ಬೆಳಗಾವಿಜಿಲ್ಲೆಯ ಸ್ಥಳನಾಮಗಳುಡಾ.ಶೋಭಾ ತಪಸಿಯವರ‘ಬೆಳಗಾವಿ ಜಿಲ್ಲೆಯ ಸ್ಥಳನಾಮ ಗಳು’ ಸಂಶೋಧನಾ ಮಹಾಪ್ರಬಂಧ. ಇದು ಒಟ್ಟು 292 ಪುಟಗಳ ಹರವನ್ನು ಒಳಗೊಂಡಿದೆ. ಡಾ.ಧನವಂತ ಹಾಜವ್ವಗೋಳ ಅವರ ಮುನ್ನುಡಿ ಯ ಮಹತ್ವದ ಬಹುತೇಕ ಸಂಗತಿಗಳನ್ನು ನಾನಿಲ್ಲಿ ಉಲ್ಲೇಖಿಸಿರುವೆನು. ಡಾ.ಶೋಭಾ ತಪಸಿ ಅವರು ತುಂಬಾ ಶ್ರಮವಹಿಸಿ ಕ್ಷೇತ್ರಕಾರ್ಯವನ್ನು ಮಾಡಿ, ಈ ಮೌಲಿಕವಾದ ಮಹಾಪ್ರಬಂಧವನ್ನು ರಚಿಸಿ ದ್ದಾರೆ. `ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ಎಂಬ ಸಂಶೋಧನಾ ಮಹಾಪ್ರಬಂಧದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ.

ಮೊದಲ ಅಧ್ಯಾಯ ಅಧ್ಯಯನದ ಉದ್ದೇಶ, ಸ್ವರೂಪ ವ್ಯಾಪ್ತಿ ಎಂದಿದೆ. ಇದರಲ್ಲಿ ಈ ತಲೆ ಬರಹವನ್ನಿಟ್ಟುಕೊಂಡು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮಹಾಪ್ರಬಂಧವನ್ನು ಸಿದ್ಧಗೊಳಿಸಲುಹಲವು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ. ಈಜಿಲ್ಲೆಯ ಸ್ಥಳನಾಮಗಳಿಗೆ ಸಂಬಂಧಿಸಿದ ಸಾಹಿತ್ಯಾವಲೋ ಕನವನ್ನು ಇಲ್ಲಿ ಮಾಡಲಾಗಿದೆ. ಅಲ್ಲದೆ ಈ ಜಿಲ್ಲೆ ಯನ್ನುಹೊರತುಪಡಿಸಿ ರಚನೆಯಾದ ಸ್ಥಳನಾಮ ಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅವಲೋ ಕನ ಮಾಡಿದ್ದಾರೆ. ಈ ಅಧ್ಯಯನ ಸ್ವರೂಪದಲ್ಲಿ ಕ್ಷೇತ್ರ ಕಾರ್ಯ ಮಾಡಿ ಮಾಹಿತಿಯನ್ನು ಸಂಗ್ರಹಿ ಸಿದ ವಿವರಗಳನ್ನು ಕೊಟ್ಟಿದ್ದಾರೆ. ಅದರೊಂದಿಗೆ ಉಪಲಬ್ಧವಾದ ಗ್ರಂಥಗಳು, ಶಾಸನಗಳು, ಪತ್ರಿಕೆ ಯಲ್ಲಿ ಪ್ರಕಟವಾದ ಬಿಡಿಲೇಖನಗಳು ಹಾಗೂ ಸ್ಥಳನಾಮಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಗಳ ದಾಖಲಾತಿಗಳನ್ನು ಈ ಪ್ರಬಂಧ ರಚನೆಗೆ ಆಕರವಾಗಿ ಬಳಸಿಕೊಂಡಿರುವುದು ಅವರ ಕ್ಷೇತ್ರಕಾರ್ಯದ ಪರಿಶ್ರಮ ಕಾಣುತ್ತದೆ. ಇಲ್ಲಿಯ ಅಧ್ಯಾಯಗಳ ವಿಂಗಡನೆ ಆಯಾ ಅಧ್ಯಾಯಗಳು ಒಳಗೊಂಡ ವಿಷಯ ವಿವರಣೆ ಯನ್ನು ಸ್ಪಷ್ಟಪಡಿಸಿದ್ದಾರೆ. ಇದು ಬೆಳಗಾವಿ ಜಿಲ್ಲೆ ಯ ಸ್ಥಳನಾಮಗಳ ಅಧ್ಯಯನವಾದ್ದರಿಂದ ಈ ಜಿಲ್ಲೆಯ ವ್ಯಾಪ್ತಿಯನ್ನು ನಿಗದಿಪಡಿಸಿಕೊಂಡು ಅಧ್ಯಯನ ಮಾಡಿರುವುದು ಸಮಂಜಸವಾಗಿದೆ. ಈ ಮಹಾಪ್ರಬಂಧದ ಅನುಬಂಧದಲ್ಲಿ ನಕ್ಷೆಗಳು, ಪ್ರಶ್ನಾವಳಿ,ವಕ್ತಗಳ ಅಕಾರಾದಿ ಪಟ್ಟಿ, ಸ್ಥಳನಾಮ ಗಳ ಅಕಾರಾದಿ ಸೂಚಿ, ಸಹಾಯಕ ಗ್ರಂಥಗಳ ಪಟ್ಟಿಗಳನ್ನು ಕೊಟ್ಟಿರುವುದು ಸೂಕ್ತವಾಗಿದೆ.

ಅಧ್ಯಾಯ ಎರಡರಲ್ಲಿ ಸ್ಥಳನಾಮಗಳ ಚಾರಿತ್ರಿಕ ನೆಲೆಯನ್ನು ಗುರುತಿಸಲಾಗಿದೆ. ಸ್ಥಳನಾಮಗಳ ಚಾರಿತ್ರಿಕ ಬದಲಾವಣೆ ಹಾಗೂ ಮಹತ್ವವನ್ನು ವಿವರಿಸಿದ್ದಾರೆ. ಇದು ಸ್ಥಳನಾಮಗಳ ಅಧ್ಯಯನ ಕ್ಕೆ ಒಂದು ವ್ಯವಸ್ಥಿತವಾದ ಪ್ರವೇಶಿಕೆಯನ್ನು ಒದ ಗಿಸಿದಂತಾಗಿದೆ. ನಾನಾ ಕಾರಣಗಳಿಂದ ಸ್ಥಳ ನಾಮಗಳು ಈ ರೀತಿಯ ಬದಲಾವಣೆಗಳಿಗೆ ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಿರುವುದು ಸಂಶೋಧಕರ ಆಸಕ್ತಿಗೆ ಸ್ಪಷ್ಟ ನಿದರ್ಶನವಾಗಿದೆ.
ಅಧ್ಯಾಯ ಮೂರು ಬೆಳಗಾವಿ ಜಿಲ್ಲೆಯ ಭೌಗೋ ಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಒಳ ಗೊಂಡಿದೆ. ಬೆಳಗಾವಿ ಜಿಲ್ಲೆ ಜನಸಂಖ್ಯೆ ಮತ್ತು ವಿಸ್ತೀರ್ಣತೆಯ ದೃಷ್ಟಿಯಿಂದ ದೊಡ್ಡದಾದ ಜಿಲ್ಲೆ ಯಾಗಿದೆ.ಆಡಳಿತದ ವಿಭಾಗಗಳನ್ನು ಭೌಗೋಳಿಕ ವಾಗಿ ವಿಂಗಡಿಸಿ ಆಯಾ ವಿಂಗಡಣೆಯಲ್ಲಿಬರುವ ಹಳ್ಳಿಗಳ ಸ್ಥಳನಾಮಗಳನ್ನು ಅಧ್ಯಯನಕ್ಕೆ ಒಳ ಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹವಾಮಾನ, ಖನಿಜಸಂಪತ್ತು, ಜಲಸಂಪತ್ತು, ಸಸ್ಯವರ್ಗ, ರಾಜ ಕೀಯ, ಇತಿಹಾಸ, ಈ ಜಿಲ್ಲೆಯಾನ್ನಾಳಿದ ರಾಜ ಮನೆತನಗಳೂ, ಸಾಂಸ್ಕೃತಿಕ ಹಿನ್ನೆಲೆ,ಸಾಮಾಜಿಕ ವ್ಯವಸ್ಥೆ, ಜನಸಂಖ್ಯೆ, ಭಾಷೆ, ಸಾಹಿತ್ಯಿಕ ಕೊಡುಗೆ ಪ್ರೇಕ್ಷಣೀಯ ಸ್ಥಳಗಳು ಮುಂತಾದವುಗಳನ್ನು ವಿಶ್ಲೇಷಿಸಿರುವುದು ಮಹತ್ವದ್ದಾಗಿದೆ. ಅಲ್ಲದೆ ಈ ಭಾಗದಲ್ಲಿ ಪ್ರಚಲಿತವಿರುವ ಆಡು ನುಡಿಯ ಮಾದರಿಯನ್ನು ಒದಗಿಸಿರುವುದು ಸ್ಥಳನಾಮ ಗಳ ಅಧ್ಯಯನಕ್ಕೆ ಪೂರಕವಾಗಿದೆ. ಅಧ್ಯಾಯ ನಾಲ್ಕರಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳ ನಾಮಗಳ ವರ್ಗೀಕರಣ ವಿಶ್ಲೇಷಣೆ ಎಂಬುದಾಗಿದೆ.ಇದು ಈ ಮಹಾಪ್ರಬಂಧದ ಹೃದಯ ಭಾಗ ಎನ್ನಬಹುದು. ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಸ್ವರೂಪವನ್ನ ಕೆಲವುಘಟಕವನ್ನಾಗಿ ವಿಂಗಡಿಸಿ ವಿಶ್ಲೇಷಿಸಿದ್ದಾರೆ. ಒಂದು ಘಟಕವನ್ನು ಹೊಂದಿರುವ ಸ್ಥಳನಾಮ ಗಳು ಅದರಂತೆ ಎರಡು,ಮೂರು,ನಾಲ್ಕು,ಘಟಕ ಗಳನ್ನು ಹೊಂದಿರುವ ಸ್ಥಳನಾಮಗಳು ಎಂದು ಉದಾಹರಣೆಗಳೊಂದಿಗೆ ವಿವರಿಸಿರುವುದುಉಪ ಯುಕ್ತವಾಗಿದೆ. ಇನ್ನೂ ಈ ಜಿಲ್ಲೆಯ ಸ್ಥಳನಾಮ ಗಳನ್ನು ಪ್ರಾಕೃತಿಕ ಸ್ಥಳನಾಮಗಳು ಹಾಗೂ ಸಾಂಸ್ಕೃತಿಕ ಸ್ಥಳನಾಮಗಳೆಂದು ವಿಂಗಡಿಸಿಅವು ಗಳಲ್ಲಿ ಮತ್ತೆ ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ ವಿಶ್ಲೇಷಣೆ ಮಾಡಿರುವುದು ಸೂಕ್ತವಾ ಗಿದೆ.ಆಯಾ ವರ್ಗೀಕರಣಗಳಿಗೆ ನಿದರ್ಶನಗಳನ್ನು ಒದಗಿಸಿದ್ದಾರೆ. ಈ ಸ್ಥಳನಾಮಗಳನ್ನು ಹೀಗೆ ವರ್ಗೀಕರಿಸಿಕೊಂಡು ವಿಶ್ಲೇಷಣೆ ಮಾಡಿರುವುದು ಸಂಶೋಧಕರ ಸೂಕ್ಷ್ಮ ದೃಷ್ಟಿಗೆ ಸಾಕ್ಷಿಯಾಗಿದೆ.
ಅಧ್ಯಾಯ ಐದರಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳ ನಾಮಗಳ ಭಾಷಿಕ ವಿಶ್ಲೇಷಣೆ ಇದೆ. ನಿರ್ದಿಷ್ಟ ವಾರ್ಗಿಕಗಳು, ಸಾಪೇಕ್ಷ ಸ್ಥಳನಾಮಗಳು ವಿಶೇಷ ಣಗಳನ್ನು ಹೊಂದಿದ ಸ್ಥಳನಾಮಗಳು, ಸ್ವರಾದಿ, ವ್ಯಂಜನಾದಿ ಸ್ಥಳನಾಮಗಳು, ಸ್ಥಳನಾಮಗಳ ಬರಹ ಮತ್ತು ಬಳಕೆ, ಸ್ಥಳನಾಮಗಳಲ್ಲಿ ಉಂಟಾ ಗುವ ಸಂಧಿಕಾರ್ಯಗಳು, ಸಮಾಜ ಸಂಬಂಧಿತ ಸ್ಥಳನಾಮಗಳು ಭಾಷಿಕ ನೆಲೆಯಲ್ಲಿ ವಿಂಗಡಿಸಿ ವಿಶ್ಲೇಷಿಸಿರುವುದು ಈ ಪ್ರಬಂಧದ ಮಹತ್ವದ ಭಾಗವಾಗಿದೆ.
ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಜಾನಪದೀ ಯ ನೆಲೆಯನ್ನು ಅಧ್ಯಾಯ ಆರರಲ್ಲಿ ಗುರುತಿಸಿ ದ್ದಾರೆ. ಜಾನಪದ ಸಾಹಿತ್ಯ ಹಳ್ಳಿಗರ ಜೀವಾಳವಾ ಗಿದೆ. ಅದನ್ನು ಅವರ ನೆನಪಿನ ನಿಧಿ ಎಂದು ಹೇಳ ಲಾಗುತ್ತದೆ. ಜನಪದರು ತಮ್ಮ ಊರುಗಳಿಗೆ ಹೆಸರು ಬಂದಿರುವುದನ್ನು ವಿವಿಧ ನೆಲೆಗಳ ಹಿನ್ನೆ ಲೆಯಲ್ಲಿ ವಿವರಿಸುತ್ತಾರೆ. ಡಾ. ಶೋಭಾ ತಪಿಸಿ ಯವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಂಗ್ರಹಿ ಸಿದ ಜಾನಪದ ನೆಲೆಯ ಆಕರಗಳನ್ನು ಐತಿಹ್ಯ ಗಳು ಮತ್ತು ಸ್ಥಳನಾಮಗಳು, ಪುರಾಣಗಳು ಮತ್ತು ಸ್ಥಳನಾಮಗಳು, ಲಾವಣಿಗಳು ಮತ್ತು ಸ್ಥಳನಾಮಗಳು, ಜನಪದ ಹಾಡುಗಳು ಮತ್ತು ಸ್ಥಳನಾಮಗಳು, ಗಾದೆಗಳು ಮತ್ತು ಸ್ಥಳನಾಮ ಗಳು ಎಂದು ವಿಂಗಡಿಸಿ ಸ್ಥಳನಾಮಗಳನ್ನು ಗುರು ತಿಸುವ ಪ್ರಯತ್ನ ಮಾಡಿರುವುದು ತಿಳಿಯುತ್ತದೆ. ಇಂಥ ಅಧ್ಯಯನಕ್ಕೆ ಜಾನಪದ ಅಕರಗಳನ್ನು ಪೂರಕವಾಗಿ ಬಳಕೆ ಮಾಡಿಕೊಂಡಿರುವುದು ಈ ಅಧ್ಯಯನಕ್ಕೆ ಒಂದು ಅಂತರ್ ಶಿಸ್ತಿಯತೆಯನ್ನು ಒದಗಿಸಿದಂತಾಗಿದೆ. ಈ ಪ್ರಬಂಧದ ಕೊನೆಯ ಅಧ್ಯಾಯ ಸಮಾರೋಪದಲ್ಲಿ ಇಡೀ ಅಧ್ಯಯ ನದ ಒಟ್ಟೂ ನೋಟವನ್ನು ಸಂಕ್ಷಿಪ್ತವಾಗಿ ಕೊಟ್ಟಿ ದ್ದಾರೆ. ಈ ಅಧ್ಯಯನದ ಫಲಿತಗಳನ್ನು ಪಟ್ಟಿ ಮಾಡಿ ಹೇಳಿದ್ದಾರೆ. ಇಡೀ ಪ್ರಬಂಧದ ಸಾರ್ಥಕತೆ ಯನ್ನು ಸಮಾರೋಪದಲ್ಲಿ ದಾಖಲುಗೊಳಿಸಿದ್ದಾ ರೆ. ಅಲ್ಲದೆ ಮುಂದಿನ ಅಧ್ಯಯನದ ಸುಳಿವು ಗಳನ್ನು ಕೊಡುವುದರ ಮೂಲಕ ಹೆಚ್ಚಿನ ಸಂಶೋ ಧನೆಗೆ ಇರುವ ಅವಕಾಶಗಳನ್ನು ತೋರಿಸಿದ್ದಾರೆ.
ಅನುಬಂಧದಲ್ಲಿ ಬೆಳಗಾವಿ ಜಿಲ್ಲೆ ತಾಲ್ಲೂಕುಗಳ ನಕ್ಷೆಯನ್ನು ಒದಗಿಸಿದ್ದು ತುಂಬಾ ಪ್ರಯೋಜನಕಾ ರಿಯಾಗಿದೆ, ಪ್ರಶ್ನಾವಳಿ ಮತ್ತು ವಕ್ತೃಗಳ ಸೂಚಿ ಯನ್ನು ಒದಗಿಸಿರುವುದು ಅವರ ಕ್ಷೇತ್ರಕಾರ್ಯದ ಹರವನ್ನು ತಿಳಿಸುತ್ತವೆ.ಅಲ್ಲದೆ ಬೆಳಗಾವಿಜಿಲ್ಲೆಯ ಸ್ಥಳನಾಮಗಳ ಆಕಾರಾದಿ ಸೂಚಿಯನ್ನು ಕೊಟ್ಟಿ ದ್ದಾರೆ. ಸಹಾಯಕ ಗ್ರಂಥಗಳ ಪಟ್ಟಿಯನ್ನು ಒದ ಗಿಸಿದ್ದಾರೆ. ಕೊನೆಯಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳ ನಾಮಗಳಿಗೆ ಸಂಬಂಧಿಸಿದ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಸಾರಿ ಹೇಳುವ ಆಕರ್ಷಕ ಭಾವ ಚಿತ್ರಗಳನ್ನು ಕೊಡಲಾಗಿದೆ.
ಅಷ್ಟೇ ಅಲ್ಲ ಕೃತಿಯ ಕುರಿತು ಡಾ.ಎಫ್.ಟಿ. ಹಳ್ಳಿ ಕೇರಿ,ಡಾ.ವಾಯ್.ಎಂ.ಯಾಕೊಳ್ಳಿ, ಪ್ರೋ.ಜಿ.ವ್ಹಿ. ವಳಗಿ,ಡಾ.ಶೋಭಾ ನಾಯಕ,ಡಾ.ರಮೇಶತೆವರಿ, ಪ್ರೋ.ಎಂ.ಬಿ. ಹೂಗಾರ ಇವರ ಅಭಿಪ್ರಾಯಗಳ ನ್ನು ಪ್ರಕಟಿಸಿರುವರು. ಕೊನೆಯ ರಕ್ಷಾಪುಟದಲ್ಲಿ ಕೂಡ ಅಭಿಪ್ರಾಯಗಳ ಪ್ರಮುಖ ಅಂಶಗಳನ್ನು ಪ್ರಕಟಿಸಿ ರಕ್ಷಾಪುಟದ ಅಂದವನ್ನು ಹೆಚ್ಚಿಸಿರು ವರು.
