ದೇವಾಲಯದ ಅಧ್ಯಯನ ಮಾಡುವಾಗ ಹಾಗು ಇತಿಹಾಸ ಪುಟ ತಿರುವಾಗ ನಮಗೆ ಕಾಡುವ ಪ್ರಮುಖ ಊರುಗಳು ಹಲವು.ತಾಳಗುಂದದಿಂದ ಹಂಪೆಯವರೆಗಿನ ಹಲವು ಪ್ರದೇಶಗಳು ನಮಗೆ ಕಾಣಬರುತ್ತವೆ.  ಇಂತಹ. ಸ್ಥಳಗಳಲ್ಲಿ ಪ್ರಮುಖ ವಾದದ್ದು ಬನವಾಸಿ.

ಇತಿಹಾಸ ಪುಟದಲ್ಲಿ ಮೌರ್ಯರಿಂದ ಕಾಲದಿಂದ ವಿಜಯನಗರ ಕಾಲದವೆರೆಗೂ ಇದರ ಅಸ್ತಿತ್ವ ನೋಡಬಹುದು. ಬನವಾಸಿ – ಬನವಸೆ – ವನವಸ – ಜಯಂತಿಪುರ ಎಂದಲ್ಲೇ ಪ್ರಸಿದ್ದಿ ಪಡೆದಿದ್ದ ಇದು ಹಲವು ವರ್ಷದವರೆಗೆ ಪ್ರಮುಖ ಗ್ರಾಮವಾಗಿ ಕಾಣ ಸಿಗುತ್ತದೆ.  ಕದಂಬರ ರಾಜ ಧಾನಿಯಾಗಿದ್ದ ಬನವಾಸಿಯಲ್ಲಿ 461 ರ ಮೃಗೇಶ ವರ್ಮನ ಶಾಸನ ಇದರ ವೈಭಕ್ಕೆ  ಮೊದಲ ಕುರುಹು, ಅವರ ನಂತರ ಕಾಲದಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಆಳುಪರ ಅಧೀನದಲ್ಲಿ ದ್ದರೆ ನಂತರ ಕಲ್ಯಾಣಚಾಲುಕ್ಯರು–ಹೊಯ್ಸಳರು ಹಾಗು ವಿಜಯನಗರದ ಅಧೀನದಲ್ಲಿತ್ತು. ಇಲ್ಲಿನ ದೇವಾಲಯಗಳು ಕದಂಬರ ಕಾಲದಲ್ಲಿ ನಿರ್ಮಾ ಣವಾಗಿ ವಿವಿಧ ಕಾಲಘಟ್ಟದಲ್ಲಿ ನವೀಕರಣ ಹಾಗು ವಿಸ್ತಾರಗೊಂಡಿದೆ.

ಮಧುಕೇಶ್ವರ ದೇವಾಲಯ

ಮೂಲತಹ ಕದಂಬರ ಕಾಲದಲ್ಲಿ ನಿರ್ಮಾಣಗೊಂ ಡ ಈ ದೇವಾಲಯದಲ್ಲಿ ಗರ್ಭಗುಡಿ ಹಾಗು ನವರಂಗ ಕದಂಬರ ಕಾಲಕ್ಕೆ ಸೇರಿದ್ದರೆ ಅರ್ಧ ಮಂಟಪ, ಸಭಾಮಂಟಪ ಹಾಗು ನಂದಿಮಂಟಪ ನಂತರ  ಕಾಲದ ಸೇರ್ಪಡೆ. ಗರ್ಭಗುಡಿಯಲ್ಲಿ ಮಧುಕೇಶ್ವರ ಎಂದು ಕರೆಯುವ ಕದಂಬರ ಕಾಲದ ಶಿವಲಿಂಗವಿದ್ದು ಇದರ ಪಾಣಿಪೀಠದ ವಿಸ್ತೃತ ಭಾಗ ನಂತರ ಕಾಲದಲ್ಲಿ ಸೇರ್ಪಡೆಯಾ ಗಿದೆ. ಇಲ್ಲಿನ ಪ್ರವೇಶದಲ್ಲಿನ ದೊಡ್ದದಾದ ದ್ವಾರ ಪಾಲಕರ ಕೆತ್ತೆನೆ ಇದೆ.

ಇಲ್ಲಿನ ಕಲ್ಯಾಣ ಮಂಟಪ ಸುಂದರ ಆಗಿದ್ದು ಇದನ್ನು ಸೋದೆಯ ಸದಾಶಿವ ನಾಯಕ ಸುಮಾ ರು 17 ನೇ ಶತಮಾನದಲ್ಲಿ ನಿರ್ಮಿಸಿದ್ದಾನೆ.  ಇಲ್ಲಿ ಮೂರು ಲೋಕಗಳ ಸುಂದರ ಚಿತ್ರಣ ಇದ್ದು ವಿಜಯನಗರೋತ್ತರ ಕಾಲದಲ್ಲಿ ಕೆಳದಿಯವರ ಸುಂದರ ಕೆತ್ತೆನೆ ಭಾಗ.

ಉಳಿದಂತೆ ದೇವಾಲಯದ ಬಹುತೇಕ ಭಾಗ ಸುಮಾರು 10 ನೇ ಶತಮಾನದ ನಂತರ ಕಾಲ ದಲ್ಲಿ ಆದ ವಿಸ್ತರಣೆ.ದೇವಾಲಯದ ಸಭಾಮಂಟ ಪದಲ್ಲಿ ಕಲ್ಯಾಣಿ ಚಾಲುಕ್ಯರ ಅಥವಾ ಹೊಯ್ಸಳ ರ ಕಾಲದ ಕಂಭಗಳಿದ್ದು ಶಿವಲಿಂಗಕ್ಕೆ ಎದುರಾಗಿ ಸುಮಾರು ಎಂಟು ಆಡಿ ಎತ್ತರದ ಬೄಹತ್ ನಂದಿ ಯಿದೆ. ಸಭಾಮಂಟಪಕ್ಕೆ ಹೊಂದಿಕೊಂಡಂತೆ ನಂದಿ ಇದೆ. ಇನ್ನು ಇಲ್ಲಿನ ಮಂಟಪದಲ್ಲಿನ ಆದಿ ಮಾದವ ಹಾಗು ಕಾರ್ತಿಕೇಯ ಹಾಗು ನಾಗಶಿಲ್ಪ ಶಾಸನ ಕದಂಬರ ಕಾಲಕ್ಕೆ ಸೇರಿದ್ದು.  ಆದಿ ಮಾಧವನ ಕೆತ್ತೆನೆ ಅಧ್ಭುತವಾಗಿದ್ದು ಶಂಖ, ಚಕ್ರ ಪದ್ಮ ಹಾಗು ಗಧಾ ಕೆತ್ತೆನೆ ಇದ್ದು ವಿಭಿನ್ನ ಪ್ರಭಾ ವಳಿಯಲ್ಲಿನ ದಶಾವತರದ ಕೆತ್ತೆನೆ ಅದ್ಭುತ. ದೇವಾಲಯಕ್ಕೆ ಘಾಂಸನಾ ಮಾದರಿಯ ಶಿಖರ ವಿದೆ.

ಪಾರ್ವತಿ ದೇವಾಲಯ :

ಮಧುಕೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಪಾರ್ವತಿ ದೇವಾಲಯವಿದ್ದು ಗರ್ಭಗುಡಿ, ಅರ್ಧ ಮಂಟಪ ಹಾಗು ಸಭಾಮಂಟಪ ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ಸುಂದರವಾದ ಪಾರ್ವತಿ ಯ ಶಿಲ್ಪವಿದ್ದು ಪ್ರಭಾವಳಿ ಗಮನ ಸೆಳೆಯುತ್ತದೆ. ಈ ಎರಡು ದೇವಾಲಯಕ್ಕೆ ಹೊಂದಿಕೊಂಡಂತೆ ಸಾಕ್ಷಿ ಗಣಪತಿ ಇದೆ.

ಇನ್ನು ದೇವಾಲಯದ ಪ್ರಾಕರದಲ್ಲಿ ಹಲವು ದೇವರುಗಳ ಕೆತ್ತೆನೆ ಇದ್ದು ಇವುಗಳಲ್ಲಿ ಗಣಪತಿ, ಮಧುಕೇಶ್ವರ, ಉಮಮಾಹೇಶ್ವರ, ಸೂರ್ಯ ನಾರಾಯಣ, ವೆಂಕಟೇಶ್ವರ, ಕಾಲಭೈರವನ ಕೆತ್ತೆನೆ ಇದೆ. ಇನ್ನು ಸುಮಾರು ನಾಲ್ಕು ಅಡಿ ಎತ್ತರದ ದುಂಡಿರಾಜ ಗಣಪತಿ, ಅರ್ಧಗಣಪತಿ ಹಾಗು ಕೇವಲ ನರಸಿಂಹನ ಶಿಲ್ಪಗಳು ಸುಂದರವಾಗಿದ್ದು ಗಮನಿಸಲೇಬೇಕಾದ ಶಿಲ್ಪಗಳು.

ಇನ್ನು ದೇವಾಲಯದಲ್ಲಿ ಬೄಹತ್ತಾದ 1670 ರಲ್ಲಿ ಸ್ಥಾಪನೆಯಾದ ಸುಮಾರು 40 ಅಡಿ ಎತ್ತರದ ದ್ವಜಸ್ಥಂಬವಿದೆ. ಇನ್ನು ದೇವಾಲಯದಲ್ಲಿ ಆವರಣದಲ್ಲಿನ ಕಲ್ಲಿನ ಮಂಚ ಅದ್ಭುತವಾಗಿದೆ. ಸುಮಾರು 1628 ರಲ್ಲಿ ಸೋದೆಯ ರಘುನಾಥ ನಾಯಕ ನಿರ್ಮಿಸಿದ ಈ ಮಂಚದ ಕಲಾ ಕುಸುರಿ ಅದರಲ್ಲಿನ ಕಂಭಗಳು ಸೂಕ್ಷ್ಮ ಕೆತ್ತೆನೆ ಅದ್ಭುತವಾ ಗಿದೆ.

ಆದಿ ಮಧುಕೇಶ್ವರ ದೇವಾಲಯ :

ಇನ್ನು ಮಧುಕೇಶ್ವರ ದೇವಾಲಯದಿಂದ ಹತ್ತಿರದ ಲ್ಲಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ತೆರೆದ ನವರಂಗ ಹೊಂದಿದ್ದು ಘಾಂಸನಾ ಮಾದರಿಯ ಶಿಖರ ಹೊಂದಿದೆ,

ನಾಡಿನ ಬಹುತೇಕ ಎಲ್ಲಾ ಅರಸರ ವಾಸ್ತು ಸಂಗಮದಂತೆ ಇರುವ ಬನವಾಸಿ ವಾಸ್ತು ಅಧ್ಯಯನಕ್ಕೆ ಅತ್ಯಂತ ಪೂರಕವಾಗಿದೆ.

ತಲುಪುವ ಬಗ್ಗೆ :  ಬನವಾಸಿ ಶಿರಸಿಯಿಂದ ಸುಮಾರು 25 ಕಿ ಮೀ ದೂರದಲ್ಲಿದ್ದು ಸೊರಬದಿಂದಲೂ ಅಷ್ಟೇ ದೂರವಿದೆ.

✍️ ಶ್ರೀನಿವಾಸ ಮೂರ್ತಿ ಎನ್. ಎಸ್. ಬೆಂಗಳೂರು