ಅಮ್ಮಾ.. ಪ್ರಪಂಚದ ಆರು ಹೆಸರಾಂತ ಡಾಕ್ಟರ್ ಗಳು ಯಾರಮ್ಮ‌?ಎಂಬ ಪ್ರಶ್ನೆಗೆ ಒಮ್ಮೆ ಗಲಿಬಿಲಿ ಗೊಂಡೆ. ಇದೆಂತಾ ಪ್ರಶ್ನೆ? ಜಗತ್ತಿನಲ್ಲಿ ಕೇವಲ ಆರು ಜನ ವೈದ್ಯರಿರಲು ಸಾಧ್ಯವೇ? ಅದು ಅಲ್ಲದೇ ಸಾಕಷ್ಟು ಡಾಕ್ಟರ್ ಇದ್ದಾರೆ. ಅವರಲ್ಲಿ ಯಾರನ್ನು ಆಯ್ಕೆ ಮಾಡಿ ಹೇಳಲಿ? ಮಗಳಿಗೆ ಈ ಯೋಚನೆ ಯಾಕಾದರೂ ಬಂದಿತು? ಎಂಟನೇ ಅಧ್ಬುತ ಇದಾಗಿರಬಹುದಾ?ತಕ್ಷಣ ಕೇಳಿದ ಪ್ರಶ್ನೆಗೆ ಉತ್ತರ ಹುಡುಕಲು ಸ್ಮೃತಿಪಟಲದಲ್ಲಿ ಹೊಳೆದಿರ ಬೇಕಲ್ಲ. ಆಗ ಅನಿಸಿತು ನಾನೆಷ್ಟೇ ಓದಿದರೂ ಮಗು ಕೇಳಿದ್ದಕ್ಕೆ ಪ್ರತಿಕ್ರಯಿಸಲು ಹೆಣಗಾಡಿದ್ದು ಸತ್ಯ. ಪ್ರಪಂಚದ ಎಲ್ಲ ಚರಾಚರ ಜೀವಿಗಳ ಆಧಾರ ಯಾರೆಂದು ಗೊತ್ತಾ ಮಗಳೇ? ಎಲ್ಲ ಜೀವಿಗಳ ಶಕ್ತಿಮೂಲ ಯಾರು ಹೇಳು? ಜಗದ ಬೆಳಕವನು.

ಮಗಳು ಪುಟ್ಟಗಣ್ಣಾಲಿಸಿ ಪಿಳುಕಿಸುತ್ತ…ಅಮ್ಮಾ “ಸೂರ್ಯ” ಎಂದಾಗ ಶಹಭಾಷ್ ಮಗಳೇ ಎಂದು ಅವಳ ಬೆನ್ನು ಚಪ್ಪರಿಸಿದೆ. ಸೂರ್ಯ ಹೇಗೆ ವ್ಯೆದ್ಯನಮ್ಮಾ? ಅವಳ ಪ್ರಶ್ನೆ. ಇಡೀ ಬ್ರಹ್ಮಾಂಡ ನಿಂತಿದ್ದು ಸೂರ್ಯನ ಬೆಳಕಿನಿಂದ. ದಿನನಿತ್ಯ ಉದಯಿಸುವ ರವಿ, ನೇಸರ, ಭಾಸ್ಕರ ಬೆಳಗಿನ ಕಿರಣಗಳು ನಮ್ಮ ದೇಹದಲ್ಲಿ ‘ಡಿ’ ವಿಟಮಿನ್ ಆಗಿ ಪ್ರವೇಶಿಸಿ ನವಚೈತನ್ಯವನ್ನು ಜಾಗೃತಗೊಳಿಸುತ್ತದೆ. ಪ್ರತಿ ಬೀಜ ಭೂಮಿಯಲ್ಲಿ ಮೊಳಕೆಯೊಡೆದು ಆಹಾರವಾಗಿ ದಕ್ಕಲು ಸಹ ಕಾರಿ. ನೀರು ಮೋಡಗಳಾಗಿ ಪರಿವರ್ತಿಸಲು, ಜೀವಕಳೆ ಭೂಮಿಗೆ ತರಲು ಹಗಲು-ರಾತ್ರಿದುಡಿವ ಸೂರ್ಯ ಪ್ರಥಮ ವೈದ್ಯ. ಕಿಟಕಿಯಾಚೆಗೆ ನಸುನಗುವ ರವಿಯ ಕಿರಣಗಳಿಗೆ ಕೈಚಾಚಿ ನಮಸ್ಕಾರ ಮಾಡಿದ ಮಗಳ ಕಂಡು ಹೆಮ್ಮೆ ಎನಿಸಿತು.

ಎರಡನೇಯದು ದಿನನಿತ್ಯ ನಾವುಗಳು ಎಡೆ ಬಿಡದೆ ಅತಿಯಾದ ಕೆಲಸಗಳನ್ನು ಮಾಡುತ್ತಿರು ವಾಗ ನಮಗೆ ಸುಸ್ತಾಗುತ್ತದೆ ಅಲ್ಲದೆ ದೇಹದ ಶಕ್ತಿ ಕುಂದುತ್ತದೆ. ಆಗ ನಾವು ಏನು ಮಾಡಬೇಕು? ‘ಅಮ್ಮಾ ನಾವು ಆಗ ಸ್ವಲ್ಪಹೊತ್ತು ಕುಳಿತುಕೊಳ್ಳ ಬೇಕು’. ನಿಜ. ಮಗಳೆ ಹಾಗೆ ಕುಳಿತುಕೊಳ್ಳುವು ದಕ್ಕೆ “ವಿಶ್ರಾಂತಿ” ಅನ್ನುತ್ತೆವೆ‌. ಬಳಲಿಕೆಯಾದಾಗ ಸಾಧ್ಯವಾದಷ್ಟು ದೇಹಕ್ಕೆ ವಿಶ್ರಾಂತಿಯ ಅಗತ್ಯತೆ, ಅದರ ಜೊತೆಗೆ ಅಂಗಾಂಗಗಳ ವಿಶ್ರಾಂತಿಯು ದೇಹವನ್ನ ಸಕ್ರಿಯವಾಗಿ, ಲವಲವಿಕೆಯಿಂದಿಡಲು ‌‌ವಿಶ್ರಾಂತಿಯ ಅಗತ್ಯವಿದೆ.

ಮೂರನೆಯದು..“ಯೋಗ” ಭಗವಂತ ನಮ್ಮ ದೇಹವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ.72000 ನಾಡಿಗಳು, 206 ಮೂಳೆಗಳು, ಒಂದು ಪುಟ್ಟ ಹೃದಯವಿಟ್ಟು ಇಡೀ ಪೃಥ್ವಿಯ ಎಲ್ಲಾ ಮಾಹಿತಿ ಗಳನ್ನು ನಮ್ಮ ಮೆದುಳಿನ ಮೆಮೊರಿ ಕಾಡ೯ನಲ್ಲಿ ತುಂಬಿದರೆ,ಅದು ಕೇವಲ1℅ ಮಾತ್ರ ಎನ್ನುವುದು ಎಷ್ಟು ವಿಚಿತ್ರ ನೋಡು. ದೇವರು ಸರ್ವಶಕ್ತಿಯನ್ನ ಕೊಟ್ಟು ಸೃಷ್ಟಿಸಿದ ಇಂತಹ ದೇಹವನ್ನು ದಿನ ನಿತ್ಯ ‘ಯೋಗ’ದೊಂದಿಗೆ ವ್ಯಾಯಾಮ ಮಾಡು ವುದರಿಂದ ಸದಾ ಆರೋಗ್ಯಯುಕ್ತ‌ ಸದೃಢ ದೇಹ ದಲ್ಲಿ ಶುದ್ಧ ಮನಸ್ಸು ಇರುತ್ತದೆ ಎಂಬ ಮಾತು ಸತ್ಯ.

ನಾಲ್ಕನೇಯದು.. “ಮಿತಾಹಾರ” ದೇಹಕ್ಕೆ ಪೂರಕವಾದುದು. ಅವಶ್ಯಕತೆಯಿದ್ದಷ್ಟು ಮಾತ್ರ ಪ್ರೋಟಿನ್ ಯುಕ್ತ ಆಹಾರ, ಹಣ್ಣು, ಸೊಪ್ಪು ತರಕಾರಿ ಹಾಗೂ ಒಣ ಹಣ್ಣುಗಳು ದೇಹಕ್ಕೆ ಅವಶ್ಯಕ. ಇವೆಲ್ಲವನ್ನು ಹಿತಮಿತವಾಗಿ ಸೇವಿಸ ಬೇಕು. ಈ. ರೀತಿ‌ ನಿತ್ಯ ಸೇವಿಸಿದಾಗ ದೇಹವು ಚೈತನ್ಯಪೂರಕವಾಗಿ ನಮ್ಮ ದೇಹದ ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿರಲು ಸಾಧ್ಯವಾಗುತ್ತದೆ. ಆರೋಗ್ಯವೇ ಭಾಗ್ಯ ಎಂಬು ದನ್ನು ಅರ್ಥೈಸಿಕೊಳ್ಳಬೇಕು. ಸಿಕ್ಕ ಸಿಕ್ಕ ಆಹಾರ ಸೇವನೆ ದೇಹ ದುರ್ಬಲಗೊಳ್ಳಲು ಕಾರಣವಾಗು ತ್ತದೆ.

ಐದನೆಯದು “ಆತ್ಮಸ್ಥೈರ್ಯ” ನೋವು, ಸಂಕ ಷ್ಟಗಳು ಎದುರಾದಾಗ ನಾವು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತೇವೆ. ಮನೋಬಲ ಕುಸಿದಾಗ ನೂರೆಂಟು ಅಧೈರ್ಯಗಳು ನಮ್ಮನ್ನು ಕೊಲ್ಲು ತ್ತವೆ. ನಮಗೆ ಧೈರ್ಯ ಕಡಿಮೆಯಾದಷ್ಟು ಹಿಂಜ ರಿಕೆ ಉಂಟಾಗದಂತೆ ಕಾಪಾಡಲು ನಮಗೆ ಟಾನಿಕ್ ತರ ನೆರವಾಗುವುದು ಈ ಆತ್ಮಸ್ಥೈರ್ಯ. ಭಯ,ಭೀತಿ, ಸಂಕುಚಿತ ಮನೋಭಾವ, ಗಾಬರಿ ನಾಳೆ ಏನಾಗುತ್ತದೋ ಏನೋ ಎಂಬ ಋಣಾತ್ಮಕ ವಾದ ಚಿಂತನೆ ಇದು ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ, ಆತ್ಮಸ್ಥೈರ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಧನಾತ್ಮಕವಾದ ಚಿಂತನೆಗಳು ಆತ್ಮ ಸ್ಥೈರ್ಯದ ಜೀವನದ ಆಧಾರಸ್ತಂಭಗಳು.

ಕೊನೆಯದಾಗಿ “ಆತ್ಮೀಯ ಸ್ನೇಹಿತರು”ಜೀವನ ದಲ್ಲಿ ಕನಿಷ್ಠ ಒಬ್ಬರಾದರು ಆತ್ಮೀಯ ಸ್ನೇಹಿತರನ್ನ ಪ್ರತಿಯೊಬ್ಬರು ಹೊಂದಿರಲೆಬೇಕು. ಸ್ನೇಹಿತರೊಡ ನೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸು ಹಗುರಾಗುತ್ತದೆ. ಜೊತೆಗೆ ನಿಷ್ಕಲ್ಮಶ ಸ್ನೇಹ- ಸಂಬಂಧಗಳು ಮನಸ್ಸಿನ ಮನೋಬಲವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ದಿಟ್ಟ ನಿಲುವು ಸನ್ಮಾರ್ಗದತ್ತ ನಡೆಯಲು ಸಹಕಾರಿ ತಿಳಿತಾ?

ಪ್ರಪಂಚದ ಅತ್ಯದ್ಭುತ ಡಾಕ್ಟರ್ ಗಳ ಬಗ್ಗೆ ಅರಿತು ಕೊಂಡೆ ಅಮ್ಮಾ ಎನ್ನುತ್ತ ಅಪ್ಪಿಕೊಂಡು ಮಗಳ ಗಲ್ಲವನ್ನು ಮುದ್ದಿಸುತ್ತ ಇವೆಲ್ಲವನ್ನು ಕಾಯಾ, ವಾಚಾ, ಮನಸಾ ಪಾಲಿಸುವುದರೊಂದಿಗೆ ಆರೋಗ್ಯಸಂಪತ್ತನ್ನು ಕಾಪಾಡಿಕೊಳ್ಳುವುದರಿಂದ ಜಗತ್ತಲ್ಲಿ ಭಾಸ್ಕರನಂತೆ ಪ್ರತಿನಿಧಿಸಬಹುದೆಂದಾಗ ನನಗೂ ಸಮಾಧಾನ. ಮಗು ಕೇಳಿದ ಪ್ರಶ್ನೆಗೆ ತೃಪ್ತಿಕರವಾಗಿ ಉತ್ತರಿಸಲು ಪ್ರಯತ್ನ ಅಷ್ಟೇ….

 ಶಿವಲೀಲಾ ಹುಣಸಗಿ 
ಶಿಕ್ಷಕಿ,ಯಲ್ಲಾಪೂರ