ಘಾಢ ಮೌನದೊಳಗೆ
ಮಾತು ಮಿಸುಕಾಡಿದಾಗ,,,
ಅದ್ರಶ್ಯದಲ್ಲಿ,ದ್ರಶ್ಯಕ್ಕಾಗಿ
ತಡಕಾಡಿದಾಗ,,,,
ದುಃಖದಲ್ಲಿ,ಸುಖಕ್ಕಾಗಿ
ಮಿಡುಕಾಡುವಾಗ,,,,
ನೋವಿನಲ್ಲಿ,ನಲಿವು
ನರಳಿದಾಗ,,,,,
ಕತ್ತಲಲ್ಲಿ,ಬೆಳಕಿಗಾಗಿ
ಪರದಾಡುವಾಗ,,,,-
ಹುಟ್ಟಿದ ಕವಿತೆ
ಎಂದಿಗೂ ಸಾಯುವದಿಲ್ಲ.
ನಿತ್ಯಸಾಯುವ –
ಹಗಲಿನಂತೆ
ಮತ್ತೆ,ಮತ್ತೆಹುಟ್ಟುತ್ತದೆ-
ನಾನಳಿದರೂ
ಉಳಿಯುವ
‘ನನ್ನಂತೆ’
ಅಬ್ಳಿ ಹೆಗಡೆ, ಹೊನ್ನಾವರ