ಇಂದು ಬಂದಿದೆ ಶ್ರಾವಣ ಹುಣ್ಣಿಮೆ ದಿನ
ಸೋದರ ಬಾಂಧವ್ಯದ ಸಾಂಕೇತಿಕ ದಿನ
ಸೋದರಿ ಕಟ್ಟುವಳಿಂದು ಕೈಗೆ ರಕ್ಷಾಬಂಧನ
ಸೋದರನಿಗೆ ಅವಳ ಸುರಕ್ಷತೆಯಹೊಣೆತನ.

ಒಂದೇ ಬಳ್ಳಿಯ ಹೂಗಳೆಂಬ ಈ ಸಂಬಂಧ
ಒಂದೇ ನಂಟಿನೆಳೆಯಲಿ ಸುತ್ತಲ್ಪಟ್ಟ ಬಂಧ
ಅಕ್ಕ ತಮ್ಮ ಅಣ್ಣ ತಂಗಿಯರ ಈ ಮಧುರ ಭಾವ
ಹೊಗಳಲು ಮಾತಿಲ್ಲˌವರ್ಣಿಸಲು ಪದಗಳೇ ಇಲ್ಲ.

ಇಂದಿನ ಯಾಂತ್ರಿಕ ಯುಗದಲ್ಲೀಗ ಇನ್ನೂ ಹೆಚ್ಚು ಪ್ರಸ್ತುತ
ಕ್ಷೀಣಿಸುತಿರುವ ಮೌಲ್ಯಗಳನು ಮಾಡಬೇಕಿದೆ ಬಲಯುತ
ಬಂಧಿಸಬೇಕಿದೆ ಪ್ರತಿಯೊಬ್ಬರನೂ ಮಾನವತೆಯ ರಾಖಿ
ಪ್ರೀತಿವಿಶ್ವಾಸದ ಸೂತ್ರದಿಂದ ಮಾತ್ರವೇ ಮನುಜ ಸುಖಿ.

ರಕ್ಷಾ ಬಂಧನದ ಶುಭಾಶಯಗಳು

ಸುಜಾತಾ ರವೀಶ್,ಮೈಸೂರು