ಸಿದ್ಧ ಮತ್ತು ನಾಥ ಪಂಥಿಯರ ಸಾಧನಾ ಪದ್ಧತಿ ಗಳು ಯಾವಾಗ ಅವ್ಯವಹಾರಿಕ ಮತ್ತು ಜಟೀಲ ವಾದವೊ ಆಗ ಜನರಿಂದ ಉತ್ತಮ ವಿಚಾರಗಳ ಸಂಗ್ರಹ ಮಾಡಿಕೊಂಡು ಇವುಗಳ ಆಧಾರದ ಮೇಲೆ ಕಬೀರದಾಸರು ಒಂದು ಹೊಸ ಧರ್ಮ ಹುಟ್ಟು ಹಾಕಿದರು, ಅದುವೆ “ಜ್ಞಾನಮಾರ್ಗಿ” ಅಥವಾ “ಜ್ಞಾನಾಶ್ರಯಿ ಶಾಖಾ” ಇದನ್ನು ಸಂತ ಕಾವ್ಯವೆಂದು ಕೂಡಾ ಕರೆಯಲಾಗಿದೆ. ಕಬೀರ ದಾಸರ ಜೊತೆಗೆ ದಾದೂ,ಸುಂದರದಾಸ,ರೈದಾಸ, ಗುರುನಾನಕ, ದಯಾ ಬಾಯಿ ಮುಂತಾದವರು ಜ್ಞಾನ ಸಾಧನೆಯ ಮೂಲಕ ನಿರಾಕಾರ ಈಶ್ವರನ ಉಪಾಸನೆಯ ಮಾಡಿ ಮೋಕ್ಷ ಪಡೆದುಕೊಳ್ಳುವ ನಂಬಿಕೆ ಇಟ್ಟುಕೊಂಡಿದ್ದರು. ಈ ಕಾಲದ ಸಂತರು ಅಕ್ಖಡ್ ಅಂದರೆ ನಿರ್ಭಯ, ಯಾರ ಮಾತನ್ನು ಕೇಳದವರಾಗಿದ್ದರು. ಶುದ್ಧ ಮಾನವಿಯತೆಯ ಪ್ರೇಮಿಯಾಗಿದ್ದರೆಂದರೆ ತಪ್ಪಾಗಲಿಕ್ಕಿಲ್ಲ. ಈ ಕಾಲದ ಸಂತರಭಾಷೆ ಸಧುಕ್ಖಡಿ ಅಥವಾ ಖಿಚಡಿ ಭಾಷೆ (ಸಾಧುಗಳ ಭಾಷೆ ಬ್ರಜ, ಅವಧಿ, ಖಡಿ ಬೋಲಿ ಮತ್ತು ರಾಜಸ್ಥಾನಿ ಮುಂತಾದ ಭಾಷೆಗಳ ಮಿಶ್ರಣ)

ಕಬೀರದಾಸ

ನಿರ್ಗುಣ ಸಂತರಲ್ಲಿ ಕಬೀರರು ಪ್ರಮುಖರು. ಇವರ ಜನನದ ಬಗ್ಗೆ ಅನೇಕ ಭಿನ್ನಾಭಿಪ್ರಾಯ ಹೇಳಿಕೆಗಳು ಕೇಳಿ ಬಂದರೂ ನೀರು -ನೀಮಾ ಎನ್ನುವ ನೇಕಾರ ದಂಪತಿಗಳು ಕಬೀರರನ್ನು ಪೋಷಣೆ ಮಾಡಿದರೆಂದು ನಂಬಲಾಗಿದೆ. ಕಾಶಿ ಯ ಹತ್ತೀರ ಇರುವ ಲಮಹಿ ಎನ್ನುವಲ್ಲಿ ಇವರ ಜನನ. ಇವರ ಭಾಷೆಯನ್ನು ಖಿಚಡಿ ಭಾಷೆ ಎನ್ನುವರು.

ಕಬೀರರ “ದೋಹಾ ಸಾಹಿತ್ಯ“(ಎರಡು ಸಾಲು ಗಳ ಕವಿತೆ) ಜನರನ್ನು ಆಗಾಧವಾಗಿ ತನ್ನತ್ತ ಸೆಳೆ ಯಿತು. ಗುರು, ನೀತಿ, ಜೀವನ ಮರ್ಮ, ಹೀಗೆ ಅನೇಕ ವಿಷಯಗಳನ್ನೊಳಗೊಂಡಿವೆ ದೋಹಾ ಗಳು.

ಕಬೀರ ದಾಸರ ದೋಹಾಗಳು

ದೋಹಾ-1

ಗುರು ಗೋವಿಂದ ದೊಊ ಖಡೆ , ಕಾಕೆ ಲಾಗೂ಼ ಪಾಯ಼. ಬಲಿಹಾರಿ ಗುರು ಆಪನೆ , ಜಿನ ಗೋವಿಂದ ದಿಯೋ ಬತಾಯ.

ಅನುವಾದ-

ಗುರು ಮತ್ತು ಗೋವಿಂದ ಇಬ್ಬರು ನಿಂತಿರುವಾಗ, ಯಾರಿಗೆ ಮೊದಲುನಮಸ್ಕರಿಸಲಿ? ಗೋವಿಂದನ ಮಹಿಮೆ ಬಗ್ಗೆ ಹೇಳಿದ ಗುರುವೇ ಮೊದಲು ಪೂಜ್ಯನಲ್ಲವೇನು?

ದೋಹಾ-2

ಪೋಥಿ ಪಢಿ -ಪಢಿ ಜಗ ಮುಆ,ಪಂಡಿತ ಭಯಾ ನ ಕೊಇ.
ಢಾಯಿ ಆಖರ ಪ್ರೇಮ ಕಾ, ಪಢೆ ಸೋ ಪಂಡಿತ ಹೊಇ.

ಅನುವಾದ

ದೊಡ್ಡ ದೊಡ್ಡ ಪುಸ್ತಕಗಳನ್ನು ಓದಿದ ಮಾತ್ರಕ್ಕೆ ಯಾರೂ ಪಂಡಿತರಾಗಿಲ್ಲ. ಪ್ರೇಮವೆಂಬ ಎರಡೂವರೆ ಅಕ್ಷರ ಓದಿದವರೇ ನಿಜವಾದ ಪಂಡಿತರು.

ದೋಹಾ -3

ಮಾಟಿ ಕಹೈ ಕುಮ್ಹಾರ ಸೆ , ತೂ ಕ್ಯಾ ರೌಂದೆ ಮೋಯ.
ಇಕ ದಿನ ಏಸೋ ಹೋಯಗೊ , ಮೈ ರೌಂದುಂಗಿ ತೋಯ.

ಅನುವಾದ

ಮಣ್ಣು ಕುಂಬಾರಿನಿಗೆ ಹೀಗೆ ಹೇಳುತ್ತದೆ, ನೀನು ಏನು ನನ್ನನ್ನು ತುಳಿಯೋದು? ಒಂದು ದಿನ ಹೀಗೆ ಬರುವುದು ಆಗ ನಿನ್ನನ್ನು ನಾನು ತುಳಿಯುತ್ತೇನೆ ನೋಡು.


ದೋಹಾ-4.

ನಿಂದಕ ನಿಯರೇ ರಾಖಿಯೆ, ಆಂಗನ ಕುಟಿ ಛಬಾಯ.
ಬಿನ ಪಾನಿ, ಸಾಬುನ ಬಿನಾ ನಿರ್ಮಲ ಕರೈ ಸುಭಾಯ.

ಅನುವಾದ-

ನಿಂದನೆ ಮಾಡುವರನ್ನು ಹತ್ತೀರವೇ ಇಟ್ಟುಕೊಳ್ಳ ಬೇಕು, ಅವರಿಗಾಗಿ ಮನೆಯ ಅಂಗಳದಲ್ಲೆ ಒಂದು ಕುಟೀರ ಕಟ್ಟಬೇಕು. ಆಗ ನೀರು ಮತ್ತು ಸೋಪಿಲ್ಲದೆ ನಮ್ಮ ಸ್ವಭಾವದ ಕೊಳೆ ಹೋಗುವುದು.

ದೋಹಾ- 5

ಕಾಲ ಕರೈ ಸೋ ಆಜ ಕರ , ಆಜ ಕರೈ ಸೋ ಅಬ್ಬ.
ಪಲ ಮೆ ಪರಲೈ ಹೋಯಗಾ , ಬಹುರಿ ಕರೈಗಾ ಕಬ್ಬ.

ಅನುವಾದ-

ನಾಳೆ ಮಾಡುವುದನ್ನು ಇಂದೆ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು, ಕ್ಷಣದಲ್ಲಿ ಪ್ರಳಯವಾಗಬಹುದು ಮತ್ತೇ ಯಾವಾಗ ನೀನು ಕೆಲಸ ಮಾಡಿ ಮುಗಿಸುವುದು?

ದೋಹಾ- 6

ದುಃಖಮೇ ಸುಮೀರನ ಸಬ ಕರೇ,ಸುಖ ಮೇ ಕರೇ ನ ಕೋಯ.ಜೋ ಸುಖ ಮೇ ಸುಮೀರನ ಕರೇ, ದುಃಖ ಕಾಹೇ ಕೋ ಹೋಯ.

ಅನುವಾದ-

ಕಷ್ಟ ಬಂದಾಗ ಎಲ್ಲರೂ ದೇವರನ್ನು ಸ್ಮರಿಸುವರು,ಸುಖಬಂದಾಗ ಯಾರು ದೇವರನ್ನು ಸ್ಮರಿಸುವುದಿಲ್ಲ. ಯಾರು ಸುಖ ಬಂದಾಗ ಕೂಡ ದೇವರನ್ನು ಸ್ಮರಿಸುವರೋ ಅವರಿಗೆ ದುಃಖ ಯಾಕೆ ಬರುವುದು?

ದೋಹಾ -7

ತಿನಕಾ ಕಬಹು ನಾ ನಿಂದಿಯೆ, ಜೋ ಪಾಂವ ತಲೆ ಹೋಯ. ಕಬಹೂ ಉಡ ಆಂಖೋ ಪಡೆ, ಘನೇರಿ ಹೋಯ.

ಅನುವಾದ-

ಹುಲ್ಲಿನ ಕಡ್ಡಿಯನ್ನು ಸಣ್ಣದೆಂದು ಹೀಯಾಳಿಸ ದಿರು, ಅದು ನಿನ್ನ ಕಾಲ ಕೇಳಗಿರಬಹುದು. ಆದರೆ ಅದೇ ಹುಲ್ಲು ಕಡ್ಡಿ ಒಂದು ದಿನ ಗಾಳಿಗೆ ಹಾರಿ ನಿಮ್ಮ ಕಣ್ಣಲ್ಲಿ ಬಿದ್ದರೇ ಎಷ್ಟು ಕಷ್ಟವಾಗ ಬಹುದು?

ದೋಹಾ-8

ಧೀರೆ-ಧೀರೆ ರೇಮನಾ,ಧೀರೆ ಸಬ ಕುಛ ಹೋಯ. ಮಾಲಿ ಸಿಂಚೆ ಸೌ ಘಡಾ ,ರಿತು ಆಯೇ ಫಲ ಹೋಯ.

ಅನುವಾದ-

ಹೇ ಮನವೇ!ನಿಧಾನವಾಗಿ ಎಲ್ಲವೂ ಆಗುವುದು. ಮಾಲಿ ಗಿಡಕ್ಕೆ ನೂರು ಕೊಡ ನೀರು ಹಾಕಿದರೂ ರುತು (ಸಮಯ ಬಂದಾಗ) ಬಂದಾಗಲೆ ಹಣ್ಣು ಬಿಡುವುದು.

ದೋಹಾ-9

ಜಹಾ ದಯಾ ತಹಾ ಧರ್ಮ ಹೈ , ಜಹಾ ಲೋಭ ತಹಾ ಪಾಪ.ಜಹಾ ಕ್ರೋಧ ತಹಾ ಪಾಪ ಹೈ,ಜಹಾ ಕ್ಷಮಾ ತಹಾ ಆಪ.

ಅನುವಾದ-

ಎಲ್ಲಿ ದಯವಿರುವುದೋ ಅಲ್ಲಿ ಧರ್ಮವಿರುವು ದು.ಎಲ್ಲಿ ಲೋಭ ಇರುವುದೋ ಅಲ್ಲಿ ಪಾಪವಿದೆ. ಎಲ್ಲಿ ಕೋಪವಿದೆವೋ ಅಲ್ಲಿ ಮೃತ್ಯುವಿದೆ (ನಾಶವಿದೆ) ಎಲ್ಲಿ ಕ್ಷಮೆವಿದೆವೋ ಅಲ್ಲಿ ಸ್ವತಃ ದೇವರು ದರ್ಶನ ಕೊಡುವುನು.

ದೋಹಾ -10

ದುರ್ಲಭ ಮನುಷ್ಯ ಜನ್ಮಹೈ,ದೇಹನ ಬಾರಂಬಾ ರ. ತರುವರ ಜ್ವೋ ಪತ್ತಿ ಝಡೆ, ಬಹುರಿನ ಲಾಗೆ ಡಾರ.

ಅನುವಾದ-

ಈ ಮನುಷ್ಯ ಜನ್ಮ ದುರ್ಲಭ. ಈ ದೇಹ ಮತ್ತೆ- ಮತ್ತೆ ದೊರೆಯುವುದಿಲ್ಲ. ಹೇಗೆ ಗಿಡದಿಂದ ಎಲೆ ಉದುರಿದ ಮೇಲೆ ಮತ್ತೆ ಟೊಂಗೆ ಗೆ ಹಚ್ಚಲಾಗುವುದಿಲ್ಲವೋ!

✍️ಶ್ರೀದುರ್ಗಾ(ಸರೋಜಾ ಮೇಟಿ)
ಹುಬ್ಬಳ್ಳಿ