆದರೋಪರೋಪರೊ
ಳೊಡ ಸಾಯಲ್ಪಡೆದರಿನ್ನುವೆಂ ಸೈಪೊಳವೇ?”

ಮಲಗಿರುವಾಗಲೇ ಸಾವನ್ನಪ್ಪುವ ಪುಣ್ಯವೇನು ಕಡಿಮೆಯೇ? ಬಹುಷ್ಯ:  ಉತ್ತರ  ಮಾತ್ರ   ಪುಣ್ಯ ವಂತರಿಗೆ   ಈ ಬಗೆಯ ಪ್ರೀತಿ  ಮತ್ತು   ಅಮರತ್ವ ಲಭಿಸಲು ಸಾಧ್ಯ ಎನ್ನಬೇಕು. ಅತಿಯಾದ ಭೋಗ ದ  ಕೊನೆಯಲ್ಲಿ   ವಿಯೋಗದ   ಪ್ರಾಣತ್ಯಾಗದ ಅಪಾಯವೂ   ಕಾದಿರುತ್ತದೆ.  ಬದುಕಿದಾಗಲೂ ಒಟ್ಟಿಗೆ ಇದ್ದು, ಸಾಯುವಾಗಲೂ  ಒಟ್ಟಿಗೆ ಇರುವು ದು  ಎಂದರೆ  ದೇಹ  ಮಾತ್ರ ಬೇರೆ, ಪ್ರಾಣ ಮಾತ್ರ ಒಂದೇ ಎಂದು  ಭಾವಿಸಬೇಕಾಗುವುದು. ನಂತರ ಮತ್ತೆ  ದಂಪತಿಗಳು ಮರುಜನ್ಮವನ್ನು  ಪಡೆದು ಅನುರಾಗ    ಬಂಧನಗಳನ್ನೆಲ್ಲ   ತ್ಯಜಿಸಿ,  ಸ್ವಯಂ ಬುದ್ದನಾಗಿದ್ದ ಮುನಿಯೊಬ್ಬ:

“ನಿನಗೆ ಜಯವರ್ಮನಾದಂ
ದಿನ ಭವದಿಂದಿತ್ತೆ ಭೋಗಕಾಂಕ್ಷೆಯ ತಿಣ್ಣಂ
ಮನದೊಳ್ ಸಮ್ಯಕ್ತ್ವದ ದೆಸೆ
ಯಿನಿತಿಲ್ಲಲಮ್ಮ ಕೈಕೊಳಲ್ಕಿದು ಕಾಲಂ”

ಎಂದು  ಎಚ್ಚರಿಸಿ,  ಅವರಿಗೆ   ಸಮ್ಯಕ್ತ್ವವನ್ನು ಬೋಧಿಸುತ್ತಾನೆ.  ಈ  ಹಿಂದೆ   ಅನುಭವಿಸಿದ     ಪ್ರಣಯ  ಸುಖವು  ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗಿ ತ್ತು. ಅತಿಯಾದ  ಸುಖದ   ಹಿಂದೆ  ದು:ಖವಿದ್ದೇ ಇರುತ್ತದೆ  ಎನ್ನುವುದನ್ನು  ಮರೆತು   ಬಿಟ್ಟಿದ್ದರು. ಆದಿಪುರಾಣದಲ್ಲಿ ‘ಸಖ್ಯ’ ಪ್ರಸಂಗಗಳನ್ನು ಪಂಪ ಕವಿಯು   ಜನ್ಮ-ಜನ್ಮದಲ್ಲಿ   ಸುಖ-ಭೋಗವನ್ನು ಅನುಭವಿಸಲು  ಬಿಡುತ್ತಾನೆ.  ನಂತರ  ಧಾರ್ಮಿಕ ದೃಷ್ಠಿಯಿಂದ ಜೈನಧರ್ಮದ ವ್ರತ ಆಚರಣೆಗಳಲ್ಲಿ ಭಾಗಿಯಾಗುವಂತೆ   ಪ್ರೇರೆಪಿಸಿ,   ದೀಕ್ಷೆಯನ್ನು ಪಡೆದು,  ಮುಕ್ತರನ್ನಾಗಿ   ಮಾಡುವಲ್ಲಿ   ಕವಿಯ ಜಾಣ್ಮೆಯನ್ನೂ   ಒಪ್ಪಿಕೊಳ್ಳಲೇಬೇಕು.

“ಕುಲಧರನುಂ ಕುಳಕರನುಂ
ಕುಳತಿಳಕನುಮೆನಿಪ ನಾಭಿರಾಜಂಗೆ ಲತಾ
ಲಳಿತೆ ದಳಿತಾಂಬುಜಾನನೆ
ವಿಳಾಸಲಾವಣ್ಯಕಾಂತಿಯುತೆ ಸತಿ ರತಿವೊಲ್.”

ಇಂತಹ  ಕುಲಾಂಶವನ್ನು ಹೊಂದಿದವನ‌ ಪ್ರಿಯತ ಮೆಯೇ ಮರುದೇವಿ.ಇವಳುಕಮಲಮುಖಿಯು, ರತಿಯಂತಿರುವ ಲಾವಣ್ಯಮಯಿಯೂ,ಬ್ರಹ್ಮನೂ ಇಡೀ ಸೌಂದರ್ಯ ಸಾರವನ್ನು ಒಟ್ಟು ಮಾಡಿದ ಕಲಾವಂತಿಕೆ ಕೃತಿಯೂ ಆಗಿದ್ದಳು ಮರುದೇವಿ.

“ ಮರುದೇವಿಯಂಬಳಂಬರ
ಚರನರಸುರಯುವತಿರೂಪಸರ್ವಸ್ವಮನಾ
ದರದೆ ಬಿದಿ ನೆರಪಿ ಲಲನಾ
ಸ್ವರೂಪದಿಂ ನಿಱಿಸಿತೆನ್ನದಿನ್ನೇವೊಗೞ್ವೆಂ”

ಇಂತಹ “ಹೊಳಪಾದ ಅವಳ ಅಲರ್ಗಣ್ಣು ಚಾಮರವಾಗಿ ಕಂಗೊಳಿಸಿತು. ಹುಬ್ಬು ಎತ್ತಿದ ಧ್ವಜವಾಗಿ ರಾರಾಜಿಸಿತು ಅವಯವಗಳ ಕಾಮ ವಿಲಾಸಿ ಚಿಹ್ನೆಗಳಾಗಿ ವಿರಾಜಿಸಿದವು,” ಇವರಿಬ್ಬರಿಗೂ ದೇವೇಂದ್ರನು ಸಕಲ ದೇವತೆಗಳ ಪರಿವಾರದೊಡನೆ ಬಂದು ಮದುವೆ ಮಾಡಿದನು. ಮರುದೇವಿಯು  ನಾಭಿರಾಜನ   ಮನೆ   ಮತ್ತು ಮನಸ್ಸು ಹೊಕ್ಕು ಕಾಮನ ಕಡೆಗೋದಳು. ಇವರಿ ಬ್ಬರ ಪ್ರೇಮ

“ಅಂತನ್ಯೋನ್ಯ ಪ್ರೇಮಸಂಜಾತ ಸ್ವಾಂತಸಂಪತ್ಪರಂಪಾರಾಪರಿಗಪಮಾಗಿ ನಿಳಿಂಪದಂಪತಿಯನೆ ಪೋಲ್ವ ದಂಪತಿಗೆ ಪವಿತ್ರೀಭೂತಮಪ್ಪ ಭೂತಳೋದ್ದೇಶದೊಳುತ್ಪತ್ಸ್ಯಮಾನಭಾವಿ ತೀರ್ಥಕರಪುಣ್ಯದೂತಾಹೂತಂ ಪುರುಹೂತಂ ಬಂದು”

ಹಾಲು   ಸಕ್ಕರೆಯಂತೆ   ಒಂದರೊಳಗೊಂದು ಬೆರತಂತೆ  ಇವರ   ದಾಂಪತ್ಯ   ಪ್ರತೀತವಾಗಿತ್ತು. ಪ್ರೇಮ ದಾಂಪತ್ಯವನ್ನು   ಕಂಡು   ದೇವೆಲೋಕದ ದೇವ  ದಾಂಪತ್ಯದವರು  ಇವರಿಗೆ ಸಮವಾಗಿರಲಿ ಲ್ಲ? ಎಂದು  ಪಂಪ   ಚಿತ್ರಿಸುತ್ತಾನೆ. ಮುಂದುವರೆ ದು  ನಿರ್ಮಿಸಿದ್ದ   ಅಯೋಧ್ಯೆನಗರದ  ತುಂಬೆಲ್ಲ ಉದ್ಯಾನಗಳನ್ನು ನಿರ್ಮಿಸಿದನು. ಅಲ್ಲಿ ಅರಳಿದ ಹೂಗಳಲ್ಲಿ  ಸುತ್ತ ದುಂಬಿಗಳು ಝೇಂಕರಿಸಿದವು. ದುಂಬಿ,ಗಿಳಿ, ಕೋಗಿಲೆಗಳ  ಸಮೇತ ನಂದನವನ‌ ವೇ ಬಂದು ಅಯೋಧ್ಯಯ ಸುತ್ತಾ ಕಾಮಕೋಟಿ ಯಾಗಿ ಕಂಗೊಳಿಸಿತು.  ಹೀಗೆ  ಸುಖೋಪಭೋಗ ದಲ್ಲಿಯೇ ನಾಭಿರಾಜ ದಂಪತಿಗಳು ಜೀವನವನ್ನು ಸಾಗಿಸಿದರು.ಅಯೋಧ್ಯ ನಗರಕ್ಕೆ ನಾನಾ ಬಗೆಯ ಹೆಸರಗಳನ್ನಿಟ್ಟು,‌  ಸುರೇಂದ್ರನು   ನಾಭಿರಾಜನಿಗೆ ರಾಜ್ಯಭಿಷೇಕವನ್ನು ಮಾಡಿ, ಸಾಮ್ರಾಜ್ಯವನ್ನು ಕೊಟ್ಟನು.“ದೇವಲೋಕದ ಕಲ್ಪವೃಕ್ಷಗಳು ನೀಡಿದ ವಸ್ತ್ರ, ಹೂವು, ಗಂಧ,  ಮತ್ತು  ಆಭರಣಗಳಿಂದ ನಾಭಿದಂಪತಿಗಳನ್ನು   ಪೂಜಿಸಿದನು,”   ಇಂತಹ ಸುಖದಲ್ಲಿ ಕಂಗೊಳಿಸುತ್ತಿದ್ದರು.

“ಸುರರಾಜಂ………ಪುರುದೇವಂ ಬಂದಪಂ ನಂದನನೆನಗೆನಿಸಲ್ಕಾನೆಸಂಸಾರಸೌಖ್ಯಾ ಕರನಾಗಿರ್ದಪ್ಪೆನೆಂಬುತ್ಸವದೊಳೆ…….ಮಾನಸೋತಸಂಸಹಂಸಂ”

ಮೊದಲ ತೀರ್ಥಂಕರನ ಜನನ ಈ ದಂಪತಿಗೆ ಲಭಿ ಸಿತು. ಮರುದೇವಿಗೆ ಪುರುದೇವ ವೃಷಭದೇವ ನೆಂಬ ಮೂರುಲೋಕದ ಒಡೆಯನ ಜನನವಾ ಯಿತು. ಮುಂದೆ ವೃಷಭದೇವನನ್ನು ಯಶಸ್ವತಿ ಮತ್ತು ಸುನಂದೆಯರು ವಿವಾಹವಾದರು. ಇವರ ದಾಂಪತ್ಯವು ಮೂರುಲೋಕವು ನಾಚುವಂತೆ ಸುಖ-ಭೋಗದಲ್ಲಿ ಸುಂದರವಾದ ಬೃಂದಾವನ ದಂತೆ ಇತ್ತು. ಯಶಸ್ವಿಗೆ ಭರತ ಮತ್ತು ನೂರು ಜನ ಗಂಡುಮಕ್ಕಳು (101) ಜನಿಸಿದರು, ಹಾಗೆಯೇ ಸುನಂದೆಗೆ ಬಾಹುಬಲಿ ಹುಟ್ಟಿದನು. ಆದಿನಾಥ ತೀರ್ಥಂಕನ ನಡೆದು ಬಂದು ದಾರಿ ಯಾಯಿತು.

ಡಾ.ರೇಣುಕಾ ಕಠಾರಿ
ಬೆಳಗಾವಿ