ಮಾನವ ಸಂಪನ್ಮೂಲ,ಸಾಧನೆಯ ಪ್ರೇರಣೆಯ ಮೂಲಗಳು ಆರ್ಥಿಕ ಸಂಪನ್ಮೂಲಗಳ ಕ್ರೋಢೀ ಕರಣದ ಬಗ್ಗೆ ಸ್ವಲ್ಪು ಚಿಂತನೆ ಮಾಡಿದ ನಂತರ ಈಗ ರಂಗಮಂದಿರ ಮತ್ತು ರಂಗಭೂಮಿಯ ಆಂತರಿಕ ಸೌಲಭ್ಯಗಳ ಬಗ್ಗೆ ವಿಚಾರಮಾಡುವದು ಸಂಘಟನೆಯ ಅವಶ್ಯಕ ಭಾಗವಾಗುತ್ತದೆ. ರಂಗ ಮಂದಿರ ಹೇಗೆ ಇರ್ಬೇಕು ಮತ್ತು ಪ್ರಕಾರಗಳು, ವಿನ್ಯಾಸಗಳನ್ನು ಭರತಮುನಿಯು ತನ್ನ ನಾಟ್ಯ ಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರಾದರೂ ಸಹಿತ ನಮ್ಮ ಇಂಜನೀಯ ರಿಂಗ್ ಕಾಲೇಜುಗಳಿಗೆ ಅದನ್ನು ಸುಲಭವಾಗಿ ಬೋಧಿಸಲಾಗುತ್ತಿಲ್ಲ ಮತ್ತುಹಳೆಯದು ಅನ್ನುವ ಅಸಡ್ಡೆ ಹಾಗೂ ಬೋಧನೆ ಮಾಡಿದಲ್ಲೆಲ್ಲ ಅನುಭವ ಇಲ್ಲದ ಕಾರಣ ಏನಾಗಿದೆ ಅಂದರೆ ಸಮಕಾಲೀನ ಅಗತ್ಯತೆ ಮತ್ತು ಪೋಷಣೆಗೆ, ಪ್ರೋತ್ಸಾಹಕ್ಕೆ ಬೇಕಾದ ಅಂಶಗಳೇ ಅಭಿಯಂತರ ರಿಗೆ, ವಾಸ್ತುಶಿಲ್ಪಿಗಳಿಗೆ, ಆಡಳಿತಗಾರರಿಗೆ ಅರಿವೇ ಆಗುವದಿಲ್ಲ.

ಹೀಗಾಗಿ ಯಾರು ಎಷ್ಟೇ ಜಿಗದಾಡಿದರೂ ಸಾರ್ವಜನಿಕರಿಗೆ ಕಲಾವಿದರಿಗೆ ಅವರು ಬಯಸು ವ ಕಡಿಮೆ ದರದ ಹೆಚ್ಚು ಸೌಲಭ್ಯಗಳು ಇರುವ ಸ್ನೇಹಪರ ರಂಗಮಂದಿರಗಳು ಸಿಗುವುದೇ ಇಲ್ಲ. ಒಂದು ಒಳ್ಳೆಯದಿದ್ದರೆ ಹತ್ತು ತೊಂದರೆಗಳು, ಅಡ್ಡಿ ಆತಂಕಗಳು ಮತ್ತು ದೂರ, ಸಮೀಪ, ಉಸ್ತುವಾರಿ ನಿರ್ವಹಣೆ ಸಮಸ್ಯೆಗಳು,ಸುಸ್ಥಿರತೆ ಯ ಸಮಸ್ಯೆಗಳು ಇದ್ದದ್ದು ಮಾಮೂಲು. ಹೀಗಾಗಿ ಒಂದು ರಂಗಭೂಮಿ ಪ್ರಾಧಿಕಾರ ಬೇಕು ಅನಿಸುವಷ್ಟು ಅವಶ್ಯಕತೆಯಾಗಿದೆ. ಆದರೆ ಸರ್ಕಾ ರಗಳಾಗಲಿ ಅಕಾಡೆಮಿಗಳಾಗಲಿ ಅಷ್ಟೊಂದು ಲಕ್ಷ್ಯವನ್ನು ಗಂಭೀರವಾಗಿ ಹಾಕಿಲ್ಲ. ದರ್ಶಿನಿ ಹೊಟೇಲ್ ಗಳಿಂದ ಪಂಚತಾರಾ ಹೋಟೆಲು ಮತ್ತು ರಿಸಾರ್ಟ್ಗಳು ಇರುವಂತೆ ರಂಗ ಮಂದಿರ ಗಳಲ್ಲಿ ಹಲವು ನಾವೇ ಮಾಡಿಕೊಳ್ಳಬಹುದಾದ ವರ್ಗಿಕರಣ ಈ ಕೆಳಗಿನಂತೆ ಮಾಡಬಹುದಾಗಿದೆ:

ಅ)ರಂಗಭೂಮಿ ಯಲ್ಲಿ ಆಕ್ಟಿವ್ ಆಗಿ ಅನುಭವ ಪಡೆದುಕೊಂಡಿರುವರ ಆಡಳಿತದಲ್ಲಿ ಇರುವ/ ಇರದೇ ಇರುವ ರಂಗಮಂದಿರಗಳು.
ಬ)ಗ್ರಾಮೀಣ ಮತ್ತು ನಗರದ ರಂಗಮಂದಿರಗಳು
ಕ)ವಾತಾನುಕೂಲ ಮತ್ತು ಅಲ್ಲದ ರಂಗಮಂದಿರ ಗಳು.
ಡ)ಟೂರಿಂಗ್ ಕಂಪನಿ ರಂಗಮಂದಿರಗಳು
ಈ)ಪಂಚಾಯಿತಿ ನಗರಸಭೆ, ಸರ್ಕಾರ ಅಡಿಯಲ್ಲಿ ಬರುವ ರಂಗಮಂದಿರಗಳು.
ಫ್)ಖಾಸಗಿ ಆಡಳಿತ ಮಂಡಳಿಯ ಬರುವ ರಂಗ ಮಂದಿರಗಳು
ಗ)ಕಲ್ಯಾಣ ಮಂಟಪಗಳು.

ಹ)ಸಮುದಾಯ ಭವನಗಳು.
ಕ) ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಬರುವ ರಂಗಮಂದಿರಗಳು
ಲ)ಖಾಸಗಿ ಮನೆಯಲ್ಲಿಯ ರಂಗಮಂದಿರಗಳು.

ಮ)ಬಯಲು ರಂಗಮಂದಿರಗಳು ಎಲ್ಲಿಯಾದರು ಯಾವದೇ ಆಡಳಿತ ವ್ಯವಸ್ಥೆಗಳಲ್ಲಿ ಇರಬಹುದು.
ಮೇಲಿನ ಯಾವುದೇ ವರ್ಗದಲ್ಲಿ ಬರುವ ಯಾವುದೇ ರಂಗಮಂದಿರದಲ್ಲಿ ಅವಶ್ಯಕ ಸೌಲಭ್ಯಗಳು ಕೆಳಗಿನಂತೆ ಇರಬೇಕು.
1) ಕಟ್ಟಡಕ್ಕೆ ಉಪಯೋಗ ಮತ್ತು ಕಾರ್ಯ ಮುಕ್ತಾಯ ಪತ್ರ.
2)ಸರಿಯಾದ ಸಂಖ್ಯೆಯ ಮೂತ್ರಾಲಯ ಶೌಚಾಲಯಗಳು
3)ಪ್ರದರ್ಶನ ವೇದಿಕೆ ಮತ್ತು ಸಭಾಗ್ರಹ 40:60 ಅನುಪಾತದಲ್ಲಿ ಇದ್ದರೆ ಒಳ್ಳೆಯದು

4) ವೇದಿಕೆ ಎಡಬಲಗಳಲ್ಲಿ ಪ್ರಸಾಧನ ವ್ಯವಸ್ಥೆ ಸ್ತ್ರೀ ಪುರುಷರಿಗೆ ಪ್ರತ್ಯೇಕ ಇರುವದು ಅಲ್ಲಿ ಕಲಾವಿದ ಮೇಕಪ್ ಗೆ ಕುಳಿತಾಗ ಮುಖದಮೇಲೆ ಸಾಕಷ್ಟು ಬೆಳಕು, ವೇಷ ಬದಲಿಸಲು ಸಾಕಷ್ಟು ಅವಕಾಶವಿರಬೇಕು, ಅಲ್ಲಿ ಪ್ರತ್ಯೇಕ ಟಾಯ್ಲೆಟ್ಗಳು ಸಾಕಷ್ಟು ಇರ್ಬೇಕು.
5)ಪ್ರೇಕ್ಷಕರು ಕೂಡುವ ಕುರ್ಚಿಗಳು ಸಾಕಷ್ಟು ಗಟ್ಟಿ ಮತ್ತು ಎಲ್ಲರಿಗೂ ಕಾಣಲು ಬರುವಂತೆ ನೆಲದ ಪಾತಳಿ ಸುಲಭವಾಗಿ ನಡೆಯಲು ಬರುವಂತೆ ಇರ ಬೇಕು.

6)ಪ್ರೇಕ್ಷಕರುಕುರ್ಚಿಮೇಲೆ ಕುಳಿತೇ ನೋಡಬೇಕು ಅಂತಿಲ್ಲ, ನೆಲದ ಮೇಲೆ, ಚಾಪೆ ಮೇಲೆ ಕುಳಿತು ಕೂಡಾ ನೋಡಬಹುದು.
7)ಹೊರಗೆ ಹೋಗುವ ಬಾಗಿಲುಗಳು ಕತ್ತಲೆಯಲ್ಲಿ ಕೂಡಾ ಕಾಣುವ ಹಾಗೆ ಅಡೆತಡೆ ಇಲ್ಲದೆ ಅತ್ತ ಹೋಗುವ ಹಾಗೆ ಸರಿಯಾಗಿ ಇರ್ಬೇಕು.

8) ಪ್ರೇಕ್ಷಕ ಗ್ರಹದ ಹೊರಗೆ ಸಾಕಷ್ಟು ಸ್ಥಳಾವಕಾಶ ಇದ್ದು, ಅಲ್ಲಿ ಮುಂದಿನ ಕಾರ್ಯಕ್ರಮ ಮತ್ತು ಪ್ರತಿಯೊಬ್ಬನು ಪಾಲಿಸಬೇಕಾದ ನಿಯಮ ರೀತಿ- ರಿವಾಜ ಪೋಸ್ಟರ್ ರೂಪದಲ್ಲಿ ಹಚ್ಚಲು, ಸುಲಭ ಕಾಣುವ, ಓದುವ ರೀತಿ ಸೌಲಭ್ಯ ಇರ್ಬೇಕು.
9)ವೇದಿಕೆಗೆ ಹೊಂದಿದಂತೆ ವಿಂಗ್ ಗಳಾಚೆ ಕಾರ್ಪೆಂಟರಿ ವಿಭಾಗ ಇರುವದು ಸ್ವಾಗತಾರ್ಹ. ಅಷ್ಟೇ ಅಲ್ಲ,ವೇದಿಕೆಯಹಿಂದೆ ಟ್ರಕ್ ಸಹ ಬರುವ ಹಾಗೆ ದೊಡ್ಡ ಷಟರ್ಸ್ ಇರೋ ಹಿತ್ತಲ ಬಾಗಿಲು ಇರುವದು.
10) ಅಗ್ನಿ ಆಪತ್ತು ಸಂದರ್ಭಗಳಲ್ಲಿ ಸುಲಭ ನಿರ್ಗಮನ, ಪ್ರಥಮ ಚಿಕಿತ್ಸಾ ಸೌಲಭ್ಯ, ವಿಮಾ ಯೋಜನೆ, ರಿಹರ್ಸಲ್ ಹಾಲ್ ಗಳು, ವಾಹನ ನಿಲ್ಲಿಸಲು ಸ್ಥಳಗಳು ಅಲ್ಲಿಯೂ ಸಹ ಅಧಿಕೃತ ಪಾರ್ಕಿನವರಿಗೆ ಧ್ವನಿ ಅಥವಾ ಚಿತ್ರ ಬರುವಂತೆ ವ್ಯವಸ್ಥೆ.

11) ಅಲ್ಲೊಂದು ಚಹಾ/ಅಲ್ಪೋಪಹಾರದ ವ್ಯವಸ್ಥೆ ಮತ್ತು ಕೂತು ಹರಟೆ ಹೊಡೆಯಲು ನಾಟಕ,ಸಿನಿಮಾ ಚಿತ್ರಕಲೆ ಬಗ್ಗೆ ಚರ್ಚೆ ಮಾಡಲು ವ್ಯವಸ್ಥೆ ಇದ್ದರೆ ಅದೊಂದು ಪ್ರತಿಭಾ ಸಂಗಮ ಸ್ಥಳವಾಗುತ್ತದೆ.

12)ರಂಗಮಂದಿರದ ಒಳಗೆ ಪ್ರಾಂಗಣದಲ್ಲಿ ಹೊರಗೆ ರಂಗಭೂಮಿ, ಸಾಂಸ್ಕ್ರತಿಕ ಚುವಟಿಕೆಗ ಳಿಗೆ ಪೂರಕವಾದ ನೆಲಸ್ಪರ್ಶಿಯಾದ ಮನ ಸೆಳೆ ಯುವ ವಾತಾವರಣ.
13)ರಂಗ ಮಂದಿರದ ಹೊರಗೆ ಸುತ್ತ ಮುತ್ತ ದಿಕ್ಕು ವಿವರ ಸೂಚನಾ ಫಲಕಗಳು.
14)ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಚಟುವಟಿ ಕೆಗಳ ವಿವರ ಫಲಕಗಳು.
15)ಕಾರ್ಪೊರೇಟ್ ದೃಷ್ಟಿ ಇರುವ ಟಿಕೇಟು ಮತ್ತು ವಿವರ ನೀಡುವ, ಮುಂಗಡ ಬುಕ್ ಮಾಡುವ (ರಂಗ ಮಂದಿರ ಹಿಡಿದು)ಆಕರ್ಷಕ ಸ್ಥಳಾವಕಾಶ.

ಮೇಲೆ ಕಾಣಿಸಿದ ಸಾಮಾನ್ಯ ಅಂಶಗಳ ನಂತರ ರಂಗ ಮಂದಿರದ ಪ್ರಕಾರ ಅವುಗಳನ್ನು ವಿಶ್ಲೇಷಿ ಸುವದು ಉತ್ತಮ ರಂಗಮಂದಿರದ ಪ್ರಾಧಿಕಾರ ಇದ್ದರೆ ಈ ಸಾಮಾನ್ಯ ಅಂಶಗಳಷ್ಟೇ ಅಲ್ಲ. ಅವು ಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲ ವಾಗುತ್ತದೆ.ರಂಗ ಮಂದಿರದ ಪ್ರಾಧಿಕಾರ ಇದ್ದರೆ ಎಲ್ಲೋ ಒಂದು ಕಡೆ ಸಮಸಂಸ್ಕೃತಿಯ ಅರಿವು, ಮತ್ತು ಅವುಗಳ ಉಸ್ತುವಾರಿ, ನಿರ್ವಹಣೆ ಮತ್ತು ಅವುಗಳ ಗರಿಷ್ಠ ಉಪಯೋಗ ಸಾಧ್ಯತೆ ಹೆಚ್ಚಾಗು ತ್ತದೆ.ಇಲ್ಲಿ ಸಮಸಂಸ್ಕ್ರತಿ ಅನ್ನುವ ಅರ್ಥವೆಂದರೆ ಪ್ರತಿಸ್ಥಳದಲ್ಲಿಯೂ ಕೂಡಾ ಸಾಂಸ್ಕೃತಿಕ ಚಟು ವಟಿಕೆಗಳ ಬಗ್ಗೆ ಸಮನಾದ ಕ್ರಿಯಾಪೂರ್ಣವಾದ ಆಧಾರ, ಭದ್ರತೆ ಪ್ರೋತ್ಸಾಹ ಸಿಗಲು ನೆರವಾಗು ವದು.ಎಲ್ಲರೂ ಕುರುಡರಾದರೆತೋರಿಸುವದೇನು ಎಲ್ಲರೂ ಕಿವುಡರಾದರೆ ಯಾರಿಗೆ ಸಂಗೀತ ಕೇಳಿ ಸುವದು? ರಂಗಮಂದಿರ ನೋಡಿಕೊಳ್ಳುವವರು ತಾಯಿಮಮತೆ ಹೃದಯ ಕಾಳಜಿಗಳನ್ನು ಹೊಂದಿ ದವರಾಗಿರಬೇಕು, ಅಷ್ಟೇ ಪ್ರಮಾಣದಲ್ಲಿ ರಂಗ ಮಂದಿರಗಳ ಸುಸ್ಥಿರ ಅಭಿವೃದ್ಧಿಗಾಗಿ ದೂರ ದೃಷ್ಟಿ ಉಳ್ಳವರಾಗಿರಬೇಕು.ಇಂತಹ ಪ್ರಾಧಿಕಾರಕ್ಕೆ ನಿಯಂತ್ರಣ ಶಕ್ತಿ ಅನುಮೋದನೆ ಕೊಡುವ, ನೀಡುವ ಶಕ್ತಿ ಇರಬೇಕು.

ರಂಗ ಮಂದಿರಗಳ ಸುಲಭ ಲಭ್ಯತೆ, ರಂಗಭೂಮಿ ಯನ್ನು ಹೆಚ್ಚೆಚ್ಚು ಕ್ರಿಯಾಶೀಲ ಮಾಡುತ್ತದೆ. ಗ್ರಾಮೀಣ ಪ್ರದೇಶವಾಗಲಿ,ನಗರ ಪ್ರದೇಶವಾಗಲಿ ಇರುವ ರಂಗಮಂದಿರಗಳು, ಸಾರ್ವಜನಿಕ ಚೌಕ ಗಳು ಯಾವದೇ ರೀತಿಯ ಸಾರ್ವಜನಿಕ ಸಾಂಸ್ಕೃ ತಿಕ ಚಟುವಟಿಕೆಗಳು ನಿತ್ಯ ನಡೆಯುತ್ತ ಇಡೀ ಪ್ರದೇಶವೇ ನಿರಂತರ ಚಟುವಟಿಕೆಗಳ ಕೇಂದ್ರವಾ ದಾಗ ಆ ಪ್ರದೇಶಕ್ಕೊಂದು ಶ್ರೀಮಂತಿಕೆಯನ್ನು ತಂದುಕೊಡುತ್ತದೆ. ಆದರೆ ಹೀಗೆ ಆಗುತ್ತಿದೆಯೇ? ಅಂತ ಪ್ರಶ್ನೆ ಕೇಳಿಕೊಂಡಾಗ ಖಂಡಿತವಾಗಿಯೂ ಇಲ್ಲ. ಹೆಚ್ಚಿನ ರಂಗಮಂದಿರಗಳು ಪ್ರತಿ ವರ್ಷಕ್ಕೆ ಅಬ್ಬಬ್ಬಾ ಅಂದರೆ 40 ರಿಂದ 50 ದಿನ ಬುಕ್ ಆದರೆ ಸುಸ್ಥಿರತೆ ಎಲ್ಲಿಂದ ಬರುವದು? ಯಾಕೆ ಹೀಗೆ ಅಂತಾ ವಿಚಾರ ಮಾಡಿದಾಗ ಮೇಲೆ ಹೇಳಿದ ಎಲ್ಲ ಪ್ರಕಾರಗಳ ರಂಗಮಂದಿರಗಳು ಕಣ್ಣಮುಂದೆ ಬರುತ್ತವೆ. ರಂಗಮಂದಿರ ಪ್ರಾಧಿ ಕಾರದ ರಚನೆಯಾದಾಗ ಪ್ರಾಯಶ: ಸಧ್ಯದ ಸಾಂಸ್ಕೃತಿಕ ಪರಿಸ್ಥಿತಿ ಸುಧಾರಿಸಲು ಅನುಕೂಲ ವಾಗುತ್ತದೆ ಅನ್ನುವುದನ್ನು ಮುಂದೆನೋಡೋಣ.
(ಸಶೇಷ)
ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ