ಪ್ಯಾರಿಸ್ ನಂತಾ ಪ್ಯಾರಿಸ್ ಬಗ್ಗೆ ಬರೆದ ಮೇಲೆ ಚಿಕ್ಕ ಪುಟ್ಟ ಜಾಗಗಳ ಬಗ್ಗೆ ಬರೆದರೆ ದೇವರು ಮೆಚ್ಚಿಯಾನೇ? ಅದಕ್ಕೇ ವರ್ಷಗಳಿಂದ ಪ್ಯಾರಿಸ್ ಸಮಸಮಕ್ಕೆ ನಿಂತು unofficially ಜೋಡಿಪದ ವಾಗಿ ಬಿಟ್ಟಿರುವ ಪಕ್ಕದ ಲಂಡನ್ನೇ ಸರಿ.ಪ್ಯಾರಿಸ್, ಲಂಡನ್ ಮತ್ತು ನ್ಯೂಯಾರ್ಕ್.. ಈ ಮೂರು ಮಹಾನಗರಗಳನ್ನು ನೋಡಿಬಿಟ್ಟರೆ ನೀವೊಂದು ಬ್ರಹ್ಮಾಂಡದಲ್ಲಿ ಅಣುವಾಗಿ ಜಗದ ವೈಶಾಲ್ಯತೆ ಮತ್ತು ವೈವಿಧ್ಯತೆಗೆ ತಲೆಬಾಗಿ ವಿನೀತರಾಗಿಬಿಡು ತ್ತೀರಿ.
ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ ಬ್ರಿಟಿಷ ರ ನಾಡಿನ ಬಗ್ಗೆ, ನೂರಾರು ವರುಷಗಳ ಅವರ ಆಳ್ವಿಕೆ/ದಬ್ಬಾಳಿಕೆಯಲ್ಲಿ ನಲುಗಿದ ನಮಗಿಂತ ಚೆನ್ನಾಗಿ ಅರಿತವರು ಇನ್ನಾರು? ಅದಕ್ಕೇ ಬೇರೆ ಯಾವುದಾದರೂ ದೇಶದ ಬಗ್ಗೆ ಬರೆಯೋಣ ಎಂದುಕೊಂಡವಳು ಮರಳಿ ಯುರೋಪಿನಲ್ಲೇ ಠಿಕಾಣಿ ಹಾಕಿದ್ದೇನೆ.ಬನ್ನಿ ‘ಕ್ವೀನ್’ ಚಿತ್ರದ ಕಂಗನಾ ಳಂತೆ lets do London ಟುಮಕ್ ದಾ..
ಕಾಲೇಜು ದಿನಗಳಲ್ಲಿ ನನಗೆ ದೊರಕಿದ್ದ ಅದ್ಭುತ ಪಾಂಡಿತ್ಯದ ಅಧ್ಯಾಪಕರು ಆಂಗ್ಲ ಸಾಹಿತ್ಯದ ಶ್ರೇಷ್ಠ ಲೇಖಕರುಗಳಾದ ಶೇಕ್ಸಪಿಯರ್,ಮಿಲ್ಟನ್, ವಿಲಿಯಮ್ ವರ್ಡ್ಸವರ್ತ, ವರ್ಜಿನಿಯಾ ವೂಲ್ಫ, ಮಾರ್ಕ ಟ್ವೇನ್, ಜಾರ್ಜ್ ಆರ್ವೆಲ್.. ಇನ್ನೂ ಮುಂತಾದವರ ಮೇರು ಕೃತಿಗಳನ್ನು ಕಣ್ಣಿಗೆ ಕಟ್ಟು ವಂತೆ ಪಾಠ ಮಾಡುತ್ತಿದ್ದರೆ, ನನ್ನ ಕಣ್ಣ ಮುಂದೆ ಸೂಟುಬೂಟಿನ ಬ್ರಿಟಿಷರು, ಸಾಗರದಾಚೆಯ, ನಾವುಇಂಗ್ಲೆಂಡ್ ಎಂದು ಕರೆಯುವ ಯುನೈಟೆಡ್ ಕಿಂಗ್ ಡಮ್ ಮತ್ತು ಅದರೊಳಗಿನ ಲಂಡನ್.. ಎಲ್ಲ ಸೇರಿ ಸಿನೆಮಾ ರೀಲಿನಂತೆ ಓಡುತ್ತಿತ್ತು.
ನನ್ನ ಮಟ್ಟಿಗೆ ನಾನು ಕ್ಲಾಸಿನಲ್ಲಿ ಕುಳಿತಲ್ಲೇ ಇಂಗ್ಲೆಂಡನ್ನು ಎಷ್ಟೋ ಸಲ ನೋಡಿ, ಲಂಡನ್ನಿನ ಗಲ್ಲಿಗಲ್ಲಿಗಳನ್ನೂ ಸುತ್ತಿ ಬಂದಾಗಿತ್ತು. ಅಧಿಕೃತ ವಾಗಿ ನನ್ನ ಪಾಸಪೋರ್ಟಗೆ ಯುಕೆಯ ವೀಸಾ ಸ್ಟಾಂಪ್ ಒತ್ತುವದೊಂದೇ ಬಾಕಿಯಿತ್ತು. ಎಷ್ಟೋ ದೇಶಗಳನ್ನು ಸುತ್ತಿದರೂ ಪಕ್ಕದ ಪ್ಯಾರಿಸ್ ಅನ್ನು ಎರಡು ಮೂರು ಸಲ ನೋಡಿ ಬಂದರೂ ಲಂಡನ್ ಮಾತ್ರ ನನಗೆ ಕ್ಯಾರೇ ಅಂದಿರಲಿಲ್ಲ. ಅಂತೂ ಸುಮಾರು ಇಪ್ಪತ್ತು ವರ್ಷಗಳ ನಂತರ ನನ್ನ ಆರಾಧ್ಯ ದೈವ ಶೇಕ್ಸಪಿಯರ್ ನ ನಾಡಿನ ಬಾಗಿಲು ನನಗೆ ತೆರೆದುಕೊಂಡಿತು.
ನಂಬಿದ್ರೆ ನಂಬಿ..ಇಲ್ಲ ಬಿಡಿ..ಲಂಡನ್ನಿನ ಬಹಳ ಷ್ಟು ಜಾಗಗಳು ನನಗೆ ಮೊಟ್ಟ ಮೊದಲನೆಯ ಸಲ ನೋಡುತ್ತಿದ್ದೇನೆ ಎನ್ನುವ ಭಾವನೆ ಹುಟ್ಟಿಸಲೇ ಇಲ್ಲ. ಲಂಡನ್ನಿನ ಹಾದಿ ಬೀದಿಗಳು ಪರಿಚಿತವೇ ಅನಿಸಿತ್ತು. (ಹೀಗೆ ಹೇಳಿದಾಗ, ನನ್ನ ಭಾವುಕ ಲಹರಿಯ ಮನವನ್ನು ಕಟ್ಟಿಹಾಕಲೆಂದೇ ಹುಟ್ಟಿದ ನನ್ನವರು ನೀನು ಯುರೋಪಿನ ಬಹುತೇಕ ದೇಶ ಗಳನ್ನೆಲ್ಲ ಸುತ್ತಿರುವದರಿಂದ ಅವೆಲ್ಲ ಹೆಚ್ಚುಕಡಿಮೆ ಒಂದೇಥರ ಇರುವದರಿಂದ ನಿನಗೆ ಹಾಗನಿಸುತ್ತದೆ ಅಷ್ಟೇ.. ಇನ್ಯಾವ ದಿವ್ಯಶಕ್ತಿಯೂ ನಿನಗಿಲ್ಲ ಎಂದು ಮೇಲೆ ಹಾರುತ್ತಿದ್ದ ನನ್ನನ್ನು ಒಮ್ಮೆಲೆ ಕೆಳಕ್ಕಿಳಿಸಿ ದ್ದರು.)
ಅಲ್ಲಿ ನೋಡುವ ಸ್ಥಳಗಳ ನನ್ನ. ಪಟ್ಟಿ ಎಷ್ಟು ದೊಡ್ಡದಿತ್ತೆಂದರೆ ಕನಿಷ್ಟ. ಅಲ್ಲಿಯೇ ಒಂದು ತಿಂಗಳಾದರೂ ಉಳಿಯಬೇಕಿತ್ತು. ಯುರೋಪಿನ ಅತ್ಯಂತ ದುಬಾರಿ ದೇಶಗಳಲ್ಲಿ ಒಂದಾದ ಯುಕೆ ಯಲ್ಲಿ ನೆಂಟರಿಷ್ಟರಿಲ್ಲದೇ ತಿಂಗಳುಗಟ್ಟಲೇ ತಂಗು ವುದು ಮನೆಯ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಹೊಡೆತವಾಗಿದ್ದರಿಂದ ಪ್ರವಾಸದ ಅವಧಿ ಯನ್ನು ಸ್ವಲ್ಪ ಮೊಟಕುಗೊಳಿಸಲಾಯಿತು. ಹೋಗುವದೆಂದು ನಿರ್ಣಯಿಸಿದ ಮೇಲೆ ಪ್ರತಿ ವಿಷಯಕ್ಕೂ ಕಡ್ಡಾಯವಾಗಿ ಮೆಗಾ.. ಮಿನಿ.. ಮೈಕ್ರೊ ವಾಗ್ಯುದ್ಧ ನಡೆಸಿ ಅಷ್ಟುದಿನಗಳ ಪ್ರವಾಸ ದಲ್ಲಿ ಎಲ್ಲೆಲ್ಲಿ ತಂಗುವುದು,ಎಲ್ಲೆಲ್ಲಿ ಹೋಗುವದು ಏನೇನು ನೋಡುವುದು ಎಂದೆಲ್ಲಾ ಒಂದೊಂದಾ ಗಿ ನಿರ್ಧಾರ ಮಾಡಿದೆವು. ಏನೇ ಆದರೂ ಲಂಡನ್ ಮತ್ತು ಸುತ್ತಲಿನ ಜಾಗಗಳಷ್ಟು ಸಮಗ್ರ ವಾಗಿ ನಾನು ಇನ್ಯಾವ ದೇಶವನ್ನೂ ನೋಡಿಲ್ಲ ಅಂದರೆ ಈ ಆಂಗ್ಲ ಸಾಹಿತ್ಯದ ದಟ್ಟ ಪ್ರಭಾವವೇ ಕಾರಣ.(ಆದರೆ ಅಸಲು… ನೋಡಬೇಕಾಗಿದ್ದ ಪಟ್ಟಿಯಲ್ಲಿ ನಮ್ಮವರು ಸೇರಿಸಿದ್ದು ಒಂದೇ ಒಂದು ಜಾಗ…ಅದರ ಬಗ್ಗೆ ಮುಂದೆ ಬರೆಯುತ್ತೇ ನೆ. ಅಲ್ಲಿಯವರೆಗೆ ಅದ್ಯಾವ ಸ್ಥಳವೆಂದು ಊಹೆ ಮಾಡುತ್ತಿರಿ ಪ್ಲೀಸ್.)
ವಿದೇಶ ಪ್ರವಾಸದ ಸಿದ್ಧತೆಯಲ್ಲಿ ಪಾಸ್ಪೋರ್ಟ್ ಮತ್ತು ವೀಸಾಗಾಗಿ ಓಡಾಟ, ಪೇಪರ್ ವರ್ಕ, ಹೊಟೆಲ್ ಬುಕಿಂಗ್, ರಿಟರ್ನ ಏರ್ ಟಿಕೆಟ್, ಹೋಗುವ ದೇಶದ ಹವಾಮಾನಕ್ಕನುಗುಣವಾದ ಬಟ್ಟೆಗಳು, ಪ್ಯಾಕಿಂಗ್, ಅಲ್ಲಿಯ ಕರೆನ್ಸಿ ಮತ್ತು ಡಿಜಿಟಲ್ ಪೇ ಸಿಸ್ಟಮ್, ಆ ದೇಶಗಳ ಬಗ್ಗೆ ಒಂದು ಸ್ವಲ್ಪ ಅಗತ್ಯವಾದ ಮಾಹಿತಿ, ಅಲ್ಲಿ ಬಳಸಬಹುದಾದ ಫೋನ್ ಮತ್ತು ಇಂಟರ್ನೆಟ್ ಡೇಟಾ ಮುಂತಾದ ಹತ್ತು ಹಲವು ವಿಷಯಗಳಿ ರುತ್ತವೆ. ಇಲ್ಲಿಂದಲೇ ಕೆಲವು ನಿರ್ದಿಷ್ಟ ಸ್ಥಳಗಳ ಆಯೋಜಿತ ಪ್ರವಾಸಗಳನ್ನೂ ವಿಶ್ವಾಸಾರ್ಹ ಕಂಪನಿಗಳ ಮೂಲಕ ಮುಂಗಡ ಬುಕ್ ಮಾಡಿ ಕೊಂಡೇ ಹೋಗಬಹುದು.
ಈ ಪ್ರವಾಸಗಳಲ್ಲಿ ನಮ್ಮಿಬ್ಬರ ಹೊಂದಾಣಿಕೆಯ ಸ್ವಾರಸ್ಯ ನಿಮಗೆ ಹೇಳಲೇಬೇಕು. ನಾನು ಪ್ರವಾಸ ಶುರುವಾದ ಪ್ರತಿಯೊಂದು ಕ್ಷಣವನ್ನೂ ಆನಂದಿ ಸುವವಳಾದರೆ ನಮ್ಮವರು ಪ್ರವಾಸದ ತಯಾರಿ ಯನ್ನೇ ಪ್ರವಾಸಕ್ಕಿಂತ ಸ್ವಲ್ಪ ಜಾಸ್ತಿ ಎಂಜಾಯ್ ಮಾಡುತ್ತಾರೆ ಎಂದು ನನ್ನ ಗುಮಾನಿ.ಇವರ ಜೊತೆ ವಿದೇಶ ಪ್ರಯಾಣ ಎನ್ನುವುದು ತುಂಬ ಅನಾಯಾಸ. ಎಲ್ಲಾ ದಾಖಲೆಗಳು, ಟಿಕೆಟ್, ಬೋರ್ಡಿಂಗ ಪಾಸ್, ವೀಸಾ ಎಲ್ಲವನ್ನೂ ಎಷ್ಟು ನೀಟಾಗಿ ಜೋಡಿಸಿಡುತ್ತಾರೆ ಎಂದರೆ ನಮಗೆ ಯಾವ ದೇಶದಲ್ಲೂ ಯಾವ ದಾಖಲೆಗಾಗಿಯೂ ತೊಂದರೆ ಅನುಭವಿಸಿದ್ದು ಇಲ್ಲವೇ ಇಲ್ಲ. ನನ್ನ ಪ್ಯಾಕಿಂಗ್ ಆದಮೇಲೆ ಮತ್ತೆ ಎಲ್ಲ ತೆಗೆದು ಹೊಸದಾಗಿ ಜೋಡಿಸುವ ಇವರ ಚಾಳಿ ಮಾತ್ರ ನನ್ನನ್ನು ಕೆರಳಿಸಿದರೂ, ಕೊನೆಯಲ್ಲಿ ಮತ್ತೇನ ನ್ನೋ ಹುಡುಕಲು ಹೋಗಿ ಎಲ್ಲ ಕಿತ್ತು ಹಾಕಿ ಸಮಾಧಾನಪಟ್ಟುಕೊಳ್ಳುತ್ತೇನೆ. ನಾನು ಗಾಳಿಪಟ ದಂತೆ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದರೆ, ನನ್ನವರ ಕೈಯಲ್ಲಿ ಸದಾ ವಾಸ್ತವತೆಯ ಸೂತ್ರ!
ಅದೆಲ್ಲಾ ಸರಿ… ಪ್ಯಾರಿಸ್ ನಿಂದ ಲಂಡನ್ ಹೇಗೆ ಭಿನ್ನ ..ನೋಡೋಣ ಬನ್ನಿ..ಪ್ಯಾರಿಸ್ ಸಾಂಸ್ಕೃತಿಕ ಮತ್ತು ಫ್ಯಾಷನ್ ರಾಜಧಾನಿಯಾದರೆ ಲಂಡನ್ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ತೊಟ್ಟಿಲು. ವಿಸ್ತೀರ್ಣದಲ್ಲಿ ಲಂಡನ್ ಪ್ಯಾರಿಸ್ ಗಿಂತ ಮೂರು ಪಟ್ಟು ದೊಡ್ಡದು. ಪ್ಯಾರಿಸ್ ನಲ್ಲಿ ಈ ಸುತ್ತಲಿನ ಬಡಾವಣೆಗಳ ಥರದ ವಿಸ್ತರಣೆಗಳು ಇಲ್ಲವೇ ಇಲ್ಲ..ಆದರೆ ಲಂಡನ್ ಸುತ್ತಲಿನ 33 ಚಿಕ್ಕ ಪಟ್ಟಣ ಗಳನ್ನು ಸೇರಿಸಿಕೊಂಡು ಮೊದಲು ಲಂಡನಿಯ ಮ್ ಎಂಬಹೆಸರಿಟ್ಟುಕೊಂಡು ಬೆಳೆದ ಬೃಹನ್ನಗರ. ಸಂಪ್ರದಾಯಗಳಿಂದ ಆರಂಭವಾಗಿ ತಾನೇ ತಾನಾ ಗಿ ವಿಕಸಿತವಾಗುವುದು ಇಂಗ್ಲಿಷ ಸಂಸ್ಕೃತಿಯ ಪರಮ ಲಕ್ಷಣ. ಅವರ ಸಂವಿಧಾನವಿರಲಿ, ಸರಕಾ ರವಿರಲಿ, ಜೀವನ ವಿಧಾನವೇ ಇರಲಿ.. ಅಲ್ಲಿ tradition ಮತ್ತು evolutionಗಳದ್ದೇ ಪ್ರಧಾನ ಪಾತ್ರ. ಪ್ಯಾರಿಸ್ ನ ಕಲಾಪ್ರೇಮ ಮತ್ತು ಲಂಡನ್ನಿ ನ ಸಾಹಿತ್ಯ ಪ್ರೇಮ… ನಿರ್ಧಾರ ಬಲು ಕಷ್ಟ.
ಪ್ಯಾರಿಸ್ ನ ಕೆಫೆಗಳು..ಲಂಡನ್ನಿನ ಪಬ್ ಗಳು.. ಪ್ಯಾರಿಸ್ ನ ಪ್ರತಿ ಬೀದಿಯಲ್ಲೂ ಮ್ಯೂಸಿಯಂ ಇರುವ ಹಾಗೇ ಲಂಡನ್ನಿನ ಹಾದಿಬೀದಿಗಳಲ್ಲಿ ಯೂ ಪ್ರಸಿದ್ಧ ಬರಹಗಾರನೊಬ್ಬನ ಮನೆ ಕಾಣು ತ್ತದೆ.ಅಲ್ಲಿಯ ಲೂವ್ರ..ಇಲ್ಲಿಯ ಬ್ರಿಟಿಷ್ ಮ್ಯೂಸಿ ಯಂ…ಅಲ್ಲಿದೆ ಐಫೆಲ್…ಇಲ್ಲಿದೆ ಶಾರ್ಡ.. ಪ್ಯಾರಿಸ್ ನ ಮೆಟ್ರೊ ಲಂಡನ್ನಿನಲ್ಲಿ ಟ್ಯೂಬ್ ಆಗಿಬಿಡುತ್ತದೆ. ಅಲ್ಲಿಯ ಸೀಯೆನ್ ..ಇಲ್ಲಿ ಥೆಮ್ಸ್ ಆಗಿ ಮಧ್ಯದಲ್ಲೇ ಹರಿಯತೊಡಗುತ್ತಾಳೆ. ಎಲ್ಲಕ್ಕಿಂತ ಮಿಗಿಲಾಗಿ ಲಂಡನ್ನಿನ ಆಂಗ್ಲಭಾಷೆ ಪ್ಯಾರಿಸ್ ನ ಫ್ರೆಂಚ್ ಮುಂದೆ ಪಕ್ಕದಮನೆಯಂತೆ ಪರಿಚಿತವೆನಿಸಿಬಿಡುತ್ತದೆ. ಅದಕ್ಕೇ ಇರಬೇಕು ಆಂಗ್ಲರು ಜಾಸ್ತಿ ಸ್ನೇಹಪರರಾಗಿ ಕಾಣುತ್ತಾರೆ. ಫ್ರೆಂಚರ ಕಾಫಿಯ ಬದಲು ಇಂಗ್ಲಿಷ್ ಟೀ ಇಷ್ಟ ವಾಗುತ್ತದೆ. ಫ್ರೆಂಚ್ ರ ಬ್ರಾಂಡ್ ಪ್ರಿಯತೆ.. ಫ್ಯಾಷನ್ ಸೆನ್ಸ.. ಆಂಗ್ಲರಲ್ಲಿ ತುಸು ಕಡಿಮೆ.. ಯುಕೆಯ ಆಹಾರ- ವಿಹಾರವೂ ಭಿನ್ನ ದೇಶಗಳ, ಸಂಸ್ಕೃತಿಗಳ ಹದವಾದ ಮಿಶ್ರಣ. ಅಲ್ಲಿ ಫ್ರೆಂಚರ ಅಪ್ರತಿಮ ಪಾಕ ಪ್ರಾವೀಣ್ಯತೆಯೇ ಗೆದ್ದುಬಿಡು ತ್ತದೆ.ಇಂಗ್ಲೆಂಡಿನ ರಾಜಮನೆತನ ಮತ್ತು ರಾಣಿಯ ಬಗ್ಗೆ ಗೊತ್ತಿಲ್ಲದವರೇ ಇಲ್ಲ. (ಇರಲಿ.. ಇದನ್ನೂ ಹೇಳಿಯೇ ಬಿಡುತ್ತೇನೆ… ಫ್ರೆಂಚ್ ನ ಸುಂದರಿ, ನಾಜೂಕುವೈನಿ ಮತ್ತು ಇಂಗ್ಲಿಷ್ ಜೆಂಟಲ್ ಮನ್ ಸ್ಕಾಚ್ ತಮ್ಮ ದೇಶಗಳ ವಿಭಿನ್ನತೆಯ ಸಮರ್ಥ ಪ್ರತಿನಿಧಿಗಳು…). ಒಟ್ಟಿನಲ್ಲಿ ಯುರೋಪಿನ ಈ ಎರಡೂ ರಾಜಧಾನಿಗಳು ಎಷ್ಟುಹತ್ತಿರದಲ್ಲಿದ್ದರೂ ಎಷ್ಟೊಂದು ಭಿನ್ನ ಮತ್ತು ತನ್ನದೇ ಕಾರಣಗಳಿಂದ ಮನಸೂರೆಗೊಳ್ಳುತ್ತವೆ. ಆದರೆ ಒಂದು ವಿಷಯ ದಲ್ಲಿ ಮಾತ್ರ ಭಾರೀ ಹೊಂದಾಣಿಕೆ… ಎರಡೂ ನಗರಗಳಲ್ಲಿ ಜೀವನ ಮಟ್ಟ ತುಂಬಾ ದುಬಾರಿ.
ಬ್ರಿಟಿಷ್ ಏರ್ವೇಸ್ ನ ವಿಮಾನದಲ್ಲಿ ಲಂಡನ್ನಿನ ಬೃಹತ್ ಹೀಥ್ರೊ ವಿಮಾನನಿಲ್ದಾಣದಲ್ಲಿ ಇಳಿದಾಗ ನಮ್ಮನ್ನಾಳಿದ, ನಮ್ಮ ಸಂಪತ್ತನ್ನು ಸೂರೆಗೈದ, ಶೇಕ್ಸಪಿಯರ್ ಬಾಳಿದ, ಅದ್ವಿತೀಯ ಸಾಹಿತಿಗಳು ನೆಲೆಸಿದ್ದ ನೆಲವನ್ನು ಸ್ಪರ್ಶಿಸುವ ಸಮಯದಲ್ಲಿ ಯಾಕೋ ಮನದಲ್ಲಿ ಸಿಹಿ ಮತ್ತು ಕಹಿಮೇಳೈಸಿದ ಭಾವನೆಗಳ ಮೋಡ ಕವಿದು,(ಲಂಡನ್ನಿನಕುಖ್ಯಾತ ವಾದ) ಜಿಟಿಜಿಟಿ ಮಳೆ.

ಈ ಹೀಥ್ರೊ ಏರ್ಪೋರ್ಟನಲ್ಲಿ ವಿಮಾನಗಳು ಬಂದಿಳಿಯುವುದು, ಏರುವುದು ಪಕ್ಕಾ ನಮ್ಮ ಮೆಜೆಸ್ಟಿಕ್ ನಲ್ಲಿ ಬಸ್ ಗಳು ಬರುವ, ಹೋಗುವ ಹಾಗೆ…ಅಷ್ಟು busy ಏರ್ಪೋರ್ಟ ಅದು. ಅಲ್ಲಿಂದ ನಮ್ಮ ಲಗೇಜು,ಇಮಿಗ್ರೇಷನ್… ಮೊದ ಲಾದ ಕೊನೆಯಿಲ್ಲದ, ನಿಲ್ಲುವ ಮತ್ತು ಕಾಯುವ ಕೆಲಸಗಳನ್ನು ಮುಗಿಸಿ ಹೊರಬಂದು ಜಗತ್ತಿನ ಅತಿ ದಕ್ಷ ಟ್ಯಾಕ್ಸಿ ಸರ್ವಿಸ್ ಎಂದು ಪ್ರಸಿದ್ಧವಾಗಿ ರುವ ಬ್ಲಾಕ್ ಕ್ಯಾಬ್ ನಲ್ಲಿ ಕೂತಾಗ ಕಂಡದ್ದು ಸರ್ದಾರ್ಜಿ ಡ್ರೈವರ್ ! ನಮ್ಮನ್ನು ನೋಡಿ ನಕ್ಕು, ನನ್ನ ಮನಸ್ಸನ್ನು ಓದಿಕೊಂಡಂತೆ ಹಾಕಿದ ಹಾಡು ‘ಲಂಡನ್ ಟುಮಕ್ ದಾ…’ ಕೇಳುತ್ತಲೇ ನನ್ನ ಲಘುವಾಗಿ ಶುರುವಾಗಿದ್ದ ಜೆಟ್ಲಾಗ್ ಹಾರಿಹೋಗಿ ಲಂಡನ್ ನಮ್ಮದೇ ಅನಿಸಿಬಿಟ್ಟಿತು. ಸುಮಾರು ಒಂದೂವರೆ ಗಂಟೆಯ ಪ್ರಯಾಣ ನಮ್ಮನ್ನು ನಮ್ಮ ಹೋಟೆಲ್ ಮೊಂಟ್ ಕಾಮ್ ಗೆ ತಂದಿಳಿಸಿತು.

ಆ ದಿನ ನಾವು ಆ. ಸುಂದರ ಹೋಟೆಲ್ ಮತ್ತು ರೂಮಿನ ಸೌಂದರ್ಯ ಮತ್ತು ಅಚ್ಚುಕಟ್ಟುತನವ ನ್ನು, ಇಂಗ್ಲಿಷ್ ಶಿಷ್ಟಾಚಾರದ ಪರಿಯನ್ನು ನೋಡಿ ಆನಂದಿಸಿದೆವು. ಸಂಜೆ ಅಲ್ಲೇ ಸುತ್ತಮುತ್ತಲಿನ ಜಾಗಗಳಲ್ಲಿ ಓಡಾಡಿದೆವು. ಲಂಡನ್ನಿನ ಐಕಾನಿಕ್ ಕೆಂಪು ಪೋಸ್ಟ ಬೂತು, ಜ್ಯೂಯಿಷ್ ವೀರವಾಲ ನ್ ಬರ್ಗನ. ಸ್ಮಾರಕ ನೋಡಿ ನಮ್ಮ ಲಂಡನ್ ಯಾತ್ರೆಯ ಶುಭಾರಂಭ ಮಾಡಿದೆವು.

ನಾವು ಯುಕೆಯಲ್ಲಿ ಇದ್ದಿದ್ದು 2017 ರ ನವೆಂಬರ್ ಕೊನೆಯಿಂದ ಡಿಸೆಂಬರ್ ಮಧ್ಯದವ ರೆಗೆ…ಯುರೋಪಿನ ಯಾವುದೇ ನಗರ ಕ್ರಿಸ್ ಮಸ್ ಸಮಯದಲ್ಲಿ ನವವಧುವಂತೆ ಸಿಂಗರಿಸಲ್ಪ ಡುತ್ತದೆ. ಲಂಡನ್ನಿನ ಪ್ರತಿ ಬೀದಿಯ ಲ್ಲೂ ಕ್ರಿಸ್ಮಸ್ ದೀಪಾಲಂಕಾರ… ಪ್ರತಿ ಪಾರ್ಕನಲ್ಲೂ ಕ್ರಿಸ್ಮಸ್ ಮಾರುಕಟ್ಟೆ..ನಮ್ಮ ಜಾತ್ರೆಯಂತೆ..ಎಲ್ಲಿ ನೋಡಿ ದರೂ ಕ್ರಿಸ್ಮಸ್ ಸೇಲ್ಸ.. ಕ್ರಿಸ್ಮಸ್ ದೀಪಾಲಂಕಾರ ಕ್ಕಾಗಿ ಖ್ಯಾತವಾಗಿರುವ ಲಂಡನ್ನಿನ ಆಕ್ಸ್ ಫರ್ಡ್ ಸ್ಟ್ರೀಟ್ ನ ಪಕ್ಕದಲ್ಲೇ ನಾವು ಇಳಿದುಕೊಂಡ ಹೋಟೆಲ್ ಇದ್ದಿದ್ದರಿಂದ ನಮಗೆ ಯುಕೆಯ ಕ್ರಿಸ್ ಮಸ್ ನ ವೈಭವದ ಅದ್ಭುತ ದರ್ಶನವಾಯಿತು. ಇದರ ಬಗ್ಗೆ ಮುಂದೆ ಹೇಳುತ್ತೇನೆ.

ಅಷ್ಟೇ ಅಲ್ಲ.. ಈಆಕ್ಸ್ ಫರ್ಡ್ ರೋಡು ಶಾಪಿಂಗ್ ಗೆ ಲಂಡನ್ನಿನಲ್ಲೇ ನಂ ವನ್ ಜಾಗ. ರಾಜನಿಂದ ರಂಕನವರೆಗೂ ಖುಷಿಯಾಗಿ ಶಾಪ್ ಮಾಡಬಹು ದಾದ ಎಲ್ಲಾ ಸ್ತರದ, ಎಲ್ಲಾ ಬ್ರಾಂಡಿನ ಮಳಿಗೆ ಗಳು. (ಓಕೆ.. ವಿಷಯ ಶಾಪಿಂಗ್ ಆಗಿದ್ದರಿಂದ.. ರಾಣಿ ಮತ್ತು ಅವಳ ಸಖಿಯರು ಎಂದು ಓದಿ ಕೊಳ್ಳಿ..) ಹತ್ತಿರದ ಸುಪ್ರಸಿದ್ಧ ಕಾರ್ನ್ ಬಿಸ್ಟ್ರೀಟ್, ರೀಜೆಂಟ್ ಸ್ಟ್ರೀಟ್, ಬಾಂಡ್ ಸ್ಟ್ರೀಟ್ ಗಳ ಕಣ್ಣು ಕೋರೈಸುವ ವಿದ್ಯುದ್ದೀಪಾಲಂಕಾರ. ನಾವಿಳಿದು ಕೊಂಡ ಮಾರ್ಬಲ್ ಆರ್ಚ್ ಎನ್ನುವ ಅತ್ಯದ್ಭುತ ಸ್ಥಳದ ಮಹಿಮೆಯೇ ನಮ್ಮ ಲಂಡನ್ ಟ್ರಿಪ್ ನ ಯಶಸ್ಸಿಗೆ ಕಾರಣ ಅಂದರೆ ತಪ್ಪಿಲ್ಲ.
ಈ ತರದ ತಿರುಗಾಟಗಳಲ್ಲಿ ಆಯಕಟ್ಟಿನ ಜಾಗಗ ಳಲ್ಲಿ ಇಳಿದುಕೊಳ್ಳುವದು ತುಂಬಾ ಅವಶ್ಯಕ. ನಿಮ್ಮ ಎಲ್ಲಾ ತಿರುಗಾಟಗಳಿಗೆ ಹತ್ತಿರ ಮತ್ತು ಸಮರ್ಪಕವಾದ ಸಂಪರ್ಕ ವ್ಯವಸ್ಥೆ ಇರುವ ಕಡೆ ತಂಗಿದ್ದರೆ, ಸುಲಭವಾಗಿ ಮತ್ತು ಶೀಘ್ರವಾಗಿ ನೋಡಬಹುದಾದ ಜಾಗಗಳನ್ನು ನೋಡಿ ಆನಂದಿ ಸಬಹುದು. ತಿರುಗಾಟದ ಶ್ರಮ ಅರ್ಧಕ್ಕರ್ಧ ಕಡಿಮೆಯಾಗಿ ಬಿಡುತ್ತದೆ. ನಾವಿದ್ದ ಮಾರ್ಬಲ್ ಆರ್ಚ್ ನಲ್ಲಿ ಟ್ಯೂಬ್ ಸ್ಟೇಶನ್, ಬಸ್ ಸ್ಟೇಶನ್ ಮತ್ತು ಹಲವಾರು ಪ್ರೇಕ್ಷಣೀಯ ಸ್ಥಳಗಳು ಅಕ್ಕ ಪಕ್ಕದಲ್ಲಿಯೇ ಇದ್ದದ್ದರಿಂದ ನಮ್ಮ ತಿರುಗಾಟ ಸಲೀಸಾಗಿತ್ತು.

ಪ್ಯಾರಿಸ್ ನ ತಿರುಗಾಟದಲ್ಲಿನ ಮುಗ್ಧತೆ ಲಂಡನ್ ಯಾತ್ರೆಯಲ್ಲಿ ಇಲ್ಲದಿದ್ದರೂ, ನನಗೆ ಪ್ರತಿ ಪಯಣ ವೂ ಹೊಸದನ್ನು ನೋಡುವ, ಕಲಿಸುವ, ನಾನಾ ವಿಧದ ಅನುಭವಗಳ ಪಾಠಶಾಲೆ. ಯುಕೆಯಲ್ಲಿ ಆದದ್ದು ಯಾವ ಕಲಬೆರಕೆಯಿಲ್ಲದ ಅಪ್ಪಟ ಪ್ರವಾಸ. ಜೊತೆಯಲ್ಲಿ ಮತ್ತೆ ಅವುಗಳನ್ನು ಜೀವಿ ಸೋಣ.. it would be great if you can make it…
ಸುಚಿತ್ರಾ ಹೆಗಡೆ, ಮೈಸೂರು