ರಂಗಭೂಮಿ ಕುರಿತಾದ ಸಂಘಟನೆ ಅಂದಾಗ ಹಲವು ಹತ್ತು ಪ್ರತಿಭಾವಂತ ತಲೆಗಳು ಇರುವದು ಸಹಜ. ಆದರೆ ಎಲ್ಲ ತಲೆಗಳ, ದೇಹಗಳ ಪ್ರತಿಭೆ ಒಂದೇ ರೀತಿಯಾಗಿ ಇರುವದಿಲ್ಲ ಅನ್ನುವದು ಅಷ್ಟೇ ಸತ್ಯ. ಆದರೆ ಪ್ರತಿಭೆ ಅನ್ನೋದೇ ತಲೆಗೋ ದೇಹಕ್ಕೊ ಯಾವದಕ್ಕೆ ಅನ್ನೋಪ್ರಶ್ನೆ ಹಯವದನ ದ ಪ್ರಶ್ನೆಯಾಗಿ ಉಳಿಯದೇ ಸಂಪೂರ್ಣವಾಗಿ ಸಂಘಟನೆಯದೂ ಆಗುತ್ತದೆ.ಸಂಘಟನೆಗೆದುಡ್ಡು ಪ್ರತಿಭೆ ಎರಡೂ ಬೇಕು. ಆ ಎರಡೂ ತರುವ, ಇರುವ ಮಾನವ ಸಂಪನ್ಮೂಲ ಬೇಕು.  ಇಲ್ಲಿ ನಟ, ನಟಿ, ಸಂಗೀತಗಾರ,  ಶ್ರೇಷ್ಠ ಸಾರ್ವಜನಿಕ  ಸಂಪರ್ಕ ಸಾಮರ್ಥ್ಯದವ್ಯಕ್ತಿ ಅಥವಾ ಸಾಂಸ್ಕೃತಿ ಕ ಹೃದಯ ಉಳ್ಳ ಒಬ್ಬ ಶ್ರೀಮಂತನ ರಾಜಾಶ್ರಯ ಬೇಕು. ಈ ಹಿಂದೆ ಸುಮಾರು 30/40 ವರ್ಷಗಳ ಹಿಂದೆ   ಸಮಾಜದ ಸಾಂಸ್ಕೃತಿಕ ಚಿತ್ರವೇ ಬೇರೆ ಇತ್ತು. ಈಗ ಎಲ್ಲಾದರೂ ಉಳಿದುಕೊಂಡಿದ್ರೆ ಅದು ಉತ್ತರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ  ಸ್ವಲ್ಪು ಮಟ್ಟಿಗೆ ಶಿವಮೊಗ್ಗ ಬಿಟ್ಟರೆ ಉಳಿದೆಲ್ಲ ಕಡೆ  ಪ್ರಾಯೋಜಕರ ಮರ್ಜಿ ಇಲ್ಲಾ ಪ್ರಭಾವಿ ವ್ಯಕ್ತಿಗಳ ಮೂಲಕ ನಿಗಮವ್ಯಾಪ್ತಿಯ ಸಾಮಾಜಿಕ ಜವಾ ಬ್ದಾರಿ  ಅಡಿಯಲ್ಲಿ ಲಕ್ಷಗಟ್ಟಲೆ ಸಹಾಯ ಮಾಡಿಸಿ ಕೊಳ್ಳುವದು. ಕೇವಲ ಪ್ರೇಕ್ಷಕರು ಟಿಕೇಟು ಖರೀ ದಿಸಿ ಪ್ರೇಕ್ಷಕ ಸಭಾಗೃಹ ತುಂಬಿ ನಾಟಕ ತಂಡದ ಜೀವನ ನಡಿಯೋದು  ಕಠಿಣ. ಈ ದೃಷ್ಟಿಯಲ್ಲಿ ವೃತ್ತಿನಾಟಕ ಕಂಪೆನಿಗಳೇ ಬೇಸಿ. ಅವರಿಗೆ ಅವರ ಗುರಿ ನಿಚ್ಚಳವಾಗಿರುತ್ತದೆ. ಇನ್ನೂ ಸರ್ಕಾರದ ಧನಸಹಾಯ ಹಲವಾರು ಮತ ಆಧಾರಿತ, ಜಾತಿ ಭಾಷೆ, ಸಂಬಂಧ, ಪ್ರಾದೇಶಿಕತೆ, ಲಿಂಗ ಪ್ರಭಾವ ಹೀಗೆ ಹಲವು ಹತ್ತು ಸಂಗತಿಗಳ ಮೇಲೆ ನಿಂತಿರು ತ್ತದೆ, ಆದರೆ ಒಂದು ಸಾಮಾನ್ಯವಾದ ಸಂಗತಿ ಯೆಂದರೆ ಯಾರು ಹೀಗೆ ತಮ್ಮ ಪ್ರಯತ್ನದಿಂದ ಮಾಡಿಕೊಳ್ಳುತ್ತಾರೋ ಅವರ ಎಲ್ಲರ ಹಿಂದೆ ಅವರದೇ ಆದ ಆಂತರಿಕ ಬಲ ಅಥವಾ ಸ್ಫೂರ್ತಿ, ಪ್ರೇರಣೆ ಪಡೆದಿರುತ್ತಾರೆ, ಅದನ್ನೇ ಸಾಧನೆಯ ಪ್ರೇರಣೆ ಎನ್ನುವದು. ಹಾಗಾದರೆ ರಂಗಭೂಮಿ ಯಲ್ಲಿ ಕೆಲಸ ಮಾಡುವವರೆಲ್ಲರ ಸಾಧನೆಯ ಪ್ರೇರಣೆಗಳನ್ನು ಹುಡುಕಬೇಕು ಇಲ್ಲಾ ಸೃಷ್ಟಿಸ ಬೇಕು. ಇದು ಮುಖ, ಗುಣ ನೋಡಿಯೇ ಮಾಡು ವದು. ಅದಕ್ಕಾಗಿ ಇದ್ದವರ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳ ಸದುಪಯೋಗ ಮತ್ತು ಅವರಿಗೆ ಇರಬಹುದಾದ ಭಯ ಇವೆಲ್ಲಾವುಗಳ ವಿಶ್ಲೇಷಣೆ ಮಾಡಬೇಕಾಗುತ್ತದೆ.ನಮ್ಮಲ್ಲಿ ಇರುವ ಹವ್ಯಾಸಿ ತಂಡಗಳಲ್ಲಿ ಇಂಥಹ ಕೆಲಸ ದಾಖಲೆ ಮಾಡುತ್ತಾ,ವಿಶ್ಲೇಷಣೆ ಮಾಡುತ್ತ ಅವರಿಗೆ ಬೇಕಾ ಗುವ ಹಾಗೆ ನಿಯಮ, ನೀತಿ, ವಿಧಾನ  ಮಾಡಲು ಆಗುವದೂ ಇಲ್ಲ ಮತ್ತು ಗೊತ್ತು ಆಗುವದಿಲ್ಲ. ಅದಕ್ಕಾಗಿ ಸಂಘಟನೆ ಕೆಲಸವಾಗುವದಿಲ್ಲ. ಹೆಚ್ಚು ಮಾನವಸಂಪನ್ಮೂಲ ಸಂಬಂಧಿತ ಸಮಸ್ಯೆ ಎದು ರಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆ ಸಹ ಒಂದು ರೀತಿಯಲ್ಲಿ ಮಾನವ ಸಂಪನ್ಮೂಲ ಸಮಸ್ಯೆಯೇ!

ಸಾಧನೆಯ ಪ್ರೇರಣೆ ಅನ್ನುವದರಲ್ಲಿ ವ್ಯಕ್ತಿಯೊ ಬ್ಬನ ವರ್ತನೆಗಳು ಬೇಕು, ಬೇಡಗಳು ಎಲ್ಲವೂ ವ್ಯಕ್ತಿಯ ಸಾಧನೆಯ, ಶಕ್ತಿ ಸಾಮರ್ಥ್ಯ, ಪ್ರಭಾವ ಬೀರುವಿಕೆಯ ಗುಣಮಟ್ಟ ಮತ್ತು ಅವನ ಸಂಗ, ಸಾಂಗತ್ಯ ಮತ್ತು ಮನ್ನಣೆ ಬಯಸುವದರಲ್ಲಿ ಅಡಗಿರುತ್ತದೆ.ಇದನ್ನ ನಾವು” ಸ್ವೀಕೃತ ಅವಶ್ಯ ಕತೆಗಳ ಸಿದ್ಧಾಂತ ಅಥವಾ “ಕಲಿಕೆಯ ಆವಶ್ಯ ಕತೆಗಳ ಸಿದ್ಧಾಂತ” ಅಂತಾನೂ ಹೇಳಬಹುದಾ ಗಿದೆ.  

ಈ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ಕಲಾವಿದ  ಮೂರು ಸಾಧನೆಯ ಪ್ರರಣೆಗಳಲ್ಲಿ ಒಂದನ್ನು ಬಲವಾಗಿ ಹಿಡಿದುಕೊಂಡಿರುತ್ತಾನೆ.ಸಾಧಿಸುವದು ಮನ್ನಣೆ, ಪ್ರಭಾವ ಬೀರುವಶಕ್ತಿ ಮತ್ತು ಸ್ಥಾನ ಮಾನ ಇವು ಯಾವವೂ ಅನುವಂಶಿಕವಾಗಿರುವು ದಿಲ್ಲ.ಪ್ರತಿಯೊಬ್ಬನು ಇವುಗಳನ್ನು ತನ್ನ ಸಂಸ್ಕೃತಿ, ಮತ್ತು ಜೀವನದ ಅನುಭವಗಳ ಹರಳುಗಟ್ಟುವಿ ಕೆಯ ಸಾಂದ್ರತೆಯಿಂದ ಪಡೆಯುತ್ತಾನೆ. ಸಾಧಿಸು ವವರು ಅಥವಾ ಸಾಧಕರು ಬಂದ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುತ್ತ ತಮ್ಮ ತಮ್ಮ ಗುರಿಗಳನ್ನು ಮುಟ್ಟುತ್ತಾರೆ. ಸಾಧ್ಯವಾಗಬಹುದಾದ ನೈಜಗುರಿ ಯನ್ನು ಮುಟ್ಟುವುದು, ಅನಿಸುವಿಕೆಯ ಪ್ರತಿ ಸ್ಪಂದನೆ ಮತ್ತು ಗುರಿ ಮುಟ್ಟಿದ ಸಾಧನೆಯನ್ನು ಅನುಭವಿಸುವದು,ಒಂದು ತಂಡ ಅಥವಾ  ಸಂಸ್ಥೆ ನಿಯಮಿತವಾಗಿ ನಾಟಕ ಪ್ರದರ್ಶನ  ಮಾಡತಾ  ಮಾಡತಾ ಪ್ರದರ್ಶನದ ಯಶಸ್ಸು ಮತ್ತು ಸಂಬಂ ಧಿಸಿದಂತೆ ಮೌಲ್ಯಗಳ ಅಳತೆಯನ್ನು ಎಂಜಾಯ್ ಮಾಡುತ್ತಾ ಸುಧಾರಿಸಿಕೊಳ್ಳಲು ಅನವರತ ಪ್ರಯತ್ನ ಮಾಡ್ತಾರೆ.

ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರ್ತಾ ಇರುವ ನಿರ್ದೇಶಕರೊಬ್ಬರ ಜತೆ ಮಾತನಾಡತ ಇದ್ದಾಗ ಅವರು ಹೇಳಿದ್ದು ಮಾತು ನೆನಪಾಗುತ್ತದೆ. “ಸರ್ ನನಗೆ ಹಿರಿಯ ನಟರು ನಟಿಯರು ಬೇಡಾ, ಚಿಕ್ಕ ವಯಸ್ಸಿನವರು ಸಾಕು. ಅವರಿಗೆ ಹೊಸದನ್ನು ಕಲಿಬೇಕು ಸಾಧಿಸಬೇಕು ಅನ್ನುವ ತುಡಿತ ಮಿಡಿತ ಹೆಚ್ಚಿದ್ದು ಮತ್ತು ಅದಕ್ಕಾಗಿ ಅವರು ಮಾತು ಕೇಳ್ತಾರೆ,ಸರಿ ಸಮಯಕ್ಕೆ ಬರ್ತಾರೆ ದೊಡ್ಡವರದು ಹಾಗಲ್ಲ. ಪಾಲಕರು ಯಾವಾಗಚಿಕ್ಕ ವಯಸ್ಸಿನಲ್ಲಿ ಯೇ ಮಕ್ಕಳಿಗೆ ಸ್ವಾತಂತ್ರ ನೀಡಿ, ಪ್ರೋತ್ಸಾಹಿಸಿ, ಚಿಕ್ಕಪುಟ್ಟ ಸಾಧನೆಗಳನ್ನು ಪ್ರಶಂಸುತ್ತ ವಯಸ್ಸು, ಸಾಧನೆ, ಸಾಮರ್ಥ್ಯ ಮತ್ತು ಪ್ರಯತ್ನಗಳ ಸಂಬಂಧ, ಸಮೀಕರಣದ ಅರಿವು ಮೂಡುಸುತ್ತ ಇದ್ದಾಗ ಸಾಧನೆಯ ಪ್ರೇರಣೆಗಳನ್ನು ಚಿಗುರುಗೊ ಳ್ಳುವಂತೆ ಮಾಡುತ್ತದೆ. ಅದು ಸ್ಪರ್ಧಾತ್ಮಕವಾಗಿ ದ್ದರೆ ಇನ್ನೂ ಒಳ್ಳೆಯದು. ಆದಷ್ಟು ನಕಾರಾತ್ಮಕ ಪ್ರತಿಸ್ಪಂದನ ಇರಬಾರದು ಹಾಗೆ ಸಂಸ್ಥೆ ಆಡಳಿತ ಮಾಡಬೇಕು. ಅದು ಮಾತ್ರ ಹೆಚ್ಚಿನ ಸಾಧನೆಗಾಗಿ ಪ್ರೇರೇಪಿಸುತ್ತದೆ.

ನಿಜವಾಗಿಯೂ ವ್ಯಕ್ತಿಯೋರ್ವನ ಆಂತರಿಕ ಸ್ವಭಾವಗಳಾದ ಮನಸಾರೆ ಒಪ್ಪಿಕೊಳ್ಳುವದು, ದೃಢ ನಿರ್ಧಾರ,ಸಮಯ ಪರಿಪಾಲನೆ, ವಯಕ್ತಿಕ ಮಾಡಲೇಬೇಕೆಂಬ ಒತ್ತಡ (ಏನೇ ಬರಲಿ, ಹೊಲ ಹೋಗ್ಲಿ, ಮನಿಹೋಗಲಿ,ತಲಿ ಹೋಗ್ಲಿ ಆಗೇ ತೀರ ಬೇಕು, ಮಾಡಿಯೇ ತೀರಬೇಕು ಅನ್ನೋ ಛಲ, ತಕ್ಕ ಮನೋಬಲ)ಎಲ್ಲ ಬೇಕು. ಇನ್ನೂ ಹೊರಗಿನ ಬಲಗಳಾದ ಒತ್ತಡಗಳು, ಆಪೇಕ್ಷೆಗಳು, ತಾನು ಮಾಡಿಕೊಂಡ ಮೇಲಿನವರು ಮಾಡಿದ ಸಮಾ ಜದ ನಿರ್ಮಿತ ಗುರಿಗಳು. ಸಂಘಟನೆಗೆ ಗುರುತ್ವ ಬರುವದು ಈ ಹೊರಗಿನ ಬಲಗಳನ್ನು ಬಲಪಡಿ ಸುವದರಲ್ಲಿ ಇರುತ್ತದೆ. ಇವಕ್ಕೆ ಪರಿಸರ ಉತ್ತಮ ಪಡಿಸುವದು ಅಂತಾನೂ ಆಗಬಹುದು. ಹೀಗಾಗಿ ಮನುಷ್ಯನೊಬ್ಬನ ಸಾಧನೆ ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ವಾತಾವರಣದಲ್ಲಿ ಪ್ರಯೋಗವಾ ಗುತ್ತಿರುವ ಬಲಗಳಿಗೆ ಹೇಗೆ ಸ್ಪಂದಿಸುತ್ತಾನೆ ಅನ್ನೋದು ಮುಖ್ಯ. ಅದಕ್ಕಾಗಿ ಸಂಘಟನೆಗೆ ತನ್ನ ಸದಸ್ಯಕಲಾವಿದರಿಗೆ ಅನ್ವಯವಾಗುವಂತೆ ಮಾಡಿ ಎಲ್ಲ ಕಲಾವಿದರಿಗೆ ಅವರವರ ಹಿನ್ನೆಲೆ, ಶಿಕ್ಷಣ ಸಂಸ್ಕಾರ, ಅನುಭವಗಳಿಗೆ ತಕ್ಕಂತೆ ಆಕರ್ಷಣೆ, ವಿನ್ಯಾಸ ಮಾಡಿದಾಗ ಎಲ್ಲೋ ಒಂದು ಕಡೆ ಸಾಧನೆಗೆ ಪ್ರೇರಣೆ ಸಿಗಬಹುದು. ಉದಾಹರಣೆಗೆ:

1)ಹೆಚ್ಚಿನ ಕಲಾವಿದರು ನಟನೆಗೆಂದು ಬರುತ್ತಾರೆ ಅದಕ್ಕಾಗಿ ಅವರಿಗೆ ನಾಟಕ ಯಾವಾಗಲೂ ಆಗು ತ್ತಿರಬೇಕು ಅಷ್ಟೇ ಅಲ್ಲ ಅವರಿಗೊಂದು ಪಾತ್ರ ಇರ್ಬೇಕು.

2)ದುಡ್ಡು ಅಥವಾ ಗೌರವಧನ ಎಲ್ಲರೂ ಬಯ ಸುತ್ತಾರೆ. ಆದರೆ ದುಡ್ಡು ಯಾವಾಗಲೂ ಸಾಧ್ಯ ವಿಲ್ಲ ಅನ್ನುವದು ಗೊತ್ತಿರಬೇಕು. ಪಾತ್ರಧಾರಿಗೆ ಅನಿಸಬೇಕು ಹಣ ಬಿಟ್ಟರೆ ನಾನು ಬೆಳೆಯಲು ಯಾವ ರೀತಿಯಲ್ಲಿ ಅವಕಾಶ ಬಳಸಿಕೊಳ್ಳಬೇಕು ಅಂತ.

3)ಪತ್ರಿಕಾ ಗೋಷ್ಠಿಯಲ್ಲಿ ಸ್ಥಾನ, ಪತ್ರಿಕಾ ಪ್ರಚಾರ ವರದಿ, ವೀಡಿಯೊ ಮತ್ತು ಪ್ರಚಾರದ ಬ್ರೋಶರಗ ಳಲ್ಲಿ ಹೆಸರು ಮತ್ತು ಅದರ ಫಾನ್ಟ್ ಸೈಜುಗಳು.

4)ಪಾನ ಗೋಷ್ಠಿಗಳಿಗೆ ಆಮಂತ್ರಣ, ಮಹಿಳಾ ತಾರಾಗಣದಲ್ಲಿ ಸಮಯ ಕಳೆಯುವ ಅವಕಾಶ ಕಲ್ಪನೆ ಇದು ಉಭಯತಾಪಿ ಆಗಿರುತ್ತದೆ.

5)ಕೆಲ ನಿರ್ದೇಶಕರಿಗೆ ಹೆಚ್ಚು ಖರ್ಚು ಮಾಡುವ ಇರಾದೆಯನ್ನು ತೃಪ್ತಿಪಡಿಸುವಿಕೆ.

6)ನಿಯಮಿತವಾಗಿ ಅಲ್ಪೋಪಹಾರ,ಚಹಾ,ತಿಂಡಿ ಸರಬರಾಜು.

7)ರಿಹರ್ಸಲ್ ಇದ್ದಾಗ ಅಥವಾ ಉಳಿದ ಸಮಯ ದಲ್ಲಿ ಗಣ್ಯ ತಜ್ಞರ ಜತೆ ಭೇಟಿ, ಚರ್ಚೆ, ಫೋಟೋ ಗಳು, ಸೆಲ್ಫಿಗಳು.

8)ಹೆಚ್ಚು ಗೌರವ ಪ್ರವೇಶ,ಟಿಕೇಟು ಮಾರುವುದಾ ದಲ್ಲಿ ಕಮಿಷನ್ ಪ್ರಚಾರ ಸಾಮಗ್ರಿಗಳಲ್ಲಿ ಆದ್ಯತೆ.

9)ತಂಡ ಅಥವಾ ಸಂಸ್ಥೆಯಲ್ಲಿ ಅಧಿಕಾರದ ಸ್ಥಾನ ಇರ್ಬೇಕು, ಸ್ಥಾನ ಇರದಿದ್ದರೂ ನನಗೆ ಎಲ್ಲ ಗೊತ್ತಾಗಬೇಕು/ನನ್ನ ಸಹಿಯಾಗುವಂಥಹ ಸ್ಥಾನ ಬೇಕು.

(ಸಶೇಷ)

ಅರವಿಂದ ಕುಲಕರ್ಣಿ,
ರಂಗಭೂಮಿ ಚಿಂತಕರು,ಧಾರವಾಡ