ರಂಗ ಮಂದಿರ ಪ್ರಾಧಿಕಾರದ ರಚನೆಯಾದಾಗ ಪ್ರಾಯಶ: ಸದ್ಯದ ಸಾಂಸ್ಕೃತಿಕ ಪರಿಸ್ಥಿತಿ ಸುಧಾರಿ ಸಲು ಅನುಕೂಲವಾಗುತ್ತದೆ ಅನ್ನುವದನ್ನು ಮುಂದೆ ನೋಡೋಣ.ಈಗಾಗಲೇ ಎಷ್ಟು ಪ್ರಕಾರ ದ ರಂಗಮಂದಿರಗಳು  ಇದ್ದಾವೆ ಅನ್ನೋದು ತಿಳಿದುಕೊಂಡದ್ದು ಆಯಿತು. ಎಲ್ಲೆಲ್ಲಿ ಎಂಥವು ಇವೆ ಅನ್ನೋದು ಎಲ್ಲರಿಗೂ ಗೊತ್ತಾಗಲು ಈಗ ಸಾಧ್ಯವೇ ಇಲ್ಲ.

 ಅದಕ್ಕೆ ಸರ್ವೆ ಅನ್ನೋದು ಅವಶ್ಯಕ. ಅದನ್ನು ಮಾಡುವರು ಯಾರು?  ಸದ್ಯದ ಪರಿಸ್ಥಿತಿಯಲ್ಲಿ ಅಕಾಡೆಮಿಗಳಾಗಲಿ, ಅಥವಾ ಹೊಸ ಕಟ್ಟಡ  ಸೌಲಭ್ಯ ಒದಗಿಸುವಲ್ಲಿ ಸದಾ ಉತ್ಸುಕರಾಗಿರುವ ಲೋಕೋಪಯೋಗಿ ಇಲಾಖೆಗಳೇ  ಇಂಥಹ ಸರ್ವೇ ಕಾರ್ಯ ಕೈಕೊಳ್ಳಬೇಕು,  ಅವುಗಳನ್ನು ಮೇಲೆ ಹೇಳಿದ ಹಾಗೆ ವರ್ಗಿಕರಣ ಅಥವಾ ತಮಗೆ ತಿಳಿದಹಾಗೆ ವರ್ಗಿಕರಣ ಮಾಡಿ ಅವುಗಳ ಪುನರ್ ಉತ್ಥಾನಕ್ಕಾಗಿ ಆಂತರಿಕ ಸೌಲಭ್ಯಗಳನ್ನು ಒದಗಿಸಿ  ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು. ಇದು ಸಾಧ್ಯವಾಗುವದು ಲೋಕೋಪಯೋಗಿ ಇಲಾಖೆ, ಸರಕಾರಿ ವಾಸ್ತು ಶಿಲ್ಪ ಅಧಿಕಾರಿ,ರಂಗ ತಜ್ಞರು, ಧ್ವನಿ ಮತ್ತು ಬೆಳಕು ತಜ್ಞರು ಎಲ್ಲರೂ ಕೂಡಿ ಒಮ್ಮತದ ನಿರ್ಧಾರ ಮಾಡಿದಾಗ ಮಾತ್ರ. ಒಂದು ಒಳ್ಳೆಯ ರಂಗ ಮಂದಿರ ನಿರ್ಮಾಣವಾಗಲು ಸಾಧ್ಯ. ರಂಗ ಭೂಮಿಯಲ್ಲಿ ಆಸಕ್ತಿ ಹೊಂದಿದ್ದ ತಂತ್ರಜ್ಞರು, ಇಂಜನೀಯರುಗಳು ಎಲ್ಲರೂ ಲೋಕೋಪಯೋ ಗಿ ಇಲಾಖೆಯ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ ಗಳ ಅಡಿಯಲ್ಲಿ ರಂಗಮಂದಿರ   ನಿರ್ಮಾಣ ನಿರ್ವಹನೆಮಾಡುವದು ಉತ್ತಮ.

ಪ್ರತಿಯೊಂದು ರಂಗಮಂದಿರಕ್ಕೆ ಬೇಕಾದ ಲೈಟು ಗಳು, ವಿದ್ಯುತ ಪೂರೈಕೆ, ಪರದೆಗಳು ಆಸನ ವ್ಯವಸ್ಥೆ ಪ್ರಸಾಧನ ರೂಮುಗಳು, ಮೂತ್ರಾಲಯ ಗಳು,ಪಾಯಖಾನೆಗಳು,ರಿಹರ್ಸಲ್ ಕೊಠಡಿಗಳು ಪ್ರಚಾರ ಫಲಕ, ಸೂಚನಾ ಬೋರ್ಡುಗಳು, ಸುರಕ್ಷತೆಯ ಸೌಲಭ್ಯಗಳು, ವಾಹನ ನಿಲುಗಡೆಯ ಅವಕಾಶಗಳು, ಕ್ಯಾಂಟೀನ್ ವ್ಯವಸ್ಥೆಗಳು, ಒಂದು ಜಮಖಾನಾ ಸೌಲಭ್ಯ ಇದ್ದರೆ ಇನ್ನೂ ಒಳ್ಳೆಯದು. ಜನ ಅಥವಾ ಪ್ರೇಕ್ಷಕರು ಯಾವ ಯಾವ ಕಾರಣ ಕ್ಕಾಗಿ ಬರುತ್ತಾರೆ ಅನ್ನುವದು ಗೊತ್ತಾಗುವದಿಲ್ಲ. ರಂಗಭೂಮಿಗೆ ಎಲ್ಲ ತರಹದ ಜನ ಬೇಕು. ಬಂದ ಎಲ್ಲಾ ಜನ ಪ್ರೇಕ್ಷಕರಾಗಬೇಕು. ಪ್ರೇಕ್ಷಕರು ಜನ ರಾಗಿ ಅಭಿಪ್ರಾಯ ಕೊಟ್ಟಾಗಲೇ ನಾಟಕ ಅಥವಾ ರಂಗಕೃತಿಯ ಸಾರ್ಥಕತೆ ಸಾಧ್ಯ. ಇಷ್ಟೆಲ್ಲ ನೋಡು ವದು, ಮಾಡುವದು ಒಬ್ಬರಿಂದ ಅಥವಾ ಹತ್ತು ಹಲವು ಕೆಲಸ ಮಾಡುವ ಇಲಾಖೆಗಳಿಂದ ಸಾಧ್ಯವೇ ಅನ್ನೋದು  ಕಠಿಣವೇ ಸರಿ. 

ಅದಕ್ಕಾಗಿ ಸಮಾನ ಮನಸ್ಕರಾದ ನಾಟಕ ಕ್ಷೇತ್ರಗ ಳಲ್ಲಿ ಜ್ಞಾನ ಅನುಭವ ಹೊಂದಿದ ವಿವಿಧ ಶಿಸ್ತಿಯ ಕ್ಷೇತ್ರಗಳಿಂದ ಪರಿಣಿತರನ್ನು ಆಯ್ಕೆ ಮಾಡಿ  ಇಡೀ ರಾಜ್ಯಕ್ಕೆ ಒಂದು ರಂಗಮಂದಿರ ನಿಯಂತ್ರಣ ಪ್ರಾಧಿಕಾರ ರಚಿಸಿದರೆ ಒಳ್ಳೆಯದು. ಅದು ರಾಜ್ಯ ದಲ್ಲಿರುವ ಎಲ್ಲ 12 ಪ್ರಕಾರಗಳ  ರಂಗಮಂದಿರ ಅಥವಾ ರಂಗಮಂದಿರಗಳು ಅಂತ ಕರೆಯಬಹು ದಾದ, ಮಾರ್ಪಾಡಿಸಬಲ್ಲ ಎಲ್ಲ ಕಟ್ಟಡಗಳನ್ನು ಪರಿಶೀಲಿಸಿ  ತನ್ನ ಅಡಿಯಲ್ಲಿ ಬರುವಂತೆ ಶಾಸನ ಭದ್ದ ವ್ಯವಸ್ಥೆಯನ್ನು ಮಾಡಿ ವರ್ಷದ ಉದ್ದಕ್ಕೂ 365 ದಿನಕಾಲ ಆ ಸ್ಥಿರಾಸ್ತಿ ಉಪಯೋಗಕ್ಕೆ ಬರು ವಂತೆ  ವಿಚಾರ, ಯೋಜನೆ ಮಾಡಿ ವಿಶೇಷವಾದ  ಪ್ರಾಧಿಕಾರ ರಚಿಸಿದರೆ ಅದು ಎಲ್ಲ ತರಹದ ಪ್ರದರ್ಶಕ ಕಲೆಗಳಿಗೆ  ಚರ ನೆಲೆ ನೀಡಿದಾಗ ಒಂದು ವಿಶೇಷವಾದ ಸಾಂಸ್ಕೃತಿಕ ವಾತಾವರಣ ನಿರ್ಮಿಸುತ್ತದೆ ಅನ್ನುವದು ಖಂಡಿತ.ಅಷ್ಟೇ ಅಲ್ಲ, ರಾಜ್ಯದ ಹೆಚ್ಚಿನ ಕಲಾವಿದರು ತಮ್ಮ ತಮ್ಮ ಜೀವನೋಪಾಯದ ಮಾರ್ಗಗಳನ್ನು, ಹೊಸ ಉದ್ಯೋಗ ಅವಕಾಶಗಳನ್ನು ತಮ್ಮ ಪ್ರತಿಭೆ, ಕೌಶಲ್ಯಗಳಿಗೆ ಅನುಗುಣವಾಗಿ ಪಡೆಯುವದರಲ್ಲಿ ಸಂಶಯವಿಲ್ಲ.

ಧಾರವಾಡ ಜಿಲ್ಲೆಯೊಂದನ್ನೇ ಆಧಾರವಾಗಿ ಹೇಳುವದಾದರೆ  15000 ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾವಿದರು ಇದ್ದು, ಅದನ್ನೇ ರಾಜ್ಯಕ್ಕೆ ವಿಸ್ತರಿಸಿದರೆ 3 ಕೋಟಿ ಮೀರಬಹುದು ಎಂದು ಅಂದಾಜಿಸಬಹುದಾಗಿದೆ. ಇಷ್ಟು ಜನರಿಗೆ  ವರ್ಷ ವಿಡಿ ಸಾಂಸ್ಕೃತಿಕ ಚಟುವಟಿಕೆ ಸಮಗ್ರವಾಗಿ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ರಂಗಮಂದಿರಗಳನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸಿದರೆ ಖಂಡಿತವಾಗಿ ಹೊಸ ಉದ್ಯೋಗ ಅವಕಾಶ  ಸೃಷ್ಟಿಗೆ ಅನುಕೂಲ ಮತ್ತು  ಜನತೆಗೆ ಸಾಂಸ್ಕೃತಿಕ ಭಾಗ್ಯವೂ ಹೌದು.

ರಂಗಮಂದಿರಳನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸಿದರೆ  ಖಂಡಿತವಾಗಿ ಹೊಸ ಉದ್ಯೋಗ ಅವಕಾಶ  ಸ್ರಷ್ಟಿಗೆ ಅನುಕೂಲ ಮತ್ತು  ಜನತೆಗೆ ಸಾಂಸ್ಕೃತಿಕ ಭಾಗ್ಯವೂ ಹೌದು. ಅಷ್ಟೇ ಅಲ್ಲದೆ  ಪ್ರಸ್ತುತ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಆಶಯಗಳು ಈಡೇರುತ್ತವೆಯನ್ನುವದರಲ್ಲಿ ವಿಶ್ವಾಸ ಇದೆ.. ಹಳೆಯ ಇತಿಹಾಸ ಅಂತ ಇದ್ದು ದನ್ನ  ಮರೆಸಿ, ಹೊಸ ನಿಜ ಇತಿಹಾಸ ರಚಿಸಿ ಜನ ಮಾನಸದಲ್ಲಿ ಸಂಪೂರ್ಣವಾಗಿ ಬೇರೂರಿ ಬೆಳೆಸ ಬೇಕೆಂದರೆ ಎಲ್ಲ ಕಲಾ ಮಾದ್ಯಮಗಳಲ್ಲಿಯ ಕಲಾವಿದರಿಗೆ  ವರುಷವಿಡೀ ಅವಕಾಶ, ಅತ್ಯಂತ ಸುಲಭ ಕೈಗೆ ಎಟುಕವ ಹಾಗೆ ರಂಗ ಮಂದಿರಗಳ ಲಭ್ಯತೆ ಆದರೆ ಕಲಾವಿದರು ಸೌಲಭ್ಯಗಳ ಸದುಪ ಯೋಗ ಪಡೆಯುತ್ತಾ ಹೋದಂತೆ ವ್ಯವಸ್ಥೆಯ ಗುಣಗಾನ ಆಗುತ್ತಾ ಹೊಸಸಾಂಸ್ಕೃತಿಕ ಇತಿಹಾಸ ಸೃಷ್ಟಿ ಆಗುವದರಲ್ಲಿ ಸಂಶಯವಿಲ್ಲ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ   ಬ್ರಿಟಿಷರ ವಿರುದ್ಧ ಅರಿವು ಮೂಡಿಸಲು ಎಲ್ಲ ಜನಪರ ಕಲಾ ಪ್ರಕಾರಗಳ ಉಪಯೋಗ ಹೆಚ್ಚು ಹೆಚ್ಚು ಆಗಿತ್ತು ಅನ್ನುವದು ಗೊತ್ತಿದ್ದ ಸಂಗತಿ. ಜಾನಪದದ ಮೂಲಕವೇ ಗ್ರಾಮೀಣ ಸಂಸ್ಕೃತಿ ಮತ್ತುಆಗ ರೂಪುಪಡೆಯು ತ್ತಿದ್ದ ನಗರ ಸಂಸ್ಕೃತಿಗಳ ಒಂದು  ಆರೋಗ್ಯ ಪೂರ್ಣ ಸಿದ್ಧಾಂತ ಜನಮಾನಸದಲ್ಲಿ  ಅಚ್ಚಳಿ ಯದೆ ಉಳಿಯಲು ಸಾಧ್ಯ.

ಇದೆಲ್ಲಾ ಸಾಧ್ಯವಾಗು ವದು ಮತ್ತು ಇನ್ನೂ ಅರ್ಥ ಪೂರ್ಣವಾಗಬೇಕೆಂದರೆ ರಂಗ ಮಂದಿರ ಪ್ರಾಧಿ ಕಾರ ಅಸ್ತಿತ್ವಕ್ಕೆ ಬಂದಾಗಲೇ ಸಾಧ್ಯ. ಅದು ಹೇಗೆ  ಯಾವ ರೀತಿಯಲ್ಲಿ ಜಾರಿಗೆ ತರಬೇಕು ಅನ್ನುವು ದಕ್ಕೆ ಮುಖ್ಯವಾಗಿ ಸರ್ಕಾರ ಇಂತಹದೊಂದು ಪರಿಕಲ್ಪನೆಯನ್ನು ಜಾರಿಗೆ ಶಾಸನಭದ್ಧವಾಗಿ ತರುವ ಮನಸ್ಸು ಮಾಡಬೇಕು  ಅಷ್ಟೇ ಅಲ್ಲ, ಅದಕ್ಕೆ ಆರಂಭದಲ್ಲಿಯೇ ಉತ್ತಮ ಪ್ರತಿಭಾವಂತ ರ ಸಾರಥ್ಯ ಒದಗಿಸಬೇಕು. 

(ಸಶೇಷ)

 ಅರವಿಂದ‌ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ