ಹಿಂದಿನ ಸಂಚಿಕೆಯಲ್ಲಿ  ಸಾಧನೆಯ ಪ್ರೇರಣೆಯ ಕೆಲ ಅಂಶಗಳನ್ನು  ಗಮನಿಸಿ, ಅದು ಒಂದು ರೀತಿ ಯಲ್ಲಿ ವ್ಯಕ್ತಿ ಕೇಂದ್ರೀಕೃತವಾಗಿತ್ತು. ಸಂಸ್ಥೆಗೂ ಕೂಡಾ ಪ್ರೇರಣಾ ಬಲ ಬೇಕೇಬೇಕು. ಸಂಸ್ಥೆಯ ಒಳಗೆ ಹೆಚ್ಚು ಜನ  ಇರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಪ್ರೇರಣೆಗಳು, ಕಾರಣಗಳು, ಇಚ್ಚೆ ಗಳು ಹೀಗಾಗಿ ತಂಡ ನಡೆಸುವವರಿಗೆ ಹಲವು ಸವಾಲುಗಳು.

ಇಲ್ಲಿ ಸಮತೋಲನ ಸಾಧಿಸುವದು ಕಠಿಣವೆನಿಸಿ ದರೂ ಸಹ ವಿಚಾರ, ಮಾತು, ತಕ್ಕಮಟ್ಟಿಗೆ ಧನ ಇದ್ದರೆ ಸಾಧಿಸಬಹುದು ಮತ್ತು ಒಂದಿಷ್ಟು ಡಿಪ್ಲೊಮಸಿ ಬೇಕೇಬೇಕು. 

ಮೊದಲು ವಿಚಾರದ ವಿಷಯಕ್ಕೆ ಬಂದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ ಕಾರ್ಯಪ್ರವೃತ್ತ ರಾಗಬೇಕು:

A) ಉದ್ದೇಶಗಳ ನಿಚ್ಚಳತೆ

ನಾಟಕ ಅಥವಾ ತತ್ಸಂಬಂದಿ ಕೆಲಸ ಯಾಕೆ ಮಾಡಬೇಕು? ರಂಗಸಂಸ್ಥೆಯ ಹುಟ್ಟು ಆಗುವದು ಕೆಲಜನ ಒಂದಿಷ್ಟು ಸಾಮಾನ್ಯ ಗುರಿ ಮತ್ತು ಉದ್ದೇಶಗಳನ್ನು ಹೊಂದಿ ಅವುಗಳನ್ನುಈಡೇರಿಸಿ ಕೊಳ್ಳಲು  ಕೂಡಿ ಸೇರಿದಾಗ ಮಾತ್ರ. ಆಗ ಸಂಸ್ಥೆ ಯಲ್ಲಿರುವ ವ್ಯಕ್ತಿಗಳು ಮೇಲಿಂದ ಮೇಲೆ ಕೂಡಿ ಸೇರುತ್ತ ತಮ್ಮ ತಮ್ಮ ಉದ್ದೇಶಗಳ ಸ್ಪಷ್ಟತೆಯೊಂ ದಿಗೆ ಸಂಸ್ಥೆಯನ್ನೇ ಅರಣ್ಯವಾಗಿಸಿದಾಗ  ಅದನ್ನೇ ಅಭಯಾರಣ್ಯ ಮಾಡಿಕೊಳ್ಳುವ ಆಶೆಗಳು ಪ್ರತಿ ಯೊಬ್ಬನಲ್ಲಿ ಒತ್ತರಿಸುತ್ತವೆ, ಆಗ ಪ್ರತಿಯೊಬ್ಬನು ಆತ್ಮಾವಲೋಕನ  ಮಾಡಿಕೊಳ್ಳಬಹುದಾದ ಪ್ರಶ್ನೆ ಗಳು ಎದುರಾಗುತ್ತವೆ.

1.ನನ್ನ ವ್ಯಕ್ತಿತ್ವ ವಿಕಸನ, ಸಂಪರ್ಕಶಕ್ತಿ ಸಾಮರ್ಥ್ಯ ಬೆಳೆಯುವದಕ್ಕಾಗಿ.

2.ದುಡ್ಡು ಮಾಡುವದಕ್ಕಾಗಿಯೇ

3.ಕೀರ್ತಿ,ಹೆಸರು,ಜನಪ್ರಿಯತೆ ಗಳಿಸಲೆಂದೇ  

4. ಒಂದಿಷ್ಟು  ರಾಜಕೀಯ ಆಶೋತ್ತರಗಳ, ಗುರಿಗಳ ಈಡೇರಿಕೆಗಾಗಿಯೇ.

5.ಬೇರೆಲ್ಲಿಯೂ ಕಲಿಯಲು ಸೀಟು ಸಿಗುವದಿಲ್ಲ.

6.ನನಗೆ ಸಂಪ್ರಾದಾಯಕ ಶಿಕ್ಷಣದಲ್ಲಿ ಕೆಲವು ವಿಷಯಗಳು ತಲೆಗೆ ಹತ್ತುವದಿಲ್ಲ.

7.ಸಿನಿಮಾ, ಟೆಲಿವಿಷನ್ ನನಗೆ ಆಸಕ್ತಿ ಅದಕ್ಕಾಗಿ ಇಲ್ಲಿ ನಾಟಕದ ಹಾದಿ ನನ್ನ ಗುರಿಯನ್ನು ಸರಳ ಗೊಳಿಸುತ್ತದೆ.

8.ನನಗೆ ಮನೆಯಲ್ಲಿ ಕುಳಿತು ಬೇಸರ.ಇಷ್ಟ ಮಿತ್ರ ರನ್ನು ಭೇಟಿಯಾಗಲು ಸಮಯ ಕಳೆಯಲು ರಂಗ ಭೂಮಿ ಒಂದು ಅವಕಾಶ  ಒದಗಿಸಿಕೊಡುತ್ತದೆ. 

9.ರಂಗಭೂಮಿಯ ಕೆಲಸ ಟೀಮ್(ತಂಡ)ಭಾವನೆ ಉದ್ದೀಪನಗೊಳಿಸುತ್ತದೆ

10.ರಂಗಭೂಮಿಯಲ್ಲಿಬೆಳವಣಿಗೆ ಪ್ರತಿಭೆಯಿಂದ ಮಾತ್ರ ಎಂದಾದರೂ  ಒಂದಿಷ್ಟು ಸಂಪರ್ಕ, ಮಾಧ್ಯಮ ಸಾಮೀಪ್ಯ ಯಾವಾಗಲೂ ಒಳ್ಳೆಯದು. 

ಮೇಲಿನ 10 ಅಂಶಗಳಿಗಿಂತಲೂ ಇನ್ನು ಹೆಚ್ಚಿನ ಕಾರಣಗಳು ಇರಬಹುದು ಅದಕ್ಕಾಗಿ ಸಂಸ್ಥೆಯ ಧುರೀಣತ್ವ ಹೊಂದಿದವರು  ಸಾಮೂಹಿಕ ಉದ್ದೇಶಗಳನ್ನು  ಪ್ರತಿಯೊಬ್ಬರ ಅಳತೆಗೋಲಿಗೆ ಹೊಂದಿಸುತ್ತ ನಿರಂತರ ಕ್ರಿಯಾಶಾಲಿಯಾಗಿರಬೇ ಕಾಗುವದು ಅಷ್ಟೇ ಅವಶ್ಯ. ಮತ್ತು ಒಂದಿಷ್ಟು ಸಾಮಾನ್ಯ ಅಂಶಗಳಿಂದ  ಬ್ರೇನ್ವಾಷ್ ಮಾಡಲು  ಅವರದೇ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿ ಕೊಳ್ಳಬೇಕು.ಅದು, ಆ ಪ್ರಯತ್ನಗಳು ಸಂಸ್ಥೆಯಿಂ ದ ಸಂಸ್ಥೆಗೆ ಭಿನ್ನವಾಗಿರುತ್ತವೆ ಎಲ್ಲದರಲ್ಲೂ ವೈಜ್ಞಾನಿಕವಾಗಿ ವೃತ್ತಿಪರತೆಯನ್ನು ತೋರಿಸಬೇ ಕಾಗುತ್ತದೆ.ಈ ಎಲ್ಲಾ ಪ್ರಯತ್ನಗಳು ಯಾವಾಗಲು ಪ್ರಯತ್ನ ಮತ್ತು ತಪ್ಪುಮಾಡುವದರ ಮೂಲಕವೆ. ಅನುಭವ ಅನ್ನುವದು ಹುಟ್ಟುವದು ಹೀಗೆಯೇ. ಪ್ರತಿ ಅನುಭವ ವಿಶ್ಲೇಷಣೆಗೆ ಒಳಪಟ್ಟಾಗಲೇ ಅರಿವು ಮೂಡುವ ಜ್ಞಾನೋದಯವಾಗುವದು. ಈ ಅರಿವಿನ ಒಂದು ಭಾಗವೇ ಆರ್ಥಿಕ. ಶಕ್ತಿ, ಸಾಮರ್ಥ್ಯ. 

  B) ಆರ್ಥಿಕ ಸ್ಥಿತಿ ಗತಿ

ಆರ್ಥಿಕ ಭಧ್ರತೆ ತಂಡದ ಆಕರ್ಷಕ ಶಕ್ತಿ.ಆರ್ಥಿಕ ಭಧ್ರತೆ  ಬರುವದೇ ಪ್ರಯತ್ನಶೀಲತೆಯೊಂದಿಗೆ. ಆರ್ಥಿಕ ಸಂಪನ್ಮೂಲವೆಂದರೆ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ಎಷ್ಟು ದುಡ್ಡಿದೆ ಮತ್ತು ಸಂಸ್ಥೆಯ ಹೆಸರಿನಲ್ಲಿ ಸ್ಥಿರಾಸ್ತಿ, ಚರಾಸ್ತಿಗಳಿವೆ ಎನ್ನುವದು ಗೊತ್ತಾಗುವದೇ ಅದರ ಬ್ಯಾಲನ್ಸ್ ಶೀಟದಲ್ಲಿ.  ಆಯವ್ಯಯ ಪತ್ರಿಕೆ ನಿಯಮಿತವಾಗಿ ಮಂಡನೆ, ಲೆಕ್ಕ ಪರಿಶೋಧನೆ ಇವುಗಳೆಲ್ಲ ಒಂದು ರೀತಿಯ ಥರ್ಮಮೀಟರ್ ಮತ್ತು ರಕ್ತದೊತ್ತಡ ಅಳೆಯುವ ಯಂತ್ರ ಇದ್ದಂತೆ.ಅಷ್ಟೇ ಅಲ್ಲ ಎಲ್ಲಿ ಹಣ ಪೋಲಾ ಗುತ್ತಿದೆ ಅನ್ನುವ  ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ ಯೂ ಅಗತ್ಯ. ಆರ್ಥಿಕ ಶಿಸ್ತು ಯಾವದೇ ಸಂಸ್ಥೆ ಗಾಗಲಿ ಅತಿ ಮುಖ್ಯ. ಹೆಚ್ಚಿನ ತಂಡಗಳು  ಸಂಸ್ಥೆ ಗಳಲ್ಲಿ ಇದು ಕಡಿಮೆ. ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳಿಗೆ ಲೆಕ್ಕಪತ್ರ ಇಟ್ಟು, ನಿಯ ಮಿತವಾಗಿ ಲೆಕ್ಕಪರಿಶೋಧಕರಿಂದ ಪರೀಕ್ಷಿಸಿಕೊ ಳ್ಳುತ್ತ ಇರುತ್ತವೆ ಅಂತ ನಂಬಬಹುದಾಗಿದೆ.  ಆದರೆ  ರಂಗಭೂಮಿ ಪ್ರದರ್ಶನಗಳಲ್ಲಿ ಟೀಕಿಟ್, ಬ್ರೋಶರ್ ಪ್ರಚಾರ ಸಾಮಗ್ರಿ, ರಂಗಪರಿಕರಗಳು ಮತ್ತಿತರ ಎಲ್ಲ ವೆಚ್ಚಗಳ ಮೂಲ ತಪಾಸಿಸುತ್ತ ಹೋದರೆ ಅದು ಮತ್ತೊಂದು ಖಂಡಕಾವ್ಯವೇ ಆಗುತ್ತದೆ. ಸಂಸ್ಥೆಯ ಖಜಾಂಚಿ ಕಾರ್ಯವೃತ್ತಿ ಪರನಾಗಿದ್ದರೆ ಅನುಕೂಲ. ಸರ್ಕಾರದಿಂದ ಅನು ದಾನ ಪಡೆಯುವ ಸಂಸ್ಥೆ ಈ ದೃಷ್ಟಿಯಿಂದ ಹೆಚ್ಚು ಆರ್ಥಿಕ ಶಿಸ್ತನ್ನು  ತೋರಿಸಬೇಕಾಗುತ್ತದೆ. ಆದರೆ ಎಲ್ಲರಿಗೂ ಗೊತ್ತಿದ್ದ ಸಂಗತಿಯಂದರೆ  ಸರ್ಕಾರದ ಆರ್ಥಿಕ ಸಹಾಯ  ಅನುದಾನ ಹಾಗೆಯೇ ಸಿಗು ವುದಿಲ್ಲ.ಅದಕ್ಕಿಷ್ಟು ಮಂತ್ರ ಯಂತ್ರ ತಂತ್ರ ಬೇಕು. ಅವಕ್ಕೆಲ್ಲ ಸಂಭಂದಪಟ್ಟ ಯಾವ ವೆಚ್ಚಕ್ಕೂ ಪ್ರಾಮಾಣಿಕ ಲೆಕ್ಕ ತೋರಿಸಲು ಮತ್ತು ಪ್ರಾಮಾಣಿ ಕತೆಯಿಂದ ಇರಲು ಸಾಧ್ಯವಿಲ್ಲ ಅಂದಾಗ  ಗೊತ್ತಿಲ್ಲದೆಯೇ ಅಪ್ರಾಮಾಣಿಕತೆ, ಭ್ರಷ್ಟತೆಯು ಆರಂಭವಾಗುತ್ತದೆ. ಅದೇ ದಿನಾ, ಪ್ರತಿವರ್ಷ ಹೆಮ್ಮರವಾಗುತ್ತದೆ. ಅದಕ್ಕಾಗಿ ಪಾರದರ್ಶಕತೆ, ಪ್ರಾಮಾಣಿಕತೆ ಅವಶ್ಯ. ಎಲ್ಲ ಸಂಸ್ಥೆಗಳಲ್ಲಿ ಇದು ಕಠಿಣ ಸಾಧ್ಯ. ಎಂಥದೇ ತಂತ್ರಜ್ಞಾನ ತಂದರೂ ರಂಗೋಲಿ ಕೆಳಗೆ ನುಸುಳುವ ಕೌಶಲ್ಯ ಕೆಲವರಿಗೆ ಇದ್ದೆ ಇರುತ್ತದೆ ಅನ್ನೋದು  ಅನುದಾನ ಪಡೆಯು ವ  ಸಂಸ್ಥೆಯ ಆರ್ಥಿಕ ವ್ಯವಹಾರ ನೋಡಿಕೊಳ್ಳು ವವನ ಕೌಶಲ್ಯ ಮತ್ತು ಮನೋಸ್ಥಿತಿಯನ್ನು ಅವ ಲಂಬಿಸಿರುತ್ತದೆ. ಸಂಸ್ಥೆ ನಡೆಯಲು ಆರ್ಥಿಕ ಸಂಪನ್ಮೂಲ ಬೇಕೆ ಬೇಕು. ಇದನ್ನು ತರುವುದು ಹೇಗೆ ಅನ್ನುವುದನ್ನ ವಿಚಾರ ಮಾಡಿದಾಗ ಹೊಳೆ ಯುವ ಅಂಶಗಳು:

1. ಸರ್ಕಾರದ ಕಾನೂನು ಅನುಗುಣವಾಗಿ ಸಂಸ್ಥೆ ಯನ್ನು ಮೊದಲು  ಟ್ರಸ್ಟ್,  ಸಹಕಾರಿ ಸಂಸ್ಥೆ ಎಂದಾಗಲಿ ನೋಂದಣಿ ಮಾಡಿಸಿ ಮೊದಲ ಮೂರು ವರ್ಷಗಳನ್ನು ಕೈಯಿಂದಲೋ ಅಥವಾ ಚಂದಾ ಎತ್ತಿ ಮೊದಲಿನ ಮೂರು ವರ್ಷಗಳನ್ನ ನಿಯಮಿತವಾಗಿ ಕಾರ್ಯ ಮಾಡ್ತ ಲೆಕ್ಕಪತ್ರ ಪರಿಶೀಲನೆ ಮಾಡಿಸಿ ದಾಖಲೆ ಇಟ್ಟುಕೊಂಡಾಗ ಮೊದಲ ಸುತ್ತಿನ ಅರ್ಹತೆ ಪಡೆಯುವದು.

2.ಸರಕಾರದ ವಿವಿಧ ಇಲಾಖೆಗಳ ಕಾರ್ಯವಿಧಾ ನದ ಪ್ರಕಾರ ಕ್ರಿಯಾಯೋಜನೆ ತಯಾರು ಮಾಡಿ ಸಂಬಂಧಪಟ್ಟ  ಸ್ಥಳೀಯ ಕಛೇರಿಯ ಮೂಲಕ  ಶಿಫಾರಸ್ಸಿನೊಂದಿಗೆ ಮೇಲೆ ಕಳುಹಿಸುವದು.ಈಗ ಅದು ಆನ್ಲೈನ್ ಮೂಲಕವೂ ಆಗಬಹುದು. ಎಲ್ಲದಕ್ಕೂ ಸಾಕ್ಷಿ , ಪ್ರಮಾಣ ಪತ್ರ, ಶಿಫಾರ್ಸು ಪತ್ರ ಎಲ್ಲವೂ ಲಗತ್ತಿಸಬೇಕು.

3.ನಂತರದ ವ್ಯವಹಾರಗಳು ಪ್ರಾಕ್ಟಿಕಲ್ ಆಗಿ ಖಠಿಪಿಟಿ  ಮಾಡೋದರ  ಮೇಲೆ ನಿಂತಿರುತ್ತದೆ. ಸ್ಥಳೀಯ ಕಛೇರಿಗಳಿಂದ ಹಿಡಿದು ರಾಜಧಾನಿ ಕಚೇರಿಗಳವರೆಗೆ ಪ್ರಯತ್ನಬೇಕು. ಉತ್ತಮ ಸುದ್ದಿ ಮತ್ತು ಪ್ರಚಾರಕ್ಕಾಗಿ ಸುದ್ದಿ ಮನೆಗಳಿಗೂ ಇದೆ ಅನ್ವಯ. ಸುದ್ದಿ ಮನೆಗಳ ಹೆಡ್ ಗಳೂ ಸಹ ಬೆಂಗಳೂರುನಲ್ಲಿಯೇ. ಹೀಗಾಗಿ ಬೆಂಗಳೂರು ಬಿಟ್ಟಿದ್ದಲ್ಲ. ಯಾವದೇ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ, ಅದರ ಆರ್ಥಿಕ ಸ್ಥಿತಿಗತಿಗೂ ಬೆಂಗಳೂರು ಕಾರಣವಾಗುತ್ತದೆ 

4.ಇನ್ನೂ ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ಹಲವು ಇಲಾಖೆಗಳು  ಅವು ಇದ್ದದ್ದರಲ್ಲಿಯೇ  ಬೆಂಗಳೂರಿಗಿಂತ ಬೇಕು  ಆದರೂ ಗುರ್ತುಬೇಕು, ಆ ಗುರ್ತಿಗಾಗಿ ಹರಸಾಹಸ ಮಾಡಬೇಕಾಗುವದು ಅನಿವಾರ್ಯ. ಸ್ವತಃ ಹೋಗಿ ಪರಿಚಯ  ಮಾಡಿ ಕೊಂಡು ಮೋಡಗಳನ್ನು ಹುಡುಕಿನಿ??ಮ್ಮೂರಿಗೇ ತಂದು ಮಳೆ ತರಸಿಕೊಳ್ಳಬೇಕು.ಈಸಮಯದಲ್ಲಿ ಅಲ್ಲಿಯೂ ಸಹ ದಲ್ಲಾಳಿಗಳು ಹುಟ್ಟಿದರೆ  ಸೋಜಿ ಗವಲ್ಲ. ಅಲ್ಲಿ ದಕ್ಷಿಣದ ರಾಜ್ಯಗಳ ದಾಳಿ ಕಡಿಮೆ ಇದ್ದರೂ ಗೊತ್ತಾಗುವದಿಲ್ಲ.ಮಂತ್ರಿಗಳ, ಸಂಸದರ ಸಹಾಯವಿದ್ದರೆ ಶೀಘ್ರ.

5.ಸಾಮಾನ್ಯವಾಗಿ ಕೆಲವು ಕಲಾವಿದರಿಗೆ ಕೆಲಚಟ ಗಳು ಹತ್ತಿರುತ್ತವೆ. ಇಲ್ಲವೇ ಸಂಸ್ಥೆಯ ದುಡ್ಡಿನಲ್ಲಿ ಮಜಾ ಮಾಡಬೇಕೆಂದು ಹುನ್ನಾರ ಮಾಡುತ್ತಾರೆ. ಇವೆಲ್ಲ ಲೆಕ್ಕದಲ್ಲಿ ತೋರಿಸಲು ಮನಸ್ಸಿರುವದಿಲ್ಲ ಬರುವದಿಲ್ಲ ಎಲ್ಲವೂ ಊಟ ತಿಂಡಿಯ ವೆಚ್ಚವೆಂ ದು ತೋರಿಸುತ್ತಾರೆ.ಹೀಗೆಯೇ ಭ್ರಷ್ಟತೆಯ ಬೀಜ ಮೊಳಕೆ ಒಡೆಯುತ್ತದೆ.

6.ಇನ್ನೂ ಪ್ರಾಯೋಜಕತ್ವದಿಂದ ಆರ್ಥಿಕ ಸಂಪ ನ್ಮೂಲಗಳನ್ನ ಕ್ರೋಢೀಕರಿಸುವದು.ಇದಕ್ಕೆಸಾರ್ವ ಜನಿಕ ಸಂಪರ್ಕ್,  ದೊಡ್ಡ ಉದ್ದಿಮೆ ವ್ಯಾಪಾರ ವಹಿವಾಟು ಮಾಡುವವರ ಪರಿಚಯ ಬೇಕು. ಅವರಿಗೆ ಪ್ರಾಯೋಜಕತ್ವ ಯಾಕೆ ಬೇಕು  ಮಹತ್ವ ಮತ್ತು ಅವರ ಕಂಪನಿ, ವ್ಯಾಪಾರ ವಹಿವಾಟುಗ ಳಿಗೆ ಹೇಗೆ ಪ್ರಯೋಜನಕಾರಿ ಅಂತ ಮತ್ತು ಇಂತಹ ಕೊಡುಗೆಗಳಿಂದ ಬ್ರಾಂಡ್ ಖ್ಯಾತಿ, ಲಾಭ ಹೇಗೆ ಪಡೆಯಬಹುದು ಅಂತ ಹೇಳುವ ಕೌಶಲ್ಯ ಗಳು ಬೇಕು.  ಅದಕ್ಕಾಗಿ ಆಕರ್ಷಕ ಮುದ್ರಣ ಮತ್ತು ಪ್ರಚಾರ ಸಾಮಗ್ರಿ ಮೊದಲು ತಯಾರ ಆಗಬೇಕು.

7.ಕೆಲವೊಮ್ಮೆ ಪ್ರಾಯೋಜಕರು ಖರ್ಚಿನ ವಿವರ, ರಸೀದಿ, ವೊಚರ್ಗಳನ್ನು ನೀಡಿ ಅಷ್ಟೂ ಹಣ ಅಥವಾ ಭಾಗಶ ಖರ್ಚು ನೀಡುತ್ತೇವೆ ಅನ್ನುತ್ತಾರೆ ಅದನ್ನೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. 

8.ಟಿಕೇಟು ಇಟ್ಟು  ಅವುಗಳನ್ನ ಮಾರಾಟ ಮಾಡಿ ಹಣ ಸಂಪಾದಿಸುವದು ಟಿಕೇಟು ಎಷ್ಟು ಇಡ ಬೇಕು ಅನ್ನುವದು ಸಹ ಎಷ್ಟು ಲಾಭಾಂಶ ಬೇಕು ಅನ್ನುವದರ ಮೇಲೆ ಇರುತ್ತದೆ.

ಹೆಚ್ಚಿಗೆ ಇಟ್ಟರೆ ಜನ ಬರುವ ಸಾಧ್ಯತೆ ಕಡಿಮೆ. ಕಡಿಮೆ ಇಟ್ಟರೆ ಕೈ ಸುಡುತ್ತದೆ ಹೀಗಾಗಿ ಎಲ್ಲ ಖರ್ಚು ನೋಡಿಕೊಂಡು ಟಿಕೇಟು ದರ ನಿಗದಿ ಆಗ್ಬೇಕು. ನಟಿ, ನಟ ಲೇಖಕ ಮಾಡುವ ತಂಡದ ಬ್ರಾಂಡ್ನ ಖ್ಯಾತಿ, ರಂಗ ಮಂದಿರದ ಗುಣಮಟ್ಟ ಸಾಮೀಪ್ಯ ಹೀಗೆ ಹಲವು ಹತ್ತು ಅಂಶಗಳು ಪ್ರಭಾವ ಬೀರುತ್ತವೆ.

9.ಇತ್ತೀಚಿನ ದಿನಗಳಲ್ಲಿ ನಾಟಕದ ಟಿಕೆಟ್ ನಲ್ಲಿ     ಅಲ್ಪಪೊಹಾರ ವೆಚ್ಚ ಸೇರಿಸಿ ಮಾಡುವದು ಇದೆ. ಆದರೆ ಟಿಕೇಟುಮಾರಲಿಕ್ಕೆ ಯೋಗ್ಯಮಾರ್ಕೆಟಿಂಗ ಪ್ರಚಾರ ಮತ್ತು ನಾವೀನ್ಯತೆ ಇರುವ ತಂತ್ರ ಮಾಡ ಲೇಬೇಕಾದ ಅವಶ್ಯಕತೆ ಇದೆ.

ಹೀಗೆ ಹತ್ತು ಹಲವು ಪ್ರಚಾರಬೇಕು. ಜನರ ಆಸಕ್ತಿಗೆ ಅನುಗುಣವಾಗಿ ತಂತ್ರ ರೂಪಿಸುವ ತಲೆ ಬೇಕು.  

(ಸಶೇಷ)

ಅರವಿಂದ ಕುಲಕರ್ಣಿ,    
ರಂಗಭೂಮಿ ಚಿಂತಕರು,ಧಾರವಾಡ