ನಾವು ಮಾತನಾಡುವ ಮುನ್ನ ಯೋಚಿಸಿ ಮಾತನಾಡಬೇಕು. ಏಕೆಂದರೆ ನಾವು ಆಡುವ ಒಂದೊಂದು ಮಾತುಗಳು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ. ಆ ಮಾತು ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು, ಹಾಗಾಗಿ ನಾವು ಮಾತನಾಡುವ ಮುನ್ನಯೋಚನೆ ಮಾಡಿ ಮಾತನಾಡಬೇಕು. ಈ ಮಾತುಗಳು ಹೇಗಿದೆ ಅಂದರೆ ಒಮ್ಮೊಮ್ಮೆ ನಮ್ಮ ಗುಂಡಿಯನ್ನ ನಾವೇ ತೋಡಿಕೊಳ್ಳುವ ರೀತಿಯಲ್ಲಿ ಮಾಡಿಬಿಡು ತ್ತದೆ. ನನ್ನ ಪ್ರಕಾರ ನಮ್ಮ ಜೀವನದ ನಿಜವಾದ ಶತ್ರು ಮತ್ತು ಮಿತ್ರ ಅಂದರೆ ಅದು ನಮ್ಮ ಮಾತೆ ಇರಬೇಕು. ಕೆಲವೊಮ್ಮೆ ನಾವು ತುಂಬಾ ತಾಳ್ಮೆ ಯಿಂದ ಮಾತುಗಳನ್ನು ಆಡುತ್ತೇವೆ, ಆಗ ಅದು ನಮಗೆ ತುಂಬ ಒಳ್ಳೆಯ ಪರಿಣಾಮವನ್ನು ನೀಡು ತ್ತದೆ. ಕೆಲವೊಮ್ಮೆ ಸಿಟ್ಟಿನಿಂದ ಯೋಚಿಸದೆ ಬಾಯಿಗೆ ಬಂದಹಾಗೆ ಮಾತನಾಡಿಬಿಡುತ್ತೇವೆ. ಅಂತಹ ಮಾತುಗಳು ನಮ್ಮ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬಿರುವುದಲ್ಲದೆ ನಾವು ತಲೆ ಯೆತ್ತಿ ಸಮಾಜದಲ್ಲಿ ಓಡಾಡದಂತೆ ಮಾಡಿಬಿಡು ತ್ತದೆ. ಹಾಗಾಗಿ ಮಾತುಗಳನ್ನು ಆಡುವಾಗ ಆದಷ್ಟು ಎಚ್ಚರವನ್ನು ವಹಿಸಿ ಮಾತನಾಡಬೇಕು.

ನಾವು ಆಡುವ ಪ್ರತಿ ಮಾತುಗಳು ಮುತ್ತಿನತರಹ ಇರಬೇಕು ಎಂದೇನಿಲ್ಲ, ಆದರೆ ಬೇರೆಯವರ ಮನಸ್ಸಿಗೆ ನೋವನ್ನು ಉಂಟುಮಾಡುವ ತರಹ ಇರಬಾರದು ಅಷ್ಟೇ. “ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಹಾಗಾಗಿ ಮಾತುಗಳನ್ನು ಆಡುವಾಗ ಅದಕ್ಕೆತೂಕ ವನ್ನು ನೀಡುವ ರೀತಿಯಲ್ಲಿ ಮಾತು ಆಡಬೇಕು. ನಮ್ಮ ಮಾತುಗಳು ಬೇರೆಯವರ ಮನಸ್ಸಿಗೆ ಯಾವಾಗಲೂ ಖುಷಿಯನ್ನು ನೀಡುವ ಹಾಗೆ ಇರಬೇಕು.”ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತನ್ನು ಎಂದಿಗೂ ಮನಸ್ಸಿನಲ್ಲಿಟ್ಟುಕೊ ಳ್ಳಬೇಕು. ಮಾತುಗಳನ್ನು ಆಡುವಾಗ ಜಾಣ್ಮೆ ಯನ್ನು ಉಪಯೋಗಿಸಿ ಮಾತನಾಡುವುದನ್ನು ಕಲಿಯಬೇಕು.

ಮಾತುಗಳು ಕೆಲವೊಮ್ಮೆ ಮೌನಕ್ಕೆ , ಕೆಲವೊಮ್ಮೆ ವಿಮರ್ಶೆಗೆ, ಕೆಲವೊಮ್ಮೆ ಜಗಳಕ್ಕೆ, ಕೆಲವೊಮ್ಮೆ ಸನ್ಮಾನಕ್ಕೆ ಕಾರಣವಾಗುತ್ತವೆ. ಈ ಮಾತುಗಳನ್ನು ಆಡಿದಾಗ ನಾವು ಬೇರೆಯವರ ದೃಷ್ಟಿಯಲ್ಲಿ ಕೆಳ ಗಾಗುತ್ತೇವೆ ಎಂದು ತುಂಬಾ ಯೋಚಿಸಿ ಮಾತನಾ ಡುತ್ತೇವೆ,‌ ಆದರೂ ಎಡವಿ ಬಿಡುತ್ತೇವೆ. ಹಾಗಾಗಿ ನನ್ನ ಪ್ರಕಾರ ಈ ಮಾತುಗಳನ್ನು ಆಡುವಾಗ ಎಚ್ಚರ ವಹಿಸುವುದರ ಜೊತೆಗೆ ಪೂರ್ವತಯಾರಿ ಮಾತುಗಳನ್ನು ಆಡುವುದಕ್ಕಿಂತ ನಮ್ಮ ಮನಸ್ಸಿಗೆ ಸರಿ ಅನ್ನಿಸಿದ್ದು, ಸತ್ಯವಾದ ಮಾತುಗಳನ್ನಾಡುವು ದು ಒಳ್ಳೆಯದು. ನಾವು ನಮ್ಮ ಬಾಯಿಯಿಂದ ಸುಳ್ಳು ಹೇಳುತ್ತಾ ಸಾಗಿದಷ್ಟು ಒಂದಲ್ಲಾ ಒಂದು ದಿನ ಸತ್ಯದ ಬಾಯಿಗೆ ಬಿದ್ದೆ ಬೀಳುತ್ತೇವೆ. ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ಹೇಳಿದ ಸುಳ್ಳಿನ ಮಾತು ಹಲವು ಇಕ್ಕಟ್ಟನ್ನು ಎದುರಿಸುವ ಸಂದರ್ಭವನ್ನು ತಂದೊಡ್ಡಬಹುದು. ಹಾಗಾಗಿ ನಾವು ಏನೇ ಮಾತನ್ನು ಆಡಬೇಕಾದರೂ ಜಾಣತನ, ಸತ್ಯ ನಮ್ಮೊಂದಿಗೆ ಇದ್ದರೆ ಸಾಕು.

ಮಧುರ ಎಲ್ ಭಟ್ಟ
ಎಸ್.ಡಿ.ಎಮ್.ಕಾಲೇಜು, ಉಜಿರೆ