ಕರ್ನಾಟಕದ ಶಿಲಾ ದೇವಾಲಯ ಎಂದಾಗನಮಗೆ ನೆನಪಾಗುವುದು ಹಲವು ಪ್ರಮುಖ ದೇವಾಲಯ ಗಳು. ಅದರಲ್ಲಿ ಕೆತ್ತೆನೆಯ ವೈಭವಕ್ಕೆ ಎಂದಾಗ ನಮಗೆ ನೆನಪಾಗುವುದು ಬೇಲೂರು ಮತ್ತು ಹಳೇಬೀಡು. ಅದರಲ್ಲೂ ಹೊರಭಿತ್ತಿಯ ಕೆತ್ತೆನೆ ಎಂದರೆ ನಮಗೆ ನೆನಪಾಗುವುದು ಹಳೇಬೀಡು ಮಾತ್ರ.

ಇತಿಹಾಸ ಪುಟದಲ್ಲಿ ದೋರ ಸಮುದ್ರ ಎಂದೇ ಪ್ರಸಿದ್ದಿ ಪಡೆದಿತ್ತು.ರಾಷ್ಟ್ರಕೂಟ ಚಕ್ರವರ್ತಿ ಧ್ರುವ ಗಂಗವಾಡಿ ಗೆದ್ದಾಗ ಇಲ್ಲಿ ಕೆರೆ ನಿರ್ಮಿಸಿ ಧ್ರುವನ ದೋರ ಎಂದು ಕರೆದಿದ್ದ.ಇದೇ ಹೆಸರು ಈಸ್ಥಳಕ್ಕೆ ಬಂದಿರಬಹುದು ಎಂಬ ನಂಬಿಕೆ ಇದೆ. ಇನ್ನು 950 ರ ಶಾಸನದಲ್ಲಿ ಇದನ್ನು ದ್ವಾರವರಿ ಎಂದು ಕರೆಯಲಾಗಿದೆ. ನಂತರ ಹೊಯ್ಸಳರು ತಮ್ಮ ನೆಲೆಗೆ ಆಯಕಟ್ಟಿನ ಸ್ಥಳವನ್ನು ಹುಡುಕುವಾಗ ವಿನಯಾದಿತ್ಯನ ಕಾಲದಲ್ಲಿ ಈ ಸ್ಥಳವನ್ನು ಅಭಿ ವೃದ್ಧಿ ಪಡಿಸಿದ. ಮುಂದೆ ವಿಷ್ಣುವರ್ಧನ ಹಾಗೂ ನಂತರ ಕಾಲದಲ್ಲಿ ಮುಖ್ಯನೆಲೆವಿಡಾಗಿ ಬೆಳೆದಿದ್ದು ಮೂರನೇ ಬಲ್ಲಾಳನ ಕಾಲದಲ್ಲಿ ತನ್ನ ಉತ್ತಂಗಕ್ಕೆ ಏರಿತ್ತು. ಆದರೆ 1310 ರಲ್ಲಿ ಮಲ್ಲಿಕ ಜಾಫರ್ ದಾಳಿಯ ನಂತರ ಈ ಊರು ತನ್ನ ವೈಭವವನ್ನು ಕಳೆದುಕೊಂಡು ಹಳೇಬೀಡಾಯಿತು.

ಇಲ್ಲಿನ ಪರಿಸರದಲ್ಲಿ ಅಸಂಖ್ಯ ದೇವಾಲಯಗಳಿ ದ್ದು ಹೊಯ್ಸಳೇಶ್ವರ,ಶಾಂತಲೇಶ್ವರ ಕೇದಾರೇಶ್ವರ, ನಗರೇಶ್ವರ, ವೀರಭದ್ರೇಶ್ವರ, ಬೊಬ್ಬೇಶ್ವರ, ರುದ್ರೇಶ್ವರ, ಕುಂಬ್ಲೇಶ್ವರ, ಹುಚ್ಚೇಶ್ವರ ಮುಂತಾದ ದೇವಾಲ ಯಗಳಿದ್ದು ಜೈನಬಸದಿಗಳು, ಭೈರವನ ಗುಡ್ಡದಲ್ಲಿನ ವೀರಭದ್ರ ದೇವಾಲಯ ಹಾಗೂ ಹುಲಿ ಕೆರೆಯ ಸುಂದರ ಕಲ್ಯಾಣಿಗಳು ಇದಕ್ಕೆ ಸಾಕ್ಷಿ. ನಗರೇಶ್ವರ ದೇವಾಲಯ ಮಾತ್ರ ಸಂಪೂ ರ್ಣ ನಾಶವಾಗಿದ್ದು ಉಳಿದ ದೇವಾಲಯಗಳು ಉಳಿದೆವೆ.

ಹೊಯ್ಸಳೇಶ್ವರ – ಶಾಂತೇಶ್ವರ ದೇವಾಲಯ

ಹೊಯ್ಸಳ ದೇವಾಲಯಗಳಲ್ಲಿಯೇ ಮೆರಗು ಎನಿ ಸುವ ಈ ದೇವಾಲಯವನ್ನು 1121 ರಲ್ಲಿ ವಿಷ್ಣು ವರ್ಧನನ ಅಧಿಕಾರಿ ಕೇತುಮಲ್ಲನ ಕಾಲದಲ್ಲಿ ನಿರ್ಮಾಣವಾಗಿದ್ದು ಹಲವು ಕಾಲಘಟ್ಟಗಳಲ್ಲಿ ಪೂರ್ಣಗೊಂಡಿದೆ. ಬಳಪದ ಕಲ್ಲಿನಲ್ಲಿ ನಿರ್ಮಾಣ ವಾದ ಈ ಜೋಡಿ ದೇವಾಲಯ ಎರಡು ಗರ್ಭ ಗುಡಿ, ಸುಖನಾಸಿ, ಒಂದೇ ನವರಂಗ ಹಾಗೂ ವಿಶಾಲವಾದ ನಂದಿ ಮಂಟಪವಿದ್ದು ನಕ್ಷತ್ರಾಕಾರ ದ ಜಗತಿಯ ಮೇಲೆ ನಿರ್ಮಾಣವಾಗಿದೆ. ಎರಡು ಗರ್ಭಗುಡಿಯಲ್ಲಿ ಹೊಯ್ಸಳೇಶ್ವರ ಹಾಗೂ ಶಾಂತೇಶ್ವರ ಎಂದು ಕರೆಯುವ ಶಿವಲಿಂಗವಿದೆ.

ಇನ್ನು ನವರಂಗದಲ್ಲಿ ಸುಂದರ ಜಾಲಂದ್ರಗಳಿದ್ದು ಮೆರುಗ ನೀಡಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ಇಲ್ಲಿನ ಮಣಿಹಾರಗಳು, ಕೀರ್ತಿಮುಖಗಳು ಇದ್ದು ಅಲ್ಲಲ್ಲಿ ಮದನಿಕೆಯರ ಕೆತ್ತೆನೆ ಇದ್ದರೂ ಬೇಲೂರು ನೆನಪಿಸಿವುದಿಲ್ಲ.  ಈ ದೇವಾಲಯದ ವೈಭವತೆ ಇರುವುದು ಇದರಲ್ಲಿನ ಹೊರಭಿತ್ತಿಯಲ್ಲಿನ ಕೆತ್ತೆನೆಗಳು. ಸುಮಾರು 700 ಅಡಿಗೂ ಉದ್ದವಾಗಿರುವ ಹಲವು ಮಡಿಕೆಯಲ್ಲಿ ರುವ ಈ ಕೆತ್ತೆನೆಗಳು ಕಲಾತ್ಮಕತೆಯ ಉತ್ತುಂಗಕ್ಕೆ ಸಾಕ್ಷಿ. ಐದು ಹಂತದ ಪಟ್ಟಿಕೆಗಳಲ್ಲಿ ಗಜ, ಸಿಂಹ, ಬಳ್ಳಿ, ಕುದುರೆ, ಕಥಾನಕಗಳು, ಹಂಸದ ಪಟ್ಟಿಕೆ ಯಿದ್ದು ನಂತರದ ಭಾಗದಲ್ಲಿ (ಜಂಘಾ ಭಾಗ) ದೇವತೆಗಳು ಅದ್ಭುತ ಕೆತ್ತೆನೆ ಇದೆ. ಇಲ್ಲಿ ರಾಮಾ ಯಣ ಹಾಗೂ ಮಹಾಭಾರತ, ಮಹಿಷಾಸುರ ಮರ್ದಿನಿ, ರಾವಣ ಕೈಲಾಸ ಪರ್ವತ ಎತ್ತುವುದು, ವಿಷ್ಣುವಿನ ದಶಾವತಾರಗಳ ಕೆತ್ತೆನೆ, ಗಜೇಂದ್ರ ಮೋಕ್ಷ,ಇತ್ಯಾದಿ ಮುಂತಾದ ಕೆತ್ತೆನೆಗಳ ಸರಮಾ ಲೆಯೆ ಇದೆ.  

ಇನ್ನು ದೇವಾಲಯದ ಎದುರು ಭಾಗದಲ್ಲಿ ನಂದಿ ಮಂಟಪವಿದ್ದು ಇಲ್ಲಿ ಬೃಹತ್ ಗಾತ್ರದ ನಂದಿಯ ಶಿಲ್ಪವಿದೆ. ಇನ್ನು ನಂದಿಯ ಹಿಂಭಾಗದಲ್ಲಿ ಸೂರ್ಯನ ದೇವಾಲಯವಿದೆ. ಇನ್ನು ದೇವಾಲ ಯದ ಆವರಣದಲ್ಲಿ ಬೃಹತ್ ಗಣಪತಿಯ ಶಿಲ್ಪ ವಿದ್ದು ಎರಡನೇ ಬಲಾಳನ ಕಾಲದಲ್ಲಿ ನಿರ್ಮಾಣ ವಾದ ಗರುಡಗಂಭವಿದೆ.

ಕೇದಾರೇಶ್ವರ ದೇವಾಲಯ

ಮೂಲತ: ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇಯ ಬಲ್ಲಾಳ ಹಾಗು ಅವನ ಕಿರಿಯ ರಾಣಿ ಕೇತಲದೇವಿ ೧೨೧೯ ರಲ್ಲಿ ಈ ದೇವಾಲಯವನ್ನು ಬಳ್ಳೀಗಾವಿಯ ಕೇದಾರೇಶ್ವರ ದೇವಾಲಯದಿಂದ ಸ್ಫೂರ್ತಿ ಪಡೆದು ನಿರ್ಮಿಸಿ ದರು  ಎನ್ನಲಾಗಿದೆ.

ಈ ದೇವಾಲಯವನ್ನು ಸಹ ಬಹುತೇಕ ಹೊಯ್ಸ ಳರ ದೇವಾಲಯಗಳಲ್ಲಿ ಕಾಣ ಬರುವಂತೆ ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದ್ದು ಜಗತಿಯ ಮೇಲೆನಿರ್ಮಾಣವಾಗಿದೆ.ದೇವಾಲಯ ಗರ್ಭಗುಡಿ,ಅಂತರಾಳ ಹಾಗು ನವರಂಗ ಹೊಂದಿ ದೆ. ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು ಪ್ರಸ್ತುತ ಯಾವ ಮೂಲ ಶಿಲ್ಪವೂ ಇಲ್ಲ. ಈಗ ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗ ಇರಿಸಲಾ ಗಿದೆ.  ಇನ್ನು ಅಂತರಾಳದ ಬಾಗಿಲುವಾಡದಲ್ಲಿನ ಲಲಾಟದಲ್ಲಿ ಗಜಲಕ್ಷ್ಮೀ ಕೆತ್ತೆನೆ ಇದ್ದು ಉಳಿದ ಭಾಗ ನವೀಕರಣಗೊಂಡಿದೆ.ಇನ್ನು ನವರಂಗದಲ್ಲಿ ಸುಂದರವಾದ ಸುಂದರವಾದ ಆರು ಕಂಭಗಳಿದ್ದು ಅದರಲ್ಲಿ ನಾಲ್ಕು ತಿರುಗಣೆಯ ಕಂಭಗಳು ಹಾಗು ವಿಸ್ತರಿತ ಭಾಗದಲ್ಲಿ ಸುಂದರವಾದ ಎರಡು ಕಂಭ ಗಳು ಹಾಗು ಕಕ್ಷಾಸಾನ ನೋಡಬಹುದು. ಇನ್ನು  ನವರಂಗ ಒಂಬತ್ತುಅಂಕಣ ಹೊಂದಿದ್ದು ಮಧ್ಯದ ವಿತಾನದಲ್ಲಿನ ಕೆತ್ತೆನೆ ಸುಂದರವಾಗಿದೆ.  

ಈ ದೇವಾಲಯ ಗಮನ ಸೆಳೆಯುವುದೇ ಇಲ್ಲಿನ ಹೊರ ಭಿತ್ತಿಯಲ್ಲಿನ ಕಲಾತ್ಮಕ ಕೆತ್ತೆನೆಗಳಿಂದ. ಆದರೆ ದೇವಾಲಯದ ಸುಂದರತೆ ಮಾತ್ರ ಹೊರ ಭಿತ್ತಿಯಲ್ಲಿ ಹೊಯ್ಸಳರ ಯಾವದೇವಾಲಯಕ್ಕೂ ಕಡಿಮೆ ಇಲ್ಲ. ಇಡೀ ದೇವಾಲಯದ ಹೊರಭಿತ್ತಿ ಯಲ್ಲಿ ಆನೆ, ಅಶ್ವ, ಸಿಂಹ, ಲತಾ ಪಟ್ಟಿಕೆಗಳು, ರಾಮಾಯಾಣ, ಮಹಾಭಾರತದ ಕಥನಗಳು, ಮತ್ತು ಭಾಗವತದ ಕಥನಗಳ ಕೆತ್ತೆನೆ ಸುಂದರ ವಾಗಿದೆ. ಇನ್ನು ಮೇಲಿನ ಭಾಗದಲ್ಲಿ ಸುಮಾರು ೧೮೮ಮೂರ್ತಿಗಳ  ಅದ್ಭುತ ಕೆತ್ತೆನೆ ಇದ್ದು ಬೈರವ, ತಾಂಡವ ಮೂರ್ತಿ, ಅಂಧಕಾಸುರ ವಧೆ, ಕಾಳಿಂಗ ಮರ್ಧನ, ಗೋವರ್ಧನ ಗಿರಿಧಾರಿ, ನೃತ್ಯಗಾರರು, ವೇಣುಗೋಪಾಲ, ಸೂರ್ಯ,ಉಮಾಮಹೇಶ್ವರ, ಭುವನೇಶ್ವರಿ, ಶಿವನ ಹಲವು ನರ್ತನದ ಭಂಗಿ, ವಾಮನ, ಮತ್ಸ್ಯ ಅರ್ಜುನ ಮುಂತಾದ ಕೆತ್ತೆನೆ ಇದ್ದು ಕಲಾ ಸೂಕ್ಷ್ಮತೆಗೆ ಸಾಟಿ ಇಲ್ಲ ಎನ್ನುವಂತೆ ಇದೆ.

ಬೊಬ್ಬೆಶ್ವರ – ರಂಗನಾಥ ದೇವಾಲಯ

ಸುಮಾರು 13 ನೇ ಶತಮಾನದಲ್ಲಿ ನಿರ್ಮಾಣ ವಾದ ಈದೇವಾಲಯ ಶಾಸನಗಳಲ್ಲಿ ಬೊಬ್ಬೇಶ್ವರ ದೇವಾಲಯವೆಂದು ಉಲ್ಲೇಖಗೊಂಡಿದೆ. ವಿನಾಶ ದ ಅಂಚಿಗೆ ಸಾಗಿದ್ದ ಈ ದೇವಾಲಯವನ್ನು ಈಗ ನವೀಕರಿಸಲಾಗಿದೆ. ಮೂಲತ: ಏಕಕೂಟ ದೇವಾಲಯವಾದ ಇಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ ಹಾಗು ಮುಖಮಂಟಪವಿದೆ. ಇನ್ನು ಗರ್ಭ ಗುಡಿಯಲ್ಲಿ ಮೊದಲು ಇದ್ದ ಶಿವಲಿಂಗದ ಬದಲಾಗಿ ನಂತರ ಕಾಲದಲ್ಲಿ ಸ್ಥಾಪಿತವಾಗಿರುವ ರಂಗನಾಥನ ಮೂರ್ತಿ ಇದೆ.

ಶೇಷಶಯನವಾಗಿರುವ ಈ ಮೂರ್ತಿ ಗರುಡಪೀಠ ದ ಮೇಲೆ ಇದ್ದು ಪಾದದ ಬಳಿ ಶ್ರೀ ದೇವಿ ಹಾಗು ಭೂದೇವಿಯರ ಕೆತ್ತೆನೆ ಇದೆ. ಕೈಯಲ್ಲಿ ಗಧಾ ಹಾಗು ಪದ್ಮದ ಕೆತ್ತೆನೆ ಇದೆ. ಇನ್ನು ನವರಂಗದಲ್ಲಿ ನಾಲ್ಕು ಕಂಭಗಳಿದ್ದು ವಿತಾನದಲ್ಲಿನ ಅಷ್ಟದಿಕ್ಪಾಲ ಕರ ಕೆತ್ತೆನೆ ಗಮನ ಸೆಳೆಯುತ್ತದೆ. ಇನ್ನು ಇಲ್ಲಿನ ಮುಖಮಂಟಪದಲ್ಲಿನ ಹಲವು ಶಿಲ್ಪಗಳನ್ನು ದೇವಾಲಯದ ಆವರಣದಲ್ಲಿ ರಕ್ಷಣೆ ಮಾಡಲಾ ಗಿದೆ.

ಇನ್ನು ಹೊಯ್ಸಳೇಶ್ವರ ದೇವಾಲಯಕ್ಕೆ ಎದುರಾಗಿ ಪ್ರವಾಸಿ ಮಂದಿರಕ್ಕೆ ಸಮೀಪದಲ್ಲಿ ಈ ದೇವಾ ಲಯದಷ್ಟೇ ಸುಂದರವಾಗಿರಬಹುದಾಗಿದ್ದ ನಗರೇಶ್ವರ ಹಾಗು ಪಂಚಲಿಂಗೇಶ್ವರ ದೇವಾಲಯ ದ ಅವಶೇಷಗಳಿದೆ, ಹೆಚ್ಚಿನ ಶಿಲ್ಪಗಳನ್ನು ಇಲ್ಲಿನ ಮ್ಯೂಸಿಂಯನಲ್ಲಿ ಇಡಲಾಗಿದೆ.

   ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು