ಮಳೆ

ಮಳೆ
ನೀನಿಳಿದು ಬಂದರೆ
ನಾಚಿ ನೀರಾಗುವಳು
ಈ ಧರೆ!


ಧರೆ

ಧರೆ
ಬಂದೇಬಿಟ್ಟ ಅರೇ
ನಿನ್ನವನೇ
ಈ ಮಳೆ!


ಸೆಲೆ

ಧರೆಗೆ ಮಳೆ
ಭಾವ ಸೆಲೆ
ಮೊಗಕೆ ಕಳೆ
ಖರೇ-ಖರೇ!


ಖರೇ

ಖರೇ
ನಿನ್ನ ನಗುವದೇ
ಬಲು ನೆನೆವುದೇ
ಸಖೀ ಸುಖವಲ್ಲವೇ!

ವೈಭವ ಪೂಜಾರ, ಹುಬ್ಬಳ್ಳಿ