ಅವಕಾಶವನು ಬಾಚುತ
ಭರವಸೆಯ ಹೊಂದುತ
ಕಲಿಕೆಯ ಪರಿಶ್ರಮದಿ
ಬಾಳ ಬೆಳಗಿಸೋಣ.
ಆತ್ಮ ವಿಸ್ವಾಸದಿ ನಡೆಯೋಣ
ಹಂತ ಹಂತದಿ ಏರೋಣ
ದಿಗಂಂತದ ಕನಸು ಹೊತ್ತು
ಮತಿಯ ಸುಧಾರಿಸೋಣ.
ಜಂಜಡದಿ ಎದೆ ಗುಂದದೇ
ಸದೆ ಬಡಿಯುವವರ ಕಡೆಗಣಿಸಿ
ತಗಾದೆ ತೆಗೆಯುವವರ ಹುಟ್ಟಡಗಿಸಿ
ಸಂಬಂಧಕೆ ಹೊಸ ಆಕಾರ ನೀಡೋಣ.
ಸ್ವಾಭಿಮಾನದಿ ಚಲಿಸುತ
ಆತ್ಮ ಸಂಯಮವ ಅನುಸರಿಸಿ
ಗುರುತರ ಜವಾಬ್ದಾರಿಯಲಿ
ಸರತಿ ಸಾಲಿನಲಿ ಹೆಜ್ಜೆ ಹಾಕೋಣ.
ಕಾಲಹರಣಕೆ ಹಿಡಿತ ಮಾಡಿ
ಮಾನ ಹರಣರ ನಡುವೆ
ಸಮ್ಮಾನಕೆ ಭಾಜನರಾಗುತ
ಬಿಗುಮಾನವ ಹಿಮ್ಮೆಟ್ಟಿಸೋಣ.
ಪ್ರಾಮಾಣಿಕ ಪ್ರಯತ್ನದಿ
ಅನುಸರಣೆಯ ಮಾಡುತ
ಆಧರಣೆಯ ಅರಸುತ
ನಿಶ್ಕಲ್ಮಶದ ಭಾವನೆ ಹೊಂದೋಣ.
ಪ್ರಗತಿ ಪಥಕೆ ದಾಪುಗಾಲು
ಸ್ಥಿತಿ ಗತಿಯ ತಿಳಿಯುತ
ಮಂಕು ಕವಿಸುವ ಮೋಡಿಗಾರರಿಗೆ
ತಕ್ಕುದಾದ ಪಾಠ ಕಲಿಸೋಣ.
ಬದುಕಿದು ಬದಲಾವಣೆ ಆಗರ
ಹೊಂದಾಣಿಕೆಯ ಮಾಡಿಕೊಳ್ಳುತ
ಕುಂದು ಕೊರತೆಯ ಮರೆ ಮಾಚಿ
ಸಂದಾನದ ಮಾತು ಆಡೋಣ.
ಒಪ್ಪು ಓರಣದ ರಂಗೋಲಿ ಬಿಡಿಸಿ
ಒಪ್ಪಂದದ ಒಡಂಬಡಿಕೆಯಲಿ
ಸುಪ್ಪತ್ತಿಗೆ ನಡುವಲಿ
ದೀನ ಜನರಿಗೆ ಸಹಾಯ ಹಸ್ತ ಚಾಚೋಣ
ಬಾನ ಚಂದಿರನ ನಗುವ ಹರಡೋಣ.
ರೇಷ್ಮಾ ಕಂದಕೂರ,
ಶಿಕ್ಷಕಿ, ಸಿಂಧನೂರ