ನೀನೆಂದರೆ…
ಮಾತುಗಳೊಳಗಿನ
ಮೌನವಲ್ಲ…
ಮೌನದೊಳಗಿನ
ಮಾತು..!

ನೀನೆಂದರೆ…..
ಧ್ಯಾನದೊಳಗಿನ
ಸ್ಮರಣೆಯಲ್ಲ….
ಸ್ಮರಣೆಯೊಳಗಿನ
ಧ್ಯಾನ.!

ನೀನೆಂದರೆ…..
ಭಾವದೊಳಗಿನ
ಸ್ವರಗಳಲ್ಲ…..
ಸ್ವರಗಳೊಳಗಿನ
ಭಾವ.!

ನೀನೆಂದರೆ…..
ಹೃದಯದೊಳಗಿನ
ಒಲವಲ್ಲ….
ಒಲವಿನೊಳಗಿನ
ಹೃದಯ..!

ನೀನೆಂದರೆ…..
ಜೀವದೊಳಗಿನ
ಚೈತನ್ಯವಲ್ಲ….
ಚೈತನ್ಯದೊಳಗಿನ
ಜೀವ..!

ನೀನೆಂದರೆ…..
ಕೇವಲ
ನೀನಲ್ಲ….
ನನ್ನೊಳಗಿನ
ಸಕಲ..!

  ಎ.ಎನ್.ರಮೇಶ್.ಗುಬ್ಬಿ.