ಹಲೋ… ಟೀಚರ್ ನಾನು…. ಎಂದು ಅಳುವಿ ನೊಂದಿಗೆ ಪ್ರಾರಂಭವಾದ ಮಾತು ಒಂದು ಕ್ಷಣ ನನ್ನನು ಗಾಬರಿಗೊಳಿಸಿತ್ತು. ಅಳಬೇಡ ಏನಾ ಯಿತು? ಸಣ್ಣ ಕೀರಲು ಧ್ವನಿ, ಮೂಗು ಸುರ್ರ್ ಸುರ್ರ್ ಅನ್ನುತ್ತಿತ್ತು. ದುಃಖಪಡುವುದು ಗೊತ್ತಗು ತ್ತಿತ್ತು, ಟೀಚರ್ ಏನ್ ಮಾಡಬೇಕಂತ ತಿಳಿಯದೇ ಒಬ್ಬಳೇ ಡೋರ್ ಲಾಕ್ ಮಾಡಕೊಂಡು ಕುಂತಿನಿ. ಮೇಲೆ ಪ್ಯಾನು, ಕೆಳಗೆ ಫಿನೈಲ್, ಕೀಟನಾಶಕದ ಬಾಟಲ್, ಬ್ಲೇಡ್ ಇದೆ. ಯಾವುದೇ ಅಳುಕಿಲ್ಲದೇ ಎಲ್ಲವನ್ನೂ ಸವಿವರವಾಗಿ, ನಿರ್ಧರಿಸಿ ಬಿಟ್ಟಂತೆ ಮಾತು ಸ್ಪಷ್ಟವಾಗಿತ್ತು. ನಾನು ಕೊಂಚ ಹೌಹಾರಿದೆದೆ. ಏನಾಗ್ತಿದೆ ಅನ್ನೊದಕ್ಕೆ ಬೆವತಿದ್ದೆ.

ಏನೋ ಅನಾಹುತ ಆಗುವುದಂತೂ ಗ್ಯಾರಂಟಿ. ತಕ್ಷಣ ಅವಳ ಮನ ನನ್ನತ್ತ ವಾಲಿರುವುದು ದೈವಿ ಕೃಪೆಯೆನಿಸಿತು. ಯಾಕೋ ಮರಿ ಇವೆಲ್ಲ ನಿನ್ನ ಹತ್ತಿರ? ನೋಡು ಅವುಗಳನ್ನು ದೂರ ಇರಿಸು. ನಿಜ ಹೇಳು; ನಾನು ಓದಿದ್ದು, ಬರೆದಿದ್ದು ಸಿಕ್ಕಾ ಪಟ್ಟೆ ಆದರೆ ಅಂಕ ಬಂದಿದ್ದು ಕಡಿಮೆ ನನ್ನತಪ್ಪಾ? ಅಪ್ಪ ಅಮ್ಮರ ಮರ್ಯಾದೆ ಹೋಯಿತೆಂದು ಗಲಾಟೆ, ನನ್ನ ಮಗಳು ಅಷ್ಟ ಮಾಡತಾಳೆ, ಇಷ್ಟ ಮಾಡತಾಳಂತ ಬಂದವರ ಎದುರು ಕೊಚ್ಚಿ ಕೊಂಡರೆ ನಾನೇನು ಮಾಡ್ಲಿ? ಹಾಗೆ ಮಾಡಂತ ಹೇಳಿದಿನಾ? ಈಗ ಅವರೆಲ್ಲ ಟೀಕಿಸುವುದಕ್ಕೆ ನನ್ನ ಬೈತಿದ್ದಾರೆ‌. ಮನೆಯಲ್ಲಿ ಆಶಾಂತಿ ನೆಲೆಸಿದೆ. ನನಗೆಷ್ಟು ಬರುತ್ತೊ ಅಷ್ಟನ್ನು ಬರದಿದ್ದಿನಿ. ಮನಸ್ಸು ಭಾರವಾಗಿದೆ ನಿಮ್ಮ ನೆನಪಾಗಿ ಪೋನ್ ಮಾಡ್ದೆ.

ನೀವು ಕಲಿಸುವಾಗ ಹೇಳುತ್ತಿದ್ದ ಮೌಲ್ಯಗಳು, ನಮ್ಮಲ್ಲಿ ರಬೇಕಾದ ಗುಣಗಳು,ಎಲ್ಲದಕ್ಕೂನೀವು ಪದೇ ಪದೇ ಹೇಳುವ ಧೈರ್ಯ,ಸಂಯಮ ತಾಳ್ಮೆ, ಪ್ರೀತಿ, ನಮ್ಮ ಮೇಲೆ ನಮಗೆ ಇರಬೇಕಾದ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆಯ ಚಿಗುರೊಡಿ ಸಿದ ನಿಮ್ಮ ಮರೆಯಲು ಹೇಗೆ ಸಾಧ್ಯ ಟೀಚರ್? ಯಾರು ಏನೋ ಅಂದರು ನನಗೆ ನನ್ನ ಮೇಲೆ “ಸೆಲ್ಪ್ ಕಾನ್ಪಿಡೆನ್ಸ್ ಇದೆ” ಎನ್ನುವ ಮುಗ್ದ ಮನಸ್ಸು ಅರಿತು ಕಸಿವಿಸಿಗೊಂಡೆ. ನಿನ್ನಂತರಂಗ ಜಾಗೃತಗೊಳಿಸಲು ಪ್ರೇರೆಪಿಸಿದ್ದು ಕಂಡು ಖುಷಿ ಯಾಯಿತು,‌ ಅತಂಕ ಮಾತ್ರ ಹಾಗೆ ಇತ್ತು.

ಅಷ್ಟಕ್ಕೂ ಮಕ್ಕಳು ಹತಾಶೆಗೊಂಡು ಬಳಲಿದಾಗ ಅವರ ಕುಗ್ಗಿದ ಮನಸ್ಸನ್ನು ಹತೋಟಿಗೆತರುವುದು ಪಾಲಕ ರು,ಶಿಕ್ಷಕರು,ಸಮುದಾಯದ ಜವಾಬ್ದಾರಿ. ಮಕ್ಕಳು ಮುಕ್ತವಾಗಿ ಹೇಳದೆ ಹೋದರೆ, ಅವರನ್ನು ಕಳೆದು ಕೊಂಡು ರೋಧಿಸು ಕ್ಷಣಗಣನೆ ಆರಂಭವಾದರೆ ಆಶ್ಚರ್ಯ ಪಡಬೇಕಿಲ್ಲ.

“ಯಾವೊಬ್ಬ ವ್ಯಕ್ತಿಯು ಅಸಮರ್ಥನಲ್ಲ ಸಮಯ,ಅವಕಾಶಗಳು ಲಭ್ಯವಾಗದಿದ್ದಾಗ ಅನಾಯಾಸವಾಗಿ ದೀಪಕೆ ಎರಗಿದ ಪತಂಗವಾ ಗುತ್ತಾನೆ”_ಅನಾಮಿಕ.

ಪ್ರತಿಯೊಂದಕ್ಕೂ ಫಲಿತಾಂಶವೊಂದೆಮಾನದಂಡ ವಾದರೆ ಉಳಿಗಾಲವಿಲ್ಲ. ಮಗುವಿನ ಕೌಶಲ್ಯ, ಅಭಿರುಚಿ, ಆಸಕ್ತಿ ಪ್ರತಿಭೆ ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ.

ನೋಡು ಮಗು, ಪಾಲಕರು ಬೈದ‌ಮಾತ್ರಕ್ಕೆ ನಿನ್ನ ಅಮೂಲ್ಯ. ಜೀವನವನ್ನು ಕಳೆದುಕೊಳ್ಳುವುದು ಹೇಡಿತನ. ಅವರ ನಿರೀಕ್ಷಿತ ಮಟ್ಟ ನೀ ತಲುಪದಿ ದ್ದರೂ ಇದೊಂದೆ ಫಲಿತಾಂಶ ನಿನ್ನ ಜೀವನ ನಿರ್ಧರಿಸುವುದಿಲ್ಲ ಮುಂದೆ ನೀನು ಸಾಧಿಸಬೇಕಾ ಗಿದ್ದು ಬಹಳಷ್ಟಿದೆ. ಕೋಪದ ಭರದಲ್ಲಿ ಕೊಯ್ದ ಮೂಗು ಮತ್ತೆ ಸರಿಪಡಿಸಲು ಬಾರದು ಸಮಾಧಾ ನವಿರಲಿ.ಅವಳೊಮ್ಮೆ ಅಳುವ ನಿಲ್ಲಿಸುತ್ತ. ಕೊನೆ ಗಳಿಗೆಯಲ್ಲಿ ನಿಮ್ಮ ಮಾತು ನನಗೆ ಸಂಜೀವಿನಿ ಯಿದ್ದಂತೆ, ದುಡುಕಲಾರೆ. ನಾನು ನಿಮ್ಮ ಶಿಷ್ಯೆ ನೀವು ಹೇಳಿದಂತೆ ಗುರಿ‌ ತಲುಪುವೆ. ಅಪ್ಪ ಅಮ್ಮ ರಿಗೆ ಸಂತಸ ಕೊಡುವೆ. ಥ್ಯಾಂಕ್ಯೂ ಟೀಚರ್ ಲವ್ಯೂ ಎಂದು ಮುತ್ತಿಟ್ಟ ಮಗುವಿಗೆ ಹಾರೈಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ನ್ಯೂಸ್ ಪೇಪರ್ಸ್ ಸುದ್ದಿಗಳು ಒಮ್ಮೆ ಕಣ್ಣ ಮುಂದೆ ಹಾದು ಹೋದವು. ಕಲಿಕೆ ಎನ್ನುವುದು ಯಾಂತ್ರಿಕ ಶಕ್ತಿಯಾಗಿ ಕರಗಿದರೆ, ಪ್ರಾಯೋಗಿಕ ವಾಗುವುದು ಯಾವಾಗ? “ನಹಿಃ ಜ್ಞಾನನೇನ ಸದೃಶಂ” ಜ್ಞಾನಕ್ಕಿಂತ ಮಿಗಿಲಾದದ್ದು ಈ ಜಗತ್ತಿ ನಲ್ಲಿ ಮತ್ತೊಂದಿಲ್ಲ. ಬದುಕು ನಾವು ಕಟ್ಟಿಕೊಳ್ಳ ಬೇಕು. ಬುದ್ದಿ ಬಲಿಯದ ಮನಕೆ ಹೇರಿಕೆ ಸಲ್ಲ. ಹೆತ್ತವರ ಸಂಕಟವು ಸುಳ್ಳಲ್ಲ. ಹೆತ್ತವರಿಗೆ ತಮ್ಮ ಮಕ್ಕಳ ಮೇಲೆ ಆಸೆ, ಆಕಾಂಕ್ಷೆಗಳನ್ನು ಇಟ್ಟು ಕೊಳ್ಳುವುದು ತಪ್ಪಲ್ಲ. ಎಲ್ಲವನ್ನು ಅವರಷ್ಟಕ್ಕೆ ಬಿಟ್ಟು ಬಿಡುವುದು ಸಮಂಜಸವಲ್ಲ. ಜವಾಬ್ದಾರಿ ಎನ್ನುವಂತಹುದು ಚಂಚಲ ಮನವನ್ನು ಸನ್ಮಾರ್ಗ ದಲ್ಲಿ ನಡೆಸಲು ಪ್ರೇರೆಪಿಸುವುದಾಗಿದೆ. ಹೆಚ್ಚಿನ ಕಡಿವಾಣಗಳು ಖಿನ್ನತೆಯನ್ನು ಸೃಷ್ಟಿ ಮಾಡಿದರೆ, ಮಗು ಅರಳುವ ಮೊದಲು ಕಮರಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಪಾಲಕರ ಒತ್ತಾಸೆಗಳು ಮುಗ್ಧ ಮನಸ್ಸನ್ನುಒಂದು ಕ್ಷಣ ಅಲಕ್ಷ್ಯ ಮಾಡಿದರೆ ಮರಳಿಬಾರದ ಲೋಕಕೆ ಆಹ್ವಾನ ನೀಡಿದಂತೆ. ಕಳೆದುಕೊಂಡು ಕೊರಗುವ ಬದಲು ಇದ್ದಾಗ ಸರಿಯಾದ. ಮಾರ್ಗದರ್ಶನ ಮಾಡುತ್ತ ಜೀವನ ನಿಭಾಯಿಸುವ ಕೌಶಲ್ಯ ಬೆಳೆಸಿ ದರೆ ಉತ್ತಮ. ಎಲ್ಲರೂ ಡಾಕ್ಟರ್,ಇಂಜಿನಿಯರ್, ಹೊರದೇಶಗಳಲ್ಲಿ ನೆಲೆಸಲು ಬಯಸಿದರೆ‌? ಮಣ್ಣಿ ನ ಮಗನು/ಳು ಆಗುವವರಾರು? ಅಂಕಗಳು ಶಾಶ್ವತವಲ್ಲ, ಅಂಕದೊಂದಿಗೆ ಪಡೆದ ಜ್ಞಾನ ಅನ್ವ ಯವಾದಾಗ ಶಿಕ್ಷಣಕ್ಕೊಂದು ಬೆಲೆ. ರೋಬೋಟ್ ತರಹ ಮಕ್ಕಳಲ್ಲ. ದೇಶದ ಮಣ್ಣಿನ ಪ್ರಜೆಯಾಗಿ ಬೆಳೆಯುವುದು ಮುಖ್ಯ.

ಎಷ್ಟೋ ಮಕ್ಕಳು ಫಲಿತಾಂಶ ಬರುವ ಮುನ್ನವೇ ಹೆದರಿ ಕುಗ್ಗಿದ್ದಿದೆ. ನಮ್ಮ ಬುದ್ದಿ ಸಾಮರ್ಥ್ಯದ ಪ್ರತಿರೂಪವೆಂದು ಮನಗಾಣಬೇಕಿದೆ. ಆತ್ಮ- ವಿಶ್ವಾಸ ಹೆಚ್ಚಿಸಿ, ಮುಂಬರುವ ಜೀವನದ ಪರೀಕ್ಷೆಗೆ ಸಜ್ಜಾಗಲು ಮನಸ್ಸನ್ನು ಹದಗೊಳಿಸು ವುದು ನಮ್ಮ ಕರ್ತವ್ಯ..

  ಶ್ರೀಮತಿ.ಶಿವಲೀಲಾ ಹುಣಸಗಿ 
ಶಿಕ್ಷಕಿ,ಯಲ್ಲಾಪೂರ