ಬಾಳ ಬದುಕಿನ
ದಾರಿಯುದ್ಧಕ್ಕೂ ಜ್ಞಾನದೀಪ
ಹಚ್ಚಿಟ್ಟು ನಡೆದಷ್ಟು
ಉಲ್ಲಾಸದ ಹೂಮಳೆ ಚಿಮ್ಮಿಸಿದ
ಗುರುವೆ ವಂದನೆ ಅಭಿನಂದನೆ

ಮನದ ಕೆರೆಯ ತುಂಬಿದ್ದ
ಹಳೆ ಹೂಳ ತಗೆದು
ಹೊಸ ವಿಚಾರಗಳ
ಜೀವ ಸೆಲೆ ಎಬ್ಬಿಸಿದ
ಗುರುವೆ ವಂದನೆ ಅಭಿನಂದನೆ

ಭಾವ ಬಿಂಬಗಳು
ಪ್ರತಿಬಿಂಬಗಳಾಗಿ ಹೃದಯದ
ಕವಾಟಗಳ ತಟ್ಟಿ ಮುಟ್ಟಿ
ಡಿಂಬ ಜೀವಗಂಬವಾಗಿಸಿದ
ಗುರುವೆ ವಂದನೆ ಅಭಿನಂದನೆ

ಗುರುಯಿಲ್ಲದೆ ಗುರಿಯಿಲ್ಲ
ಅರಿವಿನ ಅರಮನೆಗೆ
ಗುರಿಯಿಟ್ಟು ಹೊಡೆಯಲು
ಕಲಿಸಿ ಬಾಳಿಗೆ ಬೆಳಕಾದ
ಗುರುವೆ ವಂದನೆ ಅಭಿನಂದನೆ

ಕೆಟ್ಟ ಮನವ ಸುಟ್ಟು
ಗಟ್ಟಿ ಇಟ್ಟಿಗೆಯಾಗಿ ಸಮಾಜಕೆ
ಸೇತುವೆ ಕಟ್ಟಲು ಕಲಿಸಿ
ಮಾನವ ಬೀಜ ಬಿತ್ತಿದ
ಗುರುವೆ ವಂದನೆ ಅಭಿನಂದನೆ

(ಶಿಕ್ಷಕರ ದಿನಾಚರಣೆಯ ಶುಭಾಶಯಗಳು)

✍🏻ಪರಸಪ್ಪ ತಳವಾರ,
ಕನ್ನಡ ಸಹಾಯಕ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು, ಲೋಕಾಪೂರ