ಬಿಡುಗಡೆಗೆ ಸಿದ್ಧವಾಗಿರುವ ನಾಟಕ-

“ಒಂದು ಸೇರು ಮದ್ಯ; ಅರೆಸೇರು ಮಾಂಸ” ಎಂಬ ಕುತೂಹಲಭರಿತವಾದ ಶೀರ್ಷಿಕೆಯೊಂದಿಗೆ ಜೀವತಳೆದಿರುವ ಜಗದೀಶ ಹಾದಿಮನಿಯವರ ಕೃತಿಯು ಒಂದೇ ಗುಕ್ಕಿಗೆ ತೀರಿಸಬಹುದಾದ ವಾಮನಾಕಾರದ ಆಕರ್ಷಕ ಕೃತಿ.

ಮೊಘಲ್ ಸಾಮ್ರಾಜ್ಯದ ದೊರೆ ಜಹಾಂಗೀರ್ ಹಾಗೂ ಮೆಹರುನ್ನೀಸಾಳ ನಡುವಿನ ಪ್ರೇಮದ ಬುತ್ತಿಗೆ ಜೊತೆಯಾದ ಧರ್ಮ, ರಾಜಕಾರಣ, ಪ್ರಭುತ್ವ, ಸೇಡು, ಕೊಲೆ, ಮೋಸ, ತಂತ್ರ-ಕುತಂತ್ರ ಹಾಗೂ ಬಾಡದ ಬತ್ತದ ಅಮರತ್ವದ ಪ್ರೇಮಕಥಾ ನಕವನ್ನೊಳಗೊಂಡ ಕೃತಿ.

ಗದ್ಯಮಾದರಿಯಲ್ಲಿ ಕೃತಿ ಎದುರಾದರೂ ಕೂಡ ‘ಪ್ರೇಮದ ಅಮಲಿನಲ್ಲಿರಯವವರಿಗೆ ಸುರೆ ಜೊತೆ ಯಾದಂತೆ’ ಕವಿತ್ವದ ನವುರಾದ ಸಾಲುಗಳು, ಉಪಮೆ, ನಾಣ್ಣುಡಿ – ಜಾಣ್ಣುಡಿಗಳು ಓದುಗರೆದೆ ಗೆ ಅಪ್ಪಳಿಸುತ್ತಲೇ ಹೋಗುತ್ತವೆ.

ಇಪ್ಪತ್ತನೇ ಹೆಂಡತಿಯಾಗಿ ಬಂದು, ಬಸವಳಿದ ಪ್ರೇಮಿಗೆ ಔಷಧವನಿಡುವುದರ ಜೊತೆಗೆ ಹದಿನಾ ರು ವರ್ಷಗಳ ಕಾಲ ಮೊಘಲ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿದ್ದ ಮೆಹರುನ್ನೀಸಾಳ ಕಥೆಯ ಪೂರ್ವಾರ್ಧವನ್ನು ಸಚಿತ್ರಕವಾಗಿ ತೆರೆದಿಡುವ ಈ ನಾಟಕ ಕೃತಿಯು ಹತ್ತು ದೃಶ್ಯಗಳಲ್ಲಿ (84 ಪುಟ) ಸಚಿತ್ರಕವಾಗಿ ಅರಳಿದ ಕೃತಿ.

ಉದಯೋನ್ಮುಖ ನಾಟಕಕಾರನ ಅದ್ಭುತ ಶಬ್ದ ಚಮತ್ಕಾರ ಬಹುಬೇಗ ಆಪ್ತವಾಗುವುದಂತೂ ಸತ್ಯ.

ಅಭಿನಂದನೆ ಪ್ರೀತಿಯ ಗೆಳೆಯನಿಗೆ.ಪ್ರತಿಗಳಿಗಾಗಿ ಸಂಪರ್ಕಿಸಿ:9686019177

 ಎಂ.ಡಿ.ಚಿತ್ತರಗಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,‌ಮುದಗಲ್
ಜಿ:ರಾಯಚೂರು