ಒಂದು ಶಾಲಾ ಕೊಠಡಿಯಲ್ಲೆ ಸಮಾಜದ ಭವಿಷ್ಯ ಅಡಗಿದೆ.  ಮಾನವೀಯ ಮೌಲ್ಯದ ನೆಲೆ ಕಾಣಿಸಿ ಭವಿಷ್ಯತ್ತಿನ ಕಾಲಕ್ಕೆ  ಜ್ಞಾನದ ಭದ್ರ ಬುನಾದಿಯ ನ್ನು ಹಾಕಿ ಪೋಷಣೆ ಮಾಡುವ ಗುರುವಿನ ಸ್ಥಾನ ದಲ್ಲಿರುವ ಶಿಕ್ಷಕರೆಂಬ ಶಿಲ್ಪಿಗಳೇ ನಾಡಿನ ರಕ್ಷಕ, ಪೋಷಕ,ಬಂಧುಗಳು. ಬದುಕಿಗೊಂದು ಚೌಕಟ್ಟು ಕಲ್ಪಿಸಿ  ನ್ಯಾಯ. ಸಮ್ಮತವಾದ ಹಕ್ಕುಗಳ ಪರಿ ಪಾಲನೆಗೆ ಬೆನ್ನು ತಟ್ಟಿ ನಿಜ ಅರ್ಥದ ಜೀವನದ ದಾರಿಗೆ ಕೈ ತೋರುವ ಶಿಕ್ಷಕರ ಋಣ ತೀರಿಸಲಾ ಗದು!  ಶಿಕ್ಷಕರ ದಿನಾಚರಣೆ ಹಿನ್ನಲೆ.. ಶಿಕ್ಷಕರ ದಿನಾಚರಣೆಯನ್ನು ಅನೇಕ ದೇಶಗಳಲ್ಲಿ ಆಚರಿಸ ಲಾಗುತ್ತದೆ. ಭಾರತದಲ್ಲಿ ಸರ್ವಪಲ್ಲಿ ರಾಧಾ ಕೃಷ್ಣನ್ ಗೌರವಾರ್ಥವಾಗಿ ಅವರ ಜನ್ಮ‌ದಿನವಾದ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಎರಡನೇ ರಾಷ್ಟ್ರಪತಿಗಳಾಗಿ ದ್ದರು ಹಾಗೂ ಒಬ್ಬ ಹೆಸರಾಂತ ಶಿಕ್ಷಣ ತಜ್ಞರಾಗಿ ದ್ಧರು. ಅವರಿಗೆ ನಮನಗಳು..

ಶಿಕ್ಷಕರದಿನಾಚರಣೆಯ ಆಚರಣೆಯೇ ಇತಿಹಾಸ..

ಸರ್ವಪಲ್ಲಿ ರಾಧಾಕೃಷ್ಣನ್ ರವರ ವಿದ್ಯಾರ್ಥಿಗಳು ಅವರ ಬಳಿ ಬಂದು  ನಿಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭನೆಯಿಂದ ಆಚರಿಸಲಿದ್ದೇವೆ ತಾವು ಖಂಡಿತಾ ಬರಬೇಕೆಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಡಾ.ರಾಧಾಕೃಷ್ಣನ್ ರವರು ಈ ದಿನವನ್ನು ತನ್ನ ಹುಟ್ಟು ಹಬ್ಬವನ್ನಾಗಿ ಆಚರಿಸುವ ಬದಲು  ಶಿಕ್ಷಕರ ದಿನವೆಂದೇಕ ಆಚರಿಸಬಾರದು? ಇದರಿಂದ ನನಗೆ ಹೆಮ್ಮೆ ಸಂತೋಷವಾಗುತ್ತದೆ ಎಂದರಂತೆ. ಗಂಭೀರವಾಗಿ ಪರಿಗಣಿಸಿದ ವಿದ್ಯಾ ರ್ಥಿಗಳು ಅಂದಿನಿಂದಲೂ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್- 5ರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ  ದೇಶಾದ್ಯಂತ ಆಚರಿಸುತ್ತಾ ಬರಲಾಗುತ್ತದೆ, 1962 ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರ ತೀಯ ಶಿಕ್ಷಣ ವ್ಯವಸ್ಥೆಗೆ ಕೊಡುಗೆ ನೀಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನ, ಮೊದಲ ಕಾರ್ಯಕ್ರಮದಲ್ಲಿ ಅವರೇ ಹೇಳಿದಂತೆ ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಿರಬೇಕು ಎಂದು ಕರೆ ನೀಡಿದರು. ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು  ರೂಪಿಸುವ ‘ಶಿಕ್ಷಕರ ದಿನ’ಮಕ್ಕಳು ಆಚರಿಸುವ ಮೂಲಕ  ನಾವೆಲ್ಲರು ಶಿಕ್ಷಕರಿಗೆ   ನೀಡುವ ಗೌರವವಾಗಿದೆ.

 ಶಿಕ್ಷಕರ ಮಹತ್ವ ಮುಂದೇ ಗುರಿ ಇರಬೇಕು ಹಿಂದೆ ಗುರು ಇರಬೇಕು ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕ್ತಿ ಇಂತಹ ನೂರಾರು ಉಕ್ತಿಗಳನ್ನು ಕಾಣಬಹುದು.ಗುರು ಶ್ರೇಷ್ಠತೆಯನ್ನ ಹಾಡಿ ಹೂಗಳಿವೆ. ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಅಂಧತ್ವದಿಂದ ಹಿಡಿದು ಜ್ಞಾನದೆಡೆಗೆ ಕರೆದೊಯ್ಯವ  ಶಿಕ್ಷಕರು ನಿಸರ್ಗದ ನೈಜ ಬದುಕಿನ ತಿರುಳನ್ನು ಉಣ ಬಡಿಸುವವರು, ಸಂಸ್ಕಾರದ ಉತ್ಕೃಷ್ಟ ಅನುಭವವನ್ನು ನೀಡುವ ವರು, ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನು ಗುರುತಿಸಿ  ಪೂರಕವಾಗಿ ಮೌಲ್ಯವನ್ನು ತುಂಬುವ ರು, ಆ ಮೂಲಕ   ಸಮಾಜದ ಸರ್ವಾಂಗೀಣ ಆರೋಗ್ಯ ಸಂಕಲ್ಪಕ್ಕೆ   ಅಡಿಪಾಯ ಹಾಕುವರು. ಶಿಕ್ಷಕರು ತಂದೆ ತಾಯಿ ಬಿಟ್ಟರೇ  ನಂತರದ ಸ್ಥಾನ ವನ್ನುಕಲಿಸಿದಶಿಕ್ಷಕರಿಗೆ ನೀಡಲಾಗಿದೆ,ಭಾರತೀಯ ಪರಂಪರೆಯಲ್ಲಿ ಗುರು ಸ್ಥಾನಕ್ಕೆ ಹಿಂದಿನಿಂದಲೂ ಅಪಾರವಾದ ಗೌರವವಿದೆ. ಬದಲಾದ ಯುಗ ಮಾನದಲ್ಲಿಯೂ ಶಿಕ್ಷಕ ವೃತ್ತಿಗೆ ಹೆಚ್ಚಿನ ಬೆಲೆ ಮತ್ತು ನೆಲೆ ಬಂದಿದ್ಧು, ಶಿಕ್ಷಕರೆಂದರೇ ತಾತ್ವಿಕ ಸತ್ಯದ ನೆಲೆಗಟ್ಟಿನಲ್ಲಿ ಜಗತ್ತನ್ನು ಗಟ್ಟಿಗೊಳಿಸುವ ನಿರ್ಮಾತೃಗಳು. 

ಬದಲಾದ ಶಿಕ್ಷಣ ವ್ಯವಸ್ಥೆ.. ಕಾಲಮಾನಕ್ಕೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೂಸ ನಿಯಮಗಳು ಶಿಕ್ಷಣದ ಸಾರ್ವತ್ರಿಕರಣದ ಸಫಲತೆಗೆ  ಹೆಚ್ಚಿನ ಸ್ಥಾನಮಾನ ನೀಡಿದ್ಧು  ಶಿಕ್ಷಕರಿಗೆ ತರಗತಿಯಲ್ಲಿ ವಿಭಾಗವಾರು ವಿಷಯಗಳನ್ನು ಹಂಚಿಕೆ ಮಾಡಿದ್ದ ಲ್ಲದೇ ಸಾಕ್ಷರತೆಯ ಸುಧಾರಣೆಗೆ  ಪಣ ತೊಟ್ಟು ನಿಂತಿವೆ. ದೇಶದ ಆರ್ಥಿಕ ಸಂಪನ್ಮೂಲವನ್ನು ನೀಡಿ ಸಶಕ್ತಗೊಳಿಸುತ್ತಿರುವದು ಶ್ಲಾಘನೀಯ. ಸಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಶಿಕ್ಷಣ ನೀಡಲಾಗುತ್ತಿದೆ, ಕೈ ಯಲ್ಲಿ ಕೋಲು ಹಿಡಿಯುವ ಬದಲು ಕಂಪ್ಯೂಟರ ನ ಮೌಸ್ ಹಿಡಿದಿದ್ದಾರೆ. ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಅಂತರ್ ಜಾಲದ ಶಿಕ್ಷಣದ ತಾಣ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ ಜ್ಞಾನದ ಪೈಪೋಟಿ ಹಾಗೂ ಬಂಧುತ್ವಕ್ಕೆ ಸಂವಹನದ ಸೇತುವೆಯಾಗಿ ನಿಂತುಕೊಂಡಿದೆ.  

ಶಿಕ್ಷಕರಿಗೆ ಬೇಕಿರುವದು ಅನುಕಂಪವಲ್ಲಾ ಅಭಿ ಮಾನ… ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ   ಶಿಕ್ಷಕರು ದುಡಿದಿ ದ್ಧಾರೆ. ಅವರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾಗಿದೆ ಅತಿಥಿ ಉಪನ್ಯಾಸಕರಿಗೆ ಖಾಯಂ ಭದ್ರತೆ, ಶಿಕ್ಷಕರ ಸಂರಕ್ಷಣಾ ಸಮಿತಿ, ಶಾಲಾ ಭದ್ರತಾ ಮಂಡಳಿ ರಚನೆ, ಸಾರಿಗೆ ಸಂಪರ್ಕ ವ್ಯವಸ್ಥೆ, ಮೂಲಭೂತ ಸೌಲಭ್ಯವುಳ್ಳ ಶಾಲಾ ಕಾಲೇಜ್ ಗಳ ಕಟ್ಟಡ ನಿರ್ಮಾಣ, ಸೇರಿ ದಂತೆ  ಹಲವಾರು ಸೌಕರ್ಯಗಳನ್ನು   ಕಲ್ಪಿಸಿ ಕೊಡಬೇಕಿದೆ. ಶಿಕ್ಷಕರಿಗೆ ಬೇಕಿರುವದು  ಕೇವಲ ಅನುಕಂಪವಲ್ಲಾ ಅಭಿಮಾನ! ಶಿಕ್ಷಕ ವೃತ್ತಿಗೆ ಸೌಕರ್ಯ ಕಲ್ಪಿಸಿದರೇ ಸೌಲಭ್ಯಗಳು ಹುಟ್ಟಿಕೊ ಳ್ಳುತ್ತವೆ.

ಶಿಕ್ಷಣಕ್ಕೆ ಶಿಕ್ಷಕರೇ ಆಧಾರ..ದೇಶ ಪ್ರಗತಿಯಾಗಲು ಸರ್ವತೋಮುಖ ಶಿಕ್ಷಣ ನೀಡುವದೇ ಬಲವಾದ ಅಸ್ತ್ರ. ಎಷ್ಟೇ ಸಂಪನ್ಮೂಲವಿದ್ಧರೂ ಶಿಕ್ಷಣವಿಲ್ಲದಿ ದ್ದರೇ ಎಲ್ಲವೂ ಶೂನ್ಯ! ಕಟುಕ ಪ್ರಾಣಿ ಮೇಲೆರ ಗಿದಾಗ   ಬಂದೂಕಿನ ಲೈಸ್ಸನ್ಸ ತೋರಿಸಿದರೇ ಓಡಿ ಹೋಗುವದೇ?ಬದಲಾಗಿ ಸೆನಸಾಡಿ ಯುದ್ಧ ಮಾಡಿ ಗೆಲ್ಲಬೇಕು, ನಮಗೆ ಬೇಕಿರುವದು ಸಾಮರ್ಥ್ಯವೇ ಹೂರತು ಸರ್ಟಿಫಿಕೆಟ್ ಅಲ್ಲಾ! ನಾವಿಂದು ನೈಜ ಶಿಕ್ಷಣದತ್ತ ಹೆಜ್ಜೆ ಹಾಕಬೇಕಾಗಿದೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ.ಶಿಕ್ಷಕ ವೃತ್ತಿ ಯಲ್ಲಿರುವ ಬಂಧುಗಳನ್ನು ಬಾಂಧವ್ಯದಿಂದ ಕಂಡು  ವಂದಿಸುವ….

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.    

 ಶ್ರೀಮತಿ.ಭಾಗ್ಯಶ್ರೀ ಗ ಹಳ್ಳಿಕೇರಿಮಠ.               ಸಾ||ಜಂತ್ಲಿಶಿರೂರ ತಾ:ಮುಂಡರಗಿ   ಜಿ:ಗದಗ