ನಾಡಿನ ದೇವಾಲಯಗಳನ್ನು ಅಧ್ಯಯನ ಮಾಡು ವಾಗ ಹಾಗು ಪ್ರವಾಸ ಮಾಡುವಾಗ ಎದ್ದು ಕಾಣುವ ದೇವಾಲಯಗಳಲ್ಲಿ ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇವಾಲಯ ಪ್ರಮುಖ ವಾದದ್ದು. ತನ್ನ ಕಲಾ ಸಿರಿಯಿಂದ ಗಮನ ಸೆಳೆ ಯುವ ಈ ದೇವಾಲಯ ಹೊಯ್ಸಳರ ಮೇರು ಕೃತಿಗಳಲ್ಲಿ ಒಂದು.

ಇತಿಹಾಸ ಪುಟದಲ್ಲಿ ಪ್ರಮುಖವಾಗಿ ಗುರುತಿಸಿ ಕೊಂಡಿದ್ದ ಬೇಲೂರು ಹೊಯ್ಸಳ ರಾಜಧಾನಿ ಯಾಗಿ ಬದಲಾದ ನಂತರ ಕಲಾ ಹಾಗು ರಾಜ ಧಾನಿ ಕೇಂದ್ರವಾಗಿ ಬದಲಾಯಿತು. ವೇಲಾಪುರಿ- ವೇಲೂರು ಎಂದು ಶಾಸನಗಳಲ್ಲಿ ಬಣ್ಣಿಸಲಾದ ಈ ಗ್ರಾಮವು ಅಂದಿಗೂ ಹಾಗೂ ಇಂದಿಗೂ ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿದೆ.

ಚನ್ನಕೇಶವ ದೇವಾಲಯ

ಹೊಯ್ಸಳ ರಾಜ ವಿಷ್ಣುವಧ೯ನನ ಕಾಲದಲ್ಲಿ ಸುಮಾರು 1117 ರಲ್ಲಿ ನಿರ್ಮಾಣಗೊಂಡ ಈ ದೇವಾಲಯ ತನ್ನ ವಿಜಯದ ನೆನಪಿಗೆ ನಿರ್ಮಾಣ ಮಾಡಿದ ದೇವಾಲಯ. ವಿವಿಧ ಘಟ್ಟಗಳಲ್ಲಿ ದೇವಾಲಯ ನಿರ್ಮಾಣ ಸಾಗಿ ಪೂರ್ಣಗೊಂಡ ಈದೇವಾಲಯ ಗರ್ಭಗುಡಿ,ಸುಖನಾಸಿ,ನವರಂಗ ಹೊಂದಿದ್ದು ಎತ್ತರದವಾದ ಜಗತಿಯ ಮೇಲೆ ನಿರ್ಮಾಣಗೊಂಡಿದೆ.  ಗರ್ಭಗುಡಿಯಲ್ಲಿ ಸುಂದರ ವಾದ ಚನ್ನಕೇಶವನ ಮೂರ್ತಿ ಇದೆ.  ಶಂಖ, ಚಕ್ರ, ಗಧಾ ಹಾಗು ಪದ್ಮಧಾರಿಯಾದ ಈ ಶಿಲ್ಪ ಸುಮಾ ರು ಆರು ಆಡಿ ಎತ್ತರವಿದೆ. ಪಕ್ಕದಲ್ಲಿ ಶ್ರೀ ದೇವಿ ಹಾಗು ಭೂದೇವಿಯರ ಕೆತ್ತೆನೆ ಇದೆ. ಇನ್ನು ಬಾಗಿ ಲುವಾಡ ಅತ್ಯಂತ ಕಲಾತ್ಮಕವಾಗಿ ಅಲಂಕೃತ ಗೊಂಡಿದೆ.

ನವರಂಗದಲ್ಲಿ ಸುಂದರವಾದ 48 ಕಂಭಗಳಿದ್ದು ಕಂಭಗಳಲ್ಲಿನ ಕಲಾತ್ಮಕತೆ ಎದ್ದು ಕಾಣುತ್ತದೆ. ಇನ್ನು ಕಂಭಗಳ ಮೇಲಿನ ಶಿಲಾ ಬಾಲಿಕೆಯರ ಕೆತ್ತನೆಗಳು ಹೊಯ್ಸಳರ ಕುಸುರಿ ಕಲೆಗೆ ಮಾದರಿ. ಇಲ್ಲಿನ ನರಸಿಂಹಕಂಭ ಸಂಪೂರ್ಣ ಕೆತ್ತೆನೆಯಿಂದ ಕೂಡಿದೆ. ನವರಂಗಕ್ಕೆ ಮೂರು ಪ್ರವೇಶ. ದ್ವಾರ ವಿದ್ದು ಮುಖ್ಯ ದ್ವಾರದಲ್ಲಿ ಜಯ ವಿಜಯರ ಸುಂದರ ಪ್ರತಿಮೆ ಇದ್ದು, ಪಕ್ಕದಲ್ಲಿ ವಿಜಯದ ಸಂಕೇತದ ಬೃಹತ್ ಗಾತ್ರದ ಲಾಂಚನ ಅಳವಡಿಕೆ ಗಮನ ಸೆಳೆಯುತ್ತದೆ.

ಇನ್ನು ಹೊರಭಿತ್ತಿಯಲ್ಲಿ ಜಾಲಂದ್ರಗಳು ಸುಂದರ ವಾಗಿದ್ದು ಉಳಿದಂತೆ ಪಟ್ಟಿಕೆಗಳಲ್ಲಿ ಗಜ, ಸಿಂಹ, ರಾಮಾಯಣ- ಮಹಾಭಾರತ  ಕಥನಕಗಳು,ಬಳ್ಳಿ ಗಳ ಸಾಲು ಇದ್ದು ನಂತರ  ಸಾಲಿನಲ್ಲಿ ವಿವಿಧ ಶಿಲ್ಪಗಳ ಕೆತ್ತೆನೆ ಇದೆ.  ಇನ್ನು ಜಾಲಂದ್ರ ಹಾಗೂ ಛಾದ್ಯದ ಭಾಗದ ನಡುವೆ ಹಲವು ಶಿಲಾ ಬಾಲಿಕೆ ಯರ ಕೆತ್ತೆನೆಗಳಿದ್ದು ಇಲ್ಲಿನ ದರ್ಪಣ ಸುಂದರಿ, ಶುಖ ಭಾಷಿಣಿ, ಕೀರವಾಣಿ,ಕೋತಿ ಸೀರೆ ಎಳೆಯು ತ್ತಿರುವುದು, ತ್ರಿಭಂಗಿ, ಮುರುಳೀಧರ, ಮೋಹಿನಿ, ವಾದ್ಯ ನುಡಿಸುತ್ತಿರುವುದು, ಕನ್ನಡಿ ನೋಡುತ್ತಿ ರುವ ಸುಂದರಿ,ಶಿವ-ಜಲಂಧರ,ಪೂತನಿ,ವಾಮನ, ರಾವಣ ಕೈಲಾಸ ಪರ್ವತ ಎತ್ತುತಿರುವುದು, ಚಾಮುಂಡಿ, ಬ್ರಹ್ಮ, ಸೂರ್ಯ, ಅರ್ಜುನ ಮತ್ಯ್ಸ ಭೇದನ, ನಾಟ್ಯ ಸುಂದರಿ, ಚೇಳು – ಸುಂದರಿ, ಶಕುನ, ನಾಗವೀಣಾಧಾರಿಣಿ, ಸುಂದರಿ – ಗಿಳಿ, ನಾಟ್ಯರಾಣಿ, ಗಮನ ಸೆಳೆಯುತ್ತದೆ.

ಇನ್ನು ದೇವಾಲಯದ ಪ್ರವೇಶದ ಬಾಗಿಲುವಾಡ ಅತ್ಯಂತ ಕಲಾತ್ಮಕವಾಗಿ ಅಲಂಕೃತಗೊಂಡಿದ್ದು ಮಕರತೋರಣದಲ್ಲಿನ ಗರುಡ, ಹಾಗು ಬಳ್ಳಿಯ ಅಲಂಕರಣಗಳಿವೆ. ಇನ್ನು ಈ ದೇವಾಲಯಕ್ಕೆ ಭೂಮಿಜ ಮಾದರಿಯ ಸುಂದರ ಶಿಖರವಿದ್ದು ಈಗ ನಾಶವಾಗಿದೆ.  ಇನ್ನು ದೇವಾಲಯದ ಎದು ರಲ್ಲಿ ಗರುಡಗಂಬವಿದ್ದು ಸುಮಾರು 42 ಅಡಿ ಎತ್ತರವಿದೆ.  ಇನ್ನು ದೇವಾಲಯದ ಪ್ರವೇಶ ಗೋಪುರ ಹಾಗು ಪ್ರಾಕಾರವನ್ನು ವಿಜಯನಗರ ಕಾಲದಲ್ಲಿ  ವಿಸ್ತರಿಸಲಾಗಿದೆ.

ಕಪ್ಪೆ ಚೆನ್ನಿಗರಾಯ ದೇವಾಲಯ

ಚನ್ನಕೇಶವ ದೇವಾಲಯದ ಪಕ್ಕದಲ್ಲಿರುವ ಈ ದೇವಾಲಯ ಜಗತಿಯ ಮೇಲೆ ನಿರ್ಮಾಣ ವಾಗಿದ್ದು  ಗರ್ಭಗುಡಿ, ಸುಖನಾಸಿ, ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಕಪ್ಪೆಚೆನ್ನಿಗರಾ ಯನ ಪ್ರತಿಮೆ ಇದೆ. ಇನ್ನು ನವರಂಗದಲ್ಲಿನ ಕಂಭಗಳು ಹೊಯ್ಸಳ ಶೈಲಿಯಲ್ಲಿದ್ದು ಇಲ್ಲಿಯೂ ಶಿಲಾಬಾಲಿಕೆಯರ ಕೆತ್ತೆನೆ ನೋಡಬಹುದು.ಇಲ್ಲಿ ಗಣಪತಿ, ಸರಸ್ವತಿ, ಲಕ್ಷ್ಮೀನಾರಾಯಣ ಹಾಗೂ ಚಾಮುಂಡೇಶ್ವರಿಯರ ಶಿಲ್ಪ ಇದೆ.

ವೀರನಾರಾಯಣ ದೇವಾಲಯ

ಚನ್ನಕೇಶವನ ದೇವಾಲಯದ ಪಶ್ವಿಮ ಭಾಗದಲ್ಲಿ ಈ ದೇವಾಲಯವಿದೆ. 1171 ರಲ್ಲಿ ನಿರ್ಮಾಣ ವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸುಂದರವಾದ ನಾರಾಯಣನ ಮೂರ್ತಿ ಇದ್ದು ಭಿನ್ನವಾದ ಕಾರಣ ಪೂಜೆ ಇರುವದಿಲ್ಲ. ಹೊರ ಭಿತ್ತಿಯಲ್ಲಿ ಹಲವು ಶಿಲ್ಪಗಳಿದ್ದು ಇವುಗಳಲ್ಲಿ ಭೈರವ, ಸರಸ್ವತಿ, ವಿಷ್ಣು, ಶಿವ, ಬ್ರಹ್ಮ ಹಾಗೂ ಪಾರ್ವತಿಯ ಕೆತ್ತೆನೆಗಳು ಗಮನ ಸೆಳೆಯುತ್ತದೆ.  

ಸೌಮ್ಯ ನಾಯಕಿ ದೇವಾಲಯ

ಈದೇವಾಲಯ ಸಹ ಚನ್ನಕೇಶವ ದೇವಾಲಯದ ಆವರಣದಲ್ಲಿದೆ. ದೇವಾಲಯದ ಗರ್ಭಗುಡಿಯ ಲ್ಲಿ ಸೌಮ್ಯ ನಾಯಕಿಯ ಶಿಲ್ಪವಿದ್ದು, ಜಾತ್ರೆಯ ಸಮಯದಲ್ಲಿ ಚನ್ನಕೇಶವ ಹಾಗು ಸೌಮ್ಯ ನಾಯ ಕಿಗು ಕಲ್ಯಾಣೋತ್ಸವ ಮಾಡಲಾಗುತ್ತದೆ.

ರಂಗನಾಯಕಿ ಆಂಡಾಲ್ ಆಮ್ಮನವರ ದೇವಾಲಯ  

ದೇವಾಲಯ ಗರ್ಭಗುಡಿ, ಸುಖನಾಸಿ, ನವರಂಗ ಹಾಗು ತೆರೆದ ಮಂಟಪವನ್ನು ಹೊಂದಿದ್ದು ಗರ್ಭ ಗುಡಿಯಲ್ಲಿ ರಂಗನಾಯಕಿಯ ಶಿಲ್ಪವಿದೆ. ಇನ್ನು ಹೊರಭಿತ್ತಿಯಲ್ಲಿ 31 ಶಿಲ್ಪಗಳು, ಶಿಖರ ಮಾದರಿ ಗಳು,ಗಮನ ಸೆಳೆಯುತ್ತದೆ.ಇನ್ನು ಪಟ್ಟಿಕೆಗಳಲ್ಲಿನ ಆನೆಯ ಸಾಲು, ಲತಾ, ಪುರಾಣದ ಕಥನಗಳಿವೆ.

ಶಂಕರೇಶ್ವರ ದೇವಾಲಯ

ಮೂಡಿಗೆರೆ ರಸ್ತೆಯಲ್ಲಿರುವ ಈ ದೇವಾಲಯ ಚಿಕ್ಕದಾಗಿದ್ದರೂ ವಾಸ್ತು ದೃಷ್ಟಿಯಿಂದ ಮುಖ್ಯವಾ ದದ್ದು. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಶಿವ ರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿನ ಶಿಖರ ಮಾದರಿ ಭೂಮಿಜ ಶೈಲಿಯನ್ನ ನೆನಪಿಸಲಿದ್ದು ಘಾಂಸನ ಹಾಗು ಔತ್ತರೇಯ ಮಿಶ್ರಣದಂತಿದೆ.  

  ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು