ದೇವಾಲಯಗಳಲ್ಲಿ ಹೊಸ ಸ್ವರೂಪವನ್ನುನೀಡಿದ ವರು ಹಲವು ಅರಸು ಮನೆತನದವರಾದರೂ ಪರಕೀಯರ ಆಕ್ರಮಣಕ್ಕೆ ತುತ್ತಾದ ನಂತರ ಹಲವು ದೇವಾಲಯಗಳನ್ನು ವಿಜಯನಗರದ ಅರಸರು ಸಂರಕ್ಷಣೆ ಮಾಡಿದಲ್ಲದೇ ಹಲವು ದೇವಾಲಯಗಳನ್ನ ನಿರ್ಮಿಸಿದರು.  ಹಂಪೆಯ ಅವರ ವೈಭವದ ಕಲಾ ಲೋಕದಂತೆ ಹಲವೆಡೆ ಅವರ ಅದ್ಭುತ ದೇವಾಲಯಗಳ ನಿರ್ಮಾಣ ನೋಡಬಹುದು. ಅಂತಹ ಸುಂದರ ನಿರ್ಮಾಣದ ದೇವಾಲಯವೊಂದು ಕರ್ನಾಟಕದ ಸನಿಹದಲ್ಲಿ ರುವ ಹಿಂದೂಪುರ ತಾಲ್ಲೂಕಿನ ಲೇಪಾಕ್ಷಿಯಲ್ಲಿದೆ.

ಇನ್ನು ಕೂರ್ಮಗಿರಿ ಎಂದೇ ಪ್ರಸಿದ್ದಿ ಪಡೆದಿದ್ದ ಇಲ್ಲಿನ ಬೆಟ್ಟದಲ್ಲಿ ಸುಮಾರು 15 – 16 ನೇ ಶತಮಾನದಲ್ಲಿ ಅಚ್ಯುತರಾಯನ ಕಾಲದಲ್ಲಿ ವಿರುಪಣ್ಣ ಇಲ್ಲಿನ ವೀರಭದ್ರ ಮೂರ್ತಿಯನ್ನ ಸ್ಥಾಪಿಸಿದ ಎನ್ನಲಾಗಿದೆ. ವಿಜನಗರದ ಕೊನೆಯ ಭಾಗದಲ್ಲಿ ಇಲ್ಲಿನ ಸಮೀಪದ ಪೆನುಗೊಂಡ ಅವರ ರಾಜಧಾನಿಯಾಗಿತ್ತು. ಇನ್ನು ವೀರಣ್ಣ ಇಲ್ಲಿನ ದೇವಾಲಯಕ್ಕೆ ಹಲವು ಗ್ರಾಮಗಳ ಆದಾಯವನ್ನು ದತ್ತಿ ನೀಡಿದ ಉಲ್ಲೇಖವಿದೆ. ಇನ್ನು ಶಾಸನಗಳಲ್ಲಿ ಕೂರ್ಮಶೈಲ ಎಂದು ಲೇಪಾಕ್ಷಿಯನ್ನು ಬಣ್ಣಿಸಲಾಗಿದೆ.

ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೊಗುತ್ತಿರುವಾ ಗ ಇಲ್ಲಿನ ಕೂರ್ಮಗಿರಿಯಲ್ಲಿ ಜಟಾಯು ಪಕ್ಷಿ ಆಡ್ಡಿ ಮಾಡುತ್ತದೆ. ರಾವಣನು ಇಲ್ಲಿ ಅದರ ರೆಕ್ಕೆ ಗಳನ್ನು ತುಂಡರಿಸಿ ಮುಂದೆ ಸಾಗುತ್ತಾನೆ. ನಂತರ ಬಂದ ಶ್ರೀರಾಮನು ಜಟಾಯುವನ್ನು ನೋಡಿ ಲೇ ಪಕ್ಷಿ ಎಂದು ಉಚ್ಚರಿಸುತ್ತಾನೆ. ಕ್ರಮೇಣ ಇದು ಲೇಪಾಕ್ಷಿ ಎಂದಾಗಿದೆ ನಂಬಿಕೆ.

ವೀರಭದ್ರ ದೇವಾಲಯ

ಇನ್ನು ಇಲ್ಲಿನ ಪ್ರಸಿದ್ಧ ವೀರಭದ್ರ ದೇವಾಲಯದ ಗರ್ಭಗುಡಿ, ನವರಂಗ, ರಂಗಮಂಟಪ,ಅಪೂರ್ಣ ವಾದ ಕಲ್ಯಾಣ ಮಂಟಪ ಹಾಗು ವಿಶಾಲವಾದ ಪ್ರಕಾರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾದ ವೀರಭದ್ರನ ಮೂರ್ತಿ ಇದೆ. ಇನ್ನು ಇಲ್ಲಿನ ಕಂಭದಲ್ಲಿನ ಗಜಾಸುರ ಸಂಹಾರ ಶಿಲ್ಪ, ನಾಟ್ಯ ಗಣಪತಿ, ದುರ್ಗಾದೇವಿಯ ಶಿಲ್ಪಗಳಿವೆ.

ಇನ್ನು ನವರಂಗದಲ್ಲಿ ಪಾಪನಾಥೇಶ್ವರ,ವಿಷ್ಣುವಿಗೆ ಪ್ರತ್ಯೇಕ ದೇವಾಲಯವಿದ್ದು ದುರ್ಗಾದೇವಿಯ ಸುಂದರವಾದ ಶಿಲ್ಪವಿದೆ. ಇನ್ನು ಗರ್ಭಗುಡಿಯಲ್ಲಿ ನ ಸುಮಾರು 24 ಅಡಿ ಉದ್ದದ ವೀರಭದ್ರನ ಸುಂದರ ವರ್ಣ ಚಿತ್ರವಿದೆ.  ಇನ್ನು ಇಲ್ಲಿನ ರಂಗ ಮಂಟಪ ಅದ್ಭುತ ಕಲಾಕೃತಿ.ಸುಮಾರು 70 ಕಂಭ ಗಳಿದ್ದು, ಪ್ರತಿ ಕಂಭಗಳಲ್ಲಿ ಶಿವನ ಸುಂದರವಾದ ಮೂರ್ತಿಯ ಬೃಹತ್ತಾದ ಕೆತ್ತೆನೆ ನೋಡಬಹುದು. ಇಲ್ಲಿನ ಕಂಭಗಳಲ್ಲಿ ಭಿಕ್ಷಾಟನ ಮೂರ್ತಿ, ಭೂ ಕೈಲಾಸದ ಕಥೆ, ಗಜಾಸುರ ಮರ್ಧನ ಮೂರ್ತಿ, ಕಂಕಾಳ ಮೂರ್ತಿ, ಕಿರಾತಾರ್ಜುನೀಯ,  ನಾಟ್ಯ ಗಣಪತಿ, ಭಕ್ತ ಮಾರ್ತಂಡೇಯ, ಮೃದಂಗ ನುಡಿ ಸುತ್ತಿರುವ ನಂದೀಶ್ವರನ ಶಿಲ್ಪಗಳು ಮನಮೋಹ ಕವಾಗಿದ್ದು ನೋಡಲೇಬೇಕಾದ ಶಿಲ್ಪಗಳು.

ಇನ್ನು ದೇವಾಲಯದ ಅಧ್ಬುತ ಕಂಭಗಳಲ್ಲಿ ಇರು ವ ಅಂತರಿಕ್ಷ ಸ್ಥಂಭ, ಬಹುತೇಕ ನೆಲಭಾಗದಿಂದ ಸ್ಪರ್ಶಿಸಿದೇ ಇರುವ ಈ ಕಂಭ ವಾಸ್ತು ಕಲ್ಪನೆಗೆ ಸಾಕ್ಷಿ.ಇನ್ನು ಇಲ್ಲಿನ ದೇವಾಲಯದ ಹಿಂಭಾಗದಲ್ಲಿ ಬಂಡೆಯ ಮೇಲೆ ಏಳುಹೆಡೆಯ ಬೃಹತ್ತಾದ ನಾಗ ಲಿಂಗವಿದೆ.

ಇಲ್ಲಿಂದ ಎದುರಿಗೆ ಇಲ್ಲಿನ ದೊಡ್ಡದಾದ ನಂದಿಯ ನ್ನ ನೋಡಬಹುದು. ಇನ್ನು ಪಕ್ಕ ದಲ್ಲಿ ಸುಮಾರು ಆರು ಆಡಿ ಎತ್ತರದ ದೊಡ್ಡದಾದ ಗಣಪತಿಯ ಶಿಲ್ಪವಿದೆ. ಇಲ್ಲಿ ಬೇಡರ ಕಣ್ಣಪ್ಪನ ಕೆತ್ತೆನೆಯೂ ಇದೆ. ಇನ್ನು ಮೇಲಿನ ಭಾಗದಲ್ಲಿ ಚಿತ್ರಿಸಲಾದ ಚಿತ್ರಗಳು ಅಪುರೂಪದ್ದು. ನೈಸರ್ಗಿಕ ಬಣ್ಣಗಳನ್ನ ಬಳಸಿ ಮನುನೀತಿ,ಚೋಳನ ಕಥೆ,ಭಕ್ತಸಿರಿಯಾಳ ಮುಂತಾದ ಕೆತ್ತೆನೆ ನೋಡಬಹುದು.

ಭವ್ಯವಾದ ಕಲ್ಯಾಣ ಮಂಟಪ

ಇಲ್ಲಿನ ಭವ್ಯವಾದ ಕಲ್ಯಾಣ ಮಂಟಪ ಅಪೂರ್ಣ ವಾಗಿದೆ. ಇನ್ನು ಮಂಟಪ ಪೂರ್ಣವಾಗದಿದ್ದರೂ ಇಲ್ಲಿನ ಕಂಭಗಳಲ್ಲಿನ ಕೆತ್ತೆನೆ ಮಾತ್ರ ಅತ್ಯಂತ ಕಲಾತ್ಮಕ, ಇಲ್ಲಿ ಪೌರೋಹಿತ್ಯ ವಹಿಸಿದ ಬ್ರಹ್ಮ, ಧಾರೆಯೆರೆಯಲು ಸಿದ್ದನಾಗಿರುವ ವಿಷ್ಣು, ಪಾರ್ವತಿಯ ತಂದೆ -ತಾಯಿ, ದೇವೇಂದ್ರ, ಸಪ್ತ ಋಷಿಗಳು ಅತ್ಯಂತ ಸುಂದರವಾಗಿದೆ. ಇನ್ನು ಹಿಮವಂತ.  ಕನ್ಯಾದಾನ ಮಾಡುವುದು, ಶಿವ- ಪಾರ್ವತಿಯರ ವಿವಾಹದ ಭಾಗ ಹಾಗು ಪುರೋ ಹಿತರು ಆಶಿರ್ವಾದ ಮಾಡುತ್ತಿರುವುದು, ಎರಡು ಮಂಗಗಳಲ್ಲಿ ನಾಲ್ಕು ಮಂಗಗಳು, ಒಂದೇ ಗೋವಿನ ಶರೀರಕ್ಕೆ ಮೂರು ಮುಖ ಕೆತ್ತೆನೆ ಮಾಡಿ ಮೂರು ಗೋವಿನಂತ ಕಾಣುವ ಕೆತ್ತೆನೆ ಇದೆ. ಇನ್ನು ಮಂಟಪದ ಕೆಳ ಭಾಗದಲ್ಲಿ ಪಾದದ ಕೆತ್ತೆನೆ ಇದ್ದು, ಇದನ್ನು ಸೀತಾಮಾತೆಯ ಪಾದ  ಎನ್ನಲಾಗಿದೆ. ಇನ್ನು ಇಲ್ಲಿನ ಕೆತ್ತೆನೆಗಾರರು ಊಟ ಮಾಡಲು ಬಳಸಿದ ತಟ್ಟೆಗಳು  ಅನ್ನಲಾದ ಕೆತ್ತೆನೆ ಇದೆ.ಇನ್ನು ಪ್ರಾಕಾರದಲ್ಲಿನ ಮಂಟಪಗಳು ಹಾಗು ಅದರಲ್ಲಿನ ಕಂಭಗಳು ಅಲ್ಲಲ್ಲಿ ಕಾಣುವ ಕೆತ್ತೆನೆ ಗಳಿದ್ದು ಹೊಸದಾಗಿ ನಿರ್ಮಿಸಿದ ಶಿಖರವಿದೆ.

ನಂದಿ

ಇನ್ನು ದೇವಾಲಯದ ಅನತಿಯ ದೂರದಲ್ಲಿ ಒಂದೇ ಬಂಡೆಯಲ್ಲಿ ಕೆತ್ತಲಾದ ಬೃಹತ್ ನಂದಿ ಯಿದ್ದು ಸುಮಾರು 15 ಆಡಿ ಎತ್ತರ ಹಾಗೂ 27 ಆಡಿ ಅಗಲವಿದ್ದು ಭಾರತದಲ್ಲಿನ ದೊಡ್ಡದಾದ ನಂದಿಯಲ್ಲಿ ಇದು ಒಂದು.  ನಾಗಲಿಂಗೇಶ್ವರನಿಗೆ ಮುಖ ಮಾಡಿದಂತೆ ಇರುವ ಈ ನಂದಿ ಘಂಟಾ ಸರ, ಕಿವಿಯ ಕುಚ್ಚು, ಸುಂದರವಾಗ ಮುಖ, ನಂದಿಯ ಮೇಲಿನ ವಸ್ತ್ರ ಸುಂದರವಾಗಿದೆ.

ಇನ್ನು ಸಮೀಪದಲ್ಲಿ ಬೆಟ್ಟದ ಮೇಲೆ ಜಟಾಯು ಮೋಕ್ಷ ಸ್ಥಳದಲ್ಲಿ ಮಂಟಪ ಹಾಗು ಬೃಹತ್ ಜಟಾ ಯುವಿನ ಪ್ರತಿಕೃತಿಯನ್ನ ಹೊಸದಾಗಿ ನಿರ್ಮಿಸ ಲಾಗಿದೆ.

ತಲುಪುವ ಬಗ್ಗೆ : ಲೇಪಾಕ್ಷಿ ಹಿಂದೂಪುರದಿಂದ ಸುಮಾರು 12 ಕಿ ಮೀ ದೂರದಲ್ಲಿದ್ದು ಬೆಂಗಳೂ ರಿನಿಂದ 120 ಕಿ ಮೀ, ಹಾಗು ಪಾವಗಡದಿಂದ ಸುಮಾರು 65 ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್. ಬೆಂಗಳೂರು