ಇಲ್ಲಿ ಹೃದಯವನು ಓದುವವರು ಯಾರೂ ಇಲ್ಲವಲ್ಲಾ ಸಾಕಿ
ಇಲ್ಲಿ ಕವಿತೆಗೆ ಜೋಡಿಯಾಗುವವರು ಯಾರೂ ಇಲ್ಲವಲ್ಲಾ ಸಾಕಿ
ನೀ ಕೊಡುವ ಮದಿರೆಯಲಿ ಅನಂತ ದುಃಖವನು
ಅದ್ಹೇಗೆ ಅಡಗಿಸುವೆಯೊ
ಇಲ್ಲಿ ಶರಾಬಿಗೆ ಹೃದಯಕೊಡುವವರು ಯಾರೂ ಇಲ್ಲವಲ್ಲಾ ಸಾಕಿ
ಮಚ್ಚಿನಿಂದ ತಿಂದ ಗಾಯಗಳಸಂಖ್ಯ ನಿನ್ನ ಮೈಖಾನೆಯಲಿ ಮಲಗಿಬಿಡುವವು!
ಇಲ್ಲಿ ಕೆಂಪು ಗುಲಾಲು ಪ್ರೀತಿಸುವವರು ಯಾರೂ ಇಲ್ಲವಲ್ಲಾ ಸಾಕಿ
ಮನುಷ್ಯನ ಮೇಲೆ ಮನುಷ್ಯನದೇ ದಾಳಿ ಕಂಡು ಪ್ರಾಣಿಗಳೊಂದಾಗುತಿವೆ ಈಗ
ಇಲ್ಲಿ ಹಿಂಸೆ ನುಂಗಿದ ಸಂತನ ಗುರುತಿಸುವವರು ಯಾರೂ ಇಲ್ಲವಲ್ಲಾ ಸಾಕಿ
ರಾತ್ರಿ ಬೀಳುವ ಕನಸಿಗೆ ಹಗಲೇ ಉರಿ ಹಚ್ಚುವ ಬೆದೆಗೆ ಬೆಚ್ಚಿಬಿದ್ದಿರುವೆ “ಜಾಲಿ”
ಇಲ್ಲಿ ಕತ್ತಲಿಗೆ ಬಿದ್ದ ಕುಸುಮಗಳ ಎತ್ತಿಕೊಳ್ಳುವವರು ಯಾರೂ ಇಲ್ಲವಲ್ಲಾ ಸಾಕಿ
✍️ ವೇಣು ಜಾಲಿಬೆಂಚಿ
ರಾಯಚೂರು.