ಅಚಾನಕ್ಕಾಗಿ ನೀರಿಗೆ ಬಿದ್ದ ಕೋತಿಮರಿಯೊಂದು ಸಾವು-ಬದುಕಿನೊಂದಿಗೆ ಒದ್ದಾಡುತ್ತಾ, ಈಜಲು ಬಾರದೇ ದಡ ಸೇರಲು ತನ್ನ ಪುಟ್ಟ ಕೈಕಾಲು ಬಡಿ ಯುತ್ತಿತ್ತು. ಹರಿವ ನೀರಿನ ಗತಿಗೆ ಸೆಣಸಲಾಗದೇ ಕೈಚೆಲ್ಲಿತ್ತು. ಇನ್ನೇನು ಅನ್ನುತ್ತಿದಂತೆಯೇ ತಾಯಿ ಕೋತಿ ನೀರಿಗೆ ಧುಮುಕಿ ಎದುರಾದ ಪ್ರವಾಹ ವನ್ನು ಹಿಮ್ಮೆಟ್ಟಿಸಿ ಇನ್ನೇನುಮರಿಗೂಸು ಕೈತಪ್ಪಿ ಹೋಯಿತು ಎನ್ನುವಷ್ಟರಲ್ಲಿ ತಾಯಿ ಮರಿಕೋತಿ ಯ ಎದೆಗಪ್ಪಿಕೊಂಡು ಮರದ ದಿಣ್ಣೆಯನೇರಿದ್ದು, ಉಸಿರು ಕೊಟ್ಟು, ಕಾಲ್ಕೆಳಗೆ ಬೆನ್ನು ಅದುಮಿ ನೀರನ್ನು ಹೊರಗೆ ತೆರೆದಾಕ್ಷಣ ಕಣ್ಣುಬಿಟ್ಟ ಪುಟಾಣಿಯ ತಲೆಸವರಿ ಅಪ್ಪಿಮುದ್ದಾಡಿದ ದೃಶ್ಯ. ಪ್ರಾಣಿಗಳಲ್ಲೂ ಅಡಗಿರುವ ಮಮತೆ ಮೂಕವಾ ದರೂ ಅದು ಅಭಿವ್ಯಕ್ತಿಗೊಂಡ ಚಿತ್ರಣ, ಸಹಜ ವಾಗಿ ನಮ್ಮೊಳಗಿನ ಕರುಳ ಭಾಷೆಯನ್ನು ಎಷ್ಟು ಹೃದಯ ಅರಿತಿದೆ? ಮಂಗನಿಂದ ಮಾನವ ಎಂಬ ಮಾತು ಸರ್ವಕಾಲಿಕ ಸತ್ಯ.

ಮಾನವೀಯತೆ, ಸಹಬಾಳ್ವೆ, ಆತ್ಮವಿಶ್ವಾಸ ಇವು ಜೀವ ಜಗತ್ತಿನ ಮಾಣಿಕ್ಯಗಳು. ಇವನ್ನು ಮರೆತು ದುಡಿತದ ಬೆನ್ನು ಹತ್ತಿ, ಹಗಲಿರುಳು ತೊತ್ತಿನ ಚೀಲವ‌ನ್ನು ತುಂಬುವ ಧಾವಂತದಲಿ ಮಕ್ಕಳ ಬದುಕು ಉಜ್ವಲಗೊಳಿಸುವ ನೂರು ಕನಸುಗಳ ಹೊತ್ತು,ಎಲ್ಲ ಸಂಬಂಧಗಳ ರೆಕ್ಕೆಗಳನ್ನು ಕತ್ತರಿಸಿ ಬದುಕುವ ಮನಸ್ಸುಗಳು.ಮಗುವನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕೆಲಸ‌ ಹೇಳ ಹೆಸರಿಲ್ಲ ದೇ, ಗೊತ್ತಿದ್ದು ಗೊತ್ತಿಲ್ಲದೆ ಮುಖವಾಡ ಧರಿಸಿ ನಿಂತಿ‌ದ್ದಂತೂ ಸತ್ಯ. ಇಂದಿನ ಸ್ಪರ್ಧಾತ್ಮಕ ಒಳ ಸುಳಿಗೆ ಮಗು ತನ್ನ ಬಾಲ್ಯ ಕಳೆದುಕೊಂಡಿದೆ. ಎಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸುವ ಮನೋಸ್ಥಿತಿಗೆ ಬರಲು ಇನ್ನೂ ಸ್ವತಂತ್ರವಾಗಿಲ್ಲ.ಸರಿಯೋತಪ್ಪೋ ಅನ್ನೋ ಗೊಂದಲ.

ಪ್ರಾಣಿಗಳೇ ಗುಣದಲಿ ಮೇಲು, ಮಾನವ ಅದ ಕ್ಕಿಂತ ಕೀಳು” ಎಂಬ ಉಕ್ತಿಯಂತೆ; ಇಂದಿನ ಮಕ್ಕಳಿಗೆ ಸಂಬಂಧಗಳ ಬಗೆಗೆ ಪರಿಜ್ಞಾನವನ್ನು ನೀಡುವಲ್ಲಿ ವಿಫಲರಾಗುತ್ತಿರುವುದು ಕಳವಳದ ಸಂಗತಿ; ಇವತ್ತು‌ ವಯಸ್ಸಾದವರನ್ನು ಮೂಲೆ ಗುಂಪು ಮಾಡಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ‌ಂತೆ ಅವರ ಸ್ಥಿತಿ. ಹಬ್ಬ ಹರಿದಿನಕ್ಕಾದರೂ ಒಂದೆಡೆಗೆ ಸೇರುವ ಸಂದರ್ಭಗಳು ಇಂದು ಕಣ್ಮರೆಯಾಗುತ್ತಿರುವುದು ಕುಟುಂಬ ವ್ಯವಸ್ಥೆ ಸಂಕುಚಿತಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು,‌ಮಾಡಿದ್ದು ಣ್ಣೊ ಮಹಾರಾಯ. ಯಾಕೆಂದರೆ   ಮಗುವಿನ   ಮೊದಲ  ಶಿಕ್ಷಣ ‌ ಪ್ರಾರಂಭವಾಗುವುದು ನಮ್ಮ ನಡೆ, ನುಡಿಗಳನ್ನು ನೋಡಿಕೊಂಡೇ ಆಗಿರುತ್ತದೆ ಎಂಬುದನ್ನು ನಾವು ಯಾವತ್ತೂ  ಮರೆಯುವಂತಿ ಲ್ಲ. ಸೋತವನಿಗೆ ಮಾತ್ರ ಗೆಲ್ಲಲು ಅವಕಾಶವಿರು ವುದು.ತಂದೆ- ತಾಯಿ ಎಂಬ ಕೊಂಡಿಗಳು ಮಕ್ಕಳ ಭವಿಷ್ಯದ ಭದ್ರ ಬುನಾದಿ. ನೀರಿಗೆ  ಇಳಿದಾಗ  ಮಾತ್ರ ಅದರ ಆಳ ಅರ್ಥವಾಗುವುದು.

ಬಾಲಗಣೇಶನ ಅಸ್ತಿತ್ವದ ಬೇರು ಇಡೀ ವಿಶ್ವಕ್ಕೆ ಮಾದರಿ.ಪ್ರಪಂಚವನ್ನು ಮೂರು ಬಾರಿ ಯಾರು ಮೊದಲು ಸುತ್ತಿ ಬರುವರೋ ಅವರು ಪ್ರಥಮ ವೆಂದ ಮಾತಿಗೆ ಷಣ್ಮುಖ ವಿಶ್ವಪರ್ಯಟನಕ್ಕೆ ನವಿಲೇರಿ ಹೊರಟವನ ತಡೆವವರು ಯಾರು? ಗಣಪತಿಯ ಬುದ್ದಿಶಕ್ತಿ ತನ್ನ ಅಸ್ತಿತ್ವಕ್ಕೆ ಕಾರಣ, ತಂದೆ-ತಾಯಿ ಅವರೇ ಜಗತ್ತಿನ ಸ್ವರೂಪವೆಂದು ಅವರೇ ವಿಶ್ವವ್ಯಾಪಿಯೆಂದು ಅರಿತ ಬಾಲಕನಂತೆ ನಮ್ಮ ಮಕ್ಕಳಿಗೆ ನಾವು ವಿಶ್ವವಾಗುವುದು ಯಾವಾಗ?

ರೆಕ್ಕೆ ಬಲಿತ ಹಕ್ಕಿ ಗೂಡು ಬಿಟ್ಟು ಹಾರಿಹೋಗುವ ತವಕದಲ್ಲಿದ್ದಾಗ ಅದನು ಬಂಧಿಸಿಡಲು ಸಾಧ್ಯವೆ? ಮಕ್ಕಳು ಎಲ್ಲಿದ್ದರೂ ಹೇಗಿದ್ದರೂ ಅವರಹೃದಯ ತನ್ನವರಿಗಾಗಿ ಮಿಡಿದಾಗ ಮಾತ್ರ ಸಾರ್ಥಕ.ಚರಿತ್ರೆ ಗಳು ಇತಿಹಾಸ ಸೇರಿ ಉತ್ತಮ ಮೌಲ್ಯಗಳ ಎತ್ತಿ ಹಿಡಿದಿವೆ.ದುರಂತದ ಕಥೆಗಳು ನಮಗೆ ದಾರಿದೀಪ ವಾಗಬೇಕಿದೆ. ಆದರೆ ಅವುಗಳ ಅಧ್ಯಯನ ಪುನರುಜ್ಜೀವನ ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಿಸುವ ಹಾಗೂ ಬದಲಾವಣೆಯ ಗಾಳಿ ಸುಳಿಯದಿದ್ದರೆ ಮನೆಯಲ್ಲಿ ಅವುಗಳ ಪಾಲನೆ ಕಿಂಚಿತ್ತುಆಗದಿದ್ದರೆ ದೋಷಿಸುವುದು ಯಾರನ್ನ? ತಪ್ಪುಗಳ ವರ್ಗಾವಣೆ ಇನ್ನೊಬ್ಬರ ಹೆಗಲಿಗೆ ಹೋಗದಂತೆ ಸರಿಪಡಿಸುವ ಮನಸ್ಥಿತಿ ಬರುವತ್ತ ಕಾದು ನೋಡಬೇಕಿದೆ…!

“ಪ್ರಾಣಿಗಳೇ ಗುಣದಲಿ ಮೇಲು, ಮಾನವ ಅದಕ್ಕಿಂತ ಕೀಳು” ಎಂಬ ಉಕ್ತಿಯಂತೆ; ಮೂಕ ಭಾಷೆಯ ಪ್ರಾಣಿಗಳು ನಿಯತ್ತಿನ ಪರಿಭಾಷೆಗೆ ಸಾಕ್ಷಿಯಾಗಿ ನಿಲ್ಲುವಾಗ ನಮ್ಮ ಮಕ್ಕಳಿಗೆ ಮೌಲ್ಯ ಗಳನ್ನು ಪರಿಚಯಿಸುವುದು ಪ್ರಸ್ತುತ. ಕನ್ನಡಿಯೊ ಳಗೆ ಅಡಗಿರುವ ನೈಜ ಪ್ರತಿಬಿಂಬವನ್ನು ಕಲೆ ಹಾಕಿದಂತೆ. ಕಣ್ಮರೆಯಾಗುತ್ತಿರುವ ಜೀವಿಗಳಲ್ಲಿ ನಾವು ಒಬ್ಬರಾಗದಂತೆ ಪ್ರಕೃತಿ ನಮಗೆ ನೀಡಿದ ವರದಾನ. ಸೌಹಾರ್ದತೆಯನ್ನು ಬೆಳೆಸುವತ್ತ ಗುರು ಹಿರಿಯರಲಿ ಭಕ್ತಿ, ಗೌರವ ನೆಲೆಗೊಂಡರೆ ಮಾತ್ರ ಶಿಕ್ಷಣಕ್ಕೊಂದು ಬೆಲೆ.

ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ