ನಾಡಿನ ದೇವಾಲಯಗಳಲ್ಲಿ ಹಲವು ಕಡೆ ದೇವಾಲಯಗಳ ಸಂಕೀರ್ಣವನ್ನೇ ನೋಡಬಹು ದು.ಅಂತಹ ಪ್ರಮುಖ ಸ್ಥಳಗಳಲ್ಲಿ ಗದಗಜಿಲ್ಲೆಯ ಲಕ್ಕುಂಡಿಯೂ ಒಂದು.

ಇತಿಹಾಸ ಪುಟದಲ್ಲಿ ಪ್ರಮುಖವಾಗಿ ಗುರುತಿಸಿ ಕೊಂಡಿದ್ದ ಲಕ್ಕುಂಡಿ ಸುಮಾರು 10 ರಿಂದ 15 ನೇ ಶತಮಾನದವರೆಗೂ ಕಲ್ಯಾಣಿ ಚಾಲುಕ್ಯರ ಕಾಲ ದಲ್ಲಿ ಪ್ರಮುಖ ಸ್ಥಳವಾಗಿತ್ತು. ಸುಮಾರು 1173 ರಲ್ಲಿ ಕಳಚೂರಿ ಅರಸ ಸೋಮಿದೇವನು ಇಲ್ಲಿನ ದೇವಾಲಯಗಳಿಗೆ ದತ್ತಿ ನೀಡಿದ ಶಾಸನವಿದೆ. ಇಲ್ಲಿ ಕಲ್ಯಾಣ ಚಾಲುಕ್ಯರ ಅರಸರ ಕಾಲದ ಹಲವು ಶಾಸನಗಳಿದ್ದು ವೈಭವದಿಂದ ಧಾರ್ಮಿಕ ಕೇಂದ್ರವಾಗಿ ಕಾಣಿಸಿಕೊಂಡಿತ್ತು. ಇನ್ನು ಚಾಲುಕ್ಯ ಅರಸ ಸತ್ಯಾಶ್ರಯನ ಕಾಲದಲ್ಲಿ ನಾಗದೇವನ ಪತ್ನಿ ಅತ್ತಿಮಬ್ಬೆ ಇಲ್ಲಿ 1500 ಬಸದಿಯನ್ನು ನಿರ್ಮಿಸಿದ ಉಲ್ಲೇಖವಿದೆ. ಹಾಗಾಗಿ ಜೈನ ಹಾಗು ಶೈವರ ಪ್ರಮುಖ ಕೇಂದ್ರವಾಗಿ ಇದು ಬೆಳದಿತ್ತು. ಇಲ್ಲಿ ದೇವಾಲಯಗಳ ಸಮೂಹವೇ ಇದ್ದು ಅವು ಗಳಲ್ಲಿ ಆಯ್ದ ದೇವಾಲಯಗಳ ಪರಿಚಯ ಇದೆ.

ಬ್ರಹ್ಮ ಜಿನಾಲಯ

ಸುಮಾರು 11 -12 ನೇ ಶತಮಾನದ ಈ ಜಿನಾಲ ಯ ಗರ್ಭಗುಡಿ, ಅಂತರಾಳ, ಮಂಟಪ ಹಾಗು ಮುಖಮಂಟಪವನ್ನು ಹೊಂದಿದೆ. ಇನ್ನು ಗರ್ಭ ಗುಡಿಯಲ್ಲಿ ಸಿಂಹ ಪೀಠದ ಮೇಲೆ ನೇಮಿನಾಥನ ಶಿಲ್ಪವಿದೆ. ಇನ್ನು ಪೀಠದ ಸುತ್ತಲೂ ಮಕರ ತೋರಣವಿದ್ದು ಪಂಚಶಾಖೆಯ ಬಾಗಿಲುವಾಡ ಇದ್ದು ಲಲಾಟದಲ್ಲಿ ತೀರ್ಥಂಕರನ ಬಿಂಬವಿದೆ. ಇನ್ನು ತೋರಣಗಲ್ಲಿನ ಗಂಗ, ರತಿ, ಧರಣೇಂದ್ರರ ಶಿಲ್ಪವಿದೆ.ಇನ್ನು ಅಂತರಾಳದಲ್ಲಿನ ಬಾಗಿಲುವಾಡ ದಲ್ಲಿ ಅಲಂಕರಣವಿದೆ.

ಇನ್ನು ಸುಖನಾಸಿ ಅಥವಾ ಅರ್ಧಮಂಟಪದಲ್ಲಿನ ನಾಲ್ಕು ಕಂಭಗಳಲ್ಲಿ ಅಲಂಕರಣವಿದ್ದು ಇಕ್ಕೆಲಗ ಳಲ್ಲಿ ಸುಂದರವಾದ ಪದ್ಮಾವತಿ ಹಾಗು ಬ್ರಹ್ಮನ ಶಿಲ್ಪವಿದೆ.ಇನ್ನು ಇಲ್ಲಿನ ಬಾಗಿಲುವಾಡದಲ್ಲಿ ಪಂಚ ಶಾಖೆಯ ಅಲಂಕರಣವಿದೆ. ಇನ್ನು ಮುಖಮಂಟ ಪದಲ್ಲಿ 28 ಕಂಭಗಳಿದ್ದು ಸುಂದರವಾಗಿದೆ. ಇನ್ನು ಹೊರಭಿತ್ತಿಯಲ್ಲಿ ಶಿಖರ ಮಾದರಿಗಳಿದ್ದು ದೇವಾಲಯಕ್ಕೆ ನಾಲ್ಕು ಹಂತದ ಶಿಖರವಿದೆ.

ಕಾಶಿ ವಿಶ್ವೇಶ್ವರ ದೇವಾಲಯ

ಸುಮಾರು 11 ನೇ ಶತಮಾನದಲ್ಲಿ ನಿರ್ಮಾಣ ವಾದ ಈ ದೇವಾಲಯ ಗರ್ಭಗುಡಿ, ಅಂತರಾಳ, ಹಾಗು ಮಂಟಪವನ್ನು ಹೊಂದಿದ್ದು ಜೊತೆಯಲ್ಲಿ ಸೂರ್ಯನ ಗುಡಿಯು ಇದೆ.  ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇನ್ನು ಬಾಗಿಲುವಾಡದಲ್ಲಿ ಪಂಚ ಶಾಖೆಯ ಸುಂದರ ಅಲಂಕರಣವಿದ್ದು ಲಲಟಾ ದಲ್ಲಿ ಗಜಲಕ್ಷ್ಮಿ ಇದೆ. ಇನ್ನು ಮೇಲಿನ ತೋರಣ ದಲ್ಲಿ ಭ್ರಹ್ಮ, ವಿಷ್ಣು, ಉಮಾಮಹೇಶ್ವರ ಹಾಗು ಕಾಳಾಮುಖ ಯತಿಗಳ ಕೆತ್ತೆನೆ ಇದೆ.  ಇನ್ನು ಅಂತ ರಾಳದಲ್ಲಿನ ಬಾಗಿಲುವಾಡ ಸಹ ಅಲಂಕರಣ ಗೊಂಡಿದೆ.

ಇನ್ನು ಎದುರು ಭಾಗದ ಮಂಟಪದಲ್ಲಿನ ನಾಲ್ಕು ಕಂಭಗಳಿದ್ದು ಇಲ್ಲಿನ ಭೈರವ, ಚಾಮುಂಡಿ, ಗಜಾ ಸುರ ಮರ್ಧನ ಹಾಗು ಶಿವ ಪಾರ್ವತಿಯರ ಕೆತ್ತೆನೆ ಇದೆ. ಇನ್ನು ಮುಖಮಂಟಪಕ್ಕೆ ಎರಡು ಪ್ರವೇಶದ್ವಾರವಿದ್ದು ಇಲ್ಲಿನ ಪೂರ್ವದ ಬಾಗಿಲು ವಾಡ ಸಪ್ತ ಶಾಖೆಯಿಂದ ಹಾಗು ದಕ್ಷಿಣ ಬಾಗಿಲು ವಾಡ ನವ ಶಾಖದಿಂದ ಸುಂದರವಾಗಿ ಕೆತ್ತೆನೆ ಗೊಂಡಿದೆ. ಇನ್ನು ಹೊರಭಿತ್ತಿಯಲ್ಲಿನ ಶಿಖರ ಮಾದರಿಗಳು ಕೆತ್ತೆನೆ ಇದ್ದು ಶಿವನ ಹಲವು ಕಥನ ಗಳ ಕೆತ್ತೆನೆ ನೋಡಬಹುದು. ಇನ್ನು ದೇವಾಲಯ ಕ್ಕೆ ತ್ರಿತಳ ಮಾದರಿಯ ಶಿಖರವಿದೆ.

ಇನ್ನು ದೇವಾಲಯದ ಎದುರು ಸೂರ್ಯ ದೇವಾಲಯವಿದ್ದು ಗರ್ಭಗುಡಿಯಲ್ಲಿ ಇದ್ದ ಸೂರ್ಯನ ಶಿಲ್ಪ ಈಗ ಕಾಣಬರುವುದಿಲ್ಲ. ಇಲ್ಲಿನ ಗರ್ಭಗುಡಿಯ ಬಾಗಿಲುವಾಡ ಸಹ ಪಂಚ ಶಾಖೆಯ ಅಲಂಕರಣ ಹೊಂದಿದ್ದು ಇಲ್ಲಿನ ಮಕರ ಜಲಪ್ರನಾಳ ಸುಂದರವಾಗಿದೆ. ಇನ್ನು ಹೊರಭಿತ್ತಿಯಲ್ಲಿ ಅಲಲ್ಲಿ ಕೆತ್ತೆನೆ ಇದ್ದು ತ್ರಿತಲ ಮಾದರಿಯ ಶಿಖರ ಹೊಂದಿದೆ.

ನನ್ನೇಶ್ವರ ದೇವಾಲಯ

ಈ ದೇವಾಲಯ ಸಹ ಸುಮಾರು 11 ನೇ ಶತಮಾನದ ನಿರ್ಮಾಣವಾಗಿದ್ದು ಗರ್ಭಗುಡಿ, ಅಂತರಾಳ, ಮಂಟಪ ಹಾಗು ಮುಖಮಂಟಪ ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ಶಿವಲಿಂಗ ಇದ್ದು ಪಂಚ ಶಾಖೆಯ ಬಾಗಿಲುವಾಡ ಹೊಂದಿದೆ. ಲಲಾಟದ ಗಜಲಕ್ಶ್ಮಿ ಕೆತ್ತೆನೆ ಇದ್ದು ತೋರಣದಲ್ಲಿ ಶಿಖರ ಮಾದರಿ ಇದೆ. ಇನ್ನು ಅಂತರಾಳದಲ್ಲಿ ನಾಲ್ಕು ಕಂಭಗಳಿದೆ.

ಅಂತಾರಳಕ್ಕೆ ಹೊಂದಿಕೊಂಡ ಸುಖನಾಸಿ ಭಾಗ ದಲ್ಲಿನ ಕಂಭಗಳಲ್ಲಿ ಬೈರವ, ಚಾಮುಂಡ, ಗಣಪತಿ, ಮಹಿಷಮರ್ದಿನಿ ಹಾಗು ನಟರಾಜನೆ ಕೆತ್ತೆನೆ ಕಲಾತ್ಮಕವಾಗಿದೆ. ಇನ್ನು ಮುಖಮಂಟಪ ದಲ್ಲಿ ಎಂಟು ಕಂಭಗಳಿದ್ದು ಇಲ್ಲಿ ಪದ್ಮದ ಅಲಂಕ ರಣವಿದೆ. ಇನ್ನು ಇಲ್ಲಿನ ದ್ವಾರ ಪಂಚಶಾಖೆಯ ಮಾದರಿಯಲ್ಲಿದ್ದ ಕಲಾತ್ಮಕವಾಗಿದೆ.ಇನ್ನು ಹೊರ ಭಿತ್ತಿಯಲ್ಲಿ ಶಿಖರ ಮಾದರಿಗಳಿದ್ದು ಅಲಲ್ಲಿ ಕೆತ್ತೆನೆ ಇದೆ. ಇಲ್ಲಿನ ಅಷ್ಟದಿಕ್ಪಾಲಕರ ಕೆತ್ತೆನೆ ನೋಡ ಬಹುದು. ಇನ್ನು ಮಕರ ಜಲಪ್ರನಾಳವಿದ್ದು ತ್ರಿತಲ ಮಾದರಿಯ ಶಿಖರವಿದೆ.

ನೀಲಕಂಠೇಶ್ವರ ದೇವಾಲಯ

ಬ್ರಹ್ಮಜಿನಾಲದ ಎದುರು ಇರುವ ಈದೇವಾಲಯ ಗರ್ಭಗುಡಿ, ಅಂತರಾಳ ಹಾಗು ಮುಖಮಂಟ ಹೊಂದಿದ್ದು ಗರ್ಭಗುಡಿಯಲ್ಲಿ ಈಗ ಮುಂಚೆ ಇರ ಬಹುದಾಗಿದ್ದ ಜಿನಶಿಲ್ಪದ ಬದಲು ಶಿವಲಿಂಗವಿದೆ. ಇಲ್ಲಿನ ಬಾಗಿಲುವಾಡದ ಲಲಾಟದಲ್ಲಿನ ಜಿನ ಬಿಂಬ ಹಾಗು ಸಿಂಹ ಪೀಠ ಇದು ಮುಂಚೆ ಬಸದಿ ಯಾಗಿತ್ತು ಎನ್ನುವದಕ್ಕೆ ಪುರಾವೆ. ಇನ್ನು ಅಂತ ರಾಳದಲ್ಲಿ ಎರಡು ಕಂಭಗಳಿದ್ದು ಮುಖಮಂಟಪ ದಲ್ಲಿ ನಾಲ್ಕು ಕಂಭಗಳಿವೆ.  ಹೊರಭಿತ್ತಿಯಲ್ಲಿ ಶಿಖರ ಮಾದರಿಗಳಿದ್ದು ದೇವಾಲಯಕ್ಕೆ ಇರಬಹು ದಾಗಿದ್ದ ಶಿಖರ ನಾಶವಾಗಿದೆ.

ಸೋಮೇಶ್ವರ ದೇವಾಲಯ

ಈ ದೇವಾಲಯ ಸಹ ಸುಮಾರು 11 – 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಗರ್ಭಗುಡಿ, ಅಂತರಾಳ ಹಾಗು ಮುಖಮಂಟಪ ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ಶಿವಲಿಂಗವಿದೆ.  ಇನ್ನು ಇಲ್ಲಿನ ಬಾಗಿಲುವಾಡ ಪಂಚಶಾಖೆಯ ಅಲಂಕರ ಣ ಹೊಂದಿದ್ದು ಅಂತರಾಳದಲ್ಲಿ ಸಹ ಇದೇ ಮಾದರಿ ಹೊಂದಿದೆ. ಇನ್ನು ಮುಖಮಂಟದಲ್ಲಿ ನಾಲ್ಕು ಕಂಭಗಳಿದ್ದು ಹೊರಭಿತ್ತಿಯಲ್ಲಿ ಶಿಖರಗಳ ಮಾದರಿಗಳಿದ್ದು ದೇವಾಲಯ ತ್ರಿತಲಮಾದರಿಯ ಶಿಖರ ಹೊಂದಿದೆ.

ಮಾಣಿಕೇಶ್ವರ ದೇವಾಲಯ

ಈ ದೇವಾಲಯ ಸಹ ಸುಮಾರು 11 – 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ತ್ರಿಕುಟಾಲ ಮಾದರಿಯದ್ದು ಮೂರು ಗರ್ಭಗುಡಿ,ಅಂತರಾಳ, ಅರ್ಧಮಂಟಪ ಹಾಗು ಮುಖಮಂಟಪ ಹೊಂದಿ ದೆ. ಇನ್ನು ಪೂರ್ವಾಭಿಮುಖದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಉತ್ತರ ಹಾಗು ದಕ್ಷಿಣದ ಗರ್ಭ ಗುಡಿಯಲ್ಲಿ ಶಿಲ್ಪವಿಲ್ಲ. ಎಲ್ಲ ಗರ್ಭಗುಡಿಗಳು ಬಾಗಿಲುವಾಡಗಳು ಪಂಚಶಾಖೆಯ ಅಲಂಕರಣ ಹೊಂದಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ಅರ್ಧಮಂಟಪದಲ್ಲಿ ನಾಲ್ಕು ಕಂಭಗಳಿದ್ದು ಮುಖಮಂಟದಲ್ಲಿ ಎಂಟು ಕಂಭಗಳಿವೆ. ಇನ್ನು ಹೊರಭಿತ್ತಿಯಲ್ಲಿ ಶಿಖರ ಮಾದರಿಗಳಿದ್ದು ದೇವಾಲಯಕ್ಕೆ ಇರಬಹುದಾಗಿದ್ದ ಶಿಖರದ ಭಾಗ ನಾಶವಾಗಿದೆ. ಇನ್ನು ದೇವಾಲಯದ ಆವರಣ ದಲ್ಲಿ ಸುಂದರವಾದ ಕಲ್ಯಾಣಿ ಇದ್ದು ಇದರಲ್ಲಿನ ಮೆಟ್ಟಿಲುಗಳು ಹಾಗು ಇದರಲ್ಲಿನ ಕೋಷ್ಟಕಗಳು ಗಮನ ಸೆಳೆಯುತ್ತದೆ.

ಈ ದೇವಾಲಯ ಸಹ ಸುಮಾರು 11 – 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ತ್ರಿಕುಟಾಚಲ ಮಾದರಿಯದ್ದು ಮೂರು ಗರ್ಭಗುಡಿ,ಅಂತರಾಳ, ಅರ್ಧಮಂಟಪ ಹಾಗು ಮುಖಮಂಟಪ ಹೊಂದಿ ದೆ. ಇನ್ನು ಪೂರ್ವಾಭಿಮುಖದ ಗರ್ಭ ಗುಡಿಯಲ್ಲಿ ಶಿವಲಿಂಗವಿದ್ದು ಉತ್ತರ ಹಾಗು ದಕ್ಷಿಣದ ಗರ್ಭ ಗುಡಿಯಲ್ಲಿ ಶಿಲ್ಪವಿಲ್ಲ. ಎಲ್ಲ ಗರ್ಭಗುಡಿಗಳು ಬಾಗಿಲುವಾಡಗಳು ಪಂಚಶಾಖೆಯ ಅಲಂಕರಣ ಹೊಂದಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ಅರ್ಧಮಂಟಪದಲ್ಲಿ ನಾಲ್ಕು ಕಂಭಗಳಿದ್ದು ಮುಖಮಂಟದಲ್ಲಿ ಎಂಟು ಕಂಭಗಳಿವೆ. ಇನ್ನು ಹೊರಭಿತ್ತಿಯಲ್ಲಿ ಶಿಖರ ಮಾದರಿಗಳಿದ್ದು ದೇವಾ ಲಯಕ್ಕೆ ಇರಬಹುದಾಗಿದ್ದ ಶಿಖರದ ಭಾಗ ನಾಶ ವಾಗಿದೆ. ಇನ್ನು ದೇವಾಲಯದ ಆವರಣದಲ್ಲಿ ಸುಂದರವಾದ ಕಲ್ಯಾಣಿ ಇದ್ದು ಇದರಲ್ಲಿನ ಮೆಟ್ಟಿ ಲುಗಳು ಹಾಗು ಇದರಲ್ಲಿನ ಕೋಷ್ಟಕಗಳು ಗಮನ ಸೆಳೆಯುತ್ತದೆ.


ಹಾಲುಗುಂಡಿ ಬಸವೇಶ್ವರ ದೇವಾಲಯ

ಈ ದೇವಾಲಯ ಸಹ ತ್ರಿಕೂಟಾಚಲ ಮಾದರಿಯ ದ್ದು ಮೂರು ಗರ್ಭಗುಡಿ, ಮೂರು ಅಂತರಾಳ ಗಳು ಹಾಗು ಮುಖಮಂಟಪ ಹೊಂದಿದೆ. ಇನ್ನು ಪೂರ್ವ, ಪಶ್ಚಿಮ ಹಾಗು ಉತ್ತರದ ಗರ್ಭಗುಡಿ ಯಲ್ಲಿ ಶಿವಲಿಂಗವಿದ್ದು ಪಶ್ವಿಮ ದಿಕ್ಕಿನಲ್ಲಿ ಈ ಮೊದಲು ಇದ್ದು ಸೂರ್ಯನ ಬದಲಾಗಿ ಶಿವಲಿಂಗ ಸ್ಥಾಪಿಸಲಾಗಿದೆ. ಉತ್ತರದಲ್ಲಿ ವಿಷ್ಣುವಿನ ಶಿಲ್ಪದ ಬದಲಾಗಿ ಶಿವಲಿಂಗವಿದೆ. ಈ ಮೊದಲು ತ್ರೈ ಪುರುಷ ದೇವಾಲಯವಾಗಿದ್ದ ಇದ್ದು ನಂತರದ ಕಾಲದಲ್ಲಿ ಬದಲಾಗಿದೆ. ಇನ್ನು ಶಾಸನಗಳಲ್ಲಿ ಇದನ್ನು ಗವರೇಶ್ವರ ಎಂದು ಕರೆಯಲಾಗಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್. ಬೆಂಗಳೂರು